COVID-19 ವ್ಯಾಕ್ಸಿನೇಷನ್ ಸ್ಲಾಟ್ ಕಾಯ್ದಿರಿಸುವ ಮುನ್ನ ಎಚ್ಚರ, ಎಚ್ಚರ?

|

ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡಿದೆ. ಇದರ ನಡುವೆ ಕೋವಿಡ್‌-19 ವ್ಯಾಕ್ಸಿನೇಷನ್‌ ಅಭಿಯಾನ ಕೂಡ ಜೋರಾಗಿ ನಡೆಯುತ್ತಿದೆ. ಕೊರೊನಾ ವ್ಯಾಕ್ಸಿನೇಷನ್‌ ಪಡೆದುಕೊಳ್ಳೊದಕ್ಕೆ ಲಸಿಕೆ ನೋಂದಣಿ ಮಾಡಿಕೊಳ್ಳುವುದು ಅಗತ್ಯವಾಗಿದೆ. ಇದಕ್ಕಾಗಿ ಕೋವಿನ್‌ ಪೋರ್ಟಲ್‌, ಆರೋಗ್ಯಾ ಸೇತು ಅಪ್ಲಿಕೇಶನ್‌ಗಳು ಸಹಾಯಕವಾಗಿದೆ. ಆದರೆ ಇದೇ ಅವಕಾಶವನ್ನು ಬಳಸಿಕೊಂಡು ಸೈಬರ್‌ ದಾಳಿಕೋರರು ನಕಲಿ ಕೋವಿನ್‌ ಅಪ್ಲಿಕೇಶನ್‌ಗಳ ಮೂಲಕ ಬಳಕೆದಾರರ ಸೂಕ್ಮ ಮಾಹಿತಿ ಕದಿಯುತ್ತಿರುವ ಅಂಶ ಇದೀಗ ಬಯಲಾಗಿದೆ.

ವ್ಯಾಕ್ಸಿನೇಷನ್

ಹೌದು, ನೀವು COVID-19 ವ್ಯಾಕ್ಸಿನೇಷನ್ ಸ್ಲಾಟ್ ಅನ್ನು ಕಾಯ್ದಿರಿಸಲು ಪ್ಲ್ಯಾನ್‌ ಮಾಡಿದ್ದರೆ, ಸುಲಭವಾಗಿ ಲಭ್ಯವಿರುವ ನಕಲಿ ಲಸಿಕೆ ನೋಂದಣಿ ಅಪ್ಲಿಕೇಶನ್‌ಗಳ ಬಗ್ಗೆ ನೀವು ಜಾಗರೂಕರಾಗಿರಬೇಕು. COVID ವ್ಯಾಕ್ಸಿನೇಷನ್ ಸ್ಲಾಟ್‌ಗಳನ್ನು ಕಾಯ್ದಿರಿಸಲು ಅಥವಾ ಲಸಿಕೆಗಾಗಿ ನೋಂದಾಯಿಸಲು ಅಧಿಕೃತ ವೇದಿಕೆಯಾಗಿರುವ CoWin ಮಾದರಿಯ ನಕಲಿ ಅಪ್ಲಿಕೇಶನ್‌ಗಳ ಕಾಟ ಇದೀಗ ಹೆಚ್ಚಾಗಿದೆ. ನಕಲಿ ಅಪ್ಲಿಕೇಶನ್‌ಗಳ ಬಗ್ಗೆ CERT-In ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಈ ನಕಲಿ ಆಪ್‌‌ಗಳನ್ನು ವೈರಲ್ ಎಸ್‌ಎಂಎಸ್‌ಗಳ ಮೂಲಕ ಪ್ರಸಾರ ಮಾಡಲಾಗುತ್ತಿದೆ ಎಂದು ಸಿಇಆರ್‌ಟಿ ವರದಿ ಮಾಡಿದೆ. ಹಾಗಾದ್ರೆ ನಕಲಿ ಅಪ್ಲಿಕೇಶನ್‌ಗಳನ್ನು ಗುರುತಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕೋವಿಡ್‌-19

ಕೋವಿಡ್‌-19 ವ್ಯಾಕ್ಸಿನೇಷನ್‌ ಅನ್ನೇ ಅಸ್ತ್ರ ಮಾಡಿಕೊಂಡಿರುವ ಸೈಬರ್‌ ಹ್ಯಾಕರ್ಸ್‌ಗಳು ಬಳಕೆದಾರರ ಫೋನ್‌ಗಳಿಗೆ ಎಸ್‌ಎಂಎಸ್‌ ಮೂಲಕ ನಕಲಿ ಆಪ್‌ಗಳ ಲಿಂಕ್‌ ಕಳುಹಿಸುತ್ತಿದ್ದಾರೆ. ಈ ಎಸ್‌ಎಂಎಸ್‌ ಲಿಂಕ್‌ ಬಳಸಿ ನೀವು ಲಸಿಕೆ ಸ್ಲಾಟ್‌ ಬುಕ್‌ ಮಾಡಲು ಹೋದರೆ ನಿಮ್ಮ ಸೂಕ್ಷಮ ಮಾಹಿತಿ ಹ್ಯಾಕರ್ಸ್‌ ಕೈ ಸೇರಿರುತ್ತದೆ. ಇದೇ ಕಾರಣಕ್ಕೆ ಬಳಕೆದಾರರ ಸೂಕ್ಷ್ಮ ಮಾಹಿತಿಗೆ ಅಕ್ರಮ ಪ್ರವೇಶವನ್ನು ಪಡೆಯುತ್ತಿರುವ ನಕಲಿ ಕೋವಿನ್ ಅಪ್ಲಿಕೇಶನ್‌ಗಳ ಬಗ್ಗೆ ಸಿಇಆರ್ಟಿ-ಇನ್ ಬಳಕೆದಾರರನ್ನು ಎಚ್ಚರಿಸಿದೆ.

ಎಸ್‌ಎಂಎಸ್

ಎಸ್‌ಎಂಎಸ್ ಮೂಲಕ ಬಳಕೆದಾರರು ತಮ್ಮನ್ನು COVID-19 ಲಸಿಕೆಗಾಗಿ ನೋಂದಾಯಿಸಿಕೊಳ್ಳಲು ಸೈಬರ್‌ ಹ್ಯಾಕರ್ಸ್‌ ಅಪ್ಲಿಕೇಶನ್‌ ಲಿಂಕ್‌ ಕಳುಹಿಸಿ ಯಾಮಾರಿಸುತ್ತಿದ್ದರೆ.ಅಲ್ಲದೆ ಈ ಎಸ್‌ಎಂಎಸ್‌ಗಳ ಭಾಷೆ ಅಗತ್ಯಕ್ಕೆ ಬದಲಾಗುತ್ತದೆ ಎಂದು ವರದಿಯಾಗಿದೆ. ಇನ್ನು CERT-IN ಬಳಕೆದಾರರಿಗೆ ನಕಲಿ ಅಪ್ಲಿಕೇಶನ್‌ಗಳ ಐದು APK ಲಿಂಕ್‌ಗಳ ಬಗ್ಗೆ ಮಾಹಿತಿ ನೀಡಿದೆ. ಇದರಲ್ಲಿ Covid-19.apk, vaci_regis.apk, myvaccine_v2.apk, cov-regis.apk, vccin-apply.apk. ಸೇರಿವೆ. ಈ ಮಾದರಿಯ ಲಿಂಕ್‌ಗಳನ್ನು ಬಳಸುವ ಮುನ್ನ ಎಚ್ಚರ ವಹಿಸುವ ಅಗತ್ಯವಿದೆ.

ಎಸ್‌ಎಂಎಸ್

ಇನ್ನು ಎಸ್‌ಎಂಎಸ್ ಆಂಡ್ರಾಯ್ಡ್ ಆಧಾರಿತ ಡಿವೈಸ್‌ಗಳಲ್ಲಿ ದುರುದ್ದೇಶಪೂರಿತ ಅಪ್ಲಿಕೇಶನ್ ಅನ್ನು ಸ್ಥಾಪಿಸುವ ಲಿಂಕ್ ಗಳನ್ನು ಹ್ಯಾಕರ್ಸ್‌ಗಳು ಕಳುಹಿಸುತ್ತಾರೆ. ಇದು ಮುಖ್ಯವಾಗಿ ಎಸ್‌ಎಂಎಸ್ ಮೂಲಕ ಸಾಮಾನ್ಯ ಜನರು ಬಲಿಪಶುವಾಗಲು ಕಾರಣವಾಗುತ್ತಿದೆ. ಈ ಲಿಂಕ್‌ಗಳ ಮೂಲಕ ಬಳಕೆದಾರರ ಡೇಟಾವನ್ನು ಪಡೆಯಲು ದಾಳಿಕೋರರು ಹತೋಟಿ ಸಾಧಿಸುವಂತಹ ಅನಗತ್ಯ ಅನುಮತಿಗಳನ್ನು ಸಹ ಅಪ್ಲಿಕೇಶನ್ ಪಡೆಯುತ್ತದೆ, ಎಂದು ಸಿಇಆರ್‌ಟಿ-ಇನ್ ತನ್ನ ಸಲಹೆಯಲ್ಲಿ ತಿಳಿಸಿದೆ.

ಸ್ಮಾರ್ಟ್‌ಫೋನ್‌ನಲ್ಲಿ

ಈ ಎಸ್‌ಎಂಎಸ್ ಗಳು ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಎಪಿಕೆ ಲಿಂಕ್‌ಗಳನ್ನು ಡೌನ್‌ಲೋಡ್ ಮಾಡಲು ಬಳಕೆದಾರರಿಗೆ ಮನವರಿಕೆ ಮಾಡುತ್ತದೆ. ಗಮನಾರ್ಹವಾಗಿ, ಈ ಎಪಿಕೆ ಲಿಂಕ್‌ಗಳಲ್ಲಿ ಯಾವುದನ್ನು ನೀವು ಕ್ಲಿಕ್ ಮಾಡಿದಾಗ ನಿಮ್ಮನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ಗೆ ಮರುನಿರ್ದೇಶಿಸುವುದಿಲ್ಲ. ಬದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಸ್ಪರ್ಶಿಸಿದಾಗ APK ತಕ್ಷಣ ಅದನ್ನು ಡೌನ್‌ಲೋಡ್ ಮಾಡುತ್ತದೆ. ಯಾವುದೇ ಅಧಿಕೃತ ಅಪ್ಲಿಕೇಶನ್ ನಿಮ್ಮ ಫೋನ್‌ನಲ್ಲಿ ತಕ್ಷಣ ಡೌನ್‌ಲೋಡ್ ಆಗುವುದಿಲ್ಲ. ಬದಲಿಗೆ ನಿಮ್ಮ ಪಾಸ್ವರ್ಡ್‌ಗಳು ಮತ್ತು ಬಳಕೆದಾರರ ಇತರ ಸೂಕ್ಷ್ಮ ಮಾಹಿತಿಯನ್ನು ಕದಿಯಲಾಗುತ್ತೆ. ಸದ್ಯ COVID ವ್ಯಾಕ್ಸಿನೇಷನ್ ಸ್ಲಾಟ್ ಅನ್ನು ಕಾಯ್ದಿರಿಸುವ ಏಕೈಕ ಅಧಿಕೃತ ವೇದಿಕೆ ಕೋವಿನ್ ವೆಬ್‌ಸೈಟ್ ಎಂದು ಬಳಕೆದಾರರು ಎಚ್ಚರದಿಂದಿರಬೇಕು.

Best Mobiles in India

Read more about:
English summary
The Indian Computer Emergency Response Team (CERT-In) has warned users about the fake apps masquerading as CoWin.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X