ಜಿಯೋ ಎಂದು ನಂಬಿದರೆ ಗ್ಯಾರಂಟಿ ಪಂಗನಾಮ..! ಜಿಯೋ ಹೆಸರಿನಲ್ಲಿ ನಡಿತಿದೆ ಭಾರೀ ಮೋಸ..!

|

2016ರ ನಂತರ ಭಾರತದ ಟೆಲಿಕಾಂ ಲೋಕದಲ್ಲಿ ಎಲ್ಲಿ ಕೇಳಿದರೂ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್‌ ಜಿಯೋ ಪದ ಕೇಳುತ್ತದೆ. ಏರ್‌ಟೆಲ್‌ ಸೇರಿದಂತೆ ಇತರೆ ಟೆಲಿಕಾಂ ಆಪರೇಟರ್‌ಗಳು ಅಗ್ಗದ ದರದಲ್ಲಿ ಕರೆ ಹಾಗೂ ಡೇಟಾವನ್ನು ಗ್ರಾಹಕರಿಗೆ ನೀಡಲು ಪರೋಕ್ಷ ಅಥವಾ ಪ್ರತ್ಯಕ್ಷ ಕಾರಣವಾಗಿರುವ ಜಿಯೋ ಭಾರತದಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಪಡೆದಿದೆ. ಆದರೆ, ಜಿಯೋ ಹೆಸರನಲ್ಲಿ ಬರುತ್ತಿರುವುದೆಲ್ಲಾ ಅಸಲಿಯಲ್ಲ. ಸ್ವಲ್ಪ ಯಾಮಾರಿದ್ರು ನಿಮ್ಮ ದುಡ್ಡು ಯಾರ ಬ್ಯಾಂಕ್‌ ಅಕೌಂಟ್‌ ಪಾಲಾಗುತ್ತೋ ಗೊತ್ತಿಲ್ಲ.

ಹೌದು, ಜಿಯೋ ಜನಪ್ರಿಯತೆಯನ್ನೇ ಅನೇಕರು ತಮ್ಮ ಬಂಡವಾಳವಾಗಿ ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಹೌದು, ಜಿಯೋ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಅನೇಕ ವೆಬ್‌ಸೈಟ್‌ಗಳು ಸೃಷ್ಟಿಯಾಗಿದ್ದು, ಎಲ್ಲವೂ ನಕಲಿ ವೆಬ್‌ಸೈಟ್‌ಗಳೇ ಆಗಿವೆ. ಜಿಯೋ ಬಿಡುಗಡೆ ಮಾಡದ ಅನೇಕ ಉತ್ಪನ್ನಗಳನ್ನು ಇವು ಮಾರಾಟದ ಪಟ್ಟಿಯಲ್ಲಿ ಸೇರಿಸಿವೆ. ಉತ್ಪನ್ನದ ಕೆಳಗೆ ಅತಿ ಕಡಿಮೆ ದರ ನಮೂದಿಸಿ ಗ್ರಾಹಕರನ್ನು ಆಕರ್ಷಿಸುತ್ತಿವೆ.

ಜಿಯೋ ಎಂದು ನಂಬಿದರೆ ಗ್ಯಾರಂಟಿ ಪಂಗನಾಮ..! ಜಿಯೋ ಹೆಸರಿನಲ್ಲಿ ನಡಿತಿದೆ ಭಾರೀ ಮೋಸ

ಜಿಯೋ ಮೂಲಕ ಟೆಲಿಕಾಂ ಉದ್ಯಮ ಪ್ರವೇಶಿಸಿದ ಮುಖೇಶ್‌ ಅಂಬಾನಿ, ನಂತರ ಮೊಬೈಲ್‌ ಕ್ಷೇತ್ರಕ್ಕೂ ಬಂದರೂ, ಮುಂದಿನ ದಿನಗಳಲ್ಲಿ ಬ್ರಾಡ್‌ಬ್ಯಾಂಡ್‌ ಹಾಗೂ ರಿಟೇಲ್‌ ಕ್ಷೇತ್ರಕ್ಕೂ ಕೈ ಹಾಕುವುದು ಪಕ್ಕಾ ಆಗಿದೆ. ಯಾಕೆಂದರೆ ಜಿಯೋ ಮೂಲಕ ಅಂಬಾನಿ ಏನೇ ಮುಟ್ಟಿದರೂ ಚಿನ್ನವಾಗುತ್ತಿದೆ. ಅಷ್ಟರ ಮಟ್ಟಿಗೆ ಜಿಯೋ ಜನಪ್ರಿಯತೆ ಗಳಿಸಿದೆ. ಈ ಜನಪ್ರಿಯತೆಯನ್ನು ಇಂತಹ ನಕಲಿ ವೆಬ್‌ಸೈಟ್‌ಗಳು ಲಾಭಕ್ಕೆ ಬಳಸಿಕೊಳ್ಳುತ್ತಿವೆ. ಅಂತಹದ್ದೇ ಒಂದು ವೆಬ್‌ಸೈಟ್‌ನ್ನು ಜಾಲಾಡುತ್ತಾ ಹೋಗುವಾಗ ಅನೇಕ ಅಂಶಗಳು ಬಹಿರಂಗವಾಗಿವೆ. ಆಗಿದ್ದರೆ ರಿಯಾಲಿಟಿ ಚೆಕ್‌ನಲ್ಲಿ ಕಂಡಿದ್ದೇನು..? ಮುಂದೆ ನೀವೇ ನೋಡಿ.

ಜಿಯೋ ಹೆಸರಲ್ಲಿಯೇ ಹಲವು ವೆಬ್‌ಸೈಟ್‌

ಜಿಯೋ ಹೆಸರಲ್ಲಿಯೇ ಹಲವು ವೆಬ್‌ಸೈಟ್‌

ಜಿಯೋ ಜನಪ್ರಿಯತೆಯ ಲಾಭ ಮಾಡಿಕೊಳ್ಳಲು ಆ ಹೆಸರಿನಲ್ಲಿಯೇ ಅನೇಕ ವೆಬ್‌ಸೈಟ್‌ಗಳು ಸೃಷ್ಟಿಯಾಗಿವೆ. https://jioprime.org/, http://ji0daily-deals.online/index.php, http://jiodevices.online/ ನಂತಹ ಅನೇಕ ವೆಬ್‌ಸೈಟ್‌ಗಳು ಸೃಷ್ಟಿಯಾಗಿದ್ದು, ಜಿಯೋ ಹೆಸರಿನಲ್ಲಿ ಮೋಸ ಮಾಡುತ್ತಿವೆ.

599 ರೂ.ಗೆ ಜಿಯೋ ಲ್ಯಾಪ್‌ಟಾಪ್‌

599 ರೂ.ಗೆ ಜಿಯೋ ಲ್ಯಾಪ್‌ಟಾಪ್‌

ಕೆಲವು ವೆಬ್‌ಸೈಟ್‌ಗಳು ಜಿಯೋ ಸುದ್ದಿಯನ್ನು ಪ್ರಕಟಿಸಿ ಲಾಭ ಮಾಡಿಕೊಂಡರೆ. ಇನ್ನೊಂದಿಷ್ಟು ವೆಬ್‌ಸೈಟ್‌ಗಳು ಜಿಯೋ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ಸೃಷ್ಟಿಸಿ ಅದನ್ನು ಗ್ರಾಹಕರಿಗೆ ಕಡಿಮೆ ದರಕ್ಕೆ ಪ್ರದರ್ಶಿಸಿ ಗ್ರಾಹಕರ ಹಣವನ್ನು ಕೊಳ್ಳೆ ಹೊಡೆಯುತ್ತಿವೆ. ಅದರಂತೆ http://ji0daily-deals.online/ ಡೊಮೇನ್‌ ಹೊಂದಿರುವ ಜಿಯೋ ಸ್ಟೋರ್‌ ವೆಬ್‌ಸೈಟ್‌ನಲ್ಲಿ 599 ರೂ.ಗೆ ಜಿಯೋ ಲ್ಯಾಪ್‌ಟಾಪ್‌ ಮಾರಾಟವಾಗುತ್ತಿದೆ.

ಲ್ಯಾಪ್‌ಟಾಪ್‌ ಅಷ್ಟೇ ಅಲ್ಲ

ಲ್ಯಾಪ್‌ಟಾಪ್‌ ಅಷ್ಟೇ ಅಲ್ಲ

ನಕಲಿ ಜಿಯೋ ಸ್ಟೋರ್‌ನಲ್ಲಿ ಕೇವಲ ಲ್ಯಾಪ್‌ಟಾಪ್‌ ಅಷ್ಟೇ ಅಲ್ಲ. ಜಿಯೋ ಟ್ಯಾಬ್ಲೆಟ್‌, ಜಿಯೋ LYF C459, ಜಿಯೋ ಫೋನ್‌ 2, JioFi M2, Jio Phone, Jio ಸ್ಮಾರ್ಟ್‌ವಾಚ್‌, ಜಿಯೋ ಫಿಟ್‌ನೆಸ್‌ ಟ್ರಾಕರ್‌ಗಳು ಮಾರಾಟಕ್ಕಿವೆ. ಅದು ಕಡಿಮೆ ದರದಲ್ಲಿ ಎನ್ನುವುದು ಮೋಸದ ಇನ್ನೊಂದು ರೂಪ.

ಆಕರ್ಷಕ ದರವೇ ಮೋಸಕ್ಕೆ ಮೆಟ್ಟಿಲು

ಆಕರ್ಷಕ ದರವೇ ಮೋಸಕ್ಕೆ ಮೆಟ್ಟಿಲು

ನಕಲಿ ಜಿಯೋ ಸ್ಟೋರ್‌ ಆಪ್‌ನಲ್ಲಿ ಜಿಯೋ ಲ್ಯಾಪ್‌ಟಾಪ್‌ 599 ರೂ. ಆದರೆ, ಜಿಯೋ ಟ್ಯಾಬ್ಲೆಟ್‌ 549 ರೂ., ಜಿಯೋ LYF C459 449 ರೂ., ಜಿಯೋ ಫೋನ್‌ 2 499 ರೂ., JioFi M2 349 ರೂ., Jio Phone 299 ರೂ., Jio ಸ್ಮಾರ್ಟ್‌ವಾಚ್‌ 199 ರೂ., ಜಿಯೋ ಫಿಟ್‌ನೆಸ್‌ ಟ್ರಾಕರ್‌ 99 ರೂ. ಅಂತೆ. ನೋಡಿ ಹೇಗೆ ಏರಿಕೆ ಕ್ರಮದಿಂದ ಇಳಿಕೆ ಕ್ರಮದಲ್ಲಿ ದರಗಳನ್ನು ಆಕರ್ಷಕವಾಗಿ ಜೋಡಿಸಿಟ್ಟಿದ್ದಾರೆ.

ನಕಲಿ ಎನ್ನಲು ಕಾರಣಗಳಿವೆ..!

ನಕಲಿ ಎನ್ನಲು ಕಾರಣಗಳಿವೆ..!

ಈ ಜಿಯೋ ಸ್ಟೋರ್‌ನ್ನು ನಕಲಿ ಎನ್ನಲು ಕಡಿಮೆ ದರಕ್ಕೆ ಉತ್ಪನ್ನಗಳ ಮಾರಾಟ ಮಾಡುತ್ತಿರುವುದು ಮಾತ್ರ ಕಾರಣವಲ್ಲ. http://ji0daily-deals.online/ ಡೋಮೆನ್‌ ನೇಮ್‌ನ್ನು ಸೂಕ್ಷ್ಮವಾಗಿ ನೀವು ಗಮನಿಸಿದರೆ, ಇಂಗ್ಲಿಷ್‌ನ jio ಹೀಗಿರಬೇಕಿತ್ತು. ಆದರೆ ಡೋಮೆನ್‌ ನೇಮ್‌ನಲ್ಲಿ ji0 ಈ ರೀತಿ ಇದೆ. o ಬದಲಿಗೆ 0 ಬಳಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅದಲ್ಲದೇ ಇಲ್ಲಿ ನೀವು ಜಿಯೋ ತಯಾರಿಸದ ಹಲವು ಉತ್ಪನ್ನಗಳನ್ನು ನೋಡಬಹುದು. ಪಟ್ಟಿಯಲ್ಲಿನ ಜಿಯೋ ಫೋನ್‌ ಚಿತ್ರ ಕೂಡ ಸ್ಮಾರ್ಟ್‌ಫೋನ್‌ನಂತಿದೆ. ಆದರೆ, ಅಸಲಿಗೆ ಜಿಯೋ ಫೋನ್‌ ಫೀಚರ್ ಫೋನ್‌ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಪೇಟಿಎಂ ಮೂಲಕ ಪೇಮೆಂಟ್‌ಗೆ ಅವಕಾಶ

ಪೇಟಿಎಂ ಮೂಲಕ ಪೇಮೆಂಟ್‌ಗೆ ಅವಕಾಶ

ನಕಲಿ ಜಿಯೋ ಸ್ಟೋರ್‌ನಲ್ಲಿ ನೇರವಾಗಿ ಪೇಟಿಎಂ ಮೂಲಕ ಹಣ ಕಳಿಸುವ ಆಯ್ಕೆಯನ್ನು ವೆಬ್‌ಸೈಟ್‌ ರೂಪಿಸಿರುವವರು ಸುಲಭವಾಗಿಯೇ ಸೃಷ್ಟಿಸಿದ್ದಾರೆ. ನೀವು ಚೆಕ್‌ಔಟ್‌ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಆಯ್ಕೆಯ ಉತ್ಪನ್ನದ ಯಾವುದೇ ಸ್ಪೇಷಿಪಿಕೇಶನ್, ಫೀಚರ್‌ಗಳನ್ನು ತೋರಿಸದೆ ನೇರವಾಗಿ ನಿಮ್ಮ ವಿವರಗಳನ್ನು ಕೇಳುತ್ತದೆ. ಅಲ್ಲಿ ವಿವರಗಳನ್ನು ನಮೂದಿಸಿದರೆ ಪೇಟಿಎಂ ಮೂಲಕ ನೇರವಾಗಿ ನಕಲಿ ಜಿಯೋ ಸ್ಟೋರ್‌ ವೆಬ್‌ಸೈಟ್‌ಗೆ ಹಣ ಪಾವತಿಯಾಗುತ್ತದೆ.

ವೆಬ್‌ಸೈಟ್‌ ಭಾರತದ್ದಲ್ಲ

ವೆಬ್‌ಸೈಟ್‌ ಭಾರತದ್ದಲ್ಲ

599 ರೂ.ಗೆ ಜಿಯೋ ಲ್ಯಾಪ್‌ಟಾಪ್‌ ನೀಡುವ ನಕಲಿ ಜಿಯೋ ಸ್ಟೋರ್‌ನ http://ji0daily-deals.online/ ಡೋಮೇನ್ ಭಾರತದ್ದಲ್ಲ ಎನ್ನುವುದು ಇನ್ನೊಂದು ಆತಂಕಕಾರಿ ಅಂಶ. ಅನೇಕ ಕ್ರಾಸ್‌ ಚೆಕ್‌ಗಳನ್ನು ಮಾಡಿದಾಗ ಈ ವೆಬ್‌ಸೈಟ್‌ನ ಐಪಿ ಅಮೇರಿಕಾದ ನ್ಯೂಜೆರ್ಸಿಯ ಪಿಕ್ಸಟಾವೇ ಮತ್ತು ನ್ಯೂಯಾರ್ಕ್‌ನಲ್ಲಿರುವುದು ಕಂಡು ಬಂದಿದೆ. ಅದಲ್ಲದೇ ವೆಬ್‌ಸೈಟ್‌ನಲ್ಲಿ ಕ್ಯಾಲಿಪೋರ್ನಿಯಾದ ಕುಪರ್ಟಿನೋ ನಗರದ ಹೆಸರು ಕಾಣುತ್ತಿರುವುದು ವೆಬ್‌ಸೈಟ್‌ ಭಾರತದ್ದಲ್ಲ ಎಂಬುದು ಪಕ್ಕಾ.

ಇದೇನು ಮೊದಲಲ್ಲ

ಇದೇನು ಮೊದಲಲ್ಲ

ಜಿಯೋ ಹೆಸರಿನಲ್ಲಿ ನಡೆಯುತ್ತಿರುವ ಕೊಳ್ಳೆ ಇದೇ ಮೊದಲೆನಲ್ಲ, ಇದಕ್ಕೂ ಮುಂಚೆ ಜಿಯೋ ಕಾಯಿನ್‌ ಎನ್ನುವ ಕ್ರಿಪ್ಟೋಕರೆನ್ಸಿಯನ್ನು ರಿಲಾಯನ್ಸ್‌ ಪ್ರಾರಂಭ ಮಾಡಿದ್ದು, jio coin ಎಂಬ ನಕಲಿ ವೆಬ್‌ಸೈಟ್‌ ಕಡಿಮೆ ದರದಲ್ಲಿ ಜಿಯೋ ಕಾಯಿನ್‌ ಖರೀದಿಸುವ ಆಯ್ಕೆ ನೀಡಿ ಜನರನ್ನು ಮೋಸ ಮಾಡಿತ್ತು. ಜಿಯೋ ಕಾಯಿನ್‌ಗೆ ಸಂಬಂಧಿಸಿದಂತೆ ಪ್ಲೇ ಸ್ಟೋರ್‌ನಲ್ಲಿ 22ಕ್ಕೂ ಹೆಚ್ಚು ನಕಲಿ ಆಪ್‌ಗಳು ಜನವರಿಯಲ್ಲಿ ಪತ್ತೆ ಆಗಿದ್ದವು.

ಜಿಯೋ ಟವರ್ ಹೆಸರಿನಲ್ಲೂ ಮೋಸ

ಜಿಯೋ ಟವರ್ ಹೆಸರಿನಲ್ಲೂ ಮೋಸ

ರಾಷ್ಟ್ರೀಯ ಗ್ರಾಹಕರ ದೂರು ವೇದಿಕೆಯಲ್ಲಿ ಜಿಯೋ ಟವರ್ ಹೆಸರಿನಲ್ಲಿ ನಡೆದಿರುವ ಮೋಸದ ಕುರಿತು ಅನೇಕ ದೂರುಗಳು ಸಲ್ಲಿಕೆಯಾಗಿವೆ. ಇವುಗಳು ಕೂಡ ನಕಲಿ ವೆಬ್‌ಸೈಟ್‌ಗಳಿಂದ ಎನ್ನುವುದು ಗಮನಿಸಬೇಕಾದ ಅಂಶ. http://jiotowers.net.in/ ಮತ್ತು http://myjiotower.com/ ಎನ್ನುವ ವೆಬ್‌ಸೈಟ್‌ಗಳು ಗ್ರಾಹಕರು ಸಲ್ಲಿಸಿರುವ ದೂರಿನಲ್ಲಿ ಸೇರಿವೆ.

ಅಧಿಕೃತ ವೆಬ್‌ಸೈಟ್‌ ಇದೊಂದೆ

ಅಧಿಕೃತ ವೆಬ್‌ಸೈಟ್‌ ಇದೊಂದೆ

ರಿಲಾಯನ್ಸ್‌ ಜಿಯೋ ತನ್ನ ಬಳಕೆದಾರರಿಗಾಗಿ ಅಧಿಕೃತ ವೆಬ್‌ಸೈಟ್‌ ಒಂದನ್ನು ಘೋಷಿಸಿದ್ದು, ಜಿಯೋದ ಎಲ್ಲಾ ಘೋಷಣೆಗಳು, ಆಫರ್‌ಗಳು, ಉತ್ಪನ್ನಗಳು ಅದರಲ್ಲಿ ದೊರೆಯುತ್ತವೆ. https://www.jio.com/ ಇದರ ಮೂಲಕ ಜಿಯೋದ ಆನ್‌ಲೈನ್‌ ವ್ಯವಹಾರಗಳು ನಡೆಯುತ್ತವೆ. ಆದ್ದರಿಂದ ಗ್ರಾಹಕರು ಯಾವುದೇ ಆಫರ್‌ಗಳಿಗೆ ಮೋಸ ಹೋಗಿ ದುಡ್ಡು ಕಳೆದುಕೊಳ್ಳಬೇಡಿ.

Best Mobiles in India

English summary
beware this fake jio laptop offer website. To know more this visit kannad.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X