Subscribe to Gizbot

ಈ 5 ಸೆಕೆಂಡ್ ವಾಟ್ಸಾಪ್ ವೀಡಿಯೊ ನಿಮ್ಮ ಫೋನ್ ಕ್ರ್ಯಾಶ್‌ ಮಾಡುತ್ತದೆ? ಎಚ್ಚರ..!

Written By:

ವಾಟ್ಸಾಪ್‌ ಬಳಕೆದಾರರು ಯಾವಾಗಲು ಯಾವುದಾದರೊಂದು ವಂಚನೆ ಸಮಸ್ಯೆಗೆ ಸಿಲುಕುತ್ತಲೇ ಇರುತ್ತಾರೆ. ಒಂಥರಾ ಸಂಪ್ರದಾಯವು ಆಗಿಬಿಟ್ಟಿದೆ. ಅಂದಹಾಗೆ ರೆಡ್ಡಿಟ್ ಬಳಕೆದಾರರು ಆಪಲ್ ಐಓಎಸ್‌ನಲ್ಲಿ ಪ್ರಮುಖವಾದ ದೋಷವೊಂದನ್ನು ಕಂಡುಹಿಡಿದಿದ್ದಾರೆ. ಆಪಲ್‌ ಐಓಎಸ್‌ನಲ್ಲಿ ಈ ದೋಷವು 5 ಸೆಕೆಂಡ್‌ನ MP4 ವೀಡಿಯೊ ಓಪನ್ ಮಾಡಿದರೆ ಐಫೋನ್ ಅಪಘಾತಕ್ಕೆ ಒಳಗಾಗುತ್ತದೆ.

ಈ 5 ಸೆಕೆಂಡ್ ವಾಟ್ಸಾಪ್ ವೀಡಿಯೊ ನಿಮ್ಮ ಫೋನ್ ಕ್ರ್ಯಾಶ್‌ ಮಾಡುತ್ತದೆ? ಎಚ್ಚರ..!

ಹೌದು, 5 ಸೆಕೆಂಡ್‌ನ MP4 ವೀಡಿಯೊ ನೋಡಿದ ನಂತರದ 10 ಸೆಕೆಂಡ್‌ನಲ್ಲಿ ಐಫೋನ್ ಅಪಘಾತಕ್ಕೆ ಒಳಗಾಗುತ್ತದೆ. ಹಲವು ಐಫೋನ್‌ ಬಳಕೆದಾರರು ವಾಟ್ಸಾಪ್‌ನಲ್ಲಿ ಸ್ವೀಕರಿಸಿದ ಈ ವೀಡಿಯೊ ಲಿಂಕ್‌ ಅನ್ನು ಓಪನ್‌ ಮಾಡಿದ ನಂತರ ತಮ್ಮ ಐಫೋನ್ ಕ್ರ್ಯಾಶ್ ಆಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಇನ್ನೂ ಹಲವರು ಐಫೋನ್‌ ಹ್ಯಾಂಗ್ ಆಗುತ್ತಿದೆ ಎಂದಿದ್ದಾರೆ.

ಈ 5 ಸೆಕೆಂಡ್ ವಾಟ್ಸಾಪ್ ವೀಡಿಯೊ ನಿಮ್ಮ ಫೋನ್ ಕ್ರ್ಯಾಶ್‌ ಮಾಡುತ್ತದೆ? ಎಚ್ಚರ..!

ನೀವು ಐಫೋನ್‌ ಬಳಸುತ್ತಿದ್ದಲ್ಲಿ ಸ್ವಲ್ಪ ಜಾಗರೂಕರಾಗಿರುವುದು ಉತ್ತಮ. ಕಾರಣ ಇತರೆ ಮೆಸೇಜಿಂಗ್ ವೇದಿಕೆಗಳಿಂದ ಸ್ವೀಕರಿಸಿದ ಮೆಸೇಜ್‌ಗಳ ಮೂಲಕವು ಫೋನ್ ಕ್ರ್ಯಾಶ್ ಆಗುವ ಸಾಧ್ಯತೆಗಳಿವೆ. ಉದಾಹರಣೆಗೆ ಐಮೆಸೇಜ್‌ ಮೂಲಕ ವಾಟ್ಸಾಪ್‌ನಲ್ಲಿ ಕಳುಹಿಸಿದ ವೀಡಿಯೊ ಲಿಂಕ್‌ ಅನ್ನು ಸ್ವೀಕರಿಸಿದಲ್ಲಿಯೂ ಯಾವುದೇ ಕಾರಣಗಲಿಲ್ಲದೇ ಮೆಸೇಜ್ ಫೋನ್‌ ಕ್ರ್ಯಾಶ್‌ ಮಾಡಬಲ್ಲದು.

ಅಂದಹಾಗೆ ವೀಡಿಯೊ ತಾತ್ಕಾಲಿಕವಾಗಿ ಆಪಲ್ ಐಫೋನ್‌ ಅನ್ನು ಹ್ಯಾಂಗ್ ಮಾಡುತ್ತದೆ ಎಂದು ಹೇಳಲಾಗಿದ್ದು, ಈ ಸಮಸ್ಯೆಯಿಂದ ಪಾರಾಗಬಹುದು. ಪವರ್ ಬಟನ್ ಮತ್ತು ಹೋಮ್‌ ಬಟನ್‌ ಅನ್ನು 10 ಸೆಕೆಂಡ್‌ಗಳ ಕಾಲ ಪ್ರೆಸ್‌ ಮಾಡುವುದರ ಮೂಲಕ ನಂತರ ಫೋನ್ ರೀಬೂಟ್ ಮಾಡಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ 5 ಸೆಕೆಂಡ್ ವಾಟ್ಸಾಪ್ ವೀಡಿಯೊ ನಿಮ್ಮ ಫೋನ್ ಕ್ರ್ಯಾಶ್‌ ಮಾಡುತ್ತದೆ? ಎಚ್ಚರ..!

ಆಪಲ್ ಐಓಎಸ್ ಈಗಾಗಲೇ ಈ ಹಿಂದೆಯೂ ಸಹ ಇಂತದೇ ಸಮಸ್ಯೆಗಳಿಂದ ಕೂಡಿತ್ತು. ಕಳೆದ ವರ್ಷವು ಸಹ ಒಂದು ದೋಷ ಕಂಡುಬಂದಿತ್ತು. ಐಫೋನ್‌ನಲ್ಲಿ ಇತರರಿಗೆ ಟೆಕ್ಸ್ಟ್ ಕಳುಹಿಸಿದಾಗ ಡಿವೈಸ್ ಕ್ರ್ಯಾಶ್‌ ಆಗುತ್ತಿತ್ತು. ಆದರೆ ಆಪಲ್ ಈ ಸಮಸ್ಯೆಯನ್ನು ಬೇಗ ಪತ್ತೆ ಹಚ್ಚಿತ್ತು.

ಆದರೆ ಪ್ರಸ್ತುತದಲ್ಲಿ ಐಫೋನ್‌ ಬಳಕೆದಾರರ ವಾಟ್ಸಾಪ್‌ನಲ್ಲಿನ ವೀಡಿಯೊ ಲಿಂಕ್‌ ಕ್ಲಿಕ್ ಮಾಡುವುದರಿಂದ ಉಂಟಾಗುತ್ತಿರುವ ಅಪಘಾತದ ಬಗ್ಗೆ ಕುಪರ್ಟಿನೊ ಟೆಕ್‌ ದೈತ್ಯ ಯಾವುದೇ ಮಾಹಿತಿಯನ್ನು ನೀಡಿಲ್ಲ. ಐಫೋನ್ ಬಳಕೆದಾರರು ಶೀಘ್ರವಾಗಿ ಸಾಫ್ಟ್‌ವೇರ್‌ ಅಪ್‌ಡೇಟ್ ಪಡೆಯಬೇಕಿದೆ. ಈ ಬಗ್ಗೆ ಆಪಲ್ ಸಹ ಹೇಳಿದೆ.

ಈ 5 ಸೆಕೆಂಡ್ ವಾಟ್ಸಾಪ್ ವೀಡಿಯೊ ನಿಮ್ಮ ಫೋನ್ ಕ್ರ್ಯಾಶ್‌ ಮಾಡುತ್ತದೆ? ಎಚ್ಚರ..!

ನೀವು ಸಹ ಐಫೋನ್‌(iPhone) ಬಳಸುತ್ತಿದ್ದಲ್ಲಿ ವೀಡಿಯೊ ಲಿಂಕ್‌ ಪಡೆಯುತ್ತಿದ್ದೀರಾ? ಹಾಗಿದ್ರೆ ಕಾಮೆಂಟ್ ಸೆಕ್ಷನ್‌ನಲ್ಲಿ ನಿಮ್ಮ ಅನುಭವಗಳನ್ನು ಮಿಸ್ ಮಾಡದೇ ಟೈಪಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳಿಗಾಗಿ ಕ್ಲಿಕ್ ಮಾಡಿ

Read more about:
English summary
Beware WhatsApp iPhone Users! This 5-Second Video Will Crash Your Phone. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot