ಮೊಬೈಲ್‌ ಹೆಚ್ಚು ಬಳಸುವವರಿಗೆ ಮತ್ತೊಂದು ಶಾಕಿಂಗ್ ರಿಪೋರ್ಟ್!!

|

ಮೊಬೈಲ್ ಬಳಕೆ ಮಾಡುವುದರಿಂದ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಈಗಾಗಲೇ ಹಲವು ವರದಿಗಳು ಹಲವು ರೀತಿಯಲ್ಲಿಯೇ ರಿಪೋರ್ಟ್ ನೀಡಿವೆ. ಇದೀಗ ಹೈದರಾಬಾದ್‌ನ ಡೆಕ್ಕನ್ ಕಾಲೇಜ್ ಆಫ್‌ ಮೆಡಿಕಲ್ ಸೈನ್ಸಸ್ ಸಂಶೋಧಕರ ತಂಡ, ಮೊಬೈಲ್ ಫೋನ್‌ ಹೃದಯ ಬಡಿತದ ನಡುವಿನ ಅಂತರವನ್ನು ಪರಿಣಾಮಕಾರಿಯಾಗಿ ಬದಲಾಯಿಸಬಹುದು ಎಂದು ಹೇಳಿದೆ.

ಹೌದು, ಮೊಬೈಲ್ ಬಳಕೆಯಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಮೂರು ವಿಧಗಳಲ್ಲಿ ಸಂಶೋಧನೆ ನಡೆಸಿರುವ ಸಂಶೋಧಕರ ತಂಡ ಈ ನಿರ್ಧಾರಕ್ಕೆ ಬಂದಿದ್ದು, ಮೊಬೈಲ್ ಫೋನ್ ನಿಮ್ಮ ದೇಹಕ್ಕೆ ಹೆಚ್ಚು ಹತ್ತಿರವಿದ್ದಾಗ, ಇಯರ್ ಫೋನ್ ಬಳಕೆ ಮಾಡಿದಾಗ ಹಾಗೂ ಮೊಬೈಲ್ ಫೋನ್ ಬಳಕೆ ಮಾಡದೆ ಇದ್ದಾಗ ಎಂಬ ಮೂರು ವಿಧಗಳಲ್ಲಿ ಈ ಸಂಶೋಧನೆಯನ್ನು ನಡೆಸಲಾಗಿದೆ.

ಮೊಬೈಲ್‌ ಹೆಚ್ಚು ಬಳಸುವವರಿಗೆ ಮತ್ತೊಂದು ಶಾಕಿಂಗ್ ರಿಪೋರ್ಟ್!!

ಈ ಮೂರು ವಿಧಗಳಲ್ಲಿ ಸಂಶೋಧನೆಗಳ ಪೈಕಿ, ಮೊಬೈಲ್ ಫೋನ್ ನಿಮ್ಮ ದೇಹದ ಹತ್ತಿರವಿದ್ದಷ್ಟೂ ಹೃದಯದ ಬಡಿತದ ನಡುವೆ ವ್ಯತ್ಯಾಸ ಹೆಚ್ಚಾಗಿರುತ್ತೆ ಅಂತ ಡೆಕ್ಕನ್ ಕಾಲೇಜ್ ಆಫ್‌ ಮೆಡಿಕಲ್ ಸೈನ್ಸಸ್ ತಂಡ ಮಾಹಿತಿ ನೀಡಿದೆ. ಹೃದಯ ಬಡಿತ ಪ್ರಮಾಣದಲ್ಲಿನ ವ್ಯತ್ಯಾಸ ಒಬ್ಬ ವ್ಯಕ್ತಿಯ ರಕ್ತನಾಳದ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಎಚ್ಚರಿಸಿದೆ.!

ಇನ್ನು ಮೊಬೈಲ್ ಬಳಕೆದಾರರು ಆದಷ್ಟು ಇಯರ್ ಫೋನ್‌ಗಳನ್ನು ಬಳಕೆ ಮಾಡಿದರೆ ಹೃದಯಕ್ಕಾಗುವ ತೊಂದರೆಯ ಪ್ರಮಾಣವನ್ನು ಕಡಿತಗೊಳಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಹಾಗಾದರೆ, ಮೊಬೈಲ್ ಹೆಚ್ಚು ಬಳಕೆಯಿಂದ ಎಲ್ಲರೂ ಎದುರಿಸುತ್ತಿರುವ ಇನ್ನಿತರ ಸಮಸ್ಯೆಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಖಿನ್ನತೆ, ಭಯ, ಆತಂಕ!!

ಖಿನ್ನತೆ, ಭಯ, ಆತಂಕ!!

ಮೊಬೈಲ್‌ನಲ್ಲಿ ಆಡುವ ವ್ಯಸನವನ್ನು 'ಆಡುವ ಅಸ್ವಸ್ಥತೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯು ಗುರಿತಿಸುವ ಮುನ್ನವೇ ಮೊಬೈಲ್ ಗೇಮ್ ಮತ್ತು ಅಂತರ್ಜಾಲದ ವ್ಯಸನವಿರುವವರಲ್ಲಿ ಶೇಕಡಾ 7 ರಷ್ಟು ಮಂದಿ ಖಿನ್ನತೆ, ಭಯ, ಆತಂಕ ಹಾಗು ನಡವಳಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೋರ್ಪಡಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ.!!

ಅಂತರ್ಜಾಲ ಆಧುನಿಕ ರೋಗ.!!

ಅಂತರ್ಜಾಲ ಆಧುನಿಕ ರೋಗ.!!

ತಂತ್ರಜ್ಞಾನ ಹೊಸ ಸಮಸ್ಯೆಗಳನ್ನು ತರುತ್ತದೆ, ಮತ್ತೆ ಆ ಸಮಸ್ಯೆಗೆ ಪರಿಹಾರವನ್ನು ಮತ್ತೊಂದು ತಂತ್ರಜ್ಞಾನ ನೀಡುತ್ತದೆ ಎನ್ನುವ ಮಾತಿನಂತೆ ಮೊಬೈಲ್ ಹಾಗೂ ಅಂತರ್ಜಾಲ ಆಧುನಿಕ ರೋಗಗಳಾಗಿವೆ. ಇವು ಮುಂದಿನ ಜನಾಂಗವನ್ನೇ ಮಾನಸಿಕ ರೋಗಿಗಳನ್ನಾಗಿ ಮಾಡುವ ತೀವ್ರತೆಯನ್ನು ಹೊಂದಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.!!

  ಸಮಸ್ಯೆಗಳು ಹಲವು!!

ಸಮಸ್ಯೆಗಳು ಹಲವು!!

ಮೊಬೈಲ್ ಹಾಗೂ ಅಂತರ್ಜಾಲದ ವ್ಯಸನದಿಂದ ವಯಸ್ಕರು ಮಾನಸಿಕ ಆರೋಗ್ಯ ಕೆಡಿಸಿಕೊಂಡರೆ, ಮಕ್ಕಳು ಇತರೆ ಮಕ್ಕಳೊಂದಿಗೆ ಬೆರೆಯದೆ ಏಕಾಂಗಿಯಾಗಿರುವುದು, ಕಲಿಕೆಯಲ್ಲಿ ಹಿಂದುಳಿಯುವುದು, ಸ್ಥೂಲಕಾಯ, ಏಕಾಗ್ರಹೀನತೆ ಮುಂತಾದ ವಿವಿಧ ಸಮಸ್ಯೆಗಳಿಂದ ಬಳಲುತ್ತಾರೆ.! ಈ ದುಷ್ಪರಿಣಾಮಗಳು ಗೋಚರಿಸುವಾಗ ಸಮಯ ಬಹಳ ಮೀರಿರುತ್ತದೆ.!!

ಸೆಲ್ಫೀಯೂ ಗೀಳೆ!!

ಸೆಲ್ಫೀಯೂ ಗೀಳೆ!!

ಚಾಟ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲೇ ವಿಹರಿಸುತ್ತಿರುವತಂಹ ಮುಂತಾದ ಅನೇಕ ಸಮಸ್ಯೆಗಳು ಇತ್ತೀಚೆಗೆ ಯುವ ಜನತೆಯಲ್ಲಿ ಕಾಣಿಸುತಿದೆ. ಮೊಬೈಲ್ ಅನ್ನು ಆಗಾಗ ಸುಮ್ಮನೇ ಆನ್ ಮಾಡಿ ನೋಡುವುದೂ ಮತ್ತು ಸೆಲ್ಫೀ ತೆಗೆದುಕೊಳ್ಳುವುದು ಗೀಳಾಗಿ ಬದಲಾಗಿದೆ.! ಇದು ಎಲ್ಲರ ಸಮಸ್ಯೆಯಾಗಿ ಬದಲಾಗಿದೆ.!!

ವ್ಯಸನ ಎಂಬುದನ್ನು ಒಪ್ಪಿಕೊಳ್ಳಿ!!

ವ್ಯಸನ ಎಂಬುದನ್ನು ಒಪ್ಪಿಕೊಳ್ಳಿ!!

ಮೊಬೈಲ್ ಹಾಗೂ ಅಂತರ್ಜಾಲದ ಬಳಕೆ ಇತರೆ ಮಾನಸಿಕ ರೋಗಗಳಿಗೆ ಎಡೆಮಾಡಿಕೊಡಬಹುದಾದಂತಹ ವ್ಯಸನ ಎಂಬುದನ್ನು ಒಪ್ಪಿಕೊಳ್ಳಲೇಬೇಕಿದೆ. ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಯಮಿತಗೊಳಿಸಿ ನಾವೇ ಲಗಾಮು ಹಾಕಿಕೊಂಡರಹಷ್ಟೆ ಇವುಗಳ ವ್ಯಸನದಿಂದ ನಾವು ಪಾರಾಗಬಹುದಾಗಿದೆ.!!

ಮೊಬೈಲ್ ನಿಯಂತ್ರಿಸಿ.!!

ಮೊಬೈಲ್ ನಿಯಂತ್ರಿಸಿ.!!

ಬಹುತೇಕ ಸಂದರ್ಭದಲ್ಲಿ ಮೊಬೈಲ್ ಅನ್ನು ನಿಯಂತ್ರಿಸಿ. ಏಕಾಗ್ರತೆಗೆ ಭಂಗಬರುವಹಾಗೆ ಮೊಬೈಲ್ ಬಳಕೆ ಬೇಡವೇಬೇಡ.!! ಕೆಲವೊಂದು ಕರೆಗಳನ್ನು ಸ್ವೀಕರಿಸಲಾಗದಿದ್ದರೂ ಚಿಂತೆಯಿಲ್ಲ ಎಂಬ ಮನಸ್ಥಿತಿಯನ್ನು ಮೂಡಿಸಿಕೊಂಡು ಈ ಬಗ್ಗೆ ನಿಮ್ಮ ಆಪ್ತರಿಗೂ ತಿಳಿಸಿ. ಇದರಿಂದ ನಿಮ್ಮ ವ್ಯಸನಕ್ಕೆ ಸ್ವಲ್ಪ ಬ್ರೇಕ್ ಸಿಗಬಹುದು!! ಏನಂತಿರಾ?

Best Mobiles in India

English summary
Beware! Your mobile phone could affect your heart rate variability (HRV). to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X