ವಿಒಐಪಿ ಕರೆಗಳಿಗೆ ಹೆಚ್ಚುವರಿ ದರ ಇಲ್ಲ: ಏರ್‌ಟೆಲ್

Written By:

ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಭಾರತಿ ಏರ್‌ಟೆಲ್ ಇಂಟರ್ನೆಟ್ ವಾಯ್ಸ್ ಕಾಲ್‌ಗಾಗಿ ಹೆಚ್ಚುವರಿ ದರವನ್ನು ನಿಗದಿಪಡಿಸುವ ಯೋಜನೆಯನ್ನು ಕೈ ಬಿಟ್ಟಿದೆ. ಅಂದರೆ ಸ್ಕೈಪ್ ಮತ್ತು ವೈಬರ್‌ಗಾಗಿ ಇದು ಹೆಚ್ಚುವರಿ ದರವನ್ನು ನಿಗದಿಪಡಿಸುವ ನಿಟ್ಟಿನಲ್ಲಿತ್ತು.

ಭಾರತಿ ಏರ್‌ಟೆಲ್ ಈ ಮೊದಲೇ ಯೋಜಿಸಿದಂತೆ ವಿಒಐಪಿ ಕರೆಗಳಿಗೆ ಹೆಚ್ಚುವರಿ ದರವನ್ನು ನಿಗದಿಪಡಿಸುವ ಯೋಜನೆಯನ್ನು ಹಾಕಿಕೊಂಡಿತ್ತು ಅಂದರೆ 3ಜಿ ನೆಟ್‌ವರ್ಕ್‌ನಲ್ಲಿ 10 ಕೆಬಿಗೆ 4 ಪೈಸೆ ಮತ್ತು 2ಜಿ ನೆಟ್‌ವರ್ಕ್‌ನಲ್ಲಿ 10 ಕೆಬಿಗೆ 10 ಪೈಸೆ ಎಂದು ನಿಗದಿಪಡಿಸಿತ್ತು.

ಸ್ಕೈಪ್ ಮತ್ತು ವೈಬರ್ ಆನಂದಿಸಿ ಮಿತದರದಲ್ಲಿ

ಇದನ್ನು ಹೊರತುಪಡಿಸಿ ವಿಶೇಷ ವಿಒಐಪಿ ಪ್ಯಾಕ್‌ಗಳನ್ನು ಇದು ಘೋಷಿಸಿತ್ತು. ಡಿಜಿಟಲ್ ಇಂಡಿಯಾದ ಎಲ್ಲಾ ರೀತಿಯ ಆಸೆ ಆಕಾಂಕ್ಷೆಗಳನ್ನು ಪೂರೈಸುವಂತಹ ಕೊಡುಗೆಯನ್ನು ನಮ್ಮ ವಿಶೇಷ ಯೋಜನೆ ಒಳಗೊಂಡಿದ್ದು ಇದರಿಂದ ಸ್ಟೇಕ್ ಹೋಲ್ಡರ್ಸ್ ಮತ್ತು ಪೂರೈಕೆದಾರರಿಗೆ ಯಾವುದೇ ರೀತಿಯ ಹೊರೆ ಉಂಟಾಗುವುದಿಲ್ಲ ಎಂದು ಏರ್‌ಟೆಲ್ ತಿಳಿಸಿದೆ.

English summary
This article tells about Buckling under pressure, leading telecom player Bharti Airtel has dropped its plans to charge extra for internet voice calls or VoIP service available through apps like Skype and Viber.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot