ಮಾರುಕಟ್ಟೆಯೇ ತಿರುಗಿ ನೋಡುವ ಆಫರ್ ಕೊಟ್ಟ ಏರ್‌ಟೆಲ್: ಜಿಯೋದಿಂದ ಸಾಧ್ಯವೇ..?
ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯದ ನಂಬರ್ ಒನ್ ಕಂಪನಿ ಎಂದು ಗುರುತಿಸಿಕೊಂಡಿರುವ ಏರ್‌ಟೆಲ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಈ ಬಾರಿ ಬಳಕೆದಾರರಿಗೆ ಹೆಚ್ಚು ವ್ಯಾಲಿಡಿಟಿಯನ್ನು ಹೊಂದಿರುವ ಆಫರ್ ಅನ್ನು ಲಾಂಚ್ ಮಾಡಿದ್ದು, ವಾಯ್ಸ್-ಡೇಟಾ ಕಾಂಬೋ ಸೇವೆಯನ್ನು ಹೊಂದಿರುವ ಈ ಆಫರ್ ನಲ್ಲಿ ಬಳಕೆದಾರರು ಹೆಚ್ಚಿನ ಲಾಭವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಪ್ರಮಾಣದ ಡೇಟಾವನ್ನು ಹಾಗೂ ಕರೆ ಮಾಡುವ ಅವಕಾಶ ಸೇರಿದಂತೆ SMS ಮಾಡುವ ಆಯ್ಕೆಯನ್ನು ಏರ್‌ಟೆಲ್ ಹೊಸದಾಗಿ ನೀಡಿರುವ ರೂ.289 ಪ್ಲಾನ್‌ನಲ್ಲಿ ಕಾಣಬಹುದಾಗಿದೆ. ಈ ಆಫರ್ ಐಡಿಯಾ ಲಾಂಚ್ ಮಾಡಿರುವ ರೂ.295 ಪ್ಲಾನ್‌ಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಲಾಂಚ್ ಆಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಈ ಪ್ಲಾನ್ ಹೆಚ್ಚಿನ ಮಂದಿಯನ್ನು ಸೆಳೆಯಲಿದೆ.

48 ದಿನಗಳ ವ್ಯಾಲಿಡಿಟಿ:
ಇಷ್ಟು ದಿನ ಮಾರುಕಟ್ಟೆಯಲ್ಲಿ ಕೇವಲ ಕಡಿಮೆ ವ್ಯಾಲಿಟಿಡಿಯ ಪ್ಲಾನ್‌ಗಳು ಮಾತ್ರವೇ ಕಾಣಿಸಿಕೊಳ್ಳುತ್ತಿತು. ಆದರೆ ಈ ಬಾರಿ ಏರ್‌ಟೆಲ್ ತನ್ನ ಬಳಕೆದಾರರಿಗೆ ಸಾಕಷ್ಟು ಹೆಚ್ಚಿನ ವ್ಯಾಲಿಡಿಟಿಯನ್ನು ಈ ಆಫರ್ ನಲ್ಲಿ ನೀಡಲು ಮುಂದಾಗಿದೆ. ಒಟ್ಟು 48 ದಿನಗಳ ವ್ಯಾಲಿಡಿಟಿಯನ್ನು ರೂ.289 ಪ್ಲಾನ್ ಪಡೆದುಕೊಂಡಿದೆ. ಇದರಲ್ಲಿ ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ.

ನಿತ್ಯ 1 GB ಡೇಟಾ:
ರೂ.289ಕ್ಕೆ ದೊರೆಯುತ್ತಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಏರ್‌ಟೆಲ್, ನಿತ್ಯ 1 GB ಡೇಟಾವನ್ನು ನೀಡುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟು 48 GB ಡೇಟಾ ಬಳಕೆದಾರರಿಗೆ ಲಭ್ಯವಾಗಲಿದೆ ಎನ್ನಬಹುದು.

ಅನ್‌ಲಿಮಿಟೆಡ್ ಕರೆಗಳು:
ಏರ್‌ಟೆಲ್ ನೀಡುತ್ತಿರುವ ರೂ.289 ಪ್ಲಾನ್‌ನಲ್ಲಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ಲಾಭವನ್ನು ಮಾಡಿಕೊಳ್ಳುತ್ತಿದೆ. ಅನ್‌ಲಿಮಿಟೆಡ್ ಕರೆಗಳು ಸೇರಿದಂತೆ ಹೆಚ್ಚಿನ ಪ್ರಮಾಣದ ಆಫರ್‌ಗಳು ಇದರಲ್ಲಿ ಲಭ್ಯವಾಗುತ್ತಿದೆ. ಅಲ್ಲದೇ ನಿತ್ಯ 100 SMS ಕಳುಹಿಸುವ ಅವಕಾಶವು ದೊರೆಯಲಿದೆ ಎನ್ನಲಾಗಿದೆ.

ಜಿಯೋಗೆ ಸೆಡ್ಡು:
ಏರ್‌ಟೆಲ್ ಲಾಂಚ್ ಮಾಡಿರುವ ಹೊಸ ಪ್ಲಾನ್ ನೇರವಾಗಿ ಜಿಯೋಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಸ್ಪರ್ಧೆಯ ಇಂದು ಭಾಗವಾಗಿ ಈ ಪ್ಲಾನ್ ಲಾಂಚ್ ಆಗಿದೆ ಎನ್ನಲಾಗಿದೆ.

ಐಡಿಯಾ ಪ್ಲಾನ್:
ಇದಲ್ಲದೆ ಐಡಿಯಾ ತನ್ನ ಬಳಕೆದಾರರಿಗೆ ಒಟ್ಟು 42 ದಿನಗಳ ವ್ಯಾಲಿಡಿಟಿಯನ್ನು ನೀಡಲು ಮುಂದಾಗಿದೆ. ಇದು ರೂ.295ಕ್ಕೆ ದೊರೆಯುತ್ತಿದ್ದು, ಇದರಲ್ಲಿ 1000 ನಿಮಿಷಗಳ ಕರೆ ಮಾಡುವ ಅವಕಾಶವನ್ನು ನೀಡಲಾಗಿದೆ. ಅಲ್ಲದೇ 5GB ಡೇಟಾವನ್ನು ಮಾತ್ರವೇ ಬಳಕೆಗೆ ನೀಡಲಿದೆ ಎನ್ನಲಾಗಿದೆ.


Click it and Unblock the Notifications








