Subscribe to Gizbot

ಏರ್‌ಟೆಲ್‌ನಿಂದ ಹೊಸ ಗ್ರಾಹಕರಿಗೆ 1000 GB ಉಚಿತ ಡೇಟಾ: ಪಡೆದುಕೊಳ್ಳುವುದು ಹೇಗೆ..?

Written By:

ಏರ್‌ಟೆಲ್ ತನ್ನ ಬಳಕೆದಾರರಿಗೆ ಹೊಸ ಹೊಸ ಆಫರ್ ಗಳನ್ನು ಲಾಂಚ್ ಮಾಡುತ್ತಿದೆ. ಈ ಬಾರಿ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಭರ್ಜರಿ ಆಫರ್ ವೊಂದನ್ನು ನೀಡಿದೆ. ಶೀಘ್ರವೇ ಮಾರುಕಟ್ಟೆಗೆ ಜಿಯೋ ಫೈಬರ್ ಟು ಹೋಮ್ ಸೇವೆಯೂ ಲಾಂಚ್ ಆಗಲಿದ್ದು, ಈ ಹಿನ್ನಲೆಯಲ್ಲಿ ತನ್ನ ಬ್ರಾಡ್ ಬ್ಯಾಂಡ್ ಬಳಕೆದಾರರನ್ನು ಈಗಿನಿಂದಲೇ ಹಿಡಿದಿಟ್ಟುಕೊಳ್ಳುವ ಕಾರ್ಯಕ್ಕೆ ಹಾಗೂ ಹೊಸ ಗ್ರಾಹಕರನ್ನು ಸೆಳೆಯುವ ಕಾರ್ಯಕ್ಕೆ ಏರ್‌ಟೆಲ್ ಮುಂದಾಗಿದೆ.

ಏರ್‌ಟೆಲ್‌ನಿಂದ ಹೊಸ ಗ್ರಾಹಕರಿಗೆ 1000 GB ಉಚಿತ ಡೇಟಾ: ಪಡೆದುಕೊಳ್ಳುವುದು ಹೇಗೆ

ಸದ್ಯ ಏರ್‌ಟೆಲ್ ಮಾರುಕಟ್ಟೆಯಲ್ಲಿ ತನ್ನ ಬಳಕೆದಾರರಿಗೆ ವೇಗದ ಸೇವೆಯನ್ನು ನೀಡುತ್ತಿದ್ದು, ಇದರೊಂದಿಗೆ ಹೆಚ್ಚಿನ ಡೇಟಾ ಲಾಭವನ್ನು ಮಾಡಿಕೊಡುತ್ತಿದೆ. ಇದೇ ಮಾದರಿಯಲ್ಲಿ ಈ ಬಾರಿಯೂ ಹೊಸದಾಗಿ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆದುಕೊಳ್ಳುವವರಿಗೆ 1000GB ವನ್ನು ಉಚಿತವಾಗಿನೀಡಲಿದೆ, ಅಲ್ಲದೇ ಹೊಸ ಎರಡು ಪ್ಲಾನ್‌ಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಹೆಚ್ಚಿನ ವೇಗದ ಡೇಟಾ ಮತ್ತು ಹೆಚ್ಚಿನ ಪ್ರಮಾಣದ ಡೇಟಾವನ್ನು ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1000GB ಡೇಟಾ ಬೋಸನ್:

1000GB ಡೇಟಾ ಬೋಸನ್:

ಹೊಸ ಬಳಕೆದಾರರಿಗೆ ಏರ್‌ಟೆಲ್ 'ಬಿಗ್ ಬೈಟ್ ಡೇಟಾ' ಆಫರ್ ಹೆಸರಿನಲ್ಲಿ 1000GB ಡೇಟಾವನ್ನು ಬೋನಸ್ ಆಗಿ ನೀಡುತ್ತಿದ್ದು, ಅಕ್ಟೋಬರ್ 31ರ ವರೆಗೂ ಈ ಆಫರ್ ಲಭ್ಯವಿರಲಿದೆ. ಹೊಸದಾಗಿ ಏರ್‌ಟೆಲ್ ಸೇವೆಯನ್ನು ಪಡೆಯುವವರು ಒಮ್ಮೆಗೆ 1000GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಗ್ರಾಕರು ಆಯ್ದು ಕೊಳ್ಳುವ ಪ್ಲಾನ್‌ ಅನುಸಾರವಾಗಿ ಡೇಟಾ ಬಳಕೆಯ ವೇಗವು ನಿರ್ಧಾರವಾಗಲಿದೆ.

ರೂ.1099 ಪ್ಲಾನ್‌:

ರೂ.1099 ಪ್ಲಾನ್‌:

ಏರ್‌ಟೆಲ್‌ ಈ ಪ್ಲಾನ್‌ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಬಳಕೆದಾರರಿಗೆ ಒಟ್ಟು 250GB ಡೇಟಾವನ್ನು ಬಳಕೆಗೆ ನೀಡಲಿದೆ. ಇದು 100Mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಇದಲ್ಲದೇ ಈ ಪ್ಲಾನ್‌ನಲ್ಲಿ ಏರ್‌ಟೆಲ್ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಜೊತೆಗೆ ಉಳಿಕೆ ಡೇಟಾವನ್ನು ಮುಂದಿನ ತಿಂಗಳಲಿಗೆ ಸೇರಿಸಿಕೊಳ್ಳುವ ಆಯ್ಕೆಯನ್ನು ನೀಡಿದೆ.

ಉಚಿತ ಅಮೆಜಾನ್ ಪ್ರೈಮ್:

ಉಚಿತ ಅಮೆಜಾನ್ ಪ್ರೈಮ್:

ಇದರ ಜೊತೆಯಲ್ಲಿ ಮತ್ತೊಂದು ಬೊಂಬಾಟ್ ಆಫರ್ ನೀಡಿದರು ಏರ್‌ಟೆಲ್, ಒಮ್ಮೆಗೆ ಆರು ತಿಂಗಳಿಗೆ ರೀಚಾರ್ಜ್ ಮಾಡಿಸಿಕೊಂಡಲ್ಲಿ ರೂ.933 ಮಾತ್ರ ಪ್ರತಿ ತಿಂಗಳಿಗೆ ಪಾವತಿಸಬೇಕಾಗಿದೆ. ಅಲ್ಲದೇ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ರೂ.1299 ಪ್ಲಾನ್:

ರೂ.1299 ಪ್ಲಾನ್:

ರೂ.1299ರ ಪ್ಲಾನ್ ನಲ್ಲಿ ಏರ್‌ಟೆಲ್ ಬಳಕೆದಾರರಿಗೆ ಒಂದು ತಿಂಗಳ ವ್ಯಾಲಿಡಿಟಿಯೊಂದಿಗೆ 350GB ಡೇಟಾವನ್ನು 100Mbps ವೇಗದಲ್ಲಿ ನೀಡಲಿದೆ. ಇದಲ್ಲದೇ ಬಳಕೆದಾರರು ಆರು ತಿಂಗಳಿಗೆ ಮೊದಲೇ ಹಣವನ್ನು ಪಾವತಿ ಮಾಡುವುದಾರೆ ಪ್ರತಿ ತಿಂಗಳಿಗೆ ರೂ.1100 ಮಾತ್ರವೇ ಪಾವತಿ ಮಾಡಬೇಕಾಗಿದೆ. ಅಲ್ಲದೇ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Bharti Airtel has extended its promotional fixed line broadband “Airtel Big Byte Offer’ till October 2018. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot