Home
ಸುದ್ದಿಜಾಲ

ಜಿಯೋಗೆ ಕೌಂಟರ್ ಕೊಟ್ಟ ಏರ್‌ಟೆಲ್: ರೂ.98ಕ್ಕೆ ಇಷ್ಟೆಲ್ಲ..!!

By Srinidhi

ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ದೊಂದಿಗೆ ಜಿದ್ದಿಗೆ ಬಿದ್ದಿರುವ ಏರ್‌ಟೆಲ್ ದಿನಕ್ಕೊಂದು ಹೊಸ ಆಫರ್ ಗಳನ್ನು ಜಿಯೋವನ್ನು ಮೀರಿಸುವಂತೆ ನೀಡುತ್ತಿದೆ. ಈಗಾಗಲೇ ಜಿಯೋ ರೂ.49 ಪ್ಲಾನ್ ಬಿಡುಗಡೆ ಮಾಡಿರುವುದು ಮಾರುಕಟ್ಟೆಯಲ್ಲಿ ಸಾಕಷ್ಟು ಹವಾ ಎಬ್ಬಿಸಿದೆ. ಇದಕ್ಕೆ ಕೌಂಟರ್ ನೀಡುವ ಆಫರ್ ಇನ್ನು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿಲ್ಲ. ಈ ಹಿನ್ನಲೆಯಲ್ಲಿ ಈ ಪ್ಲಾನ್‌ಗೆ ಸೆಡ್ಡು ಹೊಡೆಯುವ ಪ್ರಯತ್ನವನ್ನು ಏರ್‌ಟೆಲ್ ಮಾಡಿದೆ.

ಜಿಯೋಗೆ ಕೌಂಟರ್ ಕೊಟ್ಟ ಏರ್‌ಟೆಲ್: ರೂ.98ಕ್ಕೆ ಇಷ್ಟೆಲ್ಲ..!!

ಏರ್‌ಟೆಲ್ ತನ್ನ ಬಳಕೆದಾರಿಗೆ ರೂ.98 ಪ್ಲಾನ್ ಘೋಷಣೆಯನ್ನು ಮಾಡಿದೆ. ಈ ಮೂಲಕ ಜಿಯೋವನ್ನು ಮೀರಿಸಲು ಮುಂದಾಗಿದೆ. ಈ ಪ್ಲಾನ್ ಪಡೆದುಕೊಳ್ಳುವ ಬಳಕೆದಾರರು ಅತೀ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಜಿಯೋ ರೂ.49 ಪ್ಲಾನ್ ಬಿಟ್ಟರೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬೆಸ್ಟ್ ಆಫರ್ ಇದಾಗಲಿದೆ.

ರೂ.98 ಪ್ಲಾನ್:

ರೂ.98 ಪ್ಲಾನ್:

ಏರ್‌ಟೆಲ್ ರೂ.98ರ ಪ್ಲಾನ್‌ನಲ್ಲಿ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಇದರಲ್ಲಿ ಗ್ರಾಹಕರು ಉಚಿತವಾಗಿ ಅನ್‌ಲಿಟೆಮೆಡ್ ಕರೆಗಳನ್ನು ಮಾಡಬಹುದಾಗಿದೆ. ಅಲ್ಲದೇ 100 SMSಗಳನ್ನು ಪ್ರತಿ ನಿತ್ಯ ಕಳುಹಿಸಬಹುದಾಗಿದೆ. ಅಲ್ಲದೇ 1GB ಡೇಟಾ ಸಹ ಬಳಕೆಗೆ ದೊರೆಯಲಿದ್ದು, 28 ದಿನಗ ವ್ಯಾಲಿಡಿಟಿಯನ್ನು ಇದು ಹೊಂದಿದೆ.

ಬೆಸ್ಟ್ ಆಫರ್:

ಬೆಸ್ಟ್ ಆಫರ್:

ಇದಲ್ಲದೇ ಈ ಪ್ಲಾನ್‌ನಲ್ಲಿ ಯಾವುದೇ FUP ಇಲ್ಲ ಎನ್ನಲಾಗಿದೆ. ಅಲ್ಲದೇ ರೋಮಿಂಗ್ ಸಹ ಉಚಿತವಾಗಿದೆ. ಅಲ್ಲದೇ ಅನ್‌ಲಿಮಿಟೆಡ್ ಕರೆಗಳನ್ನು ಮಾಡಬಹುದಾಗಿದೆ. ಆದರೆ ಬೇರೆ ಪ್ಲಾನ್‌ಗಳಲ್ಲಿ ಇಷ್ಟು ಅವಕಾಶಗಳು ಇಲ್ಲ.

ಎಲ್ಲರಿಗೂ ಇಲ್ಲ:

ಎಲ್ಲರಿಗೂ ಇಲ್ಲ:

ಏರ್‌ಟೆಲ್ ನೀಡಿರುವ ರೂ.98ರ ಪ್ಲಾನ್ ಎಲ್ಲಾ ಬಳಕೆದಾರರಿಗೂ ದೊರೆಯುವುದಿಲ್ಲ ಎನ್ನಲಾಗಿದೆ. ಕೇವಲ ಆಯ್ದ ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ನೀವು ಲಕ್ಕಿಯಾಗಿದ್ದರೇ ಆಫರ್ ಲಾಭವನ್ನು ಹೆಚ್ಚಾಗಿ ಪಡೆದುಕೊಳ್ಳಬಹುದು.

ಆಪ್‌ನಲ್ಲಿ ಇಲ್ಲ:

ಆಪ್‌ನಲ್ಲಿ ಇಲ್ಲ:

ಮೈ ಏರ್‌ಟೆಲ್ ಆಪ್ ನಲ್ಲಿ ಈ ಪ್ಲಾನ್ ಬಳಕೆಗೆ ಲಭ್ಯವಿಲ್ಲ ಎನ್ನಲಾಗಿದೆ. ಏರ್‌ಟೆಲ್ ವೆಬ್ ಸೈಟಿನಲ್ಲಿ ಮಾತ್ರವೇ ಈ ಆಫರ್ ಬಗ್ಗೆ ಮಾಹಿತಿಯನ್ನು ಏರ್‌ಟೆಲ್ ನೀಡಿದೆ. ಅಲ್ಲದೇ ಇದು ರಿಚಾರ್ಜ್ ಪಾಯಿಂಟ್ ಗಳಲ್ಲೂ ಕಾಣಿಸಿಕೊಂಡಿಲ್ಲ ಎನ್ನಲಾಗಿದೆ.

ಜಿಯೋ ಆಫರ್:

ಜಿಯೋ ಆಫರ್:

ಇದೇ ಮಾದರಿಯ ಆಫರ್ ನೀಡಿರುವ ಜಿಯೂ ರೂ.98ಕ್ಕೆ 28 ದಿನಗಳ ವ್ಯಾಲಿಡಿಟಿಗೆ 2GB ಡೇಟಾವನ್ನು ನೀಡಲಿದೆ. ಅಲ್ಲದೇ ಬಳಕೆದಾರರಿಗೆ ಉಚಿತ ಕರೆ ಮಾಡುವ ಅವಕಾಶ ಮತ್ತು SMS ಗಳನ್ನು ಉಚಿತವಾಗಿ ಕಳುಹಿಸಲು ಅವಕಾಶ ಮಾಡಿಕೊಟ್ಟಿದೆ.

ಏರ್‌ಟೆಲ್‌ USSD ಕೋಡ್‌ಗಳು: ಯಾರು ಹೇಳಿಕೊಡದ ವಿಷಯಗಳು.!

ಏರ್‌ಟೆಲ್‌ USSD ಕೋಡ್‌ಗಳು: ಯಾರು ಹೇಳಿಕೊಡದ ವಿಷಯಗಳು.!

ದೇಶಿಯ ಟೆಲಿಕಾಂ ಮಾರುಕಟ್ಟೆಯ ದೈತ್ಯ ಕಂಪನಿ ಏರ್‌ಟೆಲ್ ತನ್ನ ಬಳಕೆದಾರರಿಗೆ ಅನೇಕ ಸೇವೆಗಳನ್ನು ಬೆರಳ ತುದಿಗೆ ನೀಡುತ್ತಿದೆ. ವಿವಿಧ ಮಾದರಿಯ ಸೇವೆಯನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಸೇವೆಗಳ ಮಾಹಿತಿಯೂ ಬಳಕೆದಾರರಿಗೆ ದೊರೆಯಲಿ ಎನ್ನುವ ಕಾರಣಕ್ಕೆ ಅನೇಕ ಕೋಡ್ ಗಳನ್ನು ನೀಡುತ್ತಿದೆ. ಈ ಮೂಲಕ ಏರ್‌ಟೆಲ್ ಬಳಕೆದಾರರು ತಾವು ಪಡೆಯುತ್ತಿರುವ ಸೇವೆಗಳ ಕುರಿತು ಸಂಫೂರ್ಣ ಮಾಹಿತಿಯನ್ನು ನೀಡುವ ಪ್ರಯತ್ನವು ಇದಾಗಿದೆ.

ತಿಳಿದರೆ ಒಳ್ಳೆಯದು.!

ತಿಳಿದರೆ ಒಳ್ಳೆಯದು.!

ಏರ್‌ಟೆಲ್ ಬಳಕೆದಾರರು ಬ್ಯಾಲೆನ್ಸ್ ಚೆಕ್ ಮಾಡುವುದರಿಂದ ಹಿಡಿದ್ದು, SMS ಬ್ಯಾಲೆನ್ಸ್, ಹೆಲೋ ಟೊನ್ಸ್, ಡೇಟಾ ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಒಂದಕ್ಕೆ ಒಂದು ಕೋಡ್ ಗಳನ್ನು ನೀಡಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಏರ್‌ಟೆಲ್ ಬಳಕೆದಾರರು ತಿಳಿಯಲೇ ಬೇಕಾದ ವಿಚಾರವು ಇದಾಗಿದೆ ಎನ್ನಲಾಗಿದೆ.

ಏರ್‌ಟೆಲ್ ಕಸ್ಟಮ್ ಕೇರ್ ನಂಬರ್:

ಏರ್‌ಟೆಲ್ ಕಸ್ಟಮ್ ಕೇರ್ ನಂಬರ್:

ನೀವು ಏರ್‌ಟೆಲ್ ಕುರಿತ ಯಾವುದೇ ಮಾಹಿತಿಯನ್ನು ಪಡೆಯಲು 121 ನಂಬರ್‌ಗೆ ಕರೆ ಮಾಡಬಹುದಾಗಿದೆ, ಇದು ಉಚಿತವಾಗಿ ಯಾವುದೇ ದರಗಳನ್ನು ಇದಕ್ಕೆ ವಿಧಿಸುವುದಿಲ್ಲ.

ಏರ್‌ಟೆಲ್ ದೂರು ದಾಖಲಿಸಿಸಲು:

ಏರ್‌ಟೆಲ್ ದೂರು ದಾಖಲಿಸಿಸಲು:

ಏರ್‌ಟೆಲ್ ಸೇವೆಗಳ ಕುರಿತು ದೂರು ದಾಖಲು ಮಾಡಬೇಕಾದರೆ ನೀವು 198ಗೆ ಕರೆ ಮಾಡಬಹುದಾಗಿದೆ. ಇದು ಉಚಿತವಾಗಿ ಯಾವುದೇ ದರಗಳನ್ನು ಇದಕ್ಕೆ ವಿಧಿಸುವುದಿಲ್ಲ.

ಏರ್‌ಟೆಲ್ ಬ್ಯಾಲೆನ್ಸ್ ಚೆಕ್ ಮಾಡಲು:

ಏರ್‌ಟೆಲ್ ಬ್ಯಾಲೆನ್ಸ್ ಚೆಕ್ ಮಾಡಲು:

ಇದಲ್ಲದೇ ಏರ್‌ಟೆಲ್ ಬ್ಯಾಲೆನ್ಸ್ ಚೆಕ್ ಮಾಡಲು *123# ಡಯಲ್ ಮಾಡಬೇಕಾಗಿದೆ. ಇಲ್ಲಿ ನಿಮ್ಮ ಉಳಿಕೆಯ ಬ್ಯಾಲೆನ್ಸ್ ನೋಡಬಹುದಾಗಿದೆ.

ಏರ್‌ಟೆಲ್ 4G ಡೇಟಾ ಬ್ಯಾಲೆನ್ಸ್ ಚೆಕ್ ಮಾಡಲು:

ಏರ್‌ಟೆಲ್ 4G ಡೇಟಾ ಬ್ಯಾಲೆನ್ಸ್ ಚೆಕ್ ಮಾಡಲು:

ಏರ್‌ಟೆಲ್ ನೀಡುವ ಡೇಟಾ ಬ್ಯಾಲೆನ್ಸ್ ಚೆಕ್ ಮಾಡಲು *123*8# ಡಯಲ್ ಮಾಡಬೇಕಾಗಿದೆ. ಇಲ್ಲಿ ನಿಮ್ಮ ಉಳಿಕೆಯ ಡೇಟಾ ಬ್ಯಾಲೆನ್ಸ್ ಕಾಣಿಸಿಕೊಳ್ಳಲಿದೆ.

ಏರ್‌ಟೆಲ್ ಲೋನ್ ತೆಗೆದುಕೊಳ್ಳಲು:

ಏರ್‌ಟೆಲ್ ಲೋನ್ ತೆಗೆದುಕೊಳ್ಳಲು:

ನಿಮ್ಮ ಬ್ಯಾಲೆನ್ಸ್ ಕಡಿಮೆಯಾಗಿ ಲೋನ್ ತೆಗೆದುಕೊಳ್ಳಲು *141*10# or 52141 ಡಯಲ್ ಮಾಡಬೇಕಾಗಿದೆ. ಇದು ಉಚಿತವಾಗಿ ಯಾವುದೇ ದರಗಳನ್ನು ಇದಕ್ಕೆ ವಿಧಿಸುವುದಿಲ್ಲ.

ಏರ್‌ಟೆಲ್ ಆಫರ್‌ಗಳನ್ನು ಚೆಕ್ ಮಾಡಲು:

ಏರ್‌ಟೆಲ್ ಆಫರ್‌ಗಳನ್ನು ಚೆಕ್ ಮಾಡಲು:

ಏರ್‌ಟೆಲ್ ನಿಮಗೆ ಮಾತ್ರವೇ ನೀಡುವ ಆಫರ್‌ಗಳನ್ನು ಚೆಕ್ ಮಾಡಲು *121# ಡಯಲ್ ಮಾಡಿ. ಇಲ್ಲಿ ನಿಮ್ಮ ಸ್ಪೆಷಲ್ ಆಫರ್‌ಗಳು ಕಾಣಿಸಿಕೊಳ್ಳಲಿದೆ.

ಏರ್‌ಟೆಲ್ ಹೆಲೋ ಟೋನ್:

ಏರ್‌ಟೆಲ್ ಹೆಲೋ ಟೋನ್:

ಏರ್‌ಟೆಲ್ ಬಳಕೆದಾರರು ಹೆಲೋ ಟೋನ್ ಬದಲಾವಣೆ ಮಾಡಿಕೊಳ್ಳಲು, ಹೊಸ ಹೊಸ ಟೋನ್‌ಗಳನ್ನು ಹುಡುಕಲು *678# ಡಯಲ್ ಮಾಡಬೇಕಾಗಿದೆ.

ನಿಮ್ಮ ಏರ್‌ಟೆಲ್ ನಂಬರ್ ನೋಡಲು:

ನಿಮ್ಮ ಏರ್‌ಟೆಲ್ ನಂಬರ್ ನೋಡಲು:

ನಿಮ್ಮ ಏರ್‌ಟೆಲ್ ನಂಬರ್ ಮರೆತು ಹೋದ ಸಂದರ್ಭದಲ್ಲಿ *282# ಡಯಲ್ ಮಾಡಿದರೆ ನಿಮ್ಮ ನಂಬರ್ ಕಾಣಿಸಿಕೊಳ್ಳಲಿದೆ.

Best Mobiles in India

English summary
Bharti Airtel is Offering Unlimited Calls, SMS and 1GB Data for 28 Days. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+