Home
ಸುದ್ದಿಜಾಲ

Airtel: ಹೊಸ ಪ್ಲಾನ್ ಬಿಡುಗಡೆ; 50GB ಇಂಟರ್ನೆಟ್‌.. JioHotstar ಉಚಿತ.. ಕಡಿಮೆ ಬೆಲೆ! ಜೊತೆ ಹಲವು ಸೌಲಭ್ಯ

ಏರ್‌ಟೆಲ್ ತನ್ನ ಗ್ರಾಹಕರಿಗೆ ಬೊಂಬಾಟ್ ಸುದ್ದಿ ನೀಡಿದೆ. 50GB ಇಂಟರ್ನೆಟ್‌ನೊಂದಿಗೆ ಹೊಸ ರೀಚಾರ್ಜ್ ಯೋಜನೆ ತಂದಿದೆ. ಇದರಲ್ಲಿ ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆಯೂ ಉಚಿತವಾಗಿದೆ. ಹೌದು, ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್‌ಟೆಲ್ (Airtel) ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ ಪರಿಚಯಿಸಿದೆ. ತನ್ನ ಗ್ರಾಹಕರ ಅಗತ್ಯತೆಗಳು ಮತ್ತು ಡಿಜಿಟಲ್ ಅಭ್ಯಾಸಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಬನ್ನಿ, ಈ ಹೊಸ ರೀಚಾರ್ಜ್ ಯೋಜನೆಯ ಬೆಲೆ ಎಷ್ಟು? ವ್ಯಾಲಿಡಿಟಿ ಮತ್ತು ಪ್ರಯೋಜನಗಳನ್ನು ತಿಳಿಯೋಣ.

ವಿಐ (Vi) ಕಂಪನಿಯು ಇತ್ತೀಚೆಗೆ ಹೊಸ 340 ರೂ.ಗಳ ಪ್ರಿಪೇಯ್ಡ್ ಪ್ಲಾನ್ ತಂದಿದೆ. ಇತ್ತ, ಏರ್‌ಟೆಲ್ 451 ರೂ.ನ ಈ ಹೊಸ ಡೇಟಾ ವೋಚರ್ ಯೋಜನೆ ( Airtel Rs 451 Prepaid Plan Launched) ಪರಿಚಯಿಸಿದೆ. ವಿಶೇಷವಾಗಿ, ಇಂಟರ್ನೆಟ್ ಅನ್ನು ಹೆಚ್ಚು ಬಳಸುವ ಗ್ರಾಹಕರು ಮತ್ತು OTT ಫ್ಲಾಟ್ ಆನಂದಿಸಲು ಬಯಸುವ ಬಳಕೆದಾರರಿಗಾಗಿ ಈ ಪ್ಲಾನ್ ತರಲಾಗಿದೆ. ಈ ಯೋಜನೆಯೆ ವೈಶಿಷ್ಟ್ಯವೆಂದರೆ, ಇದು ಬಳಕೆದಾರರಿಗೆ ಜಿಯೋಹಾಟ್‌ಸ್ಟಾರ್ (Free JioHotstar) ಮೊಬೈಲ್‌ನ 3 ತಿಂಗಳ ಉಚಿತ ಚಂದಾದಾರಿಕೆಯನ್ನು ಸಹ ನೀಡುತ್ತದೆ.

Airtel: ಹೊಸ ಪ್ಲಾನ್ ಲಾಂಚ್; ಕಡಿಮೆ ಬೆಲೆ.. 50GB ಡೇಟಾ.. JioHotstar ಉಚಿತ!

ಏರ್‌ಟೆಲ್ 451 ರೂ. ರೀಚಾರ್ಜ್ ಯೋಜನೆಯ ಪ್ರಯೋಜನಗಳು

ಏರ್‌ಟೆಲ್ 451 ರೂ. ರೀಚಾರ್ಜ್ ಯೋಜನೆಯು ಬಳಕೆದಾರರಿಗೆ ಇಂಟರ್ನೆಟ್ ಮತ್ತು ಮನರಂಜನೆಯನ್ನು ಒದಗಿಸುತ್ತದೆ. ಏರ್‌ಟೆಲ್‌ನ ಹೊಸ 451 ರೂ. ಪ್ರಿಪೇಯ್ಡ್ ಪ್ಲಾನ್ ಡೇಟಾ ವೋಚರ್ ಯೋಜನೆಯಾಗಿದೆ. ಅಂದರೆ, ಈ ಪ್ಲಾನ್‌ ಅನ್ನು ಸಕ್ರಿಯಗೊಳಿಸಲು, ನೀವು ನಿಮ್ಮ ಸಂಖ್ಯೆಯಲ್ಲಿ ಈಗಾಗಲೇ ಸಕ್ರಿಯ ಪ್ರಾಥಮಿಕ ಯೋಜನೆಯನ್ನು ಹೊಂದಿರಬೇಕು. ಈ ರೀಚಾರ್ಜ್ ಯೋಜನೆಯಲ್ಲಿ, ಗ್ರಾಹಕರು ಸಂಪೂರ್ಣ 30 ದಿನಗಳ ವ್ಯಾಲಿಡಿಟಿ ಪಡೆಯುವುದು. ಜೊತೆಗೆ 50GB ಹೈ ಸ್ಪೀಡ್ ಡೇಟಾವನ್ನು ನೀಡಲಾಗುತ್ತದೆ. ಇದು, ಒಟ್ಟಾರೆ ಬಳಕೆಗೆ ಸಾಕಷ್ಟು ಉತ್ತಮವಾಗಿದೆ.

ಏರ್‌ಟೆಲ್ 451 ರೂ. ರೀಚಾರ್ಜ್ ಯೋಜನೆಯ ದೊಡ್ಡ ವಿಶೇಷತೆಯೆಂದರೆ, ಇದು ಬಳಕೆದಾರರಿಗೆ ಜಿಯೋಹಾಟ್‌ಸ್ಟಾರ್ ಮೊಬೈಲ್‌ನ 3 ತಿಂಗಳ ಉಚಿತ ಚಂದಾದಾರಿಕೆಯನ್ನು ಸಹ ನೀಡುತ್ತದೆ. ಅಂದರೆ, ಮೂರು ತಿಂಗಳ ಕಾಲ, ನೀವು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮ್ಮ ನೆಚ್ಚಿನ ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳು ಮತ್ತು ಲೈವ್ ಕ್ರಿಕೆಟ್ ಸ್ಕೋರ್ (ಲೈವ್ ಕ್ರೀಡೆ) ವೀಕ್ಷಿಸಲು ಸಾಧ್ಯವಾಗುತ್ತದೆ.

451 ರೂ. ಯೋಜನೆ ಯಾವ ಬಳಕೆದಾರರಿಗೆ ಪ್ರಯೋಜನ?

451 ರೂ. ರೀಚಾರ್ಜ್ ಯೋಜನೆಯು ಏರ್‌ಟೆಲ್ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. ನಿಮಗೆ ನಿಯಮಿತ ಡೇಟಾ ಅಗತ್ಯವಿದ್ದರೆ, ವಿಶೇಷವಾಗಿ ನೀವು ಓಟಿಟಿ (OTT) ಪ್ಲಾಟ್‌ಫಾರ್ಮ್‌ಗಳನ್ನು ವ್ಯಾಪಕವಾಗಿ ಬಳಸುತ್ತಿದ್ದರೆ, ಈ ಯೋಜನೆ ನಿಮಗೆ ಸೂಕ್ತವಾಗಿದೆ. ಸಾಂದರ್ಭಿಕವಾಗಿ ಹೆಚ್ಚುವರಿ ಡೇಟಾ ಅಗತ್ಯವಿರುವವರಿಗೆ, ಆದರೆ, ಪ್ರತಿ ಬಾರಿಯೂ ದುಬಾರಿ ಯೋಜನೆಗೆ ಅಪ್‌ಗ್ರೇಡ್ ಮಾಡಲು ಬಯಸದವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಏರ್‌ಟೆಲ್‌ ತನ್ನ ಪೋರ್ಟ್‌ಫೋಲಿಯೊದಲ್ಲಿ 500 ರೂ.ಗಿಂತ ಕಡಿಮೆ ಬೆಲೆಯ ಹಲವು ಉತ್ತಮ ಯೋಜನೆಗಳನ್ನು ಪರಿಚಯಿಸಿದೆ. ಇವುಗಳನ್ನು ವಿಭಿನ್ನ ಅಗತ್ಯಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಏರ್‌ಟೆಲ್‌ನ 500 ರೂ.ಗಿಂತ ಕಡಿಮೆ ಬೆಲೆಯ ಎರಡು ಜನಪ್ರಿಯ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಈ ಪೈಕಿ ಮೊದಲನೆಯದು 361 ರೂ. ಯೋಜನೆ ಆಗಿದೆ. ಎರಡನೆಯದು 195 ರೂ. ಯೋಜನೆ ಆಗಿದೆ.

ಏರ್‌ಟೆಲ್‌ 361 ರೂ. ರೀಚಾರ್ಜ್ ಯೋಜನೆ

ಏರ್‌ಟೆಲ್‌ 361 ರೂ. ರೀಚಾರ್ಜ್ ಯೋಜನೆ ಡೇಟಾಗೆ ಮಾತ್ರ ಸೂಕ್ತವಾಗಿದೆ. ಮತ್ತು ಯಾವುದೇ ಮನರಂಜನಾ ಪ್ರಯೋಜನಗಳನ್ನು ನೀಡುವುದಿಲ್ಲ. ಇದು 50GB ಡೇಟಾ, 30 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರಲ್ಲಿ ಯಾವುದೇ ಹೆಚ್ಚುವರಿ ಪ್ರಯೋಜನಗಳಿಲ್ಲ. ಅಂದರೆ ಧ್ವನಿ ಕರೆ ಅಥವಾ ಓಟಿಟಿ (OTT) ಸೌಲಭ್ಯ ಇರುವುದಿಲ್ಲ.

ಏರ್‌ಟೆಲ್‌ 195 ರೂ. ರೀಚಾರ್ಜ್ ಯೋಜನೆ

ಕಡಿಮೆ ಡೇಟಾ ಅಗತ್ಯವಿರುವ ಆದರೆ, ಓಟಿಟಿ ಚಂದಾದಾರಿಕೆ ಪ್ರಯೋಜನಗಳನ್ನು ಪಡೆಯಲು ಬಯಸುವ ಬಳಕೆದಾರರಿಗೆ 195 ರೂ. ಯೋಜನೆ ಸೂಕ್ತವಾಗಿದೆ. ಇದು 15GB ಡೇಟಾ, 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಹಾಗೆಯೇ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ 3 ತಿಂಗಳ ಉಚಿತ ಚಂದಾದಾರಿಕೆ ನೀಡುತ್ತದೆ. ನೀವು ಹೆಚ್ಚು ಇಂಟರ್ನೆಟ್ ಬಳಕೆದಾರರಾಗಿದ್ದರೆ ಮತ್ತು ಓಟಿಟಿ ಇಷ್ಟಪಡುತ್ತಿದ್ದರೆ, ಹೊಸ 451 ರೂ. ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಿದೆ.

Airtel: ಹೊಸ ಪ್ಲಾನ್ ಲಾಂಚ್; ಕಡಿಮೆ ಬೆಲೆ.. 50GB ಡೇಟಾ.. JioHotstar ಉಚಿತ!

ಏರ್‌ಟೆಲ್‌ 499 ರೂ. ಮತ್ತು ಏರ್‌ಟೆಲ್‌ 1,959 ರೂ. ಪ್ರಿಪೇಯ್ಡ್ ಪ್ಲಾನ್

ಏರ್‌ಟೆಲ್‌ ಎರಡು ಕಾಲ್ ಮತ್ತು ಎಸ್‌ಎಂಎಸ್‌ ಪ್ಲಾನ್‌ಗಳನ್ನು ಪ್ರಾರಂಭಿಸಿದೆ. ಈ ಎರಡು ಪ್ಲಾನ್‌ಗಳ ಬೆಲೆ 499 ರೂ. ಮತ್ತು 1,959 ರೂ. ಆಗಿದೆ. ಇವುಗಳು ಕೈಗೆಟುಕುವ ಬೆಲೆ ಮಾತ್ರವಲ್ಲದೆ, ಕೇವಲ ಕರೆ ಮತ್ತು ಎಸ್‌ಎಂಎಸ್‌ಸೌಲಭ್ಯ ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. ನೀವು ಡೇಟಾ ಕಿರಿಕಿರಿಯಿಂದ ಮುಕ್ತರಾಗಲು ಮತ್ತು ಯಾವುದೇ ಚಿಂತೆಯಿಲ್ಲದೆ ಕಾಲ್ ಮತ್ತು ಎಸ್‌ಎಂಎಸ್‌ ಮಾಡಲು ಬಯಸಿದರೆ, ಈಗಲೇ ಈ ಏರ್‌ಟೆಲ್ ಪ್ಲಾನ್‌ಗಳ ಲಾಭ ಪಡೆಯಬಹುದು. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಏರ್‌ಟೆಲ್‌ 499 ರೂ. ಪ್ರಿಪೇಯ್ಡ್ ಪ್ಲಾನ್

ಏರ್‌ಟೆಲ್‌ನ 499 ರೂ.ನ ಹೊಸ ಪ್ರಿಪೇಯ್ಡ್ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆಯಲ್ಲಿ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 900 ಎಸ್‌ಎಂಎಸ್ ಸೌಲಭ್ಯ ಪಡೆಯಬಹುದು. ಹೆಚ್ಚುವರಿಯಾಗಿ, 3 ತಿಂಗಳವರೆಗೆ ಏರ್‌ಟೆಲ್ ರಿವಾರ್ಡ್‌ಗಳು ಅಪೊಲೊ 24/7 ಸರ್ಕಲ್ ಚಂದಾದಾರಿಕೆ ಮತ್ತು ಉಚಿತ ಹಲೋ ಟ್ಯೂನ್ಸ್ ಚಂದಾದಾರಿಕೆಯು ಸಹ ಲಭ್ಯವಿದೆ. ಮೊದಲು ಈ ವಿಭಾಗದಲ್ಲಿ 509 ರೂ. ಪ್ಲಾನ್ ಇತ್ತು. ಇದರಲ್ಲಿ 6GB ಡೇಟಾ, ನಿತ್ಯ 100 ಎಸ್‌ಎಂಎಸ್ ಮತ್ತು ಉಚಿತ ಕಾಲ್‌ ಸೌಲಭ್ಯ ಇತ್ತು. ಇದೀಗ, ಈ ಹೊಸ 10 ರೂ. ಕಡಿಮೆಯ ಯೋಜನೆಯು ಡೇಟಾ ಪ್ರಯೋಜನ ತೆಗೆದುಹಾಕಲಾಗಿದೆ. ಈ ಮೂಲಕ ಹೊಸ ಪ್ಲಾನ್‌ ಅನ್ನು ಹೆಚ್ಚು ಕೈಗೆಟುಕುವಂತೆ ಮಾಡಿದೆ.

ಏರ್‌ಟೆಲ್‌ 1,959 ರೂ. ಪ್ರಿಪೇಯ್ಡ್ ಪ್ಲಾನ್

ನೀವು ದೀರ್ಘಾವಧಿಯ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್‌ ಪ್ಲಾನ್‌ ಬಯಸಿದರೆ, ಈ ಹೊಸ ಯೋಜನೆ ಉತ್ತಮ ಆಯ್ಕೆಯಾಗಿದೆ. ಏರ್‌ಟೆಲ್‌ನ ಈ ಪ್ರಿಪೇಯ್ಡ್ ಪ್ಲಾನ್‌ ಬೆಲೆ 1,959 ರೂ. ಆಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ನೀವು ಈ ಪ್ಲಾನ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು 3,600 ಎಸ್‌ಎಂಎಸ್‌ಗಳ ಪ್ರಯೋಜನ ಪಡೆಯಬಹುದು. ಈ ಯೋಜನೆಯು ಅಪೊಲೊ 24/7 ಸರ್ಕಲ್ ಚಂದಾದಾರಿಕೆ ಮತ್ತು 3 ತಿಂಗಳವರೆಗೆ ಉಚಿತ ಹಲೋ ಟ್ಯೂನ್‌ಗಳನ್ನು ಸಹ ಒಳಗೊಂಡಿದೆ. ವಿಶೇಷವೆಂದರೆ, ಇದಕ್ಕೂ ಮೊದಲು ಈ ಯೋಜನೆಯ ಬೆಲೆ 1,999 ರೂ. ಆಗಿತ್ತು. ಈ ಪ್ಲಾನ್‌ನಲ್ಲಿ ಪ್ರತಿನಿತ್ಯ 24GB ಡೇಟಾ ಮತ್ತು 100 ಎಸ್‌ಎಂಎಸ್‌ ಸೌಲಭ್ಯ ಲಭ್ಯವಿತ್ತು. ಪ್ರಸ್ತುತ, ಈ ಹೊಸ ಯೋಜನೆಯು 40 ರೂ.ಗಳಷ್ಟು ಅಗ್ಗವಾಗಿದೆ. ಮತ್ತು ವಾಯ್ಸ್‌ ಕಾಲ್ ಮತ್ತು ಎಸ್‌ಎಂಎಸ್‌ ಸೌಲಭ್ಯ ಮಾತ್ರ ಒಳಗೊಂಡಿದೆ. ಕಂಪನಿಯು ತನ್ನ ಸೈಟ್‌ನಿಂದ ಈ ಯೋಜನೆಯನ್ನು ತೆಗೆದುಹಾಕಿದೆ.

Best Mobiles in India

English summary
Bharti Airtel Launches Rs 451 Prepaid Recharge Plan With Complimentary JioHotstar Subscription: Benefits
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+