Home
ಸುದ್ದಿಜಾಲ

299 ರುಪಾಯಿಗೆ ಏರ್ ಟೆಲ್ ನಲ್ಲಿ ಎಷ್ಟು ಬೇಕಾದ್ರೂ ಮಾತಾಡಿ..

By Sushma Charhra

ಮಾತಿಲ್ಲದೆ ಮನುಷ್ಯನಿಗೆ ಇರೋಕೆ ಸಾಧ್ಯನಾ... ನೋ ಚಾನ್ಸ್.. ಹೊಟ್ಟೆಗೆ ಹಿಟ್ಟಿಲ್ಲದೆ ಇದ್ರೂ ಕೈಯಲ್ಲಿ ಮೊಬೈಲ್ ಇಟ್ಕೊಳ್ಳೋ ಕಾಲ ಇದು. ಆದರೂ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದರಿಂದಲೋ ಏನೋ ಮೊಬೈಲ್ ಬೆಲೆ, ಕರೆಗಳ ಬೆಲೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂಬುದೊಂದು ಖುಷಿಯ ವಿಚಾರ. ಇಂತಹ ಖುಷಿಯ ವಿಚಾರಗಳಿಗೆ ಮತ್ತೊಂದು ಸೇರ್ಪಡೆ ಏರ್ ಟೆಲ್ ನೀಡುತ್ತಿರುವ ಬರ್ಜರಿ ಆಫರ್..

299 ರುಪಾಯಿಗೆ ಏರ್ ಟೆಲ್ ನಲ್ಲಿ ಎಷ್ಟು ಬೇಕಾದ್ರೂ ಮಾತಾಡಿ..


ಎಸ್ ಏರ್ ಟೆಲ್ ಮೊದಲಿನಿಂದಲೂ ಆಫರ್ ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತಿತ್ತು. ಇಷ್ಟು ದಿನ ಡಾಟಾ ಪ್ಯಾಕ್ ಗಳಿಗೆ ಬಂಪರ್ ಕೊಡುಗೆಗಳನ್ನು ನೀಡುತ್ತಿದ್ದ ಕಂಪೆನಿ ಈಗ ವಾಯ್ಸ್ ಕರೆಗಳಿಗೆ ಗಮನ ನೀಡುವತ್ತ ತನ್ನ ದೃಷ್ಟಿ ನೆಟ್ಟಿದೆ ಎಂದು ಅನ್ನಿಸುತ್ತದೆ. ಹೌದು., ಯಾಕೆಂದರೆ ಕೇವಲ 299 ರೂಪಾಯಿಗೆ ಏರ್ ಟೆಲ್ ಎಷ್ಟು ಬೇಕಾದ್ರೂ ಮಾತಾಡಿ ಎಂದು ಹೇಳುತ್ತಿದೆ.

. ಏನಿದು ಆಫರ್?

ಏರ್ ಟೆಲ್ ಸರ್ವೀಸ್ ಪ್ರೊವೈಡರ್ ಒಂದು ಹೊಸ ಆಫರ್ ನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಅದುವೇ 299 ವಾಯ್ಸ್ ಓನ್ಲಿ ಪ್ಯಾಕ್.. ಇದನ್ನು ರಿಚಾರ್ಜ್ ಮಾಡಿಕೊಂಡರೆ ನಿಮಗೆ ಯಾವುದೇ ಡಾಟಾ ಫ್ರೀ ಇರುವುದಿಲ್ಲ. ಬದಲಾಗಿ ದೇಶದಾದ್ಯಂತ ಯಾವುದೇ ಫೋನಿಗೆ ಕರೆ ಮಾಡಿ ಎಷ್ಟು ಬೇಕಾದ್ರೂ ಮಾತನಾಡಬಹುದು. ಯಾವುದೇ ರೋಮಿಂಗ್ ಇರುವುದಿಲ್ಲ ಮತ್ತು ಸಮಯದ ಮಿತಿ ಇಲ್ಲವೇ ಇಲ್ಲ. ಮಧ್ಯರಾತ್ರಿ ಬೇಕಾದ್ರೂ ಕರೆಮಾಡಿ ಗಂಟೆಗಟ್ಟಲೆ ಹರಟಬಹುದು. ಈ ಪ್ಲಾನ್ ನಲ್ಲಿ ಪ್ರತಿದಿನ 100 ಎಸ್.ಎಂ.ಎಸ್ ಗಳನ್ನೂ ಫ್ರೀ ಆಗಿ ಕಳುಹಿಸಬಹುದು. 299 ರೂಪಾಯಿ ರೀಚಾರ್ಜ್ ಮಾಡಿದರೆ ಇದರ ವ್ಯಾಲಿಡಿಟಿ 45 ದಿನಗಳಾಗಿರುತ್ತೆ.

ರಿಲಯನ್ಸ್ ಜಿಯೋಗೆ ಕಾಂಪಿಟೇಷನ್ ಕೊಡುವ ನಿಟ್ಟಿನಲ್ಲಿ ಏರ್ ಟೆಲ್ ಇತ್ತೀಚೆಗೆ ಆಡ್-ಆನ್ ಪ್ಲಾನ್ಸ್ ಗಳನ್ನು ಬಿಡುಗಡೆಗೊಳಿಸಿತ್ತು. ಈ ಆಡ್ ಆನ್ ಪ್ಲಾನ್ಸ್ ಗಳು ರಿಲಯನ್ಸ್ ಜಿಯೋದ ಟಾಪ್ ಅಪ್ ಪ್ಲಾನ್ ಗಳ ಜೊತೆ ಸ್ಪರ್ಧೆಗೆ ಇಳಿಯುವಂತಿದ್ದವು. ದೇಶದಲ್ಲಿ ಟಾಪ್ ಅಪ್ ಪ್ಲಾನ್ ಗಳನ್ನು ಮೊದಲು ಪರಿಚಯಿಸಿದ ಹೆಗ್ಗಳಿಕೆ ರಿಲಯನ್ಸ್ ಜಿಯೋಗೆ ಸೇರಬೇಕು.

ಏರ್ ಟೆಲ್ 49 ರುಪಾಯಿ ಮತ್ತು 193 ರುಪಾಯಿಯ ಆಡ್-ಆನ್ ಪ್ಲಾನ್ ಗಳನ್ನು ಪರಿಚಯಿಸಿದ್ದು, ಸದ್ಯ ದೆಹಲಿ, ಕರ್ನಾಟಕ, ಆಂಧ್ರಪ್ರದೇಶ, ಮತ್ತು ತೆಲಂಗಾಣದಲ್ಲಿ ಈ ಪ್ಲಾನ್ ಚಾಲ್ತಿಯಲ್ಲಿದೆ.49 ರುಪಾಯಿಯ ಆಡ್ ಆನ್ ಪ್ಲಾನ್ ಒಂದು ಜಿಬಿ ಡಾಟಾವನ್ನು ಫ್ರೀ ಆಗಿ ಬಳಸುವ ಆಫರ್ ನೀಡಿದ್ದು ಅದು ಸದ್ಯ ಚಾಲ್ತಿಯಲ್ಲಿರುವ ವ್ಯಾಲಿಡಿಟಿ ಮುಗಿಯುವವರೆಗೂ ಮುಂದುವರಿಯುತ್ತೆ. ಉದಾಹರಣೆಗೆ 249 ರುಪಾಯಿ ಪ್ಲಾನ್ ನಲ್ಲಿ ನೀವಿದ್ದರೆ ಅದು ಪ್ರತಿದಿನ 28 ದಿನಗಳ ವರೆಗೆ 2ಜಿಬಿ ಡಾಟಾವನ್ನು ಫ್ರೀ ಆಗಿ ಬಳಸಲು ಅವಕಾಶ ನೀಡುತ್ತೆ. ಒಂದು ವೇಳೆ ಇದಕ್ಕೆ ನೀವು ಆಡ್ ಆನ್ ಪ್ಲಾನ್ 49 ರೂಪಾಯಿ ರೀಚಾರ್ಜ್ ಮಾಡಿದರೆ ಒಂದು ಜಿಬಿ ಹೆಚ್ಚುವರಿಯಾಗಿ ಒಟ್ಟು 3ಜಿಬಿ ಪ್ರತಿದಿನ, 28 ದಿನಗಳವರೆಗೆ ಬಳಸಲು ಅವಕಾಶವಿರುತ್ತೆ.

ಒಟ್ಟಿನಲ್ಲಿ ಟೆಲಿಕಾಂ ಇಂಡಸ್ಟ್ರಿಯ ಕಾಂಪಿಟೇಷನ್ ನಲ್ಲಿ ಗ್ರಾಹಕರಿಗೆ ಬಂಪರ್ ಆಫರ್ ಗಳು ಸಿಗುತ್ತಿರುವುದು ಖುಷಿಯ ವಿಚಾರವೇ.. ನೀವು ನಾನ್ ಸ್ಟಾಪ್ ಮಾತುಗಾರರಾಗಿದ್ದರೆ ಖಂಡಿತ ನಿಮಗೆ ಏರ್ ಟೆಲ್ ನ 299 ರುಪಾಯಿ ಪ್ಲಾನ್ ಸಖತ್ ವರ್ಕ್ ಔಟ್ ಆಗಲಿದೆ. ಮತ್ತ್ಯಾಕೆ ತಡ..? ಪ್ಲಾನ್ ಬಿಡುಗಡೆಯಾಗುತ್ತಿದ್ದ ಹಾಗೆ ರಿಚಾರ್ಜ್ ಮಾಡಿಸಿಕೊಂಡು ಬಿಂದಾಸ್ ಆಗಿರಿ..

Best Mobiles in India

English summary
Bharti Airtel has Launched a Voice-Only Prepaid Plan with free local, STD and roaming calling features at Rs 299.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+