Subscribe to Gizbot

ಏರ್ ಟೆಲ್ ನಿಂದ ದಕ್ಷಿಣ ಭಾರತದಲ್ಲಿ ಮತ್ತೊಂದು ನಗರದಲ್ಲಿ 4G VoLTE ಸೇವೆ ಆರಂಭ..!

Written By: Lekhaka

ಭಾರತದ ಅತೀ ದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಭಾರ್ತಿ ಏರ್ ಟೆಲ್, ಜಿಯೋ ಎದುರಾಗಿ ದೇಶದಲ್ಲಿ 4G VoLTE ಸೇವೆಯನ್ನು ಆರಂಭಿಸುತ್ತಿದ್ದು, ಇಂದು ತಮಿಳುನಾಡಿನ ಚೆನ್ನೈ ನಗರದಲ್ಲಿ 4G VoLTE ಸೇವೆಯನ್ನು ಶುರು ಮಾಡಿದೆ. ಇದರಲ್ಲಿ ಏರ್ ಟೆಲ್ ಗ್ರಾಹಕರು HD ಕ್ವಾಲಿಟಿಯ ವಾಯ್ಸ್ ಕರೆಗಳನ್ನು ಮಾಡುವ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ಏರ್ ಟೆಲ್ ನಿಂದ ದಕ್ಷಿಣ ಭಾರತದಲ್ಲಿ ಮತ್ತೊಂದು ನಗರದಲ್ಲಿ 4G VoLTE ಸೇವೆ ಆರಂಭ..!

ಚೆನ್ನೈನಲ್ಲಿ ನೂತನವಾಗಿ ಆರಂಭಿಸಿರುವ 4G VoLTE ಸೇವೆಯಿಂದಾಗಿ ಏರ್ ಟೆಲ್ ಗ್ರಾಹಕರು ವಾಯ್ಸ್ ಕರೆಗಳನ್ನು ಉತ್ತಮ ಗುಣಮಟ್ಟದಲ್ಲಿ ಪಡೆಯಬಹುದಾಗಿದೆ. ಅದುವೇ ಯಾವುದೇ ಅಡೆತಡೆಗಳು ಇಲ್ಲದೆ. ಜೊತೆಗೆ ಅತೀ ವೇಗದ 4G ಡೇಟಾವನ್ನು ಬಳಕೆಗೆ ದೊರೆಯಲಿದೆ. ಇದರಿಂದಾಗಿ ಗ್ರಾಹಕರು ಮತ್ತಷ್ಟು ಉತ್ತಮ ಗುಣಮಟ್ಟದ ನೆಟ್ ವರ್ಕ್ ಅನ್ನು ಪಡೆಯಬಹುದಾಗಿದೆ.

ಈಗಾಗಲೇ ಏರ್ ಟೆಲ್ VoLTE ಸೇವೆಯನ್ನು ದೇಶದ ವಿವಿಧೆಡೆಯಲ್ಲಿ ಆರಂಭಿಸಿದ್ದು, ಮುಂಬೈ. ಮಧ್ಯಪ್ರದೇಶ, ಛತೀಸ್ ಗಡ್, ಮಹಾರಾಷ್ಟ್ರ, ಗೋವಾ, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ಪ್ರಮುಖ ಪಟ್ಟಣಗಳಲ್ಲಿ VoLTE ಸೇವೆಗೆ ಏರ್ ಟೆಲ್ ಚಾಲನೆ ನೀಡಿದೆ ಎನ್ನಲಾಗಿದೆ.

VoLTE ಸೇವೆಯನ್ನು ಬಳಕೆ ಮಾಡಿಕೊಂಡು ಏರ್ ಟೆಲ್ ಗ್ರಾಹಕರು ಯಾವುದೇ ಮೊಬೈಲ್ ಅಥಾವ ಲ್ಯಾಂಡ್ ಲೈನ್ ಗಳಿಗೆ ಕಾಲ್ ಮಾಡಬಹುದಾಗಿದೆ. ಇದಕ್ಕಾಗಿ ಯಾವುದೇ ಯಾವುದೇ ಚಾರ್ಜ್ ಮಾಡುವುದಿಲ್ಲ ಎನ್ನಲಾಗಿದೆ. ಈಗಾಗಲೇ ಇರುವ ಪ್ಲಾನ್ ಮಾದರಿಯಲ್ಲಿ ದರಗಳು ಇರಲಿದೆ ಎನ್ನಲಾಗಿದೆ.

ಜಿಯೋ ಕಥೆ ಬಿಡಿ!..ವಿಶ್ವಕ್ಕೆ ಉಚಿತವಾಗಿ ಇಂಟರ್‌ನೆಟ್ ನೀಡಲು ಆನ್‌ಲೈನ್‌ ದಿಗ್ಗಜರು ರೆಡಿ!!

ಏರ್ ಟೆಲ್ VoLTE ಸೇವೆಯನ್ನು ಬಳಕೆ ಮಾಡಿಕೊಂಡು ಗ್ರಾಹಕರು HD ವಾಯ್ಸ್ ಕಾಲಿಂಗ್ ಮತ್ತು ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ಪಡೆಯಬಹುದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಸ್ಮಾರ್ಟ್ ಫೋನ್ ಗಳು VoLTE ಸಫೋರ್ಟ್ ಮಾಡಲಿದೆ. ಗ್ರಾಹಕರು ಈ ಸೇವೆಯ ಲಾಭ ಪಡೆಯುವಂತೆ ಏರ್ ಟೆಲ್ ಮನವಿ ಮಾಡಿದೆ.

English summary
The VoLTE services are currently present in Mumbai, Madhya Pradesh and Chhattisgarh, Maharashtra & Goa, Gujarat, Andhra Pradesh & Telangana and Karnataka.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot