Subscribe to Gizbot

ಏರ್‌ಟೆಲ್‌ನಿಂದ ಮತ್ತೊಂದು ಭರ್ಜರಿ IPL ಪ್ಲಾನ್: ಹೆಚ್ಚು ಡೇಟಾ, ಉಚಿತ IPL, ಮತ್ತಷ್ಟು..!

Written By:

ದೇಶದಲ್ಲಿ ಮತ್ತೆ IPL ಹವಾ ಜೋರಾಗಿದೆ, ಅದರಲ್ಲಿಯೂ ಟೆಲಿಕಾಂ ಕಂಪನಿಗಳು IPL ಅನ್ನು ತಮ್ಮ ಪ್ರಚಾರದ ವೇದಿಕೆಯನ್ನಾಗಿ ಬಳಕೆ ಮಾಡಿಕೊಂಡು ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿವೆ. ಈ ಹಿನ್ನಲೆಯಲ್ಲಿ ಭರ್ಜರಿ ಆಫರ್ ಗಳು, ಲೈವ್ ಟಿವಿ ಚಾನಲ್‌ಗಳು ಸೇರಿದಂತೆ ಹಲವು ಆಯ್ಕೆಗಳನ್ನು ನೀಡುತ್ತಿವೆ. ಹೀಗಾಗಿ ಬಳಕೆದಾರರಿಗೆ ಹೆಚ್ಚವರಿ ಡೇಟಾ ಆಫರ್ ಸೇರಿದಂತೆ ಹಲವು ಆಫರ್ ಗಳನ್ನು ಮಾರುಕಟ್ಟೆಯಲ್ಲಿ ಪಡೆದುಕೊಳ್ಳಬಹುದಾಗಿದೆ.

ಏರ್‌ಟೆಲ್‌ನಿಂದ ಮತ್ತೊಂದು ಭರ್ಜರಿ IPL ಪ್ಲಾನ್: ಹೆಚ್ಚು ಡೇಟಾ, ಉಚಿತ IPL

ಜಿಯೋ ತನ್ನ ಬಳಕೆದಾರರಿಗೆ ರೂ251 ಪ್ಲಾನ್ ಘೋಷಣೆ ಮಾಡಿದ ಮಾದರಿಯಲ್ಲಿಯೇ, ಏರ್‌ಟೆಲ್ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ 1000GB ಡೇಟಾವನ್ನು ಉಚಿತವಾಗಿ ನೀಡುವ ಕಾರ್ಯವನ್ನು ಮಾಡಿತ್ತು. ಇದಲ್ಲದೇ BSNL ಸಹ ಬಳಕೆದಾರರಿಗೆ ನಿತ್ಯ 3GB ಡೇಟಾ ಆಫರ್ ಲಾಂಚ್ ಮಾಡಿತ್ತು. ಹೀಗಾಗಿ ಏರ್‌ಟೆಲ್ ತನ್ನ ಫೋಸ್ಟ್ ಪೇಯ್ಡ್ ಬಳಕೆದಾರರಿಗೆ ಮತ್ತೊಂದು ಭರ್ಜರಿ IPL ಆಫರ್ ಅನ್ನು ಘೋಷಣೆ ಮಾಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್ ಫೋಸ್ಟ್ ಪೇಯ್ಡ್ ಪ್ಲಾನ್:

ಏರ್‌ಟೆಲ್ ಫೋಸ್ಟ್ ಪೇಯ್ಡ್ ಪ್ಲಾನ್:

ಎಲ್ಲಾ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ಬಳಕೆದಾರರಿಗೆ ಆಫರ್ ಗಳನ್ನು ನೀಡುತ್ತಿದ್ದರೇ, ಏರ್‌ಟೆಲ್ ಕೊಂಚ ಭಿನ್ನವಾಗಿ ತನ್ನ ಫೋಸ್ಟ್ ಪೇಯ್ಡ್ ಬಳಕೆದಾರರು ಸ್ಮಾರ್ಟ್‌ಫೋನಿನಲ್ಲಿಯೇ IPL ಮ್ಯಾಚ್ ನೋಡಲಿ ಎನ್ನುವ ಕಾರಣಕ್ಕೆ ರೂ.649 ಪ್ಲಾನ್ ವೊಂದನ್ನು ಘೋಷಣೆ ಮಾಡಿದೆ.

ರೂ.649 ಪ್ಲಾನ್:

ರೂ.649 ಪ್ಲಾನ್:

ಏರ್‌ಟೆಲ್ ಬಿಡುಗಡೆ ಮಾಡಿರುವ ರೂ.649 ಪ್ಲಾನ್‌ನಲ್ಲಿ ಬಳಕೆದಾರರಿಗೆ 50GBವನ್ನು ಬಳಕೆಗೆ ನೀಡಲಿದೆ. ಅಲ್ಲದೇ ಇದರಲ್ಲಿ ಡೇಟಾ ಕ್ಯಾರಿ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಈ ಪ್ಲಾನ್‌ಗಳಲ್ಲಿ ಪಡೆಯಬಹುದಾಗಿದೆ. ಇದಲ್ಲದೇ ಇನ್ನು ಇದೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?
ಆಪ್ ಗಳು ಉಚಿತ:

ಆಪ್ ಗಳು ಉಚಿತ:

ಇದಲ್ಲದೇ ಬಳಕೆದಾರರಿಗೆ ಅಮೆಜಾನ್ ಫ್ರೈಮ್, ವೈಯಾಂಕ್ ಮ್ಯೂಸಿಕ್, ಮೈ ಏರ್‌ಟೆಲ್ TV ಸೇರಿದಂತೆ ಅನೇಕ ಆಪ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಹಾಂಡ್ ಸೆಟ್ ಡ್ಯಾಮೇಜ್ ಪ್ರೋಟೆಕ್ಷನ್ ಆಯ್ಕೆಯನ್ನು ಸಹ ಇದರಲ್ಲಿ ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Bharti Airtel New Schemes: Rs 649 Postpaid Plan, Free IPL 2018 Streaming on Airtel TV App and More. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot