Subscribe to Gizbot

ಜಿಯೋ ಮಾದರಿಯಲ್ಲಿ ಏರ್ಟೆಲ್ ನಿಂದ GST ಪರಿಹಾರ

Written By: Lekhaka

ಏರ್ ಟೆಲ್ ಭಾರತೀಯ ಟೆಲಿಕಾಂ ಮಾರುಕಟ್ಟೆಯ ಅತೀ ದೊಡ್ಡ ಕಂಪನಿಯಾಗಿದ್ದು, ಇದೇ ಏರ್ ಟೆಲ್ ಕಂಪನಿಯೂ ಸಣ್ಣ ವ್ಯವಹಾರ ನಡೆಸುವವರಿಗೆ ಸಹಾಯ ಮಾಡುವ ಸಲುವಾಗಿ GST ಆಡ್ವಾನ್ಟೆಜ್ ಸೇವೆಯನ್ನು ನೀಡಲು ಮುಂದಾಗಿದೆ.

ಜಿಯೋ ಮಾದರಿಯಲ್ಲಿ ಏರ್ಟೆಲ್ ನಿಂದ GST ಪರಿಹಾರ

ಏರ್‌ಟೆಲ್ GST ಫೈಲ್ ಮಾಡಲು ಸಹಾಯ ಮಾಡಲಿದೆ. ಇದು ಸಣ್ಣ ಬಿಸ್ನೆಸ್ ಮಾಡುತ್ತಿರುವವರಿಗೆ GST ಫೈಲ್ ಮಾಡಲು ಉಚಿತ ಮತ್ತು ಡೇಟಾ ಆಕ್ಸಿಸ್ ಮಾಡಲು ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ.

ಇದಕ್ಕಾಗಿ ಗೂಡ್ಸ್ ಅಂಡ್ ಸರ್ವೀಸ್ ನೆಟ್ವರ್ಕ್ ನೊಂದಿಗೆ ಪಾಲುದಾರಿಕೆಯನ್ನು ಏರ್ ಟೆಲ್ ಹೊಂದಿದೆ. ಕ್ಲಿಯರ್ ಟ್ಯಾಕ್ಸ್ ನೊಂದಿಗೆ ಡಿಜಿಟಲ್ ಸೇವೆಯನ್ನು ಸರಳಗೊಳಸಿಲು ಮುಂದಾಗಿದೆ. ಏರ್ ಟೆಲ್ ಬಳಕೆದಾರರು ಕ್ಲಿಯರ್ ಟ್ಯಾಕ್ಸ್ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಶುರುವಾಯಿತು ಏರ್‌ಟೆಲ್ VoLTE ಸೇವೆ: ಎಲ್ಲಿ?

ಏರ್ ಟೆಲ್ GST ಅಡ್ವಾನ್ಟೈಜ್ ಗ್ರಾಹಕರಿಗೆ ತಮ್ಮ ವ್ಯವಹಾರದ ರಿಟನ್ ಅನ್ನು ಆಪ್ ಲೋಡ್ ಮಾಡಲು ಉಚಿತ ಅವಕಾಶವನ್ನು ನೀಡುವುದಲ್ಲದೇ ಅದಕ್ಕಾಗಿ ಹೆಚ್ಚಿನ ಡೇಟಾವನ್ನುನೀಡಲಿದೆ.

ದೇಶದಲ್ಲಿ ಸದ್ಯ ಬಳಕೆಗೆ ಬಂದಿರುವ GST ಬಗ್ಗೆ ಹೆಚ್ಚಿನ ಗೊಂದಲವಿದ್ದು, ಈ ಹಿನ್ನಲೆಯಲ್ಲಿ ಏರ್ ಟೆಲ್ ಈ ಸೇವೆಯೂ ಅನೇಕರಿಗೆ ಸಹಾಯವಾಗಲಿದೆ.

English summary
Airtel GST Advantage will also enable customers to upload their returns without worrying about bandwidth charges.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot