Home
ಸುದ್ದಿಜಾಲ

ಏರ್‌ಟೆಲ್‌ಗೆ ಭಾರಿ ನಷ್ಟ!..ಜಿಯೋ ಕಾರಣವಲ್ಲ ಎಂದು ಹೇಳುತ್ತಿವೆ ವರದಿಗಳು!..ಏಕೆ?

ಏರ್‌ಟೆಲ್ ಏನೆಲ್ಲಾ ಹೊಸ ಹೊಸ ಆಫರ್‌ಗಳನ್ನು ನೀಡಿದರೂ ಸಹ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ.63.71ರಷ್ಟು ನಿವ್ವಳ ಲಾಭವನ್ನು ಕಳೆದುಕೊಂಡಿದೆ.!!

By Bhaskar N J

ಜಿಯೋಗೆ ಪೈಪೋಟಿ ನೀಡಲು ಭಾರಿ ಪ್ರಯತ್ನಿಸುತ್ತಿರುವ ಏರ್‌ಟೆಲ್‌ಗೆ ತನ್ನ ಅಸ್ಥಿತವವನ್ನೇ ಉಳಿಸಿಕೊಳ್ಳಲು ಪರದಾದುವ ಸ್ಥಿತಿ ಬರಬಹುದೇ?.ಇಂತದಹೊಂದು ಪ್ರಶ್ನೆ ಮೂಡಲು ಕಾರಣ ಏರ್‌ಟೆಲ್ ಏನೆಲ್ಲಾ ಹೊಸ ಹೊಸ ಆಫರ್‌ಗಳನ್ನು ನೀಡಿದರೂ ಸಹ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ.63.71ರಷ್ಟು ನಿವ್ವಳ ಲಾಭವನ್ನು ಕಳೆದುಕೊಂಡಿದೆ.!!

ಇದೇ ಸಮಯದಲ್ಲಿ ಏರ್‌ಟೆಲ್ ನಷ್ಟಕ್ಕೆ ಕಾರಣಗಳೇನು ಎಂಬುದಕ್ಕೆ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿದ್ದು, ಏರ್‌ಟೆಲ್‌ಗೆ ಲಾಸ್ ಆಗಲು ಜಿಯೋ ನೇರ ಕಾರಣವಾಗಿದೆ ಎಂದು ಕೆಲ ವರದಿಗಳು ಹೇಳಿದ್ದರೆ, ಆದರೆ, ಇನ್ನು ಕೆಲ ವರದಿಗಳು ಏರ್‌ಟೆಲ್‌ಗೆ ನಷ್ಟವಾಗಲು ಜಿಯೋ ನೇರ ಕಾರಣವಲ್ಲ ಎನ್ನುತ್ತಿವೆ ! ಹಾಗಾದರೆ, ಏರ್‌ಟೆಲ್‌ಗೆ ಶೇ.63.71ರಷ್ಟು ಆದಾಯ ನಷ್ಟವಾಗಲು ಕಾರಣಗಳೇನು? ಈ ತ್ರೈಮಾಸಿಕದಲ್ಲಿ ಏರ್‌ಟೆಲ್ ಕಳೆದುಕೊಂಡಿರುವುದು ಎಷ್ಟು? ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಶೇ.63.71ರಷ್ಟು ಕುಸಿದ ನಿವ್ವಳ ಲಾಭ!!

ಶೇ.63.71ರಷ್ಟು ಕುಸಿದ ನಿವ್ವಳ ಲಾಭ!!

ಬೃಹತ್‌ ಟೆಲಿಕಾಂ ಕಂಪನಿ ಏರ್‌ಟೆಲ್‌ನ ಕಳೆದ ಒಂದು ವರ್ಷದಿಂದ ಇಳಿಕೆಯಾಗಿದ್ದು, ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ಶೇ.63.71ರಷ್ಟು ಕುಸಿದಿದೆ. ಅಂದರೆ, ಕಳೆದ ವರ್ಷದ ಇದೇ ಅವಧಿಯಲ್ಲಿ 1,615.10 ಕೋಟಿ ರೂ. ಲಾಭ ದಾಖಲಿಸಿದ್ದ ಏರ್‌ಟೆಲ್ ಆದಾಯ ಇದೀಗ ಕೇವಲ 586.10 ಕೋಟಿ ರೂ.ಗೆ ಇಳಿದಿದೆ.!

ಶೇ.12ರಷ್ಟು ಕುಸಿದ ಆದಾಯ!!

ಶೇ.12ರಷ್ಟು ಕುಸಿದ ಆದಾಯ!!

ಕಳೆದ ವರ್ಷ ಇದೇ ಅವದಿಯವರೆಗೂ 24,651 ಕೋಟಿ ರೂ. ಲಾಭ ದಾಖಲಿಸಿದ್ದ ಏರ್‌ಟೆಲ್, ಈ ವರ್ಷ 21,777 ಕೋಟಿ ರೂ. ಆದಾಯ ದಾಖಲಿಸಿದೆ.! ಈ ತ್ರೈಮಸಿಕದಲ್ಲಿಹೆಚ್ಚು ನಷ್ಟ ಅನುಭವಿಸಿರುವ ಏರ್‌ಟೆಲ್‌ ಒಟ್ಟು ಆದಾಯ ಶೇ.12ರಷ್ಟು ಕುಸಿದಿದೆ.! ಬಳಕೆದಾರರಿಂದ ಸರಾಸರಿ ಆದಾಯ 200ರೂ.ಗಳಿಂದ 15೦ ರೂ.ಗೆ ಇಳಿದಿದೆ ಎನ್ನಲಾಗಿದೆ.!!

ಏರ್‌ಟೆಲ್‌ಗೆ ಲಾಸ್ ಆಗಲು ಜಿಯೋ ಕಾರಣ!?

ಏರ್‌ಟೆಲ್‌ಗೆ ಲಾಸ್ ಆಗಲು ಜಿಯೋ ಕಾರಣ!?

ಅಗ್ಗದ ದರದ ಮೂಲಕ ಮಾರುಕಟ್ಟೆ ಪ್ರವೇಶಿಸಿದ ರಿಲಯನ್ಸ್ ಜಿಯೋಯಿಂದಾಗಿಯೇ ಏರ್‌ಟೆಲ್ ಈ ಪರಿ ನಷ್ಟ ಅನುಭವಿಸುತ್ತಿರುವುದು ಎಲ್ಲರಿಗೂ ಗೊತ್ತು.! ಏರ್‌ಟೆಲ್ ಏನೇ ಆಫರ್ ನೀಡಿದರೂ ಅದನ್ನು ಜನರು ಒಪ್ಪುತ್ತಿಲ್ಲ . ಹಾಗಾಗಿಯೇ, ಏರ್‌ಟೆಲ್ ನಷ್ಟ ಅನುಭವಿಸುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.!!

ಏರ್‌ಟೆಲ್‌ಗೆ ಲಾಸ್ ಆಗಲು ಜಿಯೋ ನೇರ ಕಾರಣವಲ್ಲ!?

ಏರ್‌ಟೆಲ್‌ಗೆ ಲಾಸ್ ಆಗಲು ಜಿಯೋ ನೇರ ಕಾರಣವಲ್ಲ!?

ಭಾರತದ ನಂಬರ್ ಒನ್ ಟೆಲಿಕಾಂ ಏರ್‌ಟೆಲ್‌ ಕಂಪೆನಿಗೆ ನಷ್ಟವಾಗುತ್ತಿರುವುದಕ್ಕೆ ಜಿಯೋ ಪರೋಕ್ಷವಾಗಿ ಕಾರಣವಾಗಿರಬಹುದು. ಆದರೆ, ಏರ್‌ಟೆಲ್ ಆಫರ್‌ಗಳನ್ನು ಜನರು ಇಷ್ಟಪಡುತ್ತಿದ್ದರೂ ಸಹ ಈ ಆಫರ್‌ಗಳ ಬೆಲೆ ಕಡಿಮೆ ಇರುವುದು ಅವುಗಳಿಗೆ ಲಾಸ್ ಆಗಲು ಕಾರಣ ಎಂದಿವೆ.!!

ಹಾಗಾದರೆ ಏರ್‌ಟೆಲ್‌ಗೆ ನಷ್ಟವಾಗಲು ಕಾರಣ.!!

ಹಾಗಾದರೆ ಏರ್‌ಟೆಲ್‌ಗೆ ನಷ್ಟವಾಗಲು ಕಾರಣ.!!

ಇತ್ತೀಚಿನ ಬೆಳವಣಿಗೆಗೆಳನ್ನು ಗಮನಿಸಿದರೆ ಜಿಯೋ ಏರ್‌ಟೆಲ್ ಲಾಸ್‌ಗೆ ನೇರ ಕಾರಣವಾಗಲೂ ಸಾಧ್ಯವಿಲ್ಲ ಎನ್ನಬಹುದು.! ಏಕೆಂದರೆ, ಏರ್‌ಟೆಲ್ ತನ್ನ ಗ್ರಾಹಕರನ್ನು ತನ್ನ ಆಫರ್‌ಗಳಿಂದ ಸೆಳೆಯುತ್ತಿದ್ದು, ಆಫರ್‌ಗಳ ಬೆಲೆ ಕಡಿಮೆ ಇರುವುದು ಅವುಗಳಿಗೆ ಲಾಸ್ ಆಗಲು ಕಾರಣವಾಗಿದೆ.! ಈ ಮೊದಲು ತನ್ನದೇ ಗ್ರಾಹಕರಿಂದ ಏರ್‌ಟೆಲ್ ಹೆಚ್ಚು ಹಣವನ್ನು ಪೀಕುತ್ತಿತ್ತು.!!

Best Mobiles in India

English summary
The company had reported Rs 1,615.10 crore profit in corresponding quarter last year. On sequential basis, profit fell 5.11 per cent sequentially. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+