Subscribe to Gizbot

ವೊಡಾಫೋನ್, ಏರ್‌ಟೆಲ್ ಪೈಪೋಟಿಯಿಂದ 2G, 3G ಗ್ರಾಹಕರಿಗೆ ಹಬ್ಬ!..ಸೂಪರ್ ಆಫರ್ಸ್!!

Written By:

ಟೆಲಿಕಾಂನಲ್ಲಿ ನಡೆಯುತ್ತಿರುವ ದರಸಮರಕ್ಕೆ ಏರ್‌ಟೆಲ್ ಮತ್ತು ವೊಡಾಫೋನ್ ಎರಡು 200 ರೂಪಾಯಿಗಳ ಆಫರ್‌ಗಳನ್ನು ಪ್ರಕಟಿಸಿವೆ. ಏರ್‌ಟೆಲ್ ಡೇಟಾ ಬಳಕೆ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದರೆ ವೊಡಾಫೋನ್ ಕರೆ ಮಾಡುವ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸಿ ನೂತನ ಆಫರ್ ಅನ್ನು ಪರಿಚಯಿಸಿದೆ.!!

ಈ ಎರಡೂ ಆಫರ್‌ಗಳು 3G ಮತ್ತು 2G ಗ್ರಾಹಕರಿಗೂ ಲಭ್ಯವಿರುವುದರಿಂದ ಈ ಆಫರ್‌ಗಳು ಟ್ರೆಂಡ್ ಆಗಿವೆ.! ಹಾಗಾದರೆ, ಏರ್‌ಟೆಲ್ ಮತ್ತು ವೊಡಾಫೋನ್ ಟೆಲಿಕಾಂಗಳು ಗ್ರಾಹಕರನ್ನು ಸೆಳೆಯಲುನೀಡಿರುವ ಆಫರ್‌ಗಳು ಯಾವುವು? ಈ ಎರಡು ಆಫರ್‌ಗಳಲ್ಲಿ ಯಾವ ಟೆಲಿಕಾಂ ಆಫರ್ ಉತ್ತಮವಾಗಿದೆ? ಮತ್ತು ಈ ಆಫರ್ ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
3G ಮತ್ತು 2G ಗ್ರಾಹಕರಿಗೆ ಸಿಹಿ!!

3G ಮತ್ತು 2G ಗ್ರಾಹಕರಿಗೆ ಸಿಹಿ!!

ಬಿಎಸ್‌ಎನ್‌ಎಲ್ ನಂತರ ಇದೇ ಮೊದಲ ಸಾರಿ ಏರ್‌ಟೆಲ್ ಮತ್ತು ವೊಡಾಫೋನ್ ಅಂತಹ ದೊಡ್ಡ ಟೆಲಿಕಾಂಗಳು 3G ಮತ್ತು 2G ಗ್ರಾಹಕರಿಗೂ ಅನುಕೂಲವಾಗುವಂತಹ ಆಫರ್ ಅನ್ನು ಬಿಡುಗಡೆ ಮಾಡಿವೆ. ಎರಡೂ ಕಂಪೆನಿಗಳ ಉದ್ದೇಶ ಬೇರೆಯಾದರೂ ಸಹ ಈ ಆಫರ್‌ಗಳು ಬಳಕೆದಾರರಿಗೆ ಅತ್ಯುತ್ತಮ ಆಫರ್ ಎನ್ನಬಹುದು.!!

ಏರ್‌ಟೆಲ್ ರೂ.198ರ ಆಫರ್

ಏರ್‌ಟೆಲ್ ರೂ.198ರ ಆಫರ್

ಏರ್‌ಟೆಲ್ ನೀಡಿರುವ ಈ ಹೊಸ ಆಫರ್ ಟೆಲಿಕಾಂ ಮಾರುಕಟ್ಟೆಯಲ್ಲಿ ವಿಶೇಷ ಆಫರ್ ಎನಿಸಿದೆ. ಇದೇ ಮೊಸಲ ಸಾರಿ ಏರ್ಟೆಲ್ 3G ಬಳಕೆದಾರರಿಗೂ ಸೇರಿದಂತೆ ಎಲ್ಲರಿಗೂ ಪ್ರತಿದಿನ ಒಂದು ಜಿಬಿ ಡೇಟಾ ಹೊಂದಿರುವ ಆಫರ್ ಬಿಡುಗಡೆ ಮಾಡಿದೆ. ಏರ್‌ಟೆಲ್ ರೂ.198ರ ಆಫರ್ 28 ದಿನಗಳ ವ್ಯಾಲಿಡಿಟಿಯಲ್ಲಿ 28GB ಡೇಟಾ ಹೊಂದಿದೆ.! ಆದರೆ, ಕರೆ ಉಚಿತವಾಗಿಲ್ಲ.!!

199 ರೂ. ವೊಡಾ ಆಫರ್!!

199 ರೂ. ವೊಡಾ ಆಫರ್!!

ವೊಡಾಫೋನ್ ಕಂಪೆನಿ ಸಹ ಇದೇ ಮೊದಲು ಸಾರಿ 2G,3G ಮತ್ತು 4G ಗ್ರಾಹಕರಿಗೂ ಅನ್‌ಲಿಮಿಟೆಡ್ ಆಫರ್ ಅನ್ನು ಪ್ರಕಟಿಸಿದೆ. 199 ರೂಪಾಯಿಗಳಿಗೆ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳನ್ನು ಮಾಡಬಹುದಾದ ಆಫರ್ ನೀಡಿದೆ.! ಆದರೆ, ಪ್ರತಿವಾರ 1000 ಕರೆಗಳು ಮಾತ್ರ ಉಚಿತವಾಗಿದ್ದು, ವಾರದಲ್ಲಿ 300ಕ್ಕೂ ಹೆಚ್ಚಿನ ಬೇರೆ ಬೇರೆ ನಂಬರ್‌ಗಳಿಗೆ ಕರೆ ಮಾಡಿದರೆ ಉಚಿತ ಕರೆ ಕಟ್ ಆಗಲಿದೆ.!!

ಎರಡೂ ಆಫರ್‌ಗಳಲ್ಲಿ ವ್ಯತ್ಯಾಸವೇನು?

ಎರಡೂ ಆಫರ್‌ಗಳಲ್ಲಿ ವ್ಯತ್ಯಾಸವೇನು?

ಏರ್‌ಟೆಲ್ ಮತ್ತು ವೊಡಾಫೊನ್ ಟೆಲಿಕಾಂಗಳು ಒಟ್ಟಿಗೆ ಈ ಆಫರ್ ಅನ್ನು ಘೋಷಿಸಿದ್ದು, ಎರಡೂ ಕಂಪೆನಿಗಳು ಮುಖ್ಯವಾಗಿ 3G ಗ್ರಾಹಕರನ್ನು ಉಳಿಸಿಕೊಳ್ಳು ಪ್ರಯತ್ನಿಸುತ್ತಿವೆ. ಏರ್‌ಟೆಲ್ ಹೆಚ್ಚು ಡೇಟಾ ನೀಡಿ ಗ್ರಾಹಕರನ್ನು ಹಿಡಿದಿಡಲು ಪ್ರಯತ್ನಿಸಿದರೆ, ವೊಡಾಫೋನ್ ಉಚಿತ ಕರೆಗಳ ಮೂಲಕ ಗ್ರಾಹಕರನ್ನು ಹಿಡಿದಿಡಲು ಪ್ರಯತ್ನಿಸುತ್ತಿದೆ.!!

ಯಾವ ಆಫರ್ ಉತ್ತಮ?

ಯಾವ ಆಫರ್ ಉತ್ತಮ?

199 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಕಾಲ್ ಸೇವೆ ಮತ್ತು 198 ರೂಪಾಯಿಗಳಿಗೆ 28GB ಡೇಟಾ ಹೊಂದಿರುವ ಈ ಎರಡೂ ಪ್ಲಾನ್‌ಗಳು ಉತ್ತಮವಾಗಿವೆ ಎನ್ನಬಹುದು.ಏಕೆಂದರೆ 3G ಬಳಕೆದಾರರಿಗೆ ಈ ರೀತಿಯ ಆಫರ್‌ಗಳು ಸಿಕ್ಕಿರುವುದು ಇದೆ ಮೊದಲು.!!

ಓದಿರಿ:ಸರಿಯಾಗಿ ತರಕಾರಿ ಸೇವಿಸಲು ವಿಜ್ಞಾನಿಗಳು ಲಾಂಚ್ ಮಾಡಿದ್ದಾರೆ "ವೆಜ್ ‌ಈಜೀ'' ಆಪ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
the Airtel plan will be a good choice for people with average data requirements and lesser calling on the other hand, Vodafone's plan is geared towards customers that have phone calls as a priority.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot