ಜಿಯೋ ಹೊಡೆತಕ್ಕೆ ಏರ್‌ಟೆಲ್ ಶಾಕ್: ನಷ್ಟಕ್ಕೆ ಗುರಿಯಾದ ನಂಬರ್ ಒನ್ ಟೆಲಿಕಾಂ ಕಂಪನಿ..!

|

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಏರ್‌ಟೆಲ್, ಜಿಯೋ ಆರಂಭದ ನಂತರದಲ್ಲಿಯೂ ತನ್ನ ಅಧಿಪತ್ಯವನ್ನು ಮುಂದುವರೆಸಿಕೊಂಡು ಹೋಗಿದೆ. ಜಿಯೋ ತನ್ನ ಬಳಕೆದಾರರ ಸಂಖ್ಯೆಯನ್ನು ದಿನದಿಂದ ದಿನಕ್ಕೇ ಹೆಚ್ಚು ಮಾಡಿಕೊಂಡು ಹೋಗುತ್ತಿರುವ ಮಾದರಿಯಲ್ಲಿ ಏರ್‌ಟೆಲ್ ಸದ್ದಿಲ್ಲದೇ 300 ಮಿಲಿಯನ್ ಬಳಕೆದಾರರನ್ನು ತನ್ನ ಕುಟುಂಬದಲ್ಲಿ ಸೇರಿಕೊಳ್ಳಲು ಯಶಸ್ವಿಯಾಗಿದೆ.

ಜಿಯೋ ಹೊಡೆತ : ನಷ್ಟಕ್ಕೆ ಗುರಿಯಾದ ನಂಬರ್ ಒನ್ ಟೆಲಿಕಾಂ ಕಂಪನಿ..!

ಮಾರುಕಟ್ಟೆಯಲ್ಲಿ ಕಳೆದ ಎರಡು ವರ್ಷಗಳಿಂದ ಜಿಯೋ ಅಬ್ಬರ ಜೋರಾಗಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಸೇವೆಗಳನ್ನು ನೀಡುವ ಮೂಲಕ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದು ಏರ್‌ಟೆಲ್‌ ಮೇಲೆ ಪರಿಣಾಮವನ್ನು ಬೀರಿದ್ದಲ್ಲೇ, 300 ಮಿಲಿಯನ್ ಬಳಕೆದಾರರನ್ನು ಹೊಂದಲು ತುಂಬ ದಿನಗಳು ಕಾಯುವಂತೆಯೂ ಮಾಡಿತ್ತು. ಏರ್‌ಟೆಲ್ ಬಳೆಕೆದಾರರ ಸಂಖ್ಯೆಯೂ ಹೆಚ್ಚಾಗಿದ್ದರೂ ಸಹ, ಲಾಭದ ಪ್ರಮಾಣದಲ್ಲಿ ಭಾರೀ ಕಡಿತವಾಗಿದೆ ಎನ್ನಲಾಗಿದೆ.

ಮೂರು ಮಿಲಿಯನ್ ಬಳಕೆದಾರರು:

ಮೂರು ಮಿಲಿಯನ್ ಬಳಕೆದಾರರು:

2018ರ ಮಾರ್ಚ್ 31ರ ವರೆಗಿನ ಟೆಲಿಕಾಂ ವರದಿಯೂ ಬಿಡುಗಡೆಯಾಗಿದ್ದು, ಇದರಲ್ಲಿ ಭಾರತದಲ್ಲಿ ಒಟ್ಟು 300 ಮಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿದೆ ಎನ್ನಲಾಗಿದೆ.

16 ದೇಶಗಳಲ್ಲಿ ಇದೆ ಏರ್‌ಟೆಲ್‌:

16 ದೇಶಗಳಲ್ಲಿ ಇದೆ ಏರ್‌ಟೆಲ್‌:

ಒಟ್ಟು 16ರ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಏರ್‌ಟೆಲ್‌ಗೆ ಭಾರತವೇ ಅತೀ ದೊಡ್ಡ ಮಾರುಕಟ್ಟೆಯಲ್ಲಿ ಭಾರತವನ್ನು ಸೇರಿದಂತೆ ಒಟು 16 ದೇಶಗಳಲ್ಲಿ ಒಟ್ಟು 413 ಮಿಲಿಯನ್ ಬಳಕೆದಾರರನ್ನು ಏರ್‌ಟೆಲ್ ಹೊಂದಿದೆ.

ಆದರೂ ನಷ್ಟದಲ್ಲಿ:

ಆದರೂ ನಷ್ಟದಲ್ಲಿ:

ಭಾರತದಲ್ಲಿ ಜಿಯೋ ಆರಂಭಕ್ಕೂ ಮುನ್ನವೇ ಲಾಭದಾಯಕವಾಗಿದ್ದ ಏರ್‌ಟೆಲ್, ನಂತರದಲ್ಲಿ ಭಾರೀ ಪ್ರಮಾಣದ ಬಳಕೆದಾರರನ್ನು ಕಳೆದುಕೊಂಡಿದ್ದಲ್ಲದೇ, ನಷ್ಟವನ್ನು ಅನುಭವಿಸಲು ಶುರು ಮಾಡಿದೆ. ಈ ವರ್ಷದಲ್ಲಿ ಏರ್‌ಟೆಲ್ ಆದಾಯದಲ್ಲಿ 13.1% ಕಡಿಮೆಯಾಗಿದೆ ಎನ್ನಲಾಗಿದೆ.

ಕಳೆದ ವರ್ಷಕ್ಕಿಂತ ಹೆಚ್ಚು ಡೇಟಾ:

ಕಳೆದ ವರ್ಷಕ್ಕಿಂತ ಹೆಚ್ಚು ಡೇಟಾ:

ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ಏರ್‌ಟೆಲ್ ಆರು ಪಟ್ಟು ಹೆಚ್ಚು ಡೇಟಾವನ್ನು ಬಳಕೆದಾದರಿಗೆ ನೀಡಿದೆ. ಇಷ್ಟು ಪ್ರಮಾಣದ ಡೇಟಾವನ್ನು ನೀಡಲಿಲ್ಲ ಎಂದಿದ್ದರೇ ಬಳಕೆದಾರರು ಜಿಯೋ ಕಡಗೆ ಮುಖ ಮಾಡುವ ಸಾಧ್ಯತೆ ಹೆಚ್ಚಾಗಿತ್ತು.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
ಬ್ರಾಡ್ ಬ್ಯಾಂಡ್ ಬಳಕೆದಾರರ ಸಂಖ್ಯೆ ಹೆಚ್ಚು:

ಬ್ರಾಡ್ ಬ್ಯಾಂಡ್ ಬಳಕೆದಾರರ ಸಂಖ್ಯೆ ಹೆಚ್ಚು:

ಏರ್‌ಟೆಲ್ ಮಾರುಕಟ್ಟೆಯಲ್ಲಿ ಹೆಚ್ಚು ಬ್ರಾಡ್ ಬ್ಯಾಂಡ್ ಆಫರ್ ಗಳನ್ನು ನೀಡಿದ ಹಿನ್ನಲೆಯಲ್ಲಿ ಏರ್‌ಟೆಲ್ ಬ್ರಾಡ್ ಬ್ಯಾಂಡ್ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಬದಲಾವಣೆಯನ್ನು ಕಾಣಬಹದಾಗಿದ್ದು, 76 ಮಿಲಿಯನ್ ಬ್ರಾಡ್ ಬ್ಯಾಂಡ್ ಬಳಕೆದಾರರನ್ನು ಹೊಂದಿದೆ ಎನ್ನಲಾಗಿದೆ.

Best Mobiles in India

English summary
Bharti Airtel Subscriber Base Crosses 300 Million. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X