ಶೀಘ್ರದಲ್ಲೇ ಬರಲಿದೆ ಏರ್‌ಟೆಲ್ ವೀಡಿಯೊ-ಕಾನ್ಫರೆನ್ಸಿಂಗ್ ಅಪ್ಲಿಕೇಶನ್ !
ಇತ್ತೀಚಿನ ದಿನಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಂಡಿವೆ. ಇನ್ನು ನಿಮಗೆಲ್ಲಾ ತಿಳಿದ ಹಾಗೇ ಕೋವಿಡ್-19 ಶುರುವಾದ ನಂತರ ಹಲವಾರು ಕಂಪೆನಿಗಳ ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ನೀಡಿವೆ. ಅಲ್ಲದೆ ತಮ್ಮ ಉದ್ಯೋಗಿಗಳ ಜೊತೆಗೆ ಸಭೆ ನಡೆಸಲು, ಕೆಲಸ ಕಾರ್ಯನಿರ್ವಹಣೆಯ ಬಗ್ಗೆ ಮೆಲ್ವಿಚಾರಣೆ ನಡೆಸಲು ಈ ಆಪ್‌ಗಳನ್ನ ಬಳಸುತ್ತಿವೆ. ಸದ್ಯ ಟೆಕ್ ವಲಯಲ್ಲಿ ಜೂಮ್, ಜಿಯೋ ಮೀಟ್, ಮೈಕ್ರೋಸಾಫ್ಟ್ ಟೀಂ ನಂತಹ ಆಪ್‌ಗಳಿವೆ ಇದೀಗ ಇವುಗಳ ನಡುವೆ ಟೆಲಿಕಾಂ ಕಂಪೆನಿ ಭಾರ್ತಿ ಏರ್‌ಟೆಲ್ ಕೂಡ ಹೊಸದೊಂದು ಗ್ರೂಪ್ ವೀಡಿಯೋ ಕಾಲಿಂಗ್ ಆಪ್ ಪರಿಚಯಿಸಲು ಮುಂದಾಗಿದೆ.

ಹೌದು, ಭಾರತದ ಟೆಲಿಕಾಂ ವಲಯದಲ್ಲಿ ತನ್ನದೇ ಆದ ಜನಪ್ರಿಯತೆ ಪಡೆದುಕೊಂಡಿರುವ ಭಾರ್ತಿ ಏರ್‌ಟೆಲ್ ಶೀಘ್ರದಲ್ಲೇ ತನ್ನ ವ್ಯವಹಾರಗಳಿಗಾಗಿ ವೀಡಿಯೊ-ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದೆ ಎಂದು ವರದಿ ಆಗಿದೆ. ಸದ್ಯ COVID-19 ವೈರಸ್ ಜಾಗತಿಕವಾಗಿ ಇನ್ನಷ್ಟು ಹೆಚ್ಚಾಗುತ್ತಲೇ ಇಂತಹ ಸನ್ನಿವೇಶದಲ್ಲಿ ವೀಡಿಯೋ ಕಾನ್ಫರೆನ್ಸಿಂಗ್‌ಆಪ್‌ಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಭಾರ್ತಿ ಏರ್‌ಟೆಲ್ ಕೂಡ ಅತಿ ಶೀಘ್ರದಲ್ಲೇ ಬ್ಯುಸಿನೆಶ್‌ಗಳಿಗಾಗಿ ವೀಡಿಯೊ-ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ. ಇದರ ಇನ್ನಷ್ಟು ಡಿಟೇಲ್ಸ್ ಅನ್ನು ತಿಳಿಸಿಕೊಡ್ತೀವಿ ಈ ಲೇಖನವನ್ನ ಓದಿರಿ.

ಇನ್ನು ಭಾರ್ತಿಏರ್‌ಟೆಲ್ ವಿಡಿಯೋ-ಕಾನ್ಫರೆನ್ಸಿಂಗ್ ಸೇವೆಯನ್ನು ಇನ್ನೇನು ಕೆಲವೇ ದಿನಗಳಲ್ಲಿ ಪರಿಚಯಿಸಲಿದೆ ಎಂದು ವರದಿ ಆಗಿದೆ. ಆದರೆ ಪ್ರಾರಂಭಿಕ ಹಂತದಲ್ಲಿ ಏರ್‌ಟೆಲ್ ತನ್ನ ಬ್ರಾಂಡೆಡ್ ವಿಡಿಯೋ-ಕಾನ್ಫರೆನ್ಸಿಂಗ್ ಸೇವೆಯನ್ನು ಕಂಪನಿಗಳಿಗೆ ಮಾತ್ರ ಒದಗಿಸುತ್ತದೆ ಎನ್ನಲಾಗ್ತಿದೆ. ಅಲ್ಲದೆ ಮುಂದಿನ ಹಂತಗಳಲ್ಲಿ ಯಾವ ರೀತಿಯ ಬೇಡಿಕೆ ಇರಲಿದೆ ಎನ್ನುವುದನ್ನ ಅಂದಾಜು ಮಾಡಿದ ನಂತರ ಸಾಮಾನ್ಯ ಗ್ರಾಹಕರಿಗೆ ಈ ಸೇವೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.

ಇದಲ್ಲದೆ ಏರ್‌ಟೆಲ್ ಶೀಘ್ರದಲ್ಲೇ ಏಕೀಕೃತ ವಿಡಿಯೋ-ಕಾನ್ಫರೆನ್ಸಿಂಗ್ ಟೂಲ್ ಸೇರಿದಂತೆ ಹಲವಾರು ಎಂಟರ್‌ಪ್ರೈಸ್-ಗ್ರೇಡ್ ಪ್ರಾಡಕ್ಟ್‌ಗಳನ್ನು ಸಹ ಪ್ರಾರಂಭಿಸಲು ಸಿದ್ದತೆ ನಡೆಸಿದೆ ಎನ್ನಲಾಗಿದೆ.ಸದ್ಯ ಏರ್‌ಟೆಲ್ ಪರಿಚಯಿಸಲಿರುವ ವಿಡಿಯೋ-ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಈಗಾಗಲೇ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಜೂಮ್, ಗೂಗಲ್ ಹ್ಯಾಂಗ್ ಔಟ್ಸ್, ಮೈಕ್ರೋಸಾಫ್ಟ್ ಟೀಂ, ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಜಿಯೋಮೀಟ್‌ನೊಂದಿಗೆ ಸ್ಪರ್ಧಿಸಬೇಕಾಗಲಿದೆ. ಆದರೂ ಏರ್‌ಟೆಲ್ ತನ್ನ ವಿಡಿಯೋ-ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ನಲ್ಲಿ ಸೈಬರ್ ಭದ್ರತೆ ಕುರಿತಂತೆ ಸುರಕ್ಷತೆಗೆ ಆದ್ಯತೆ ನೀಡಲಿದೆ ಎಂದು ವರದಿ ತಿಳಿಸಿದೆ.

ಈಗಾಗಲೇ ಟೆಲಿಕಾಂ ವಲಯದಲ್ಲಿ ದೇಶದಲ್ಲಿ ಹೆಚ್ಚಿನ ಬಳಕೆದಾರರನ್ನ ಹೊಂದಿದೆ. ಸದ್ಯ ಇದೀಗ ಹಲವು ಕಂಪೆನಿಗಳು ತಮ್ಮ ಉದ್ಯೋಗಿಗಳನ್ನ ಮನೆಯಿಂದಲೇ ಕೆಲಸ ಮಾಡಲು ಹೇಳಿರುವುದರಿಂದ ಈ ಸಂದರ್ಭದಲ್ಲಿ, ಸೈಬರ್ ಸುರಕ್ಷತೆಯ ಬಗ್ಗೆ ಕೂಡ ಅಲೋಚಿಸಬೇಕಾಗಿದೆ. ಇದರ ಬಗ್ಗೆ ಈಗಾಗಲೇ ಹೆಚ್ಚಿನ ಚರ್ಚೆ ಕೂಡ ನಡೆಯುತ್ತಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಏರ್‌ಟೆಲ್ ತನ್ನ ವಿಡಿಯೋ-ಕಾನ್ಫರೆನ್ಸಿಂಗ್ ಸೇವೆಯನ್ನು ಯುಎಸ್‌ಪಿ ಆಗಿ ಹೆಚ್ಚಿನ ಮಟ್ಟದ ಸುರಕ್ಷತೆಯತ್ತ ಗಮನ ಹರಿಸುತ್ತಿದೆ" ಎಂದು ಹೇಳಲಾಗ್ತಿದೆ. ಇನ್ನು ಈ ವೀಡಿಯೊ-ಕಾನ್ಫರೆನ್ಸಿಂಗ್ ಸೇವೆಯು ಮೊಬೈಲ್ ಮತ್ತು ಡೆಸ್ಕ್‌ಟಾಪ್‌ನಲ್ಲಿ ಲಭ್ಯವಿರುತ್ತದೆ ಮತ್ತು ಇತ್ತೀಚಿನ ಎಇಎಸ್ 256 ಎನ್‌ಕ್ರಿಪ್ಶನ್ ಮತ್ತು ಅನೇಕ ಪದರಗಳ ದೃಡೀಕಣವನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications








