Subscribe to Gizbot

ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಏರ್‌ಟೆಲ್ ರೂ.1 ಆನ್‌ಲಿಮಿಟೆಡ್ ಆಫರ್..!

Written By:

ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರ್ತಿ ಏರ್‌ಟೆಲ್ ಹೊಸ ಪ್ರಯತ್ನವೊಂದಕ್ಕೆ ಮುಂದಾಗಿದ್ದು, ಜಿಯೋ ವಿರುದ್ಧ ಸಮರದಲ್ಲಿ ತನ್ನ ಬಳಕೆದಾರರಿಗೆ ಹೊಸ ದೊಂದು ಆಫರ್ ನೀಡಲು ಯೋಜನೆ ರೂಪಿಸಿದೆ. ಏರ್‌ಟೆಲ್ ಗ್ರಾಹಕರಿಗೆ ರೂ.1ಕ್ಕೆ ಅನ್‌ಲಿಮಿಟೆಡ್ ಕಾಂಬೊ ಪ್ಯಾಕ್ ಅನ್ನು ಪಡೆಯುವ ಅವಕಾಶವನ್ನು ಮಾಡಿಕೊಡಲಿದೆ. ಈ ಮೂಲಕ ಜಿಯೋಗೆ ಸೆಡ್ಡು ಹೊಡೆಯಲು ಮುಂದಾಗಿದೆ.

ಈ ಹೊಸ ರೂ.1 ಆಫರ್ ಅನ್ನು ಶೀಘ್ರವೇ ಏರ್‌ಟೆಲ್ ಲಾಂಚ್ ಮಾಡಲಿದ್ದು, ಇದರಲ್ಲಿ ಬಳಕೆದಾರರಿಗೆ ಡೇಟಾ ಮತ್ತು ಕರೆಯ ಲಾಭವನ್ನು ಮಾಡಿಕೊಡಲಿದೆ ಎನ್ನಲಾಗಿದ್ದು, ಇದು ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಭಾಷ್ಯ ಬರೆಯಲು ಏರ್‌ಟೆಲ್‌ಗೆ ಸಹಾಯ ಮಾಡಲಿದೆ. ಜಿಯೋ ವಿರುದ್ಧ ದರ ಸಮಯದಲ್ಲಿ ಗೆಲುವೂ ಸಾಧಿಲು ಇದೊಂದು ಅಸ್ತ್ರವಾಗುವ ಸಾಧ್ಯತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಫಿಲಿಂಗ್ ಆಫರ್:

ರಿಫಿಲಿಂಗ್ ಆಫರ್:

ಏರ್‌ಟೆಲ್ ಬಿಡುಗಡೆ ಮಾಡಿರುವುದು ರಿಫಿಲಿಂಗ್ ಆಫರ್ ಆಗಿದ್ದು, ಇದರಲ್ಲಿ ಬಳಕೆದಾರರಿಗೆ ಹೊಸ ಮಾದರಿಯ ಸೇವೆ ದೊರೆಯಲಿದೆ. ಬಳಕೆದಾರರ ಪ್ಲಾನ್ ಖಾಲಿಯಾಗುತಿರುವ ಸಂದರ್ಭದಲ್ಲಿ ರೂ.1ಕ್ಕೆ ರಿಚಾರ್ಜ್ ಮಾಡಿಸುವ ಮೂಲಕ ಅವರು ತಮ್ಮ ಪ್ಲಾನ್ ವ್ಯಾಲಿಡಿಟಿಯನ್ನು ವಿಸ್ತರಿಸಿಕೊಳ್ಳಬಹುದು ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ಉದಾಹರಣೆಗೆ:

ಉದಾಹರಣೆಗೆ:

ನೀವು ರೂ.93ಕ್ಕೆ ರೀಚಾರ್ಜ್ ಮಾಡಿಸಿರುವ ಸಂದರ್ಭದಲ್ಲಿ 28 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳೂವಿರಿ. ಈ ಪ್ಲಾನ್ ಮುಗಿದು ಹೊಗುವ ಸಂದರ್ಬದಲ್ಲಿ ನೀವು ರೂ.1ಕ್ಕೆ ರಿಚಾರ್ಜ್ ಮಾಡಿಸುವ ಮೂಲಕ ಪ್ಲಾನ್ ಅವಧಿಯನ್ನು ವಿಸ್ತರಿಸಿಕೊಳ್ಳಬಹುದು.

ಮ್ಯಾನುವಲ್ ಮಾಡಬೇಕು:

ಮ್ಯಾನುವಲ್ ಮಾಡಬೇಕು:

ಏರ್‌ಟೆಲ್ ವೆಬ್ ಸೈಟ್ ಇಲ್ಲವೇ ಆಪ್ ಮೂಲಕ ನೀವು ರೀಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ಪ್ಲಾನ್ ಮುಗಿಯುವ ದಿನಾಂಕವನ್ನು ಗಮನದಲ್ಲಿ ಇಟ್ಟುಕೊಂಡು ನೀವು ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ.

How to create two accounts in one Telegram app (KANNADA)
ಮಾರುಕಟ್ಟೆಯಲ್ಲಿ ಹೊಸ ಸಂಚಲನ:

ಮಾರುಕಟ್ಟೆಯಲ್ಲಿ ಹೊಸ ಸಂಚಲನ:

ಟೆಲಿಕಾಂ ಮಾರುಕಟ್ಟೆಯಲ್ಲ ಏರ್‌ಟೆಲ್ ನೀಡಿರುವ ಈ ಆಪರ್ ಹೊಸ ಸಂಚಲನ ಮೂಡಿಸಲಿದ್ದು, ಬಳಕೆದಾರರಿಗೆ ಹೊಸ ಸಾಧ್ಯತೆಗಳನ್ನು ತೋರಿಸಿಕೊಡಲಿದೆ. ಟೆಲಿಕಾಂ ಕಂಪನಿಗಳು ಸಹ ಈ ಆಫರ್ ಕಾಪಿ ಮಾಡುವ ಸಾಧ್ಯತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Bharti Airtel Unlimited Pack at Just Re 1. to jknow more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot