ಭೀಮ್‌ ಆಪ್‌ ಬಳಕೆದಾರರೆ ನಿಮ್ಮ ಡೇಟಾ ಸುರಕ್ಷತೆ ಬಗ್ಗೆ ಇರಲಿ ಎಚ್ಚರ!

|

ಇತ್ತೀಚಿನ ದಿನಗಳಲ್ಲಿ ಡೇಟಾ ಸುರಕ್ಷತೆಯ ಬಗ್ಗೆ ವರದಿ ಆಗುತ್ತಲೇ ಇದೆ. ಡೇಟಾ ಸುರಕ್ಷತೆ ಮಾಡುವುದು ಒಂದು ಸವಾಲೇ ಆಗಿದೆ. ಟೆಕ್ನಾಲಜಿ ಮುಂದುವರೆದಂತೆ ಎಷ್ಟರ ಮಟ್ಟಿಗೆ ಉಪಯೋಗವಿದೆಯೋ ಅಷ್ಟೇ ಪ್ರಮಾಣದಲ್ಲಿ ದುರುಪಯೋಗ ಕೂಡ ಆಗುತ್ತಿದೆ. ಡೇಟಾ ಮಾಹಿತಿ ಕದಿಯುವುದನ್ನೇ ಕಸುಬು ಮಾಡಿಕೊಂಡಿರುವ ಹ್ಯಾಕರ್ಸ್‌ಗಳು ಡೇಟಾ ಸುರಕ್ಷತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಟ್ರೂ ಕಾಲರ್‌ ಆಪ್‌ನಲ್ಲಿ ಕೋಟ್ಯಾಂತರ ಭಾರತೀಯರ ಡೇಟಾ ಮಾಹಿತಿ ಕಳುವಾಗಿದೆ ಅನ್ನೊ ವರದಿ ಕೇಳಿ ಬಂದಿತ್ತು. ಸದ್ಯ ಇದೀಗ ಸಿಎಸ್ಸಿ ಭೀಮ್‌ಆಪ್‌ ನಲ್ಲಿಯೂ ಕೂಡ ಭಾರತೀಯರ ಡೇಟಾ ಮಾಹಿತಿ ಕಳುವಾಗಿದೆ ಅನ್ನೊ ವರದಿ ಬಂದಿದೆ.

ಭೀಮ್‌ಆಪ್‌

ಹೌದು, ಸಿಎಸ್ಸಿ ಭೀಮ್‌ಆಪ್‌ನಲ್ಲಿ 70 ಲಕ್ಷಕ್ಕೂ ಹೆಚ್ಚು ಭಾರತೀಯರ ಆಧಾರ್ ಕಾರ್ಡ್‌ಗಳು, ಜಾತಿ ಪ್ರಮಾಣಪತ್ರಗಳು ಮತ್ತು ಇತರ ಅತ್ಯಂತ ಸೂಕ್ಷ್ಮ ವೈಯಕ್ತಿಕ ಡೇಟಾವನ್ನು ಸರ್ಕಾರಿ ವೆಬ್‌ಸೈಟ್ ಬಹಿರಂಗಪಡಿಸಿದೆ ಎಂದು ವರದಿಯಾಗಿದೆ. ಸದ್ಯ ಯುಪಿಐ ಪಾವತಿ ಅಪ್ಲಿಕೇಶನ್ ಬಿಎಚ್‌ಐಎಂ ಅನ್ನು ಉತ್ತೇಜಿಸಲು ಬಳಸುವ ಸಿಎಸ್‌ಸಿ ಭೀಮ್ ವೆಬ್‌ಸೈಟ್ ಭಾರಿ ಪ್ರಮಾಣದ ಡೇಟಾ ಉಲ್ಲಂಘನೆಯನ್ನು ಅನುಭವಿಸಿದೆ ಎಂದು ವರದಿಯಾಗಿದೆ. ಹಾಗಾದ್ರೆ ಈ ರೀತಿಯ ಡೇಟಾ ಉಲ್ಲಂಘನೆ ಹೇಗೆ ಸಾಧ್ಯವಾಯಿತು ಅನ್ನೊದರ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇ-ಗವರ್ನೆನ್ಸ್

ಇನ್ನು ಸಿಎಸ್ಸಿ ಇ-ಗವರ್ನೆನ್ಸ್ ಸರ್ವಿಸ್ ಇಂಡಿಯಾ ಹಳ್ಳಿಗಳಿಗೆ ಡಿಜಿಟಲ್ ಪ್ರವೇಶವನ್ನು ತರುವ ಕಾರ್ಯಕ್ರಮವಾಗಿದ್ದು, ಕ್ಯೂಆರ್ ಕೋಡ್‌ಗಳ ಮೂಲಕ ಯುಪಿಐ ಪಾವತಿಗಳನ್ನು ಸ್ವೀಕರಿಸಲು ಪ್ರಾರಂಭಿಸಲು ಗ್ರಾಮ ಮಟ್ಟದಲ್ಲಿ ವ್ಯಾಪಾರಿಗಳನ್ನು ಪಡೆಯಲು ಸಿಎಸ್‌ಸಿ ಭೀಮ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಇದಕ್ಕಾಗಿ ಈ ಆಪ್‌ನಲ್ಲಿ ಭಾರತೀಯ ನಾಗರಿಕರ ಅಪಾರ ಪ್ರಮಾಣದ ಡೇಟಾವನ್ನು ಸಂಗ್ರಹಿಸಲಾಗಿದೆ, ಆದರೆ ಈ ಮಾಹಿತಿ ಕಳುವಾಗಿದೇ ಅನ್ನುವ ಮಾಹಿತಿ ಬಹಿರಂಗವಾಗಿದೆ.

ಸೈಬರ್‌ ಸೆಕ್ಯುರಿಟಿ

ಸದ್ಯ ಇಸ್ರೇಲಿ ಸೈಬರ್‌ ಸೆಕ್ಯುರಿಟಿ ಕಂಪನಿ ವಿಪಿಎನ್‌ಮೆಂಟರ್ ಪ್ರಕಾರ, ಭಾರತದಲ್ಲಿ 409 ಜಿಬಿ ಬಳಕೆದಾರರ ಡೇಟಾವನ್ನು ಕಳುವು ಮಾಡಲಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೂಕ್ಷ್ಮ, ಹಾಗೂ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯಿದೆ ಎನ್ನಲಾಗ್ತಿದೆ. ಇದಲ್ಲದೆ ಈ ಬಳಕೆದಾರರ ಡೇಟಾವನ್ನು ಬಹಿರಂಗಪಡಿಸುವುದು ಬಳಕೆದಾರರ ಖಾತೆಯ ಮಾಹಿತಿಯೊಂದಿಗೆ ಬ್ಯಾಂಕಿನ ಸಂಪೂರ್ಣ ಡೇಟಾ ಮಾಹಿತಿಯನ್ನ ಸಹ ಕಳುವು ಮಾಡಲಾಗಿದೆ. ಆದರೂ ಈ ಡೇಟಾ ಉಲ್ಲಂಘನೆಯನ್ನ ಏಪ್ರಿಲ್ 23 ರಂದು ಕಂಡುಹಿಡಿಯಲಾಗಿದೆ. ಆದರೂ ಮೇ 22 ರಂದು ಈಲೋಪದೋಷವನ್ನು ಸರಿಪಡಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಇದುವರೆಗಿನ ವರದಿಯ ಆಧಾರದ ಮೇಲೆ, ಭೀಮ್ ಅಪ್ಲಿಕೇಶನ್ ಸ್ವತಃ ಡೇಟಾವನ್ನು ಸೋರಿಕೆ ಮಾಡುತ್ತಿದೆ ಇಲ್ಲವೇ ಯುಪಿಐ ವ್ಯವಸ್ಥೆಯು ಅಸುರಕ್ಷಿತವಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷಿ ಕೂಡ ಲಭ್ಯವಾಗಿಲ್ಲ..

ಸಿಎಸ್ಸಿ ಬಿಹೆಚ್ಐಎಂ ಡೇಟಾವನ್ನು ಹೇಗೆ ಉಲ್ಲಂಘಿಸಲಾಗಿದೆ?

ಸಿಎಸ್ಸಿ ಬಿಹೆಚ್ಐಎಂ ಡೇಟಾವನ್ನು ಹೇಗೆ ಉಲ್ಲಂಘಿಸಲಾಗಿದೆ?

ಸದ್ಯ BPIM ಸಂಗ್ರಹಿಸಿದ ಡೇಟಾವನ್ನು ತಪ್ಪಾಗಿ ಕಾನ್ಫಿಗರ್ ಮಾಡಲಾದ ಅಮೆಜಾನ್ ವೆಬ್ ಸರ್ವೀಸಸ್ s3 ನಲ್ಲಿ ಸಂಗ್ರಹಿಸಲಾಗುತ್ತಿದೆ. ಅಲ್ಲದೆ ಇದಕ್ಕೆ ಸಾರ್ವಜನಿಕವಾಗಿ ಎಲ್ಲರೂ ಪ್ರವೇಶಿಸಬಹುದಾಗಿದೆ ಎಂದು VPN‌ಮೆಂಟರ್ ವರದಿ ಹೇಳಿದೆ. ಅಲ್ಲದೆ ಅನೇಕ ವೆಬ್‌ಸೈಟ್‌ಗಳು ತಮ್ಮ ಕ್ಲೌಡ್ ಸಿಸ್ಟಮ್‌ಗಳನ್ನು ಹೊಂದಿಸುವಾಗ ಮಾಡುವ ಸಾಮಾನ್ಯ ದೋಷ ಇದು ಎಂದು ಕಂಡುಬಂದಿದೆ. VpnMentor ಪ್ರಕಾರ, ವ್ಯಕ್ತಿಗಳು ಮತ್ತು ಹಲವಾರು ವ್ಯಾಪಾರಿಗಳ 409GB ಮೌಲ್ಯದ ಸೂಕ್ಷ್ಮ ದತ್ತಾಂಶವು ಅಸುರಕ್ಷಿತವಾಗಿದೆ, ಆದ್ದರಿಂದ, ಸೈಬರ್‌ ಹ್ಯಾಕರ್‌ಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗ್ತಿದೆ.

ಆಧಾರ್

VpnMentor ಪ್ರಕಾರ, ಆಧಾರ್ ಕಾರ್ಡ್‌ಗಳ ಸ್ಕ್ಯಾನ್‌ಗಳು, ಜಾತಿ ಪ್ರಮಾಣಪತ್ರಗಳ ಸ್ಕ್ಯಾನ್, ಪದವಿ, ಡಿಪ್ಲೋಮ, ಮತ್ತು ವೃತ್ತಿಪರ ಪ್ರಮಾಣಪತ್ರಗಳು, ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಲ್ಲಿ ತೆಗೆದ ಸ್ಕ್ರೀನ್‌ಶಾಟ್‌ಗಳು, ಪ್ಯಾನ್ ಕಾರ್ಡ್‌ಗಳು ಸೇರಿವೆ. ಸದ್ಯ ಇದರ ಬಗ್ಗೆ ಸರ್ಕಾರ ಕೂಡ ಗಂಭಿರವಾಗಿ ಗಂಬೀರವಾಗಿ ಪರಿಗಣಿಸುವ ಸಾದ್ಯತೆ ಇದೆ ಎಂದು ಹೇಳಲಾಗ್ತಿದೆ.

Best Mobiles in India

Read more about:
English summary
Aadhaar cards, caste certificates, and other highly sensitive personal data of over 70 lakh Indians have reportedly been exposed by a government website.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X