ನಾಳೆಯಿಂದ ಅಮೆಜಾನ್ ದೀಪಾವಳಿ ಸೇಲ್..! ಆಫರ್‌ಗಳ ಬಂಪರ್..!
ಒಂದೇ ತಿಂಗಳಲ್ಲಿ ಎರಡು ಸುತ್ತಿನ ಹಬ್ಬದ ಮಾರಾಟವನ್ನು ಮುಗಿಸಿ ಗ್ರಾಹಕರಲ್ಲಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಮತ್ತೊಮ್ಮೆ ನಿಮ್ಮ ಮುಂದೆ ಬರಲು ತಯಾರಿ ನಡೆಸುತ್ತಿದೆ. ಭಾರತದಲ್ಲಿ ಹಬ್ಬದ ಸೀಸನ್ ದೀಪಾವಳಿಯೊಂದಿಗೆ ಮುಕ್ತಾಯವಾಗುತ್ತಿದ್ದು, ದೀಪಾವಳಿಯಂತಹ ಪ್ರಮುಖ ಹಬ್ಬಕ್ಕೆ ಅಮೆಜಾನ್ ಮತ್ತೊಂದು ಮಾರಾಟವನ್ನು ಇಟ್ಟುಕೊಂಡಿದೆ.

ಹೌದು, ಇದೇ ನವೆಂಬರ್ 2 ರಿಂದ 5 ರವರೆಗೆ ಒಟ್ಟು 4 ದಿನಗಳ ಕಾಲ ಭರ್ಜರಿ ಆಫರ್‌ಗಳನ್ನು ಹೊತ್ತುಕೊಂಡು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಗ್ರಾಹಕರನ್ನು ತಲುಪಲಿದೆ. ಇತ್ತೀಚೆಗೆ ನಡೆದ ಎರಡು ಸೀಸನ್ ಸೇಲ್‌ಗಳನ್ನು ಮಿಸ್ ಮಾಡಿಕೊಂಡಿದ್ದರೆ ಇದನ್ನು ಖಂಡಿತ ಮಿಸ್ ಮಾಡಿಕೊಳ್ಳಬೇಡಿ. ಬಹಳಷ್ಟು ಉತ್ಪನ್ನಗಳ ಮೇಲೆ ಆಫರ್ ಲಭ್ಯವಿದ್ದು, ಇದರಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಸ್ಪೀಕರ್ ಮತ್ತು ಕ್ಯಾಮೆರಾಗಳ ಮೇಲೆ ಭಾರೀ ಆಫರ್ ದೊರೆಯಲಿದೆ. ಆಗಿದ್ದರೆ, ದೀಪಾವಳಿಯ ವಿಶೇಷ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಏನೇಲ್ಲಾ ಆಫರ್ ಹೊಂದಿರುತ್ತೆ ಎಂಬುದನ್ನು ಮುಂದೆ ನೋಡಿ.

ಸಿನಿಮಾ, ಊಟ ಅಥವಾ ರೀಚಾರ್ಜ್
ನವೆಂಬರ್ 2ರಿಂದ ಆರಂಭವಾಗುವ ದೀಪಾವಳಿ ಸೇಲ್‌ನಲ್ಲಿ ರೂ.500ಕ್ಕಿಂತ ಹೆಚ್ಚು ಮೊತ್ತದ ಉತ್ಪನ್ನ ಖರೀದಿಸಿ ಸಿನಿಮಾ, ಊಟ ಅಥವಾ ರೀಚಾರ್ಜ್ ಪ್ಯಾಕ್‌ನ್ನು ಅನ್‌ಲಾಕ್ ಮಾಡಬಹುದಾಗಿದೆ. ಈ ಆಫರ್ ಕೇವಲ ನವೆಂಬರ್ 2ಕ್ಕೆ ಮಾತ್ರ ಸಿಮೀತವಾಗಿದ್ದು, ಬುಕ್ ಮೈ ಶೋ, ಸ್ವಿಗ್ಗಿ ಜತೆ ಅಮೆಜಾನ್ ಒಪ್ಪಂದ ಮಾಡಿಕೊಂಡಿದೆ.

ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್ ಆಫರ್
ಅಮೆಜಾನ್ ದೀಪಾವಳಿ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಆಫರ್ ಲಭ್ಯವಿದೆ. ಸ್ಯಾಮ್‌ಸಂಗ್ ಗ್ಯಾಲೆಕ್ಸಿ A8+, ರೆಡ್‌ಮಿ 6 ಪ್ರೋ, ರಿಯಲ್‌ಮಿ 1ನಂತಹ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಗ್ರಾಹಕರಿಗೆ ಭಾರೀ ರಿಯಾಯಿತಿಯಲ್ಲಿ ದೊರೆಯುತ್ತಿವೆ. ಅದಲ್ಲದೇ ಶೇ.70ರವರೆಗೂ ಖಚಿತ ಎಕ್ಸ್‌ಚೆಂಜ್ ಆಫರ್ ಪಡೆಯಬಹುದಾಗಿದೆ. ಇನ್ನು ಹೊಸ ಸ್ಮಾರ್ಟ್‌ಫೋನ್‌ನ್ನು ತಿಂಗಳಿಗೆ ರೂ.999 ಪಾವತಿಸುವ ಮೂಲಕ ಸ್ವಂತದ್ದಾಗಿಸುವ ಆಫರ್ ಕೂಡ ಇದೆ. ರೂ.89ರಿಂದ ಅತ್ಯಧಿಕ ಮಾರಾಟವಾಗುವ ಮೊಬೈಲ್ ಅಕ್ಸೆಸರಿಸ್‌ಗಳು ಮಾರಾಟವಾಗುತ್ತಿವೆ.

ಲ್ಯಾಪ್‌ಟಾಪ್, ಕ್ಯಾಮೆರಾಗೆ ಭಾರೀ ರಿಯಾಯಿತಿ
ದೀಪಾವಳಿ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳಿಗೆ ರೂ.30,000ದವರೆಗೂ ರಿಯಾಯಿತಿ ದೊರೆಯುತ್ತದೆ. ಅದಲ್ಲದೇ ತಿಂಗಳಿಗೆ ರೂ.666 ಪಾವತಿಸುವ ಮೂಲಕ ಲ್ಯಾಪ್‌ಟಾಪ್ ಖರೀದಿಸಬಹುದು. 700ಕ್ಕೂ ಹೆಚ್ಚು ಕ್ಯಾಮೆರಾ ಮತ್ತು ಆಡಿಯೋ ಡಿವೈಸ್‌ಗಳು ಶೇ.70ರವರೆಗೆ ರಿಯಾಯಿತಿಯನ್ನು ಗ್ರಾಹಕರಿಗೆ ನೀಡುತ್ತಿದೆ. ಜನಪ್ರಿಯ ಹೆಡ್‌ಫೋನ್‌ಗಳು ರೂ.249ನಿಂದ ಪ್ರಾರಂಭವಾಗುತ್ತವೆ. ಅದಲ್ಲದೇ 1TB + ಹಾರ್ಡ್‌ಡ್ರೈವ್‌ಗಳು ರೂ.3,299ರಿಂದ ಪ್ರಾರಂಭವಾಗುತ್ತಿದ್ದು, ಗ್ರಾಹಕರಿಗೆ ಭಾರೀ ರಿಯಾಯಿತಿಯಲ್ಲಿ ದೊರೆಯುತ್ತಿವೆ.

ಟಿವಿ, ಅಪ್ಲಾಯನ್ಸ್‌ಗಳಿಗೂ ಆಫರ್
ಟಿವಿ ಮತ್ತು ಅಪ್ಲಾಯನ್ಸ್‌ಗಳನ್ನು ಅಮೆಜಾನ್ ದೀಪಾವಳಿ ಸೇಲ್‌ನಲ್ಲಿ ರೂ.22,000ದವರೆಗೂ ಎಕ್ಸ್‌ಚೆಂಜ್ ಮೌಲ್ಯದಲ್ಲಿ ಖರೀದಿಸಬಹುದು. ಅದಲ್ಲದೇ ನಿಮ್ಮ ಅನುಕೂಲಕರ ಸಮಯದಲ್ಲಿ ಉಚಿತ ಡೆಲಿವರಿ ಹಾಗೂ 48 ಗಂಟೆಗಳಲ್ಲಿ ಉಚಿತ ಇನ್ಸ್ಟಾಲೇಷನ್ ಲಭ್ಯವಿದೆ. ಅಪ್ಲಾಯನ್ಸ್‌ಗಳನ್ನು ತಿಂಗಳಿಗೆ ರೂ.290ಗಳನ್ನು ಪಾವತಿಸುವ ಮೂಲಕ ಖರೀದಿಸಬಹುದು. ಅಲ್ಲದೇ 4 ದಿನವೂ Mi (49) TV ಮತ್ತು BPL ರೆಫ್ರಿಜರೆಟರ್‌ನ್ನು ಬೆಳಿಗ್ಗೆ 11ಕ್ಕೆ ಫ್ಲಾಶ್ ಸೇಲ್ ಮಾಡಲಾಗುತ್ತಿದೆ.

ಮತ್ತೀತರ ಆಫರ್
ಅಮೆಜಾನ್ ದೀಪಾವಳಿ ಸೇಲ್‌ನಲ್ಲಿ ಫ್ಯಾಶನ್ ಉತ್ಪನ್ನಗಳ ಮೇಲೆ ಶೆ.50 ರಿಂದ ಶೇ.80ರವರೆಗೆ ರಿಯಾಯಿತಿಯಿದೆ. ಅದಲ್ಲದೇ ಫ್ಯಾಶನ್ ಬೋನಸ್ ಆಫರ್ ಎಂದು ಹೆಚ್ಚುವರಿ ಶೇ.10 ರಷ್ಟು ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ಗೃಹೋಪಯೋಗಿ ವಸ್ತುಗಳ ಮೇಲೆ ಶೇ.80 ರಷ್ಟು ರಿಯಾಯಿತಿ ಲಭ್ಯವಿದೆ. ದಿನಬಳಕೆಯ 15,000ಗೂ ಹೆಚ್ಚಿನ ಉತ್ಪನ್ನಗಳು ಭಾರೀ ಕಡಿಮೆ ಬೆಲೆಗೆ ದೊರೆಯುತ್ತಿವೆ. ಇನ್ನು ಪುಸ್ತಕ, ಮನರಂಜನೆ ಡಿವೈಸ್ ಹಾಗೂ ಇತರೆ ಉತ್ಪನ್ನಗಳು ಶೇ.80ರಷ್ಟು ರಿಯಾಯಿತಿಯಲ್ಲಿ ಸಿಗಲಿವೆ. ಅದಲ್ಲದೇ ಅಮೆಜಾನ್‌ನ ಸ್ಮಾರ್ಟ್ ಗ್ಯಾಜೆಟ್‌ಗಳು ಶೇ.45ರಷ್ಟು ರಿಯಾಯಿತಿಯೊಂದಿಗೆ ಲಭ್ಯವಾಗುತ್ತವೆ.

ನೋ ಕಾಸ್ಟ್ EMI
ಅಮೆಜಾನ್ ತನ್ನ ದೀಪಾವಳಿಯ ಗ್ರೇಟ್ ಇಂಡಿಯನ್ ಸೇಲ್‌ನ್ನು ಇನ್ನಷ್ಟು ಆಕರ್ಷಕವಾಗಿಸಲು ಗ್ರಾಹಕರಿಗೆ ವಿವಿಧ ರೀತಿಯ ನೋಕಾಸ್ಟ್ EMI ಆಯ್ಕೆಯನ್ನು ನೀಡುತ್ತಿದೆ. ಪ್ರಮುಖ ಕ್ರೆಡಿಟ್ ಕಾರ್ಡ್‌ಗಳಲ್ಲಿ ರೂ. 3000ಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುವನ್ನು ಖರೀದಿಸಿದರೆ, ಡೆಬಿಟ್ ಕಾರ್ಡ್‌ಗಳ ಮೂಲಕ ರೂ. 8000ಕ್ಕಿಂತ ಹೆಚ್ಚಿನ ಮೌಲ್ಯದ ವಸ್ತು ಖರೀದಿಗೆ ಮತ್ತು ಬಜಾಜ್ ಫಿನ್‌ಸರ್ವ್ EMI ಕಾರ್ಡ್ ಬಳಕೆದಾರರಿಗೆ ನೋ ಕಾಸ್ಟ್ EMI ಸೌಲಭ್ಯವನ್ನು ಅಮೆಜಾನ್ ನೀಡಲಿದೆ. 10 ಕೋಟಿಗೂ ಹೆಚ್ಚು ಉತ್ಪನ್ನಗಳಿಗೆಎ ನೋ ಕಾಸ್ಟ್ EMI ಸೌಲಭ್ಯ ಸಿಗಲಿದೆ. ಅದಲ್ಲದೇ ಬಜಾಜ್ ಫಿನ್‌ಸರ್ವ್ ಜತೆ ಉತ್ಪನ್ನ ಖರೀದಿಸಿದರೆ ರೂ.250ಯನ್ನು ಅಮೆಜಾನ್ ಪೇ ಬ್ಯಾಲೆನ್ಸ್ ಆಗಿ ಪಡೆಯುವಿರಿ.

ಹೆಚ್‌ಡಿಎಫ್‌ಸಿ ಗ್ರಾಹಕರಿಗೆ ಬಂಪರ್
ಅಮೆಜಾನ್‌ನ ದೀಪಾವಳಿ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ ಬಂಪರ್ ಆಫರ್ ದೊರೆಯುತ್ತಿದೆ. ನವೆಂಬರ್ 2 ರಿಂದ 5ರವರೆಗೆ ನಡೆಯುವ ಸೇಲ್‌ನಲ್ಲಿ ಹೆಚ್‌ಡಿಎಫ್‌ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಉತ್ಪನ್ನ ಖರೀದಿಸಿದರೆ ಶೇ.10ರಷ್ಟು ತ್ವರಿತ ರಿಯಾಯಿತಿ ಸಿಗಲಿದೆ. ಈ ಆಫರ್ EMI ಉತ್ಪನ್ನಗಳಿಗೂ ಅನ್ವಯಿಸುತ್ತದೆ ಎಂದು ಅಮೆಜಾನ್ ಹೇಳಿದೆ.

ಆಕರ್ಷಕ ಕ್ಯಾಶ್‌ಬ್ಯಾಕ್
ದೀಪಾವಳಿ ಸೇಲ್‌ನಲ್ಲಿ ಗ್ರಾಹಕರು ಆಕರ್ಷಕ ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ. ರೂ.2000 ದಿಂದ ರೂ.4,999ರವರೆಗೆ ಉತ್ಪನ್ನ ಖರೀದಿಸಿದರೆ ಶೇ.5ರಷ್ಟು ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ. ರೂ.5,000ಕ್ಕಿಂತ ಹೆಚ್ಚಿನ ಉತ್ಪನ್ನಗಳನ್ನು ಖರೀದಿಸಿದರೆ ಶೇ.10ರಷ್ಟು ಕ್ಯಾಶ್‌ಬ್ಯಾಕ್ ದೊರೆಯುತ್ತದೆ.

ಭಾರೀ ಎಕ್ಸ್‌ಚೆಂಜ್ ಆಫರ್
ದೀಪಾವಳಿ ಸೇಲ್‌ನಲ್ಲಿ ಗ್ರಾಹಕರಿಗೆ ಸಿಗುತ್ತಿರುವ ಮತ್ತೊಂದು ಆಯ್ಕೆಯೆಂದರೆ ಎಕ್ಸ್‌ಚೆಂಜ್ ಆಫರ್. ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಟಿವಿ ಮತ್ತು ಗೃಹಪಯೋಗಿ ವಸ್ತುಗಳ ಮೇಲೆ ಎಕ್ಸ್‌ಚೆಂಜ್ ಆಫರ್ ಲಭ್ಯವಿದೆ. ಆದರೆ, ಯಾವ್ಯಾವ ಉತ್ಪನ್ನಗಳ ಮೇಲೆ ಎಷ್ಟು ಎಕ್ಸ್‌ಚೆಂಜ್ ಆಫರ್ ಸಿಗುತ್ತದೆ ಎಂಬ ಮಾಹಿತಿಯನ್ನು ಅಮೆಜಾನ್ ಇನ್ನು ಬಹಿರಂಗ ಪಡಿಸಿಲ್ಲ. ಆದರೆ, ಇಲ್ಲೂ ಸಹ ನಿಮಗೆ ಲಾಭವಾಗುವುದರಲ್ಲಿ ಅನುಮಾನವಿಲ್ಲ.


Click it and Unblock the Notifications








