Home
ಸುದ್ದಿಜಾಲ

ನಥಿಂಗ್ ಫೋನ್ (1) ಬೆಲೆಯಲ್ಲಿ ಮತ್ತೊಮ್ಮೆ ಭರ್ಜರಿ ಇಳಿಕೆ!..ಈ ಚಾನ್ಸ್‌ ಬಿಡಬೇಡಿ!

ನಥಿಂಗ್‌ ಮೊಬೈಲ್‌ ಸಂಸ್ಥೆಯು ಭಿನ್ನ ಡಿಸೈನ್‌ ಹೊಂದಿರುವ ತನ್ನ ನಥಿಂಗ್ ಫೋನ್ ಗಳ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಗಮನ ಸೆಳೆದಿದೆ. ಆ ಪೈಕಿ ನಥಿಂಗ್ ಕಂಪನಿಯ ಮೊದಲ ನಥಿಂಗ್ ಫೋನ್ (1) ಗ್ರಾಹಕರನ್ನು ಆಕರ್ಷಿಸಿದೆ. ಅಚ್ಚರಿಯ ವಿಷಯ ಅಂದ್ರೆ, ಇದೀಗ ನಥಿಂಗ್ ಫೋನ್ (1) ಮೊಬೈಲ್‌ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ.

ಹೌದು, ನಥಿಂಗ್ ಫೋನ್ (1) ಮೊಬೈಲ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಶೇ. 21% ರಷ್ಟು ಡಿಸ್ಕೌಂಟ್‌ ಪಡೆದಿದೆ. ಈ ಮೊಬೈಲ್‌ 128 GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 37,999ರೂ. ಆಗಿದ್ದು, ಆಫರ್‌ನಲ್ಲಿ 29,999ರೂ. ಗಳಿಗೆ ಖರೀದಿಗೆ ಲಭ್ಯ ಇದೆ. ಈ ಮೊಬೈಲ್‌ ಫೋನ್‌ ಬ್ಲ್ಯಾಕ್‌ ಹಾಗೂ ವೈಟ್‌ ಕಲರ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ನಥಿಂಗ್ ಫೋನ್ (1) ಬೆಲೆಯಲ್ಲಿ ಮತ್ತೊಮ್ಮೆ ಭರ್ಜರಿ ಇಳಿಕೆ!..ಈ ಚಾನ್ಸ್‌ ಬಿಡಬೇಡಿ!

ನಥಿಂಗ್ ಫೋನ್ (1) ಮೊಬೈಲ್‌ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್‌ ಪವರ್‌ ಅನ್ನು ಪಡೆದುಕೊಂಡಿದ್ದು, 8GB RAM + 256 GB ಮತ್ತು 12GB RAM + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಹಾಗಾದರೆ ನಥಿಂಗ್ ಫೋನ್ (1) ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ : ನಥಿಂಗ್ ಫೋನ್ (1) 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಪಡೆದಿದ್ದು, ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಈ ಡಿಸ್‌ಪ್ಲೇ 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಹಾಗೂ 1,200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ. ಜೊತೆಗೆ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ಪ್ರೊಟೆಕ್ಷನ್‌ ಅನ್ನು ಹೊಂದಿದೆ.

ಪ್ರೊಸೆಸರ್‌ ಕಾರ್ಯವೈಖರಿ ಯಾವುದು : ನಥಿಂಗ್ ಫೋನ್ (1) ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್‌ ಸಫೋರ್ಟ್‌ ಇದೆ. ಇದರ ಜೊತೆಗೆ 8GB RAM + 256 GB ಮತ್ತು 12GB RAM + 256 GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಯಲ್ಲಿ ಲಭ್ಯ.

ಕ್ಯಾಮೆರಾ ಸೆನ್ಸಾರ್ ಸ್ಪೆಷಲ್‌ ಏನು : ನಥಿಂಗ್ ಫೋನ್ (1) ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಆಗಿದೆ. ಸೆಕೆಂಡರಿ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್‌ JN1 ಸೆನ್ಸಾರ್‌ ಆಗಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೋನಿ IMX471 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಮತ್ತು ಇತರೆ ಸೌಲಭ್ಯ : ನಥಿಂಗ್ ಫೋನ್ (1) ಸ್ಮಾರ್ಟ್‌ಫೋನ್‌ 4500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದು 33W ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್‌ ಸಪೋರ್ಟ್‌ ಪಡೆದಿದೆ. ಅಲ್ಲದೇ ಈ ಫೋನ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, Wi-Fi 6 ಡೈರೆಕ್ಟ್, ಬ್ಲೂಟೂತ್ v5.2, NFC, GPS/A-GPS ಹಾಗೂ USB ಟೈಪ್-ಸಿ ಪೋರ್ಟ್ ಬೆಂಬಲಿಸಲಿದೆ.

Best Mobiles in India

English summary
Biggest Price drop on Nothing Phone (1) on flipkart: details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+