ಮೈಕ್ರೋಸಾಫ್ಟ್‌ನಲ್ಲಿ 1.02 ಕೋಟಿ ವರಮಾನ: ವೆಲ್ಡರ್ ಪುತ್ರನ ಸಾಧನೆ

By Shwetha
|

ಸಾಧನೆ ಎಂಬುದು ನಮ್ಮಲ್ಲಿಯೇ ಇರುವ ಏಕ ಮಾತ್ರ ಆಸ್ತಿಯಾಗಿದ್ದು ಇನ್ನೊಬ್ಬರಿಂದ ಬಳುವಳಿಯಾಗಿ ಬರುವಂಥದ್ದಲ್ಲ. ಸಾಧಿಸುವ ಛಲ ನಮ್ಮಲ್ಲಿದೆ ಎಂದಾದಲ್ಲಿ ಅದನ್ನು ತಡೆಯುವುದು ಯಾರಿಂದರಲೂ ಸಾಧ್ಯವಿಲ್ಲ. ಬಡವ ಶ್ರೀಮಂತನಾಗಬಹುದು, ದಡ್ಡ ಬುದ್ಧಿವಂತನಾಗಬಹುದು. ಈ ಮಾತು ಇಲ್ಲಿ ಬರುವುದಕ್ಕೆ ಕಾರಣ ಒಬ್ಬ ವೆಲ್ಡರ್‌ನ ಮಗ ಮೈಕ್ರೋಸಾಫ್ಟ್‌ನಲ್ಲಿ 1.2 ಕೋಟಿ ವರಮಾನವುಳ್ಳ ಉದ್ಯೋಗವನ್ನು ಸಂಪಾದಿಸಿರುವುಕ್ಕೆ.

ಇದನ್ನು ತಿಳಿಯುವ ಆಸಕ್ತಿ ನಿಮಗಿದೆ ಎಂದಾದಲ್ಲಿ ತಿಳಿಸುವ ಆಸಕ್ತಿ ನಮಗಿದೆ. ಹಾಗಿದ್ದರೆ ಸ್ಲೈಡರ್‌ನಲ್ಲಿ ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳಿ.

ಮಧ್ಯಮ ವರ್ಗದ ಕುಟುಂಬ

ಮಧ್ಯಮ ವರ್ಗದ ಕುಟುಂಬ

ಬಿಹಾರದ ಮಧ್ಯಮ ವರ್ಗದ ಕುಟುಂಬದ ವೆಲ್ಡರ್ ಮಗನಾದ 21 ರ ಹರೆಯದ ವತ್ಸಲ್ಯ ಸಿಂಗ್ ಚೌಹಾನ್ ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗ ಗಳಿಸಿಕೊಂಡವನಾಗಿದ್ದಾನೆ.

ಐಐಟಿ ಖಾರಗ್ ಪುರದ ವಿದ್ಯಾರ್ಥಿ

ಐಐಟಿ ಖಾರಗ್ ಪುರದ ವಿದ್ಯಾರ್ಥಿ

ಐಐಟಿ ಖಾರಗ್ ಪುರದ ವಿದ್ಯಾರ್ಥಿಯಾಗಿರುವ ವಾತ್ಸಲ್ಯ ತನ್ನ ಛಲಗಾರಿಕೆ ಮತ್ತು ಪರಿಶ್ರಮದಿಂದ ಉದ್ಯೋಗವನ್ನು ಪಡೆದುಕೊಂಡಿದ್ದಾನೆ ಎಂಬುದು ಈತನ ತಂದೆಯ ಮಾತಾಗಿದೆ.

ಹಿಂದಿ ಮಾಧ್ಯಮ

ಹಿಂದಿ ಮಾಧ್ಯಮ

ಸರಕಾರಿ ಶಾಲೆಯ ಹಿಂದಿ ಮಾಧ್ಯಮದಲ್ಲಿ ಓದಿರುವ ವಾತ್ಸಲ್ಯ ಕೋಟಾದ ಕೋಚಿಂಗ್ ಕೇಂದ್ರದಲ್ಲಿ ಹೆಚ್ಚುವರಿ ತರಬೇತಿಯನ್ನು ಪಡೆದುಕೊಂಡಿದ್ದಾನೆ.

75 ಶೇಕಡಾ ಅಂಕ

75 ಶೇಕಡಾ ಅಂಕ

12 ನೇ ತರಗತಿಯಲ್ಲಿ ಈತ 75 ಶೇಕಡಾ ಅಂಕಗಳನ್ನು ತೆಗೆದಿದ್ದು ಕೋಟಾಕ್ಕೆ ತರಬೇತಿಗಾಗಿ 2011 ರಲ್ಲಿ ದಾಖಲಾದ. ಐಐಟಿಗೆ ಸೇರುವ ತನ್ನ ಇಚ್ಛೆಗಾಗಿ ಈತ ತುಂಬಾ ಪರಿಶ್ರಮ ಪಟ್ಟಿದ್ದಾನೆ.

382 ಅಂಕ

382 ಅಂಕ

ಐಐಟಿ-ಜೆಇಇ ಎಂಟ್ರನ್ಸ್ ಪರೀಕ್ಷೆಯಲ್ಲಿ ಈತ 382 ಅಂಕಗಳನ್ನು ಗಳಿಸಿದ್ದು ಐಐಟಿ ಖಾರಗ್‌ಪುರದ ಸೀಟನ್ನು ಗಿಟ್ಟಿಸಿಕೊಂಡಿದ್ದಾನೆ.

ಕಂಪ್ಯೂಟರ್ ಸೈನ್ಸ್ ಆಯ್ಕೆ

ಕಂಪ್ಯೂಟರ್ ಸೈನ್ಸ್ ಆಯ್ಕೆ

ಕಂಪ್ಯೂಟರ್ ಸೈನ್ಸ್ ಅನ್ನು ಆಯ್ಕೆಯ ವಿಷಯವಾಗಿ ಆರಿಸಿಕೊಂಡು ಪರಿಶ್ರಮದಿಂದ ಓದುವಿಕೆಯನ್ನು ಮುಂದುವರಿಸಿದ್ದಾನೆ.

ಮಗನ ಸಾಧನೆ

ಮಗನ ಸಾಧನೆ

ಹನಿದುಂಬಿದ ಕಣ್ಣುಗಳಿಂದ ವಾತ್ಸಲ್ಯನ ತಂದೆ ಮಗನ ಈ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ. ಐಐಟಿಯಲ್ಲಿ ಮಗನನ್ನು ಸೇರಿಸುವುದಕ್ಕಾಗಿ 3.50 ಲಕ್ಷವನ್ನು ಈತನ ತಂದೆ ಲೋನ್ ಮಾಡಿದ್ದರು. ಆ ಶ್ರಮವನ್ನು ಮಗ ಸಾರ್ಥಕ ಪಡಿಸಿದ್ದಾನೆ ಎಂಬುದು ಇವರ ಮಾತಾಗಿದೆ.

ಹೆಮ್ಮೆಯ ವಿಚಾರ

ಹೆಮ್ಮೆಯ ವಿಚಾರ

ಮೈಕ್ರೋಸಾಫ್ಟ್‌ನಂತಹ ದೊಡ್ಡ ಕಂಪೆನಿಯಲ್ಲಿ ವಾತ್ಸಲ್ಯನಿಗೆ ಕೆಲಸ ಸಿಕ್ಕಿರುವುದು ಆತನ ತಂದೆಗೆ ಹೆಮ್ಮೆಯ ವಿಚಾರವಾಗಿದೆ.

Most Read Articles
Best Mobiles in India

English summary
Vatsalya Singh Chauhan, a 21-year old final year student from IIT Kharagpur made his father proud with his success and hard work.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X