ಬಿಲ್‌ಗೇಟ್ಸ್‌ಗೆ ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಪಟ್ಟ!

|

ಕಳೆದ 24 ವರ್ಷಗಳ ಬಳಿಕ, ಕಳೆದ ವರ್ಷವಷ್ಟೇ ವಿಶ್ವದ ಶ್ರೀಮಂತ ವ್ಯಕ್ತಿ ಎಂಬ ಪಟ್ಟದಿಂದ ಜಾರಿದ್ದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಇನ್ನು ಮುಂದೆ ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಲ್ಲ ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ಹಾಗೆಂದ ಮಾತ್ರಕ್ಕೆ ಅವರು ಮತ್ತಷ್ಟು ಸ್ಥಾನ ಇಳಿಕೆಕಂಡರೆ ಎಂಬ ಚಿಂತೆ ಬೇಡ. ಏಕೆಂದರೆ, ಅಮೆಜಾನ್‌ ಸಂಸ್ಥಾಪಕ ಹಾಗೂ ಸಿಇಒ ಜೆಫ್ ಬೆಜೋಸ್‌ ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎಂಬ ಹಣೆಪಟ್ಟಿಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಬಿಲ್‌ ಗೇಟ್ಸ್‌ ಮತ್ತೆ ನಂ.1 ಶ್ರೀಮಂತ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.!

ಅಮೆಜಾನ್‌

ಹೌದು, ಮಾರುಕಟ್ಟೆಯಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದ್ದ ಅಮೆಜಾನ್‌ ಕಂಪನಿ ತನ್ನ ಮೂರನೇ ತ್ರೈಮಾಸಿಕದಲ್ಲಿ ಕಳಪೆ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಬಿಲ್‌ ಗೇಟ್ಸ್‌ ಮತ್ತೆ ನಂ. 1 ಶ್ರೀಮಂತ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಗುರುವಾರದ ಷೇರು ಮಾರುಕಟ್ಟೆ ಅಂತ್ಯದ ವೇಳೆಗೆ ಅಮೆಜಾನ್‌ನ ಷೇರು ಮೌಲ್ಯ ಶೇ. 7 ರಷ್ಟು ಕುಸಿದಿದ್ದು, ಇದರಿಂದಾಗಿ ಜೆಫ್ ಬೆಜೋಸ್‌ನ ಆಸ್ತಿ ಮೌಲ್ಯ ಸುಮಾರು 700 ಕೋಟಿ ಡಾಲರ್‌ನಷ್ಟು ಕಡಿಮೆಯಾಗಿದದೆ. ಹಾಗಾಗಿ ,ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಮತ್ತೆ ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಆಸ್ತಿ ಮೌಲ್ಯ

ಗುರುವಾರದ ಷೇರು ಮಾರುಕಟ್ಟೆ ಅಂತ್ಯದ ವೇಳೆಗೆ ಅಮೆಜಾನ್‌ನ ಷೇರು ಮೌಲ್ಯ ಶೇ. 7 ರಷ್ಟು ಕುಸಿದ ನಂತರ, ಬೆಜೋಸ್‌ನ ಆಸ್ತಿ ಮೌಲ್ಯ 103.9 ಬಿಲಿಯನ್‌ ಡಾಲರ್‌ಗೆ ಇಳಿಕೆಯಾಗಿದೆ. ಸದ್ಯ, ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಆಸ್ತಿ ಮೌಲ್ಯ 105.7 ಬಿಲಿಯನ್‌ ಡಾಲರ್‌ ನಷ್ಟು ಇರುವುದರಿಂದ ಬಿಲ್‌ ಗೇಟ್ಸ್‌ ಮತ್ತೆ ನಂ. 1 ಶ್ರೀಮಂತರಾಗಿದ್ದಾರೆ. 2017ರ ನಂತರ ಮೊದಲ ಬಾರಿಗೆ ಅಮೆಜಾನ್‌ನ ಲಾಭದಲ್ಲಿ ಗಣನೀಯ ಕುಸಿತ ಕಂಡಿದ್ದು, ನಿವ್ವಳ ಆದಾಯದಲ್ಲಿ ಶೇ. 26 ರಷ್ಟು ಅಮೆಜಾನ್‌ನ ಆದಾಯ ಕುಸಿತ ಕಂಡಿದೆ ಎಂದು ಫೋರ್ಬ್ಸ್‌ ವರದಿ ಮಾಡಿದೆ.

2018ರಲ್ಲಿ ಜೆಫ್ ಬೆಜೋಸ್

ವಿಶ್ವದಾದ್ಯಂತ ದೇಣಿಗೆ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಬಿಲ್‌ ಗೇಟ್ಸ್‌ ಅವರು 1999ರಿಂದಲೂ ಒಟ್ಟು 24 ವರ್ಷಗಳ ಕಾಲ ಸತತವಾಗಿ ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾಗಿಯೇ ಇದ್ದರು. ಆದರೆ, 2018ರಲ್ಲಿ ಜೆಫ್ ಬೆಜೋಸ್ 160 ಬಿಲಿಯನ್ ಡಾಲರ್‌ನಷ್ಟು ಆಸ್ತಿ ಸಂಪಾದಿಸಿದ ಭೂಮಿಯ ಮೊದಲನೇ ವ್ಯಕ್ತಿಯಾಗಿದ್ದಲ್ಲದೆ, ವಿಶ್ವದ ನಂ. 1 ಅತಿ ಶ್ರೀಮಂತ ವ್ಯಕ್ತಿ ಎಂಬ ಹಣಪಟ್ಟಿಯನ್ನು ಗಳಿಸಿಕೊಂಡಿದ್ದರು. ಇದೀಗ ಮತ್ತೆ ಕೇವಲ ಒಂದು ವರ್ಷದಲ್ಲಿ ಬಿಲ್‌ ಗೇಟ್ಸ್‌ ಅವರು ತಮ್ಮ ಮೊದಲ ಸ್ಥಾನವನ್ನು ಅವರು ಮತ್ತೆ ಸಂಪಾದಿಸಿಕೊಂಡು ದಿಗ್ಗಜರಾಗಿದ್ದಾರೆ.

ನಿವ್ವಳ ಆದಾಯ

ಇನ್ನು ಅಮೆಜಾನ್ ತನ್ನ ಮೂರನೇ ತ್ರೈಮಾಸಿಕದಲ್ಲಿ ನಿವ್ವಳ ಆದಾಯದಲ್ಲಿ ಶೇಕಡಾ 26 ರಷ್ಟು ಕುಸಿತವನ್ನು ವರದಿ ಮಾಡಿದೆ. ಗಂಟೆಗಳ ನಂತರದ ವಹಿವಾಟಿನಲ್ಲಿ, ಅಮೆಜಾನ್ ಸುಮಾರು 9 ಶೇಕಡಾ ಇಳಿದು ಪ್ರತಿ ಷೇರಿಗೆ 6 1,624 ಕ್ಕೆ ತಲುಪಿದೆ. ಆದರೆ, ಇತ್ತೀಚಿನ ಸುದ್ದಿ ಏನೆಂದರೆ, ಅಮೆಜಾನ್ ಶೀಘ್ರವೇ ಮತ್ತೆ ಹಳಿಗೆ ಬರಲಿದೆ. ಅಮೆಜಾನ್ ಒಮ್ಮೆ ಪುಟಿದೆದ್ದರೆ ಜೆಫ್ ಅವರು ಕೆಲವೇ ದಿನಗಳಲ್ಲಿ ಮತ್ತೆ ವಿಶ್ವದ ನಂ.1 ಶ್ರೀಮಂತನಾಗಿ ಹೊರಹೊಮ್ಮಲಿದ್ದಾರೆ. ಈ ಸುದ್ದಿ ನಿಮ್ಮನ್ನು ತಲುಪುವ ವೇಳೆಗಾಗಲೇ ಬೆಜೋಸ್ ಮತ್ತೆ ವಿಶ್ವದ ಶ್ರೀಮಂತ ವ್ಯಕ್ತಿಯಾಗಿರಬಹುದು.!

Best Mobiles in India

English summary
Amazon shares fell 7% in after-hours trading on Thursday, leaving Bezos down to $103.9 billion

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X