ಮೈಕ್ರೋಸಾಫ್ಟ್‌ನಲ್ಲಿ ತಾನು ಮಾಡಿದ ದೊಡ್ಡ ತಪ್ಪನ್ನು ಬಹಿರಂಗಪಡಿಸಿದ 'ಬಿಲ್‌ಗೇಟ್ಸ್'!

|

ಮೊಬೈಲ್ ತಂತ್ರಜ್ಞಾನ ಅಳವಡಿಕೆಯಲ್ಲಿ ಸೋತಿರುವುದು ನಾನು ಮೈಕ್ರೋಸಾಫ್ಟ್‌ನಲ್ಲಿ ಮಾಡಿದ ಅತಿದೊಡ್ಡ ತಪ್ಪು ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಹಾಗೂ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ 'ಬಿಲ್‌ಗೇಟ್ಸ್' ಅವರು ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಕಂಪ್ಯೂಟರ್ ಸಾಫ್ಟ್‌ವೇರ್ ಲೋಕದಲ್ಲಿ ದಿಗ್ಗಜನಾದ ಮೆರೆದ ಮೈಕ್ರೋಸಾಫ್ಟ್‌ ಮೊಬೈಲ್ ತಂತ್ರಜ್ಞಾನದಲ್ಲಿ ಮಾತ್ರ ಕಂಡುಕೇಳರಿಯದಂತೆ ಸೋತಿದ್ದು ಏಕೆ ಎಂಬುದನ್ನು ಸಹ ಅವರು ಇದೀಗ ಬಹಿರಂಗಪಡಿಸಿದ್ದಾರೆ.

ಮೈಕ್ರೋಸಾಫ್ಟ್‌ನಲ್ಲಿ ತಾನು ಮಾಡಿದ ದೊಡ್ಡ ತಪ್ಪನ್ನು ಬಹಿರಂಗಪಡಿಸಿದ ಬಿಲ್‌ಗೇಟ್ಸ್!

ಹೌದು, ವಾಷಿಂಗ್ಟನ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಗೇಟ್ಸ್, ಮೊಬೈಲ್ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಸೋತಿರುವುದು ಮೈಕ್ರೋಸಾಫ್ಟ್‌ನಲ್ಲಿ ನಾನು ಮಾಡಿದ ಅತಿದೊಡ್ಡ ತಪ್ಪು ಎಂದು ಹೇಳಿರುವುದು ಇದೀಗ ವೈರಲ್ ಆಗಿದೆ. ಜತೆಗೆ ಯುಎಸ್ ಅಧಿಕಾರಿಗಳೊಂದಿಗಿನ ಸುದೀರ್ಘ ಅವಿಶ್ವಾಸ ಯುದ್ಧದಲ್ಲಿ ನಾವು ವಿಚಲಿತರಾದ ಕಾರಣ ಮೊಬೈಲ್ ತಂತ್ರಜ್ಞಾನದಲ್ಲಿ ಮೈಕ್ರೋಸಾಫ್ಟ್‌ ಪ್ರಬಲ ಸಂಸ್ಥೆಯಾಗುವ ಅವಕಾಶವನ್ನು ಕಳೆದುಕೊಂಡಿತು ಎಂದು ಅವರು ಹೇಳಿಕೊಂಡಿದ್ದಾರೆ.

ನಾವು ವೈಯಕ್ತಿಕ ಕಂಪ್ಯೂಟರ್‌ಗಳಿಗೆ ಆಪರೇಟಿಂಗ್ ಸಿಸ್ಟಂಗಳನ್ನು ಮಾಡುವ ಕ್ಷೇತ್ರದಲ್ಲಿದ್ದೆವು. ಮೊಬೈಲ್ ಫೋನ್‌ಗಳು ಬಹಳ ಜನಪ್ರಿಯವಾಗುತ್ತವೆ ಎಂದು ನಮಗೆ ತಿಳಿದಿತ್ತು. ನಾವು ಬಹಳ ಕಡಿಮೆ ಪ್ರಮಾಣದಲ್ಲಿ ಪ್ರಬಲ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿರುವುದನ್ನು ತಪ್ಪಿಸಿಕೊಂಡಿದ್ದೇವೆ. ಕಾರಣ ನಾವು ಕೆಲಸ ಮಾಡಲು ಉತ್ತಮ ಜನರನ್ನು ನಿಯೋಜಿಸಲಿಲ್ಲ ಎಂದು ವಾಷಿಂಗ್ಟನ್‌ನಲ್ಲಿ ನಡೆದ ಸಂದರ್ಶನದಲ್ಲಿ ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಮೈಕ್ರೋಸಾಫ್ಟ್‌ನಲ್ಲಿ ತಾನು ಮಾಡಿದ ದೊಡ್ಡ ತಪ್ಪನ್ನು ಬಹಿರಂಗಪಡಿಸಿದ ಬಿಲ್‌ಗೇಟ್ಸ್!

ಆಂಡ್ರಾಯ್ಡ್ ಗೂಗಲ್‌ಗೆ ಒಂದು ದೊಡ್ಡ ಆಸ್ತಿ. ನಾವು ಅದನ್ನು ಸಾಧಿಸಬೇಕಾದ ಕಂಪನಿಯಾಗಿದ್ದವು. ಆದರೆ, ನಾವು ಅದನ್ನು ಮಾಡಲಿಲ್ಲ. ಗೂಗಲ್ ಮತ್ತು ಅದರ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್ ವಿರುದ್ಧ ಮೊಬೈಲ್ ಸಾಧನಗಳಿಗಾಗಿ ಆಪರೇಟಿಂಗ್ ಸಾಫ್ಟ್‌ವೇರ್ ವಿರುದ್ಧದ ಯುದ್ಧದಲ್ಲಿ ಮೈಕ್ರೋಸಾಫ್ಟ್ ಗೆದ್ದಿದ್ದರೆ ಇನ್ನಷ್ಟು ಮೌಲ್ಯಯುತ ಕಂಪೆನಿಯಾಗಿರುತ್ತಿತ್ತು ಎಂದು ಹೇಳಿದ್ದಾರೆ. ಈ ಮೂಲಕ ಮೊಬೈಲ್ ತಂತ್ರಜ್ಞಾನ ಅಳವಡಿಕೆಯಲ್ಲಿ ಸೋತಿದ್ದಕ್ಕೆ ಗೇಟ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಓದಿರಿ: 'ಯುವಕನಾಗಿದ್ದಾಗ ನಾನು ಬಿಲ್‌ಗೇಟ್ಸ್​ ಅವರನ್ನು ದ್ವೇಷಿಸುತ್ತಿದ್ದೆ'!..ಜಾಕ್ ಮಾ ಹೀಗೆ ಹೇಳಿದ್ದೇಕೆ ಗೊತ್ತಾ?

ಇನ್ನು ಮೈಕ್ರೋಸಾಫ್ಟ್ ಅನ್ನು ಮರುರೂಪಿಸಲು ಮತ್ತು ಟ್ರಿಲಿಯನ್ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ ವಿಶ್ವದ ಅಮೂಲ್ಯ ಕಂಪನಿಯಾಗಿ ವಾಪಸ್ ಮರಳಿ ತರಲು ಸಹಾಯ ಮಾಡಿದ್ದಕ್ಕಾಗಿ ಪ್ರಸ್ತುತ ಮುಖ್ಯ ಕಾರ್ಯನಿರ್ವಾಹಕ ಸತ್ಯ ನಾಡೆಲ್ಲಾ ಅವರನ್ನು ಗೇಟ್ಸ್ ಶ್ಲಾಘಿಸಿದ್ದಾರೆ. ಈಗ ಮೈಕ್ರೋಸಾಫ್ಟ್‌ನ ತಂತ್ರಜ್ಞಾನ ಸಲಹೆಗಾರರಾಗಿರುವ ಗೇಟ್ಸ್ ಅವರು ತಮ್ಮ ಸಮಯದ ಆರನೇ ಒಂದು ಭಾಗವನ್ನು ಮಾತ್ರ ಕಂಪನಿಯಲ್ಲಿ ಕಳೆಯುವುದಾಗಿ ತಿಳಿಸಿದ್ದಾರೆ.

Best Mobiles in India

English summary
We were in the field of doing operating systems for personal computers. We knew that mobile phones would be very popular. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X