ಭಾರತಕ್ಕೆ ಮಾತ್ರವಲ್ಲ...ಈಗ ಏಷ್ಯಾದ ನಂ 1 ಶ್ರೀಮಂತ ಮುಖೇಶ್ ಅಂಬಾನಿ!!

|

ಇಲ್ಲಿಯವರೆಗೂ ಭಾರತದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ಭಾರತದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರು ಈಗ ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಚೀನಾದ ಅಲಿಬಾಬಾ ಡಾಟ್ ಕಾಮ್ ಒಡೆಯ ಜಾಕ್ ಮಾ ಅವರನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಬ್ಲೂಮ್​ಬರ್ಗ್ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಮುಖೇಶ್​ ಅಂಬಾನಿ 44.3 ಬಿಲಿಯನ್​ ಡಾಲರ್​ ಸಂಪತ್ತು ಹೊಂದುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಜಾಕ್​ ಮಾ ಅವರ ಒಟ್ಟು ಆಸ್ತಿ 44 ಬಿಲಿಯನ್​ ಡಾಲರ್​ ಆಸ್ತಿಯೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಹಾಗಾಗಿ, ಇದೆ ಮೊದಲ ಬಾರಿಗೆ ಅಂಬಾನಿ ಏಷ್ಯಾದ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತಕ್ಕೆ ಮಾತ್ರವಲ್ಲ...ಈಗ ಏಷ್ಯಾದ ನಂ 1 ಶ್ರೀಮಂತ ಮುಖೇಶ್ ಅಂಬಾನಿ!!

ಇತ್ತೀಚಿಗೆ ಅಂಬಾನಿ ನಡೆಸುತ್ತಿರುವ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ಮುನ್ನಡೆಯುತ್ತಿರುವುದರಿಂದ ರಿಲಯನ್ಸ್​ ಇಂಡಸ್ಟ್ರೀಸ್​ನ ಷೇರು ಪ್ರಮಾಣದಲ್ಲಿ ಭಾರೀ ಜಿಗಿತ ಕಂಡಿದೆ. ಹಾಗಾದರೆ, ವಿಶ್ವದಲ್ಲಿ ಅಂಬಾನಿ ಈಗ ಎಷ್ಟನೇ ಶ್ರೀಮಂತ? ವಿಶ್ವದ ನಂಬರ್ ಶ್ರೀಮಂತ ಯಾರು? ಜಿಯೋಯಿಂದ ಅಂಬಾನಿಗೆ ಸಿಕ್ಕಿರುವ ಕೊಡುಗೆ ಏನು ಎಂಬುದನ್ನು ಮುಂದೆ ತಿಳಿಯಿರಿ.

ರಿಲಯನ್ಸ್​ ಇಂಡಸ್ಟ್ರೀಸ್ ಜಿಗಿತ!

ರಿಲಯನ್ಸ್​ ಇಂಡಸ್ಟ್ರೀಸ್ ಜಿಗಿತ!

ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಮಾರುಕಟ್ಟೆ ಇಂದು 7 ಲಕ್ಷ ಕೋಟಿ ವರಮಾನ ಹೊಂದುವ ಮೂಲಕ ಟಿಸಿಎಸ್​ನ ನಂತರ ಈ ಪ್ರಮಾಣದ ವಹಿವಾಟನ್ನು ನಡೆಸಿದ ದೇಶದ 2ನೇ ಸಂಸ್ಥೆಯಾಗಿ ದಾಖಲೆ ಬರೆದಿದೆ. ಈ ಬೆಳವಣಿಗೆಯ ನಂತರ ರಿಲಯನ್ಸ್​ ಇಂಡಸ್ಟ್ರೀಸ್​ನ ಷೇರು ಪ್ರಮಾಣದಲ್ಲಿ ಭಾರೀ ಹೆಚ್ಚಳ ಕಂಡಿದೆ ಎಂದು ವರದಿಯಾಗಿದೆ.

ಜಾಕ್ ಮಾ ಹಿಂದಿಕ್ಕಿದ ಅಂಬಾನಿ!

ಜಾಕ್ ಮಾ ಹಿಂದಿಕ್ಕಿದ ಅಂಬಾನಿ!

ಕಳೆದ ಕೆಲವು ವರ್ಷಗಳಿಂದಲೂ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಚೀನಾದ ಜಾಕ್‌ಮಾ ಈಗ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಜಾಕ್‌ಮಾ ಅವರ ಆಲಿಬಾಬಗಿಂತಲೂ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ವ್ಯವಹಾರ ಉತ್ತಮವಾಗಿದೆ. ಕೇವಲ ಒಂದೇ ದಿನದಲ್ಲಿ ಶೇ. 1.7ರಷ್ಟು ಹೆಚ್ಚಳವಾಗಿ ಅಂಬಾನಿ ಏಷ್ಯಾದ ಶ್ರೀಮಂತರಾಗಿದ್ದಾರೆ.

ವಿಶ್ವದ ಶ್ರೀಮಂತ ವ್ಯಕ್ತಿ ಯಾರು?

ವಿಶ್ವದ ಶ್ರೀಮಂತ ವ್ಯಕ್ತಿ ಯಾರು?

ಜೆಫ್ ಬೆಜೊಸ್ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೊಸ್ ಫೋರ್ಬ್ಸ್‌ ನಿಯತಕಾಲಿಕೆ 2018ರ ಪಟ್ಟಿಯಲ್ಲಿ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯಾಗಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಜೆಫ್ ಬೆಜೊಸ್ 145 ಬಿಲಿಯನ್ ಡಾಲರ್ ಮೌಲ್ಯದ ಒಡೆಯರಾಗಿದ್ದು, ಅಮೆಜಾನ್‌ನ ಷೇರುಗಳ ಮೌಲ್ಯ ಒಂದು ವರ್ಷದಲ್ಲಿ ಶೇ. 59ರಷ್ಟು ಹೆಚ್ಚಾಗಿದೆ.

ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ!

ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ!

ಸತತ ಕಳೆದ 18 ವರ್ಷಗಳಿಂದ ಅಗ್ರಸ್ಥಾನ ಕಾಯ್ದುಕೊಂಡಿದ್ದ ಬಿಲ್ ಗೇಟ್ಸ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಿಲ್ ಗೇಟ್ಸ್ ನಿವ್ವಳ ಮೌಲ್ಯವು 95.2 ಬಿಲಿಯನ್ ಡಾಲರ್ ಆಗಿದೆ. ಅಮೆಜಾನ್‌ನ ಷೇರುಗಳ ಮೌಲ್ಯ ನಾಗಾಲೋಟದಲ್ಲಿ ಓಡುತ್ತಿರುವುದರಿಂದ ಬಿಲ್ ಗೇಟ್ಸ್ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.

ಜಿಯೋ ಮೈಲಿಗಲ್ಲು!

ಜಿಯೋ ಮೈಲಿಗಲ್ಲು!

ಅಂಬಾನಿ ಏಷ್ಯಾದ ಶ್ರೀಂತವಾಗುವ ಮುನ್ನವೇ ಟೆಲಿಕಾಂ ಕ್ಷೇತ್ರದಲ್ಲಿ 21.5 ಕೋಟಿ ಗ್ರಾಹಕರನ್ನು ಹೊಂದುವ ಮೂಲಕ ಜಿಯೋ ಮೈಲಿಗಲ್ಲು ಸ್ಥಾಪಿಸಿದೆ. 4ಕೆ ರೆಸಲ್ಯೂಷನ್​ನ ಅಡ್ವಾನ್ಸ​ಡ್​ ಫೈಬರ್​ ಒಳಗೊಂಡಿರುವ ಜಿಯೋ ಗಿಗಾಫೈಬರ್​ ಬ್ರಾಡ್​ ಬ್ಯಾಂಡ್ ಮತ್ತು ಟಿವಿ ಸೇವೆಗಳು ಮಾರುಕಟ್ಟೆಗೆ ಪರಿಚಯಿಸಿರುವುದರಿಂದ ಅಂಬಾನಿ ಮೇಲೆ ಷೇರುದಾರರಿಗೆ ವಿಶ್ವಾಸ ಮೂಡಿದೆ.

ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಬಗ್ಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಸತ್ಯ ಸಂಗತಿಗಳಿವು!!

ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಬಗ್ಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಸತ್ಯ ಸಂಗತಿಗಳಿವು!!

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಬಗ್ಗೆ ಯಾರಿಗೆ ಗೊತ್ತಿಲ್ಲಾ ಹೇಳಿ.? ಅದರಲ್ಲಿಯೂ ಟೆಲಿಕಾಂ ಕಂಪೆನಿ ಜಿಯೋ ವನ್ನು ಶುರುಮಾಡಿದ ನಂತರವಂತೂ, ಪ್ರತಿಯೋರ್ವ ಭಾರತೀಯನಿಗೂ ಅಂಬಾನಿ ಈಗ ದೇವರಾಗಿದ್ದಾರೆ. ಟೆಲಿಕಾಂ ಲೋಕದ ಆಧುನಿಕ ಡೇಟಾ ದೇವರು ಎಂದೆ ಹೆಸರಾಗಿರುವ ಅಂಬಾನಿಗೆ ಈಗ 61 ವರ್ಷ ತುಂಬಿದೆ.!
ಹೌದು, ಮಾರ್ಚ್ 2018 ರಲ್ಲಿ ಬಿಡುಗಡೆಯಾದ ಫೋರ್ಬ್ಸ್ ಮಾಹಿತಿಯ ಪ್ರಕಾರ, ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ವ್ಯಾಪಾರಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಇಂದು ವಿಶ್ವದ ಬೃಹತ್ ಉದ್ಯಮಿಗಳಲ್ಲಿ ಓರ್ವರಾಗಿ ಬೆಳೆದುನಿಂತಿದ್ದಾರೆ. ತಮ್ಮ 61 ವರ್ಷ ವಯಸ್ಸಿನಲ್ಲಿ ಅಭೂತಪೂರ್ವ ಸಾಧನೆ ಮಾಡಿ ವಿಶ್ವದ ಗಮನಸೆಳೆದಿದ್ದಾರೆ.

1957 ರ ಎಪ್ರಿಲ್ 19 ರಂದು ಜನಿಸಿದ ಮುಖೇಶ್ ಅಂಬಾನಿ, ಪ್ರಸ್ತುತ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಸಂಸ್ಥೆ ಸಿಇಒ ಮತ್ತು ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಹಾಗಾಗಿ, ವಿಶ್ವದಲ್ಲಿಯೇ ಹೆಸರುಗಳಿಸುವಂತೆ ಸಂಸ್ಥೆಯನ್ನು ಮುನ್ನಡೆಸಿದ ಮುಖೇಶ್ ಅಂಬಾನಿ ಅವರ ವಯಕ್ತಿಕ ಜೀವನದ ಬಗ್ಗೆ ಇರುವ 10 ಆಸಕ್ತಿದಾಯಕ ಸಂಗತಿಗಳು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಜಿಯೊ ಚಂಡಮಾರುತ!!

ಜಿಯೊ ಚಂಡಮಾರುತ!!

ಮುಖೇಶ್ ಅಂಬಾನಿ ಜಿಯೊವನ್ನು ಪ್ರಾರಂಭಿಸಿದಾಗ, ಭಾರತದ ಟೆಲಿಕಾಂ ವಲಯವು ಚಂಡಮಾರುತಕ್ಕೆ ಸಿಲುಕಿದಂತಾಯಿತು. ಜಿಯೋ ಶುರುವಾದ ಒಂದು ತಿಂಗಳೊಳಗೆ 16 ದಶಲಕ್ಷ ಚಂದಾದಾರರನ್ನು ಗಳಿಸಿ ದಾಖಲೆ ಸೃಷ್ಟಿಸಿತು. ಸ್ಪರ್ಧಾತ್ಮಕ ಟೆಲಿಕಾಂ ಬೆಲೆ ಯುದ್ಧವನ್ನು ಹೆಚ್ಚಿಸಿತು. ಅಂತಿಮವಾಗಿ ಗ್ರಾಹಕರಿಗೆ ಲಾಭದಾಯಕವಾಗಿರುವ ಜಿಯೋ ಈಗಲೂ ಗ್ರಾಹಕರ ಅತ್ಯುತ್ತಮ ಟೆಲಿಕಾಂ ಕಂಪೆನಿಯಾಗಿದೆ.

ಅಂಬಾನಿ ಫೇವರೇಟ್ ಗೇಮ್ ಕ್ರಿಕೆಟ್ ಅಲ್ಲ.!!

ಅಂಬಾನಿ ಫೇವರೇಟ್ ಗೇಮ್ ಕ್ರಿಕೆಟ್ ಅಲ್ಲ.!!

ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸ್ ಮಾಲಿಕತ್ವ ಹೊಂದಿರುವ ಅಂಬಾನಿ ಮುಂಬಯಿ ಇಂಡಿಯನ್ಸ್ ಕ್ರಿಕೆಟ್ ತಂಡವನ್ನು ಹೊಂದಿರುವುದು ನಿಮಗೆಲ್ಲಾ ತಿಳಿದಿದೆ. ಆದರೆ, ಮುಖೇಶ್ ಅಂಬಾನಿ ಅವರ ಶಾಲಾ ದಿನಗಳಲ್ಲಿ ಹೆಚ್ಚಾಗಿ ಹಾಕಿಯನ್ನು ಆಡುತ್ತಿದ್ದರು ಮತ್ತು ಹಾಕಿ ಆಟದ ಕಾರಣದಿಂದಾಗಿ ಅವರು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಂಡಿದ್ದರು.!!

ವಿಶ್ವದ ಅತಿ ದೊಡ್ಡ ಸಂಸ್ಕರಣಾಗಾರ!!

ವಿಶ್ವದ ಅತಿ ದೊಡ್ಡ ಸಂಸ್ಕರಣಾಗಾರ!!

ಐಟಿ ಉದ್ಯಮೇತರನಾಗಿ ಮುಖೇಶ್ ಅಂಬಾನಿ ಯಾವಾಗಲೂ ಒಳ್ಳೆಯ ಉದ್ಯಮಿ ಎನ್ನುತ್ತವೆ ವರದಿಗಳು. ಇದಕ್ಕೆ ಪೂರಕವೆಂಬಂತೆ ಮುಖೇಶ್ ಅಂಬಾನಿ ಅವರು ವಿಶ್ವದಲ್ಲಿಯೇ ಅತಿ ದೊಡ್ಡ ಸಂಸ್ಕರಣಾಗಾರವನ್ನು ಹೊಂದಿದ್ದಾರೆ. ಪ್ರಪಂಚದ ಅತಿದೊಡ್ಡ ಸಂಸ್ಕರಣಾಗಾರವಾದ ದಿನಕ್ಕೆ 6,68,000 ಬ್ಯಾರೆಲ್ ರಿಫೈನರಿ ನಡೆಯುತ್ತದಂತೆ.

ವಿಶ್ವದ ಅತ್ಯಂತ ದುಬಾರಿ ಮನೆ!!

ವಿಶ್ವದ ಅತ್ಯಂತ ದುಬಾರಿ ಮನೆ!!

ಮುಖೇಶ್ ಅಂಬಾನಿ ಅವರು ವಿಶ್ವದ ಅತ್ಯಂತ ದುಬಾರಿ ಮನೆಯ ಮಾಲಿಕತಾಗಿದ್ದಾರೆ. ದಕ್ಷಿಣ ಮುಂಬಯಿಯಲ್ಲಿ ಇರುವ ಅಂಟಿಲಿಯಾ ಮನೆಯ ಅಂದಾಜು ಮೌಲ್ಯ ಸುಮಾರು 1 ಬಿಲಿಯನ್ ಡಾಲರ್ ಎಂದು ವರದಿಯಾಗಿದೆ. ಈ ಮನೆ 27 ಅಂತಸ್ತುಗಳನ್ನು ಹೊಂದಿದ್ದು, 600 ಕ್ಕೂ ಹೆಚ್ಚಿನ ಸಿಬ್ಬಂದಿಗಳನ್ನು ಹೊಂದಿದೆ ಎನ್ನಲಾಗಿದೆ.

ಅಂಬಾನಿ ಸ್ನೇಹಿತರು ಯಾರು ಗೊತ್ತಾ?

ಅಂಬಾನಿ ಸ್ನೇಹಿತರು ಯಾರು ಗೊತ್ತಾ?

ಮುಖೇಶ್ ಅಂಬಾನಿ ಅವರ ಶಾಲಾ ದಿನಗಳಲ್ಲಿ ಹೊಂದಿದ್ದ ಬಾಲ್ಯ ಸ್ನೇಹಿತರನ್ನೇ ಮುಂದೆಯೂ ಸ್ನೇಹಿತರನ್ನಾಗಿಯೇ ಕಾಪಾಡಿಕೊಂಡುಬಂದಿದ್ದಾರೆ. ಉದ್ಯಮಿಗಳಾದ ಆದಿ ಗೋದ್ರೆಜ್ ಮತ್ತು ಆನಂದ್ ಮಹೀಂದ್ರಾ ಅವರು ಅಂಬಾನಿ ಅವರ ಶಾಲೆಯ ಸಹವರ್ತಿಗಳು ಮತ್ತು ಅವರು ಈಗಲೂ ಅತ್ಯುತ್ತಮ ಸ್ನೇಹಿತರು.

ಮದ್ಯಪಾನ ಮಾಡಲೇ ಇಲ್ಲ!!

ಮದ್ಯಪಾನ ಮಾಡಲೇ ಇಲ್ಲ!!

ಇಂದಿನ ಶ್ರೀಮಂತ ಮಕ್ಕಳಂತೆ ಮುಖೇಶ್ ಅಂಬಾನಿ ಎಂದಿಗೂ ಮದ್ಯಪಾನ ಮಾಡಲೇ ಇಲ್ಲವಂತೆ. ಕಾಲೇಜು ದಿನಗಳಿಂದಲೂ ಮದ್ಯಪಾನದಿಂದ ದೂರವೇ ಉಳಿದಿದ್ದ ಮುಖೇಶ್ ಅಂಬಾನಿ ಅವರು ಮಾಂಸವನ್ನು ತಿನ್ನುವುದಿಲ್ಲವಂತೆ. ಮೊಟ್ಟೆಯನ್ನು ತನ್ನದಂತಹ ಶುದ್ಧ ಸಸ್ಯಾಹಾರಿ ಅವರಂತೆ.!!

168 ಕ್ಕಿಂತಲೂ ಹೆಚ್ಚು ಕಾರಿವೆ.!!

168 ಕ್ಕಿಂತಲೂ ಹೆಚ್ಚು ಕಾರಿವೆ.!!

ಮುಖೇಶ್ ಅಂಬಾನಿ ಕಾರುಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅಂಬಾನಿ ಬಳಿಯಲ್ಲಿ 168 ಕ್ಕಿಂತಲೂ ಹೆಚ್ಚು ಕಾರುಗಳಿವೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸುತ್ತಿರುವ ಹಾಗೂ ಬಾಂಬ್ ಸ್ಫೋಟವನ್ನು ತಡೆಯುವಷ್ಟು ರಕ್ಷಾಕವಚ ಹೊಂದಿರುವ BMW 760LI ಕಾರು ಬಳಕೆಯಲ್ಲಿದೆ. ಮರ್ಸಿಡಿಸ್-ಮೇಬ್ಯಾಚ್ ಬೆಂಜ್ S660 ಗಾರ್ಡ್, ಆಯ್ಸ್ಟನ್ ಮಾರ್ಟಿನ್ ರ್ಯಾಪಿಡ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರುಗಳೂ ಕೂಡ ಅಂಬಾನಿ ಬತ್ತಳಿಕೆಯಲ್ಲಿವೆ.

15 ಕೋಟಿ ವಾರ್ಷಿಕ ವೇತನ!!

15 ಕೋಟಿ ವಾರ್ಷಿಕ ವೇತನ!!

ಇಷ್ಟೆಲ್ಲಾ ಸಂಪತ್ತಿಗೆ ಒಡೆಯನಾಗಿರುವ ಮುಖೇಶ್ ಅಂಬಾನಿ ಅವರು ವಾರ್ಷಿಕವಾಗಿ ಕೇವಲ 15 ಕೋಟಿ ರೂಪಾಯಿಗಳ ವೇತನ ಪಡೆಯುತ್ತಾರೆ. ಇದು ಕಳೆದ ಒಂಬತ್ತು ವರ್ಷಗಳಿಂದ ಬದಲಾಗದೆ ಉಳಿದಿರುವುದು ವಿಶೇಷವಾಗಿದೆ. ಅಂಬಾನಿಯ ಇನ್ನೆಲ್ಲಾ ಆದಾಯವು ಅವರ ಶೇರುಗಳಿಂದಲೇ ಅವರಿಗೆ ಬಂದು ಸೇರಲಿದೆ.

5% ಮಾತ್ರ ತೆರಿಗೆ ಕಟ್ಟುತ್ತಾರೆ.!!

5% ಮಾತ್ರ ತೆರಿಗೆ ಕಟ್ಟುತ್ತಾರೆ.!!

ಪ್ರಸ್ತುತ 40.1 ಬಿಲಿಯನ್ ಆಸ್ತಿಯನ್ನು ಹೊಂದಿರುವ ಮುಖೇಶ್ ಅಂಬಾನಿಯ ಅವರ ಕಂಪೆನಿಯು ಭಾರತದ ಒಟ್ಟು ತೆರಿಗೆ ಆದಾಯದ ಸುಮಾರು 5% ರಷ್ಟು ಕೊಡುಗೆಯನ್ನು ನಿಡುತ್ತಿದೆ.

Best Mobiles in India

English summary
Ambani, best known for executing large-scale projects, spearheaded construction of the world’s largest refining complex in Jamnagar, owns the most-widespread mobile data network globally and claims to have India’s biggest as well as most-profitable retail firm.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X