ಬಿಟ್‌ಕಾಯಿನ್ ಖರೀದಿಸದಿರಿ ಎಂದು ಎಚ್ಚರಿಸಿದ ಕೇಂದ್ರ ಸರ್ಕಾರ!!..ಏನೆಲ್ಲಾ ಕಾರಣಕ್ಕಾಗಿ ಗೊತ್ತಾ?
ಡಿಜಿಟಲ್ ಕರೆನ್ಸಿಯ ವ್ಯವಹಾರ ಕೂಡ ಸಹ ಒಂದು ರೀತಿಯ ವಂಚಕ ಯೋಜನೆಯಾಗಿದೆ ಎಂದು ಕೇಂದ್ರ ಸರ್ಕಾರ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದೆ.!!
ಜಾಗತಿಕವಾಗಿ ಭಾರಿ ಸದ್ದು ಮಾಡುತ್ತಿರುವ ಬಿಟ್‌ಕಾಯಿನ್ ತರಹದ ಡಿಜಿಟಲ್ ಕರೆನ್ಸಿಗಳ ವಹಿವಾಟಿಗೆ ಕಾನೂನು ಮಾನ್ಯತೆ ಇಲ್ಲ. ಆನ್‌ಲೈನ್ ಮೋಸದ ಜಾಲದಂತೆ ಡಿಜಿಟಲ್ ಕರೆನ್ಸಿಯ ವ್ಯವಹಾರ ಕೂಡ ಸಹ ಒಂದು ರೀತಿಯ ವಂಚಕ ಯೋಜನೆಯಾಗಿದೆ ಎಂದು ಕೇಂದ್ರ ಸರ್ಕಾರ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದೆ.!!
ಇತ್ತೀಚಿನ ದಿನಗಳಲ್ಲಿ ಭಾರತ ಒಳಗೊಂಡು ಜಾಗತಿನಲ್ಲಿ ಡಿಜಿಟಲ್ ಕರೆನ್ಸಿಗಳ ಮೇಲಿನ ಹೂಡಿಕೆ ಭಾರಿ ಏರಿಕೆ ಕಂಡುಬರುತ್ತಿದದ್ದು, ಇಂತಹ ವಂಚನೆ ಜಾಲಕ್ಕೆ ಜನರು ಮರುಳಾಗಬಾರದು ಎಂದು ಸರ್ಕಾರ ಹೇಳಿದೆ.!! ಇನ್ನು ಬಿಟ್‌ಕಾಯಿನ್ ವ್ಯವಹಾರ ಏಕೆ ನಡೆಸಬಾರದು ಎಂಬುದಕ್ಕೆ ಕಾರಣಗಳನ್ನು ಸಹ ನೀಡಿದ್ದು, ಅವುಗಳು ಈ ಕೆಳಕಂಡಂತಿವೆ.!!

ಬಿಟ್‌ಕಾಯಿನ್‌ಗೆ ಮೌಲ್ಯವೇ ಇಲ್ಲ.!!
ಡಿಜಿಟಲ್ ರೂಪದ ಕರೆನ್ಸಿಗಳು ಯಾವುದೇ ಆಂತರಿಕ ಮೌಲ್ಯವನ್ನಾಗಲಿ ಅಥವಾ ಯಾವುದೇ ಸಂಪತ್ತಿನ ಶಕ್ತಿಯನ್ನಾಗಲಿ ಹೊಂದಿಲ್ಲ ಎನ್ನುವುದನ್ನು ಹೂಡಿಕೆದಾರರು ಗಮನಿಸಬೇಕು. ಇದೊಂದು ಮೋಸದ ಜಾಲದಂತೆ ರೀತಿಯ ವಂಚಕ ಯೋಜನೆಯಾಗಿದೆ ಎಂದು ಹೂಡಿಕೆದಾರರಿಗೆ ತಿಳಿಹೇಳಿದೆ.!!

ಆಕರ್ಷಕ ಲಾಭದ ಆಮಿಷ!!
ಆನ್‌ಲೈನ್ ಜಗತ್ತಿನ ಮೋಸದ ಮತ್ತೊಂದು ಮುಖದಂತೆ ಬಿಟ್‌ಕಾಯಿನ್ ಇದ್ದು ಆಕರ್ಷಕ ಲಾಭದ ಆಮಿಷದಿಂದ ಜನರನ್ನು ಮೋಸಗೊಳಿಸುವ ಉದ್ದೇಶ ಸ್ಪಷ್ಟವಾಗುತ್ತಿದೆ. ಹಾಗಾಗಿ, ಆಕರ್ಷಕ ಲಾಭದ ಆಮಿಷಕ್ಕೆ ಬಲಿಯಾಗಿ ಇರುವ ಹಣವನ್ನು ಕಳೆದುಕೊಳ್ಳ ಪರಿಸ್ಥಿತಿ ಬರಬಹುದು ಎಂದು ಹೇಳಿದೆ.!!


ಶಾಶ್ವತವಾಗಿ ಹಣ ಕಳೆದುಕೊಳ್ಳಬಹುದು!!
ಬಿಟ್‌ಕಾಯಿನ್‌ಗಳು ಡಿಜಿಟಲ್ ರೂಪದಲ್ಲಿ ಇರುತ್ತವೆ. ಹೀಗಾಗಿ ಇವುಗಳು ಹ್ಯಾಕಿಂಗ್ ದಾಳಿಗಳಿಗೆ ಸುಲಭವಾಗಿ ತುತ್ತಾಗುವ ಅಪಾಯವಿದೆ.!! ಇವುಗಳ ಪಾಸ್‌ವರ್ಡ್ ಕೂಡ ಕಳೆದುಕೊಳ್ಳುವ ಆತಂಕವೂ ಇರುತ್ತದೆ. ಇದರಿಂದಾಗಿ ಶಾಶ್ವತವಾಗಿ ಹಣ ಕಳೆದುಕೊಳ್ಳಬೇಕಾಗಿ ಬರಬಹುದು ಎಂದು ಎಚ್ಚರಿಸಿದೆ.!!

ಡಿಜಿಟಲ್ ಕರೆನ್ಸಿಗಳು ಕಾನೂನುಬಾಹಿರ!!
ಸದ್ಯಕ್ಕೆ ಭಾರತದಲ್ಲಿ ಇಂತಹ ಡಿಜಿಟಲ್ ಕರೆನ್ಸಿಗಳು ಕಾನೂನುಬಾಹಿರವಾಗಿದ್ದು, ಅವುಗಳ ಮೇಲೆ ಸರ್ಕಾರದ ಯಾವುದೇ ನಿಯಂತ್ರಣಗಳಿಲ್ಲ. ಇವುಗಳ ಖರೀದಿ ಮತ್ತು ವಹಿವಾಟಿನ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ ಎಂದು ತಿಳಿಸಿದೆ.!! .

ಚಿಲ್ಲರೆ ಹೂಡಿಕೆದಾರರಿಗೆ ಬುದ್ದಿಮಾತು!!
ಚಿಲ್ಲರೆ ಹೂಡಿಕೆದಾರರು ಕಷ್ಟಪಟ್ಟು ಗಳಿಸಿದ ಹಣವನ್ನು ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿ ಕಳೆದುಕೊಳ್ಳುವಂತಾಗಬಾರದು. ವಂಚಕ ಯೋಜನೆಗಳಲ್ಲಿ ಹಣ ತೊಡಗಿಸುವುದರಿಂದ ಅಪಾಯವೇ ಹೆಚ್ಚು. ಹಾಗಾಗಿ, ಇಂತಹ ಯೋಜನೆಗಳ ಜಾಲಕ್ಕೆ ಬೀಳದಂತೆ ಎಚ್ಚರಿಕೆ ವಹಿಸಿ ಎಂದು ಹಣಕಾಸು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.


Click it and Unblock the Notifications