ಭಾರತದಲ್ಲಿ ಬಿಟ್‌ಕಾಯಿನ್ ವ್ಯವಹಾರಕ್ಕೆ ನಿಷೇಧ ಹೇರುವ ಸಾಧ್ಯತೆ!!.ಏಕೆ ಗೊತ್ತಾ?

|

ಪ್ರಪಂಚದೆಲ್ಲೆಡೆ ಸುದ್ದಿ ಮಾಡುತ್ತಿರುವ ಬಿಟ್‌ಕಾಯಿನ್‌ನಂತಹ ಕ್ರಿಪ್ಟೊ ಕರೆನ್ಸಿಗಳನ್ನು ನಿಯಂತ್ರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.! ಭಾರತೀಯರು ಡಿಜಿಟಲ್‌ ಕರೆನ್ಸಿ ಬಿಟ್‌ ಕಾಯಿನ್‌ಗಳಲ್ಲಿ ಹಣ ಹೂಡಿಕೆ ಮಾಡುತ್ತಿರುವ ಪ್ರಮಾಣ ಹೆಚ್ಚಾಗಿರುವ ಸಮಯದಲ್ಲಿಯೇ ಇತಂಹದೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.!!

ಕ್ರಿಪ್ಟೊ ಕರೆನ್ಸಿಗಳ ಮೂಲಕ ಹಣಕಾಸಿನ ವಂಚನೆ ಹಾಗೂ ಡಿಜಿಟಲ್‌ ಕರೆನ್ಸಿ ಬಿಟ್‌ಕಾಯಿನ್‌ನಿಂದ ಭದ್ರತೆಗೆ ಧಕ್ಕೆ ಸಾಧ್ಯತೆ ಇರುವುದರಿಂದ, ಅವುಗಳನ್ನು ನಿಯಂತ್ರಿಸುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಹಾಗಾಗಿ, ಶೀಘ್ರವೇ ಬಿಟ್‌ಕಾಯಿನ್ ವ್ಯವಹಾರ ಭಾರತದಲ್ಲಿ ನಿಷೇಧ ಹೇರಬಹುದಾದ ಸಾಧ್ಯತೆಗಳಿವೆ.! ಹಾಗಾದರೆ, ಭಾರತದಲ್ಲಿ ಬಿಟ್‌ಕಾಯಿನ್ ನಿಷೇಧವಾಗಲಿದೆಯೇ? ಇದರಿಂದ ಆಗಬಹುದಾದ ಪರಿಣಾಮಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ಬಿಟ್‌ಕಾಯಿನ್ ಇ-ವಂಚನೆಯ ಸ್ಕೀಮ್?

ಬಿಟ್‌ಕಾಯಿನ್ ಇ-ವಂಚನೆಯ ಸ್ಕೀಮ್?

ಆದಾಯ ತೆರಿಗೆ ಇಲಾಖೆಯು ಬೆಂಗಳೂರು ಸೇರಿದಂತೆ ದೇಶದ ನಗರಗಳಲ್ಲಿ ಬುಧವಾರ ಬಿಟ್‌ಕಾಯಿನ್ ವಿನಿಮಯ ಕೇಂದ್ರಗಳ ಸಮೀಕ್ಷೆಯನ್ನು ನಡೆಸಿದ್ದು, ಬಿಟ್‌ ಕಾಯಿನ್‌ ದರ ಕ್ಷಣ ಕ್ಷಣಕ್ಕೂ ಭಾರಿ ಜಿಗಿಯುತ್ತಿರುವುದರಿಂದ ಇದು ಇ-ವಂಚನೆಯ ಸ್ಕೀಮ್‌ ಆಗಿ ಮಾರ್ಪಡುವ ಸಂಭವ ಇದೆ ಎಂಬ ಭೀತಿ ಉಂಟಾಗಿದೆ.!!

ಇದು ಸಂಕೀರ್ಣ ಲೆಕ್ಕಾಚಾರವಿದೆ!!

ಇದು ಸಂಕೀರ್ಣ ಲೆಕ್ಕಾಚಾರವಿದೆ!!

ಬಿಟ್‌ ಕಾಯಿನ್‌ಗಳನ್ನು ಬ್ಲಾಕ್‌ ಚೈನ್‌ ತಂತ್ರಜ್ಞಾನದ ಮೂಲಕ ಉತ್ಪಾದಿಸಲಾಗುತ್ತದೆ ಎಂದು ಬಿಟ್‌ ಕಾಯಿನ್‌ ವಿನಿಮಯ ಕೇಂದ್ರಗಳು ಹೇಳುತ್ತಿವೆ. ಆದರೆ ಇದು ಸಂಕೀರ್ಣ ಲೆಕ್ಕಾಚಾರಗಳನ್ನು ಒಳಗೊಂಡಿದ್ದು, ಸರ್ಕಾರ ಹೂಡಿಕೆದಾರರ ಹಿತಾಸಕ್ತಿ ದೃಷ್ಟಿಯಿಂದ ಶೀಘ್ರದಲ್ಲಿಯೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿವೆ.!!

ತೆರಿಗೆ ತಪ್ಪಿಸಲು ಬಿಟ್‌ ಕಾಯಿನ್ ಬಳಕೆ!!

ತೆರಿಗೆ ತಪ್ಪಿಸಲು ಬಿಟ್‌ ಕಾಯಿನ್ ಬಳಕೆ!!

ಬಿಟ್‌ ಕಾಯಿನ್‌ಗಳನ್ನು ಅಕ್ರಮ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿರುವುದು ಕೂಡ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆ ತಪ್ಪಿಸಲೂ ಬಿಟ್‌ ಜನರು ಕಾಯಿನ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂಬ ಆರೋಪವಿದೆ.

ಬಿಟ್‌ಕಾಯಿನ್ ನಿಷೇಧ!!

ಬಿಟ್‌ಕಾಯಿನ್ ನಿಷೇಧ!!

ಬಿಟ್‌ಕಾಯಿನ್‌ಗಳ ಮೇಲೆ ಭಾರತದಲ್ಲಿ ಇಲ್ಲಿಯವರೆಗೂ ಸರ್ಕಾರದ ಯಾವುದೇ ನಿಯಂತ್ರಣಗಳು ಇರಲಿಲ್ಲ. ಆದರೆ, ಪ್ರಸ್ತುತ ಬಿಟ್‌ಕಾಯಿನ್‌ಗಳು ಸರ್ಕಾರಕ್ಕೆ ತಲೆನೊವ್ವು ತರಬಹುದಾಗಿದ್ದು, ಹಾಗಾಗಿ, ಸರ್ಕಾರ ಬಿಟ್‌ಕಾಯಿನ್ ವ್ಯವಹಾರಗಳನ್ನು ಖಂಡಿತವಾಗಿ ನಿಷೇಧಿಸಲಿದೆ ಎನ್ನುತ್ತಿವೆ ವರದಿಗಳು.!!

ಬಿಟ್‌ಕಾಯಿನ್ ಆಸೆ ಬೇಡ!!

ಬಿಟ್‌ಕಾಯಿನ್ ಆಸೆ ಬೇಡ!!

ಕೇಲವೇ ತಿಂಗಳ ಹಿಂದಷ್ಟೆ 2 ಲಕ್ಷ ರೂಪಾಯಿಗಳ ಬೆಲೆ ಹೊಂದಿದ್ದ ಒಂದು ಬಿಟ್‌ಕಾಯಿನ್ ಬೆಲೆ ಇಂದು 13 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ., ಸುಲಭವಾಗಿ ಹಣ ಸಂಪಾದನೆ ಮಾಡುವ ಆಸೆ ಹೊತ್ತು ಹೆಚ್ಚು ಜನರು ಬಿಟ್‌ಕಾಯಿನ್ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಆದರೆ, ಒಮ್ಮೆ ಮೋಸಹೋದರೆ ಏನಾಗಬಹುದು ಎಂದು ಊಹಿಸಿ.!!

ಎಲಾನ್ ಮಸ್ಕ್ ಭವಿಷ್ಯ!..ಕೃತಕ ಬುದ್ಧಿಮತ್ತೆ ಮನುಷ್ಯರನ್ನು ನಾಶಮಾಡಲಿದೆ!!ಎಲಾನ್ ಮಸ್ಕ್ ಭವಿಷ್ಯ!..ಕೃತಕ ಬುದ್ಧಿಮತ್ತೆ ಮನುಷ್ಯರನ್ನು ನಾಶಮಾಡಲಿದೆ!!

Most Read Articles
Best Mobiles in India

English summary
Have you been invited to invest in a Bitcoin-linked investment scheme? .to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X