ಭಾರತಕ್ಕೆ ಉತ್ಪನ್ನ ಒದಗಿಸುವ 10 ಜನಪ್ರಿಯ ತಾಣಗಳು
ಶಾಪಿಂಗ್ ಕಾಲ ಸನ್ನಿಹಿತವಾಗಿದೆ, ಭಾರತದಲ್ಲಿ ಮಾತ್ರವಲ್ಲದೆ ಯುಎಸ್‌ನಲ್ಲಿ ಕೂಡ ಬ್ಲ್ಯಾಕ್ ಫ್ರೈಡೇ ಮತ್ತು ಸೈಬರ್ ಮಂಡೇ ಮಾರಾಟ ದಿನಗಳನ್ನಾಗಿ ಪರಿಗಣಿಸಲಾಗಿದೆ. ಡೀಲ್ಸ್‌ಗಳನ್ನು ಆರಿಸಲು ಇದು ಸೂಕ್ತ ಸಮಯವಾಗಿದ್ದು ಭಾರತದಲ್ಲಿ ಕೂಡ ಈ ದಿನಗಳನ್ನು ಶಾಪಿಂಗ್ ಮಾಡಲು ನೀವು ಬಳಸಬಹುದು.
ಇದನ್ನೂ ಓದಿ: ನೀವು ಕಂಡರಿಯದ ಲಾಲಿಪಪ್ ವಿಶೇಷತೆಗಳು
ಇನ್ನು ದೊಡ್ಡ ಶಾಪಿಂಗ್ ಸೈಟ್‌ಗಳಾದ ಅಮೆಜಾನ್ ಮತ್ತು ಇಬೇ ಕೂಡ ಭಾರತದಲ್ಲಿ ಬ್ಲ್ಯಾಕ್ ಫ್ರೈಡೇ ಮಾರಾಟದ ಅನುಭವವನ್ನು ಭಾರತೀಯರಿಗೆ ಉಂಟುಮಾಡಲು ಉತ್ಸುಕರಾಗಿದ್ದು ನಿಜಕ್ಕೂ ಖರೀದಿಗೆ ಉತ್ತಮ ತಾಣಗಳಾಗಿ ಇವುಗಳನ್ನು ಪರಿಗಣಿಸಬಹುದಾಗಿದೆ. ಯುಎಸ್‌ನಲ್ಲೂ ಈ ಶಾಪಿಂಗ್ ತಾಣಗಳು ಹೆಚ್ಚು ಜನಪ್ರಿಯವಾಗಿದ್ದು ಭಾರತಕ್ಕೂ ಇವುಗಳು ಶಿಪ್ಪಿಂಗ್ ಅನ್ನು ಒದಗಿಸುತ್ತದೆ.
ಇಂತಹ ತಾಣಗಳಲ್ಲಿ ಭಾರತೀಯರಿಗೆ ಉತ್ತಮವಾಗಿರುವ ಅದೇ ರೀತಿ ಇಲ್ಲಿ ಕೂಡ ಜನಪ್ರಿಯವಾಗಿರುವ ರೀಟೈಲ್ ತಾಣಗಳ ಮಾಹಿತಿಯನ್ನು ಅವುಗಳಿಂದ ಖರೀದಿಸಬಹುದಾದ ಉತ್ಪನ್ನಗಳ ಮಾಹಿತಿಯೊಂದಿಗೆ ನಾವಿಲ್ಲಿ ನೀಡುತ್ತಿದ್ದೇವೆ. ಅಮೇರಿಕಾದಲ್ಲೂ ಈ ಸೈಟ್‌ಗಳು ಹೆಚ್ಚು ಜನಪ್ರಿಯವಾಗಿವೆ ಮತ್ತು ಭಾರತಕ್ಕೂ ಇವು ಉತ್ಪನ್ನಗಳನ್ನು ಆಮದು ಮಾಡುತ್ತವೆ.

#1
ಯುಎಸ್‌ನಲ್ಲಿ ಹೆಚ್ಚು ಜನಪ್ರಿಯವಾಗಿರುವ ಶಾಪಿಂಗ್ ವೆಬ್‌ಸೈಟ್ ಆಗಿದೆ ಅಮೆಜಾನ್.ಕಾಮ್. ಭಾರತದಲ್ಲಿ ಕೂಡ ಶಾಪಿಂಗ್‌ಗೆ ಹೇಳಿ ಮಾಡಿಸಿದ ಸೈಟ್ ಎಂಬ ಬಿರುದಿಗೆ ಅಮೆಜಾನ್ ಪಾತ್ರವಾಗಿದೆ.

#2
ಇಬೇನ ಗ್ಲೋಬಲ್ ಈಸಿಬೈ ಪ್ರೊಗ್ರಾಮ್ ಅಂತರಾಷ್ಟ್ರೀಯ ವೆಬ್‌ಸೈಟ್‌ನಿಂದ ಭಾರತದಲ್ಲಿ ಸರಕುಗಳನ್ನು ಆದೇಶಿಸಲು ನಿಮ್ಮನ್ನು ಅನುಮತಿಸುತ್ತದೆ. ಗ್ಯಾಜೆಟ್‌ಗಳ ಮೇಲಿನ ಡೀಲ್‌ಗಳನ್ನು ನಿಮ್ಮದಾಗಿಸಿಕೊಳ್ಳಲು ಇದು ಉತ್ತಮ ತಾಣವಾಗಿದ್ದು, ಮಾರಾಟ ಮಾಡುವವರ ಪ್ರತಿಕ್ರಿಯೆಯನ್ನು ನೀವು ಪರಿಶೀಲಿಸುವುದು ಅತ್ಯಗತ್ಯವಾಗಿದೆ.

#3
ಆನ್‌ಲೈನ್ ಸ್ಟೋರ್‌ಗಳಲ್ಲಿ ಹೆಚ್ಚು ಜನಪ್ರಿಯವಾಗಿರುವುದು ನ್ಯೂ ಎಗ್ ಆಗಿದೆ. ಇತ್ತೀಚೆಗೆ ತಾನೇ ಈ ವೆಬ್‌ಸೈಟ್ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಆರಂಭಿಸಿದೆ.

#4
ಬ್ಲ್ಯೂಟೂತ್ ಉಳ್ಳ ಸ್ಪೀಕರ್ ಅಥವಾ ಕೀಬೋರ್ಡ್ ಕ್ಲೀನಿಂಗ್ ಪುಟ್ಟಿಯುಳ್ಳ ಗ್ಯಾಜೆಟ್‌ಗಳನ್ನು ನೀವು ಬಯಸುವುದಾದರೆ ಥಿಂಕ್ ಗೀಕ್ ಉತ್ತಮವಾಗಿದೆ. ಇದರ ಗ್ಯಾಜೆಟ್ ವಿಭಾಗ ನಿಜಕ್ಕೂ ಅತ್ಯುತ್ತಮವಾಗಿದೆ.

#5
ಫೋಟೋಗ್ರಫಿಗೆ ಸಂಬಂಧಿಸಿದ ಉಪಕರಣಗಳು ನಿಮಗೆ ಬೇಕೆನಿಸಿದಲ್ಲಿ, ಬಿ ಏಂಡ್ ಎಚ್ ಫೋಟೋ ವೀಡಿಯೊವನ್ನು ನೀವು ಪರಿಶೀಲಿಸಬೇಕಾಗುತ್ತದೆ. ಫೋಟೋ, ಆಡಿಯೊ ಮತ್ತು ವೀಡಿಯೊ ರೆಕಾರ್ಡಿಂಗ್ ಸಂಬಂಧಿಸಿದ ಉಪಕರಣಗಳನ್ನು ನಿಮಗಿಲ್ಲಿ ಖರೀದಿಸಬಹುದಾಗಿದೆ.

#6
ಗ್ಯಾಜೆಟ್ ಅಲ್ಲದ ವರ್ಗವುಳ್ಳ ವೆಬ್‌ಸೈಟ್ ಅನ್ನು ನೀವು ಹುಡುಕುತ್ತಿದ್ದೀರಿ ಎಂದಾದಲ್ಲಿ ಓವರ್ ಸ್ಟಾಕ್ ಅತ್ಯುನ್ನತವಾಗಿದೆ. ಇಲ್ಲಿ ನಿಮಗೆ ಆಭರಣಗಳು, ಪೀಠೋಪಕರಣಗಳು, ಸುಗಂಧ ದ್ರವ್ಯಗಳನ್ನು ಖರೀದಿಸಬಹುದಾಗಿದೆ.

#7
ಯುಎಸ್‌ನಿಂದ ನೀವು ಖರೀದಿಸುತ್ತಿದ್ದೀರಿ ಎಂದಾದಲ್ಲಿ, ಟಾಯ್‌ಸರ್ಸ್ ಉತ್ತಮ ಆಯ್ಕೆಯಾಗಿದೆ. ಮಕ್ಕಳಿಗಾಗಿ ಉತ್ತಮ ಆಟಿಕೆಗಳನ್ನು ಈ ವೆಬ್‌ಸೈಟ್ ಮೂಲಕ ನಿಮಗೆ ಖರೀದಿಸಬಹುದಾಗಿದೆ.

#8
ಯುಎಸ್‌ನಿಂದ ನೀವು ಬಟ್ಟೆಗಳನ್ನು ಖರೀದಿಸುತ್ತಿದ್ದೀರಿ ಎಂದಾದಲ್ಲಿ, ಮೆಕೀಸ್ ನಿಮಗೆ ಖಂಡಿತ ಉತ್ತಮವಾಗಿದೆ. ಚಳಿಗಾಲದ ಉತ್ತಮ ಉಡುಗೆಗಳನ್ನು ನಿಮಗೆ ಯುಎಸ್‌ನಿಂದ ಈ ತಾಣದ ಮೂಲಕ ಖರೀದಿಸಬಹುದು.

#9
ಮಾರಾಟಕ್ಕಾಗಿ ತಮ್ಮ ಉತ್ಪನ್ನಗಳನ್ನು ಇಲ್ಲಿ ಪ್ರಸ್ತುತಪಡಿಸಬಹುದಾಗಿದ್ದು ಇದು ಉತ್ತಮ ಮಾರುಕಟ್ಟೆ ಮೌಲ್ಯವನ್ನು ಒದಗಿಸುತ್ತದೆ.

#10
ವ್ಯಕ್ತಿಗತ ಕೊಡುಗೆಗಳನ್ನು ನೀವು ಖರೀದಿಸುತ್ತಿದ್ದೀರಿ ಎಂದಾದಲ್ಲಿ, ಕೇಫ್ ಪ್ರೆಸ್ ನಿಮಗೆ ಒಳ್ಳೆಯ ಆಯ್ಕೆಯಾಗಿದೆ. ಇಲ್ಲಿ ಟೀಶರ್ಟ್, ಪೋಸ್ಟರ್‌ಗಳು, ಪಿಲ್ಲೋ ಮುಂತಾದ ಉತ್ಪನ್ನಗಳನ್ನು ನೀವು ಕೊಳ್ಳಬಹುದು.


Click it and Unblock the Notifications








