Home
ಸುದ್ದಿಜಾಲ

ಬ್ಲ್ಯಾಕ್‌ಶಾರ್ಕ್‌ 3 ಮತ್ತು 3 ಪ್ರೊ ಗೇಮಿಂಗ್‌ ಸ್ಮಾರ್ಟ್‌ಫೋನ್‌ ಬಿಡುಗಡೆ!

ಇತ್ತೀಚಿನ ದಿನಗಳಲ್ಲಿ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳಿಗೂ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಟೆಕ್ನಾಲಜಿ ಆಧಾರಿತ ಗೇಮಿಂಗ್‌ಗಳಿಗೆ ಇಂದಿನ ಯುವಜನತೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದನ್ನೇ ಆಧಾರವಾಗಿಟ್ಟು ಹಲವು ಕಂಪೆನಿಗಳು ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿವೆ. ಇವುಗಳಲ್ಲಿ ಬ್ಲ್ಯಾಕ್ ಶಾರ್ಕ್‌ ಸ್ಮಾರ್ಟ್‌ಫೋನ್‌ ಕಂಪೆನಿ ಕೂಡ ಒಂದಾಗಿದೆ. ಇದೀಗ ಬ್ಲ್ಯಾಕ್‌ ಶಾರ್ಕ್‌ ಕಂಪೆನಿ ಎರಡು ಹೊಸ ಆವೃತ್ತಿಯ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ.

ಹೌದು

ಹೌದು, ಚೀನಾದ ಜನಪ್ರಿಯ ಗೇಮಿಂಗ್‌ ಸ್ಮಾರ್ಟ್‌ಫೋನ್‌ ಕಂಪೆನಿ ಬ್ಲ್ಯಾಕ್‌ಶಾರ್ಕ್‌ ತನ್ನ ಹೊಸ ಆವೃತ್ತಿಯ ಬ್ಲ್ಯಾಕ್‌ಶಾರ್ಕ್‌ 3 ಹಾಗೂ ಬ್ಲ್ಯಾಕ್‌ಶಾರ್ಕ್‌ 3 ಪ್ರೊ ಸ್ಮಾರ್ಟ್‌ಫೋನ್‌ಗಳನ್ನ ಲಾಂಚ್‌ ಮಾಡಿದೆ. ಇದರಲ್ಲಿ ಬ್ಲ್ಯಾಕ್‌ಶಾರ್ಕ್‌ 3ಪ್ರೊ 7.1 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನ ಹೊಂದಿದ್ದು, ಇದು 90Hz ಅನ್ನು ಒಳಗೊಂಡಿದೆ. ಜೊತೆಗೆ ಸ್ನಾಪ್‌ಡ್ರಾಗನ್‌ 865 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇದಲ್ಲದೆ ಬ್ಲ್ಯಾಕ್‌ ಶಾರ್ಕ್‌ 3 ಹಾಗೂ 3ಪ್ರೊ ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ತಿಳಿಸಿಕೊಡ್ತೀವಿ ಈ ಲೇಖನವನ್ನ ಓದಿ.

ಬ್ಲ್ಯಾಕ್‌ಶಾರ್ಕ್‌ 3 ಡಿಸ್‌ಪ್ಲೇ

ಬ್ಲ್ಯಾಕ್‌ಶಾರ್ಕ್‌ 3 ಡಿಸ್‌ಪ್ಲೇ

ಬ್ಲ್ಯಾಕ್‌ಶಾರ್ಕ್‌ 3 ಗೇಮಿಂಗ್‌ ಸ್ಮಾರ್ಟ್‌ಫೋನ್‌ 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಮತ್ತು 270Hz ಟಚ್‌ ಸ್ಯಾಂಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಗೇಮಿಂಗ್‌ ಆಡುವಾಗ 24ms ಟಚ್‌ ರೆಸ್ಪಾನ್ಸ್‌ ಟೈಂ ಮತ್ತು 28ms ಮಲ್ಟಿ ಫಿಂಗರ್‌ ಟಚ್‌ ರೆಸ್ಪಾನ್ಸ್‌ ಟೈಂ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆ ಅನುಪಾತವನ್ನು ಹೊಂದಿದ್ದು, ಗೇಮಿಂಗ್‌ನಲ್ಲಿ ಉತ್ತಮ ಅನುಭವ ನೀಡಲಿದೆ.

ಬ್ಲ್ಯಾಕ್‌ಶಾರ್ಕ್‌ 3 ಪ್ರೊಸೆಸರ್‌

ಬ್ಲ್ಯಾಕ್‌ಶಾರ್ಕ್‌ 3 ಪ್ರೊಸೆಸರ್‌

ಈ ಗೇಮಿಂಗ್‌ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 865 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 10ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಇದು ಅಡ್ರಿನೊ 650 ಗ್ರಾಫಿಕ್ಸ್‌ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 12GB RAM ಮತ್ತು 128GB ಹಾಗೂ 12GB RAM ಮತ್ತು 256GB ವೇರಿಯೆಂಟ್‌ ಆಯ್ಕೆಯ ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಿಕೊಳ್ಳಲು ಯಾವುದೇ ಅವಕಾಶ ನೀಡಲಾಗಿಲ್ಲ.

ಬ್ಲ್ಯಾಕ್‌ಶಾರ್ಕ್‌ 3 ಕ್ಯಾಮೆರಾ

ಬ್ಲ್ಯಾಕ್‌ಶಾರ್ಕ್‌ 3 ಕ್ಯಾಮೆರಾ

ಬ್ಲ್ಯಾಕ್‌ಶಾರ್ಕ್‌ ಗೇಮಿಂಗ್‌ ಸ್ಮಾರ್ಟ್‌ಫೋನ್‌ನಲ್ಲಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ನೀಡಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್‌ ಆಂಗಲ್‌ ಶೂಟರ್‌ ಸೆನ್ಸಾರ್‌, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ.

ಬ್ಲ್ಯಾಕ್‌ಶಾರ್ಕ್‌ 3 ಬ್ಯಾಟರಿ ಮತ್ತು ಇತರೆ

ಬ್ಲ್ಯಾಕ್‌ಶಾರ್ಕ್‌ 3 ಬ್ಯಾಟರಿ ಮತ್ತು ಇತರೆ

ಇದು 4,720mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ನೀಡಲಾಗಿದ್ದು, ಇದು 65W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಸ್ಯಾಂಡ್‌ವಿಚ್‌ ಕೂಲಿಂಗ್‌ ಸಿಸ್ಟಮ್‌ ಅನ್ನು ನೀಡಲಾಗಿದ್ದು,100mm ಕೂಲಿಂಗ್‌ ಯೂನಿಟ್ಸ್‌ ಅನ್ನು ನೀಡಲಾಗಿದೆ. ಇದಲ್ಲದೆ ಕ್ಲಿಪ್ ಆನ್‌ ಐಸ್‌ ಕೂಲಿಂಗ್‌ ಎಕ್ಸ್ಟ್ರಾನಲ್‌ ಪ್ಯಾನ್‌ ಅನ್ನು ಸಹ ನೀಡಲಾಗಿದೆ. ಜೊತೆಗೆ ಇದೇ ಮೊದಲ ಭಾರಿಗೆ ವಾಯ್ಸ್‌ ಕಂಟ್ರೋಲ್‌ ಫೀಚರ್ಸ್‌ ಅನ್ನ ಈ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಲಾಗಿದೆ.

ಬ್ಲ್ಯಾಕ್‌ಶಾರ್ಕ್‌ 3 ಪ್ರೊ

ಬ್ಲ್ಯಾಕ್‌ಶಾರ್ಕ್‌ 3 ಪ್ರೊ

ಬ್ಲ್ಯಾಕ್‌ಶಾರ್ಕ್‌ 3 ಪ್ರೊ 7.1 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಗೇಮಿಂಗ್‌ನಲ್ಲಿ 21mm ಲಾಂಗ್‌ ಮತ್ತು 1.5mm ಟಚ್‌ ಸೆನ್ಸ್‌ ಅನ್ನ ನೀಡಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕೂಡ ಸ್ನಾಪ್‌ಡ್ರಾಗನ್ 865 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 10ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ 8GB RAM ಮತ್ತು 256GB ಹಾಗೂ 12GB RAM ಮತ್ತು 256GB ವೇರಿಯೆಂಟ್‌ ಆಯ್ಕೆಯ ಆಂತರಿಕ ಸ್ಟೋರೇಜ್‌ ಸಾಮರ್ಥ್ಯವನ್ನ ಹೊಂದಿದೆ. ಕ್ಯಾಮೆರಾ ಮಾದರಿಯಲ್ಲಿ ಬ್ಲ್ಯಾಕ್‌ಶಾರ್ಕ್‌ 3 ಮಾದರಿಯನ್ನೇ ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದ್ದು, 65w ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳು ವೈಫೈ ಹಾಗೂ ಯುಎಸ್‌ಬಿ-ಸಿ ಫೋರ್ಟ್ ಅನ್ನು ಬೆಂಬಲಿಸಲಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಬ್ಲ್ಯಾಕ್‌ಶಾರ್ಕ್‌ 3 ಆವೃತ್ತಿಯ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಲ್ಯಾಕ್‌ಶಾರ್ಕ್‌ 3 12GB RAM ಮತ್ತು 128GB ಸಾಮರ್ಥ್ಯದ ಗೇಮಿಂಗ್‌ ಸ್ಮಾರ್ಟ್‌ಫೋನ್‌ನ ಬೆಲೆ RMB 3,799 (ಅಂದಾಜು 40,264.ರೂ) ಆಗಿದ್ದರೆ, 12GB RAM ಮತ್ತು 256GB ಆಯ್ಕೆಯ ಸ್ಮಾರ್ಟ್‌ಫೋನ್‌ ಬೆಲೆ RMB 3,999 (ಅಂದಾಜು 42,282.ರೂ) ಆಗಿದೆ. ಇನ್ನು ಬ್ಲ್ಯಾಕ್‌ ಶಾರ್ಕ್ 3ಪ್ರೊ 8GB RAM ಮತ್ತು 256GB ಸಾಮರ್ಥ್ಯದ ಗೇಮಿಂಗ್‌ ಸ್ಮಾರ್ಟ್‌ಫೋನ್‌ ಬೆಲೆ RMB 4,699(ಸುಮಾರು 49,612.ರೂ) ಆಗಲಿದ್ದು, 12GB RAM ಮತ್ತು 256GB ಸಾಮರ್ಥ್ಯದ ಆಯ್ಕೆಗೆ RMB 4,999(ಸುಮಾರು 53,014.ರೂ) ಬೆಲೆಯಿದೆ. ಇವುಗಳಲ್ಲಿ ಬ್ಲ್ಯಾಕ್‌ಶಾರ್ಕ್‌ 3 ಗೇಮಿಂಗ್‌ ಸ್ಮಾರ್ಟ್‌ಫೋನ್‌ ಇದೇ ಮಾರ್ಚ್‌ 6ರಿಂದ ಲಭ್ಯವಾದರೆ. ಪ್ರೊ 3ಗೇಮಿಂಗ್‌ ಸ್ಮಾರ್ಟ್‌ಫೋನ್‌ ಮಾರ್ಚ್‌ 8 ರಿಂದ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
The Black Shark 3 series has been launched in China. The company has also launched the Pro version of the Black Shark 3 device.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+