ಟೆನ್ಸೆಂಟ್ ಬ್ಲ್ಯಾಕ್ ಶಾರ್ಕ್ 3 ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧತೆ!
ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಪ್ರಖ್ಯಾತಿ ಪಡೆದಿದ್ದು, ಗೇಮಿಂಗ್ ಅನುಭವ ನೀಡುವುದಕ್ಕಾಗಿಯೇ ಹಲವಾರು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈಗಾಗ್ಲೆ ಹಲವು ಕಂಪೆನಿಗಳು ಆಕರ್ಷಕ ಮಾದರಿಯ ಗೇಮಿಂಗ್ ಸ್ಮಾರ್ಟ್‌ಫೋನ್‌ಗಾಳ ಪರಿಚಯಿಸಿವೆ, ಇದರಲ್ಲಿ ಬ್ಲ್ಯಾಕ್ ಶಾರ್ಕ್ ಕಂಪೆನಿ ಕೂಡ ಒಂದಾಗಿದೆ. ಚೀನಾ ಮೂಲದ ಬ್ಲ್ಯಾಕ್‌ಶಾರ್ಕ್ ಗೇಮಿಂಗ್ ಸ್ಮಾರ್ಟ್‌ಫೋನ್ ಕಂಪೆನಿ ಇದೀಗ ಹೊಸ ಮಾದರಿಯ ಗೇಮಿಂಗ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಹೌದು, ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಬ್ಲ್ಯಾಕ್ ಶಾರ್ಕ್ ತನ್ನ ಮುಂದಿನ ತಲೆಮಾರಿನ ಬ್ಲ್ಯಾಕ್ ಶಾರ್ಕ್ 3 ಗೇಮಿಂಗ್ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಪ್ಲ್ಯಾನ್ ರೂಪಿಸಿಕೊಂಡಿದೆ. ಇದೇ ಮಾರ್ಚ್ 3 ರಂದು ಚೀನಾದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಬ್ಲ್ಯಾಕ್ ಶಾರ್ಕ್ 3 ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿದ್ದು, ಇದನ್ನು ಟೆನ್ಸೆಂಟ್ ಬ್ಲ್ಯಾಕ್ ಶಾರ್ಕ್ 3 ಎಂದು ಹೆಸರಿಸಬಹುದು ಎಂದು ನಿರೀಕ್ಷಿಸಲಾಗಿದೆ. PUBG ಗೇಮ್‌ನಂತಹ ಗೇಮಿಂಗ್‌ಗಳನ್ನ ಅನುಭವಿಸಲು ಈ ಸ್ಮಾರ್ಟ್‌ಫೋನ್ ಉತ್ತಮ ಆಯ್ಕೆಯಾಗಲಿದೆ ಎಂದು ಹೇಳಲಾಗ್ತಿದೆ.

ಟೆನ್ಸೆಂಟ್ ಬ್ಲ್ಯಾಕ್ ಶಾರ್ಕ್ 3
ಟೆನ್ಸೆಂಟ್ ಬ್ಲ್ಯಾಕ್ ಶಾರ್ಕ್ 3 ಸ್ಮಾರ್ಟ್‌ಫೋನ್ 5G ನೆಟ್‌ವರ್ಕ್ ಬೆಂಬಲಿಸುವ ಮೊದಲ ಗೇಮಿಂಗ್ ಸ್ಮಾರ್ಟ್‌ಫೋನ್ ಆಗಿದ್ದು, ಇದು ಉತ್ತಮ ಗೇಮಿಂಗ್ ಅನುಭವ ನೀಡಲಿದೆ ಎಂದು ಹೇಳಲಾಗ್ತಿದೆ. ಸದ್ಯ ಲೀಕ್ ಮಾಹಿತಿ ಪ್ರಕಾರ ಟೆನ್ಸೆಂಟ್ ಬ್ಲ್ಯಾಕ್ ಶಾರ್ಕ್ 3 ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ ಬರಲಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ನ ಬಳಕೆದಾರರು 60Hz ಮತ್ತು 90Hz ನಡುವೆ ಬದಲಾಯಿಸುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ಅಂದಾಜಿಸಲಾಗಿದೆ.

ಟೆನ್ಸೆಂಟ್ ಬ್ಲ್ಯಾಕ್ ಶಾರ್ಕ್ 3 ವಿನ್ಯಾಸ
ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಉತ್ತಮ ವಿನ್ಯಾಸವನ್ನ ಹೊಂದಿದ್ದು, ಗೇಮಿಂಗ್‌ನಲ್ಲಿ ಅತ್ಯುತ್ತಮ ಅನುಭವವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಈ ಡಿಸ್‌ಪ್ಲೇ ಉತ್ತಮ ರಿಪ್ರೇಶ್ ರೇಟ್ ಅನ್ನು ಹೊಂದಿರುವುದರಿಂದ ಸ್ಕ್ರೀನ್ ರೆಸಲ್ಯೂಶನ್ ಉತ್ತಮವಾಗಿರಲಿದೆ ಎಂದು ಹೇಳಲಾಗ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 865 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಟೆನ್ಸೆಂಟ್ ಬ್ಲ್ಯಾಕ್ ಶಾರ್ಕ್ 3 ವಿಶೇಷತೆ
ಗೇಮಿಂಗ್ ಸ್ಮಾರ್ಟ್‌ಫೋನ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸುವ ನಿರೀಕ್ಷೆ ಹುಟ್ಟು ಹಾಕಿರುವ ಟೆನ್ಸೆಂಟ್ ಬ್ಲ್ಯಾಕ್ ಶಾರ್ಕ್ 3 ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಸೆಟ್‌ಆಪ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ ಈ ಸ್ಮಾರ್ಟ್‌ಫೋನ್ ಹೊಂದಿರುವ RAM ಮತ್ತು ಇಂಟರ್ ಸ್ಟೋರೇಜ್ ಸಾಮರ್ಥ್ಯದ ಬಗ್ಗೆ ಕೂಡ ಯಾವುದೇ ಮಾಹಿತಿಯನ್ನ ಕಂಪೆನಿ ಹಂಚಿಕೊಂಡಿಲ್ಲ. ಆದರೆ ಉತ್ತಮ ಸ್ಟೋರೇಜ್ ಸಾಮರ್ಥ್ಯವನ್ನ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಬೆಲೆ ಮತ್ತು ಲಭ್ಯತೆ
ಬ್ಲ್ಯಾಕ್ ಶಾರ್ಕ್ ಕಂಪೆನಿಯ ಟೆನ್ಸೆಂಟ್ ಬ್ಲ್ಯಾಕ್ ಶಾರ್ಕ್ 3 ಸ್ಮಾರ್ಟ್‌ಫೋನ್ ಮಾರ್ಚ್ 3ರಂದು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಸದ್ಯ ಇದರ ಬೆಲೆ ಏನು ಅನ್ನೊದರ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ ಭಾರತೀಯ ಮಾರುಕಟ್ಟೆಗೆ ಯಾವಾಗ ಎಂಟ್ರಿ ನೀಡಲಿದೆ ಅನ್ನೊದರ ಬಗ್ಗೆ ಕೂಡ ಯಾವುದೇ ಗುಟ್ಟನ್ನು ಕಂಪೆನಿ ಬಿಟ್ಟುಕೊಟ್ಟಿಲ್ಲ.


Click it and Unblock the Notifications








