Subscribe to Gizbot

ಬ್ಲ್ಯಾಕ್‌ಬೆರ್ರಿ ಕ್ಲಾಸಿಕ್ ರೂ 31,990 ಕ್ಕೆ ಮಾರುಕಟ್ಟೆಗೆ ಲಗ್ಗೆ

Written By:

ಬ್ಲ್ಯಾಕ್‌ಬೆರ್ರಿ ರೂ 31,990 ಬೆಲೆಯ ಬ್ಲ್ಯಾಕ್‌ಬೆರ್ರಿ ಕ್ಲಾಸಿಕ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಸ್ನ್ಯಾಪ್‌ಡೀಲ್ ಮತ್ತು ಬ್ಲ್ಯಾಕ್‌ಬೆರ್ರಿ ಸ್ಟೋರ್‌ಗಳಲ್ಲಿ ಈ ಫೋನ್ ಲಭ್ಯವಿದ್ದು ಇಂದಿನಿಂದ ಲಭ್ಯವಾಗುತ್ತಿದೆ.

ಕೆನಡಾದ ಈ ಕಂಪೆನಿ ಬ್ಲ್ಯಾಕ್‌ಬೆರ್ರಿ ಕ್ಲಾಸಿಕ್ ಸ್ಮಾರ್ಟ್‌ಫೋನ್ ಅನ್ನು ಕಳೆದ ತಿಂಗಳು ಲಾಂಚ್ ಮಾಡಿದ್ದು, ಇದರ ಬೆಲೆ ರೂ 30,800 ಎಂದು ನಿಗದಿಪಡಿಸಲಾಗಿತ್ತು. ಬ್ಲ್ಯಾಕ್‌ಬೆರ್ರಿ ಕ್ಲಾಸಿಕ್ ಕ್ವಾರ್ಟಿ ಸ್ಮಾರ್ಟ್‌ಫೋನ್, 3.5 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ಪಿಕ್ಸೆಲ್ ರೆಸಲ್ಯೂಶನ್ 720x720 ಆಗಿದೆ. ಫೋನ್‌ 1.5GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಎಸ್4 ಪ್ಲಸ್ (MSM8960) ಪ್ರೊಸೆಸರ್ ಇದರೊಂದಿಗೆ 2 ಜಿಬಿ RAM ಅನ್ನು ಫೋನ್ ಹೊಂದಿದೆ. ಇದು 16 ಜಿಬಿ ಆಂತರಿಕ ಸಂಗ್ರಹಣೆಯನ್ನು ಪಡೆದುಕೊಂಡಿದ್ದು, ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದಾಗಿದೆ.

ಬ್ಲ್ಯಾಕ್‌ಬೆರ್ರಿ ಕ್ಲಾಸಿಕ್ ರೂ 31,990 ಕ್ಕೆ ಮಾರುಕಟ್ಟೆಗೆ ಲಗ್ಗೆ

ಇನ್ನು ಫೋನ್‌ನ ರಿಯರ್ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದ್ದು ಹಿಂಭಾಗದಲ್ಲಿ ಎಲ್ಇಡಿ ಫ್ಲ್ಯಾಶ್ ಅನ್ನು ಡಿವೈಸ್ ಪಡೆದುಕೊಂಡಿದೆ. ಇದು 1080p ವೀಡಿಯೊಗಳನ್ನು ದಾಖಲಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಫೋನ್ ಮುಂಭಾಗದಲ್ಲಿ 2 ಮೆಗಾಪಿಕ್ಸೆಲ್ ಆಗಿದ್ದು ಸಂಪರ್ಕ ವಿಶೇಷತೆಗಳತ್ತ ನೋಡಹೊರಟರೆ ಇದು ವೈಫೈ, 4ಜಿ ಎಲ್‌ಟಿಇ, GPRS/ EDGE, GPS/ A-GPS, Glonass, ಬ್ಲ್ಯೂಟೂತ್, ಮತ್ತು NFC ಯನ್ನು ಪಡೆದುಕೊಂಡಿದೆ.

ಫೋನ್‌ನ ಬ್ಯಾಟರಿ ಶಕ್ತಿ 2515mAh ಆಗಿದ್ದು 17.2 ಗಂಟೆಗಳ ಟಾಕ್ ಟೈಮ್ ಅನ್ನು ಫೋನ್ ಒದಗಿಸಲಿದೆ. ಅಮೆಜಾನ್ ಅಪ್ಲಿಕೇಶನ್ ಸ್ಟೋರ್ ಅನ್ನು ಡಿವೈಸ್ ಹೊಂದಿದೆ.

English summary
BlackBerry has launched the BlackBerry Classic (Images) in India, priced at Rs. 31,990. The smartphone will be available to purchase via Snapdeal and BlackBerry exclusive stores from Thursday itself.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot