ಜನವರಿ 4ರ ನಂತರ ಈ ಕಂಪೆನಿಯ ಫೋನ್‌ಗಳು ವರ್ಕ್‌ ಆಗಲ್ಲ!

|

ಬ್ಲ್ಯಾಕ್‌ಬೆರಿ ಒಂದು ಕಾಲದಲ್ಲಿ ಮೊಬೈಲ್‌ ಮಾರುಕಟ್ಟೆಯಲ್ಲಿ ಟಾಪ್‌ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಪ್ರಾರಂಭದ ದಿನಗಳಲ್ಲಿ ಟಾಪ್‌ ಬ್ರಾಂಡ್‌ ಎನಿಸಿಕೊಂಡಿದ್ದ ಬ್ಲ್ಯಾಕ್‌ಬೆರಿ ಇಂದಿನ ದಿನಗಳಲ್ಲಿ ಟೆಕ್‌ ವಲಯದಲ್ಲಿ ಹೆಚ್ಚೆನೂ ಸೌಂಡ್‌ ಮಾಡುತ್ತಿಲ್ಲ. ಸ್ಯಾಮ್‌ಸಂಗ್‌, ಶಿಯೋಮಿ, ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ನಡುವೆ ಕಳೆದುಹೋಗಿರುವ ಬ್ಲ್ಯಾಕ್‌ಬೆರಿ ಕಂಪೆನಿ ಇದೀಗ ತನ್ನಪ್ರಮುಖ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಬ್ಯಾಕ್‌ಬೆರಿ ಕಂಪನಿಯು ತನ್ನ ಸ್ಮಾರ್ಟ್‌ಫೋನ್‌ಗಳು ಜನವರಿ 4 ರಿಂದ ಒದಗಿಸುವ ಸೇವೆಗಳನ್ನು ಕಳೆದುಕೊಳ್ಳುತ್ತದೆ ಎಂದು ಹೇಳಿದೆ.

ಬ್ಲ್ಯಾಕ್‌ಬೆರಿ

ಹೌದು, ಬ್ಲ್ಯಾಕ್‌ಬೆರಿ ಕಂಪೆನಿಯ ಸ್ಮಾರ್ಟ್‌ಫೋನ್‌ ಬಳಸುವವರಿಗೆ ಇದು ಶಾಕಿಂಗ್‌ ನ್ಯೂಸ್‌. ನಿಮ್ಮ ಬಳಿ ಬ್ಲ್ಯಾಕ್‌ಬೆರಿ ಫೋನ್‌ಗಳು ಇದ್ದರೆ ಜನವರಿ 4 ರಿಂದ ಅವುಗಳು ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಏಕೆಂದರೆ ಜನವರಿ 4 ರಿಂದ ಬ್ಲ್ಯಾಕ್‌ಬೆರಿ ಫೋನ್‌ಗಳು ಪ್ರಮುಖ ಸೇವೆಗಳನ್ನು ಕಳೆದುಕೊಳ್ಳುತ್ತದೆ. ಅಂದರೆ ಇನ್ಮುಂದೆ ಬ್ಲ್ಯಾಕ್‌ಬೆರಿ ಫೋನ್‌ಗಳು ಮೊಬೈಲ್ ನೆಟ್‌ವರ್ಕ್ ಸೇರಿದಂತೆ ಯಾವುದೇ ನೆಟ್‌ವರ್ಕ್‌ಗಳಿಗೆ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಹಾಗಾದ್ರೆ ಬ್ಲ್ಯಾಕ್‌ಬೆರಿ ಕಂಪೆನಿ ಇಂತಹದೊಂದು ನಿರ್ಧಾರಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬ್ಲಾಕ್‌ಬೆರಿ

ಬ್ಲಾಕ್‌ಬೆರಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡು ಬಹಳ ದಿನಗಳಾಗಿವೆ. ಆದರೆ ಒಂದು ಕಾಲದಲ್ಲಿ ಬ್ಲ್ಯಾಕ್‌ಬೆರಿ ಫೋನ್‌ಗಳು ಎಂದರೆ ಇಂದಿನ ಐಫೋನ್‌ ಫೋನ್‌ಗಳಷ್ಟೇ ಬೇಡಿಕೆ ಪಡೆದುಕೊಂಡಿದ್ದವು. ಬ್ಲ್ಯಾಕ್‌ಬೆರಿ ಫೋನ್‌ಗಳು ಗುಣಮಟ್ಟ ಹಾಗೂ ಕೀಬೋರ್ಡ್-ಆಧಿಪತ್ಯದ ವಿನ್ಯಾಸದಿಂದ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಅದರಲ್ಲೂ ಹೆಚ್ಚಿನ ಭದ್ರತಾ ಮಟ್ಟಗಳು ಮತ್ತು ಗೌಪ್ಯತೆಯ ಫೀಚರ್ಸ್‌ಗಳಲ್ಲಿ ಬ್ಲ್ಯಾಕ್‌ಬೆರಿ ಫೋನ್‌ ಸೇವೆಗಳು ಉನ್ನತ ಮಟ್ಟದಲ್ಲಿತ್ತು. ಆದರೆ ಸ್ಮಾರ್ಟ್‌ಫೋನ್‌ಗಳ ಎಂಟ್ರಿ ಶೂರುವಾದ ನಂತರ ಬ್ಲ್ಯಾಕ್‌ಬೆರಿ ತೆರೆಮರೆಗೆ ಸರಿದಿದ್ದು ಇತಿಹಾಸ.

ಫೋನ್‌

ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದ ನಂತರ ಬ್ಲ್ಯಾಕ್‌ಬೆರಿ ಹೆಚ್ಚು ಸೌಂಡ್‌ ಮಾಡಲಿಲ್ಲ. ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಈಗ ಟಚ್‌ಸ್ಕ್ರೀನ್ ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸಿದೆ. ಆದರೆ ಬ್ಲ್ಯಾಕ್‌ಬೆರಿ ತನ್ನ ಮೊದಲ ಟಚ್‌ಸ್ಕ್ರೀನ್ ಫೋನ್ ಅನ್ನು ಬಿಡುಗಡೆ ಮಾಡಲು ಕನಿಷ್ಠ ಒಂದು ವರ್ಷ ತೆಗೆದುಕೊಂಡಿತು. ಬ್ಲ್ಯಾಕ್‌ಬೆರಿಯ ಮೊದಲ ಟಚ್‌ಸ್ಕ್ರೀನ್ ಫೋನ್ ಯಶಸ್ವಿಯಾಗಲಿಲ್ಲ. ಹಾಗೆಯೇ ಕಾರ್ಪೊರೇಟ್ ವಲಯದಲ್ಲಿಯೂ ಹೆಚ್ಚಿನಜನರು ಆಂಡ್ರಾಯ್ಡ್‌ ಮತ್ತು ಐಫೋನ್‌ಗಳ ಕಡೆಗೆ ಹೆಚ್ಚಿನ ಒಲವು ತೋರಿದರ ಪರಿಣಾಮ ಬ್ಲ್ಯಾಕ್‌ಬೆರಿ ಹಿನ್ನಡೆ ಅನುಭವಿಸಿತು.

ಬ್ಲ್ಯಾಕ್‌ಬೆರಿ

ಇದರ ಪರಿಣಾಮ ಇದೀಗ ಬ್ಲ್ಯಾಕ್‌ಬೆರಿ ತನ್ನದೇ ಆದ ಸೇವೆಗಳನ್ನು ತ್ಯಜಿಸಲು ಮತ್ತು ಉತ್ತಮವಾದ ಆಂಡ್ರಾಯ್ಡ್ ಸೇವೆಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. ನೀವು ಬ್ಲ್ಯಾಕ್‌ಬೆರಿ ಕ್ಲಾಸಿಂಗ್ OS 7.1 ಅಥವಾ ಹೊಸ BB 10 ಅನ್ನು ಚಾಲನೆ ಮಾಡುತ್ತಿದ್ದರೆ, ಜನವರಿ 4 2022 ನಂತರ ಫೋನ್ ಕರೆಗಳು, SMS ಗಳು ಮತ್ತು 911 ತುರ್ತು ಕರೆಗಳನ್ನು ಮಾಡುವ ಬೆಂಬಲವನ್ನು ಕಳೆದುಕೊಳ್ಳುತ್ತಾರೆ. ಆದರೆ Wi-Fi, ಮೊಬೈಲ್ ಡೇಟಾದೊಂದಿಗೆ ಬಳಕೆದಾರರು ವಿಶ್ವಾಸಾರ್ಹತೆಯನ್ನು ಅನುಭವಿಸಬಹುದು ಎಂದು ಬ್ಲ್ಯಾಕ್‌ಬೆರಿ ಎಚ್ಚರಿಸಿದೆ. ಇದಲ್ಲದೆ, ಬ್ಲ್ಯಾಕ್‌ಬೆರಿ ಲಿಂಕ್, ಬ್ಲ್ಯಾಕ್‌ಬೆರಿ ಡೆಸ್ಕ್‌ಟಾಪ್ ಮ್ಯಾನೇಜರ್, ಬ್ಲ್ಯಾಕ್‌ಬೆರಿ ಪ್ರೊಟೆಕ್ಟ್, ಬ್ಲ್ಯಾಕ್‌ಬೆರಿ ಮೆಸೆಂಜರ್, ಬ್ಲ್ಯಾಕ್‌ಬೆರಿ ಬ್ಲೆಂಡ್‌ನಂತಹ ಅಪ್ಲಿಕೇಶನ್‌ಗಳು ಸೀಮಿತ ಕಾರ್ಯವನ್ನು ಸಹ ಅನುಭವಿಸುತ್ತವೆ ಎನ್ನಲಾಗಿದೆ.

ಫೋನ್‌

ಇನ್ನು ತನ್ನ ಕಂಪೆನಿಯ FAQ ಪುಟದಲ್ಲಿ, ತನ್ನ ಸಾಧನಗಳಿಗೆ ಒದಗಿಸುವ ಅಪ್ಡೇಟ್‌ಗಳನ್ನು ಇನ್ನು ಮುಂದೆ ಕಳುಹಿಸುವುದಿಲ್ಲ ಎಂದು ಖಚಿತಪಡಿಸಿದೆ. ಇದರರ್ಥ ಈ ಸಾಧನಗಳು ಇನ್ನು ಮುಂದೆ ವೈ-ಫೈ ಮತ್ತು ಸೆಲ್ಯುಲಾರ್ ನೆಟ್‌ವರ್ಕ್‌ಗಳಿಗೆ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಅಂತಿಮವಾಗಿ, ಈ ಸಾಧನಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಇಂದಿನ ದಿನಗಳಲ್ಲಿ ಬ್ಲ್ಯಾಕ್‌ಬೆರಿ ಫೋನ್‌ ಬಳಕೆದಾರರು ಇದ್ದಾರೆಯೇ ಎಂದು ಊಹಿಸುವುದು ಕಷ್ಟ. ಆದರೆ ಒಂದು ವೇಳೆ ಬಳಸುತ್ತಿದ್ದರೆ ಅಂತಹವರ ಫೋನ್‌ಗಳು ಕೂಡ ಇದೀಗ ತಮ್ಮ ಕಾರ್ಯವನ್ನು ನಿಲ್ಲಿಸಲಿವೆ.

Best Mobiles in India

English summary
BlackBerry has confirmed it will no longer send out provisioning updates to its phones, meaning these devices will no longer be able to connect to Wi-Fi and cellular networks.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X