Home
ಸುದ್ದಿಜಾಲ

ಫೇಸ್‌ಬುಕ್-ವಾಟ್ಸ್‌ಆಪ್‌ಗೆ ಸಂಕಷ್ಟ: ಬ್ಲಾಕ್‌ ಬೆರ್ರಿ ಕೋರ್ಟ್‌ನಲ್ಲಿ ಗೆದ್ದರೇ ಗತಿ ಏನು..?

By Srinidhi

ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಮತ್ತು ನಂಬರ್ ಓನ್ ಸೋಶಿಯಲ್ ಮೇಸೆಂಜಿಗ್ ತಾಣ ವಾಟ್ಸ್‌ಆಪ್‌ಗೆ ಸಂಕಷ್ಟ ಎದುರಾಗಿದೆ. ಈ ಎರಡು ಕಂಪನಿಗಳ ವಿರುದ್ಧ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಬ್ಲ್ಯಾಕ್ ಬೆರ್ರಿ ನ್ಯಾಯಾಲಯದ ಮೇಟ್ಟಿಲು ಏರಿದ್ದು, ತನ್ನ ತಂತ್ರಜ್ಞಾವನ್ನು ಕಳುವ ಮಾಡಿರುವ ಆರೋಪವನ್ನು ಫೇಸ್‌ಬುಕ್‌ ಮೇಲೆ ಹೊರಿಸಿದೆ.

ದಿನೇ ದಿನೇ ತನ್ನ ಬಳಕೆದಾರರನ್ನು ಹೆಚ್ಚಿಸಿಕೊಳ್ಳುತ್ತಿರುವ ವಾಟ್ಸ್ಆಪ್ ಒಂದು ಕಡೆಯಾದರೆ, ಜಾಗತಿಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಿಡಿತವನ್ನು ಸಾಧಿಸುತ್ತಿರುವ ಫೇಸ್‌ಬುಕ್ ಸದ್ಯ ಬ್ಲ್ಯಾಕ್ ಬೆರ್ರಿಯಿಂದ ತೊಂದರೆಗೆ ಸಿಲುಕುಕೊಂಡಿದೆ. ತಂತ್ರಜ್ಞಾನದ ಪೇಟೆಂಟ್ ಉಲ್ಲಂಘಿನೆಯ ಆರೋಪವನ್ನು ಎದುರಿಸುತ್ತಿವೆ.

ಮೇಸೆಂಜರ್ ತಂತ್ರಜ್ಞಾನ:

ಮೇಸೆಂಜರ್ ತಂತ್ರಜ್ಞಾನ:

ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ತನ್ನ ಮೇಸೆಂಬರ್ ಮತ್ತು ವಾಟ್ಸ್‌ಆಪ್‌ ನಲ್ಲಿ ಬಳಕೆಸಿಕೊಂಡಿರುವುದು ತಾನು ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ ಎಂದು ಕೇಸು ದಾಖಲಿಸಿರುವ ಬ್ಲ್ಯಾಕ್ ಬೆರ್ರಿ, ತನ್ನ ತಂತ್ರಜ್ಞಾನದ ಪೇಟೆಂಟ್ ಉಲ್ಲಂಘಿಸಿದೆ ಎಂದು ಆರೋಪಿಸಿದೆ.

ಅಮೆರಿಕಾದಲ್ಲಿ ಕೇಸ್‌ ದಾಖಲು:

ಅಮೆರಿಕಾದಲ್ಲಿ ಕೇಸ್‌ ದಾಖಲು:

ಬ್ಲ್ಯಾಕ್ ಬೆರ್ರಿ ಮೆಸೆಂಜರ್ ತಂತ್ರಜ್ಞಾನವನ್ನು ಫೇಸ್‌ಬುಕ್ ತನ್ನ ಮಾಲೀಕತ್ವದ ಮೇಸೆಂಜರ್ ಗಳಲ್ಲಿ ಕದ್ದು ಬಳಸಿಕೊಂಡಿದೆ ಎಂದು ಎಂದು ಅಮೆರಿಕಾದ ನ್ಯಾಯಾಲಯದಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಮೇಸೆಂಜಿಗ್ ಮೇಲೆ ಆರೋಪ

ಮೇಸೆಂಜಿಗ್ ಮೇಲೆ ಆರೋಪ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ವಾಟ್ಸ್‌ಆಪ್ ಮಾತ್ರವಲ್ಲದೆ ಫೇಸ್‌ಬುಕ್ ಮೆಸೆಂಜರ್, ಇನ್‌ಸ್ಟಾಗ್ರಾಮ್, ವರ್ಕ್‌ಪ್ಲೇಸ್ ಚಾಟ್ ಗಳಲ್ಲಿ ಬಳಕೆ ಮಾಡಿಕೊಂಡಿರುವುದು ತನ್ನ ತಂತ್ರಜ್ಞಾನ ಎಂದು ಪ್ರಮುಖ ಮೊಬೈಲ್ ತಯಾರಕ ಕಂಪನಿ ಬ್ಲ್ಯಾಕ್ ಬೆರ್ರಿ ದಾವೆ ಹೂಡಿದೆ.

ಯಾವ ವಿಷಯಕ್ಕೆ:

ಯಾವ ವಿಷಯಕ್ಕೆ:

ಫೇಸ್‌ಬುಕ್ ಮೇಸೆಜ್ ಇನ್‌ಬಾಕ್ಸ್‌ನಲ್ಲಿ ಅನ್‌ರೀಡ್ ಮೆಸೇಜ್ ಇಂಡಿಕೇಟರ್, ಫೋಟೊ ಟ್ಯಾಗ್ ಮುಂತಾದ ತಂತ್ರಜ್ಞಾನಗಳನ್ನು ಬ್ಲ್ಯಾಕ್ ಬೆರ್ರಿಯಿಂದ ಕಳವು ಮಾಡಿದೆ ಎಂದು ಆರೋಪ ಹೊರಿಸಲಾಗಿದೆ.

How to save WhatsApp Status other than taking screenshots!! Kannada
ಆರೋಪ ತಳ್ಳಿ ಹಾಕಿದ ಫೇಸ್‌ಬುಕ್:

ಆರೋಪ ತಳ್ಳಿ ಹಾಕಿದ ಫೇಸ್‌ಬುಕ್:

ಬ್ಲ್ಯಾಕ್ ಬೆರ್ರಿ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಫೇಸ್್ಬುಕ್, ಇದು ನಾವು ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನ ಎಂದು ತಿಳಿಸಿದೆ. ಅಲ್ಲದೇ ಇದಕ್ಕೆ ನ್ಯಾಯಾಲಯದಲ್ಲಿಯೇ ಉತ್ತರಿಸುವುದಾಗಿ ತಿಳಿಸಿದೆ.

Best Mobiles in India

English summary
BlackBerry sues Facebook, WhatsApp, Instagram over patent infringement. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+