ಭಾರತದಲ್ಲಿ ಹೊಸ ಗೇಮಿಂಗ್ ಸೌಂಡ್‌ಬಾರ್ ಪರಿಚಯಿಸಿದ ಬ್ಲೂಪಂಕ್ಟ್! ಬೆಲೆ ಎಷ್ಟು?
ಇಂದಿನ ಜಮಾನದಲ್ಲಿ ಗೇಮಿಂಗ್ ಸೌಂಡ್‌ಬಾರ್‌ಗಳಿಗೆ ಭಾರಿ ಬೇಡಿಕೆಯಿದೆ. ಯುವಜನತೆಯ ಆಶಯಗಳಿಗೆ ಸೂಕ್ತವಾದ ಗೇಮಿಂಗ್ ಸೌಂಡ್‌ಬಾರ್‌ಗಳು ಹೆಚ್ಚಿನ ಬೇಡಿಕೆ ಪಡದುಕೊಂಡಿವೆ. ಇದಕ್ಕೆ ಪೂರಕವಾಗಿ ಬ್ಲೂಪಂಕ್ಟ್ ಕಂಪೆನಿ ಕೂಡ ಹಲವು ಆಕರ್ಷಕ ಸೌಂಡ್‌ಬಾರ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಗೇಮಿಂಗ್ ಸೌಂಡ್‌ಬಾರ್ ಪರಿಚಯಿಸಿದೆ.
ಹೌದು, ಬ್ಲೂಪಂಕ್ಟ್ ಕಂಪೆನಿ ಭಾರತದಲ್ಲಿ ಹೊಸ ಗೇಮಿಂಗ್ ಸೌಂಡ್‌ಬಾರ್ "SBA25" ಅನ್ನು ಮಾಡಿದೆ. ಇದು ಕೈ ಗೆಟಕುವ ಬೆಲೆಯ ಸೌಂಡ್‌ಬಾರ್ ಆಗಿದ್ದು, ಅತ್ಯಾಕರ್ಷಕ ಡಿಸೈನ್ ಪಡೆದುಕೊಂಡಿದೆ. ಹಾಗಾದ್ರೆ ಬ್ಲೂಪಂಕ್ಟ್ ಕಂಪೆನಿಯ ಹೊಸ ಸೌಂಡ್‌ಬಾರ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬ್ಲೂಪಂಕ್ಟ್ ಗೇಮಿಂಗ್ ಸೌಂಡ್‌ಬಾರ್ "SBA25" ಗೇಮರ್‌ಗಳಿಗೆ ಸೂಕ್ತವಾದ ಡಿಸೈನ್ ಪಡೆದಿದೆ. ಇದು ಥಂಪಿಂಗ್ ಬಾಸ್ ಮತ್ತು ಗರಿಗರಿಯಾದ ಆಡಿಯೊದ ಪವರ್ ಪ್ಯಾಕ್ಡ್ ಪ್ಯಾಕೇಜ್ ಅನ್ನು ನೀಡಲಿದೆ. ಜೊತೆಗೆ ಡ್ಯುಯಲ್ ಪ್ಯಾಸಿವ್ ರೇಡಿಯೇಟರ್‌ಗಳಿಂದದ ಉತ್ಪತ್ತಿಯಾಗುವ ಡೀಪ್ ಬಾಸ್, ಹೈ ಮತ್ತು ಮಿಡ್ ಫ್ರೀಕ್ವೆನ್ಸಿಗಳನ್ನು ಸಹ ನೀಡಲಿದೆ. ಇದಲ್ಲದೆ ಸೌಂಡ್‌ಬಾರ್‌ನಲ್ಲಿರುವ ಸ್ಪೀಕರ್‌ಗಳು ಅತ್ಯುತ್ತಮ ಅನುಭವ ನೀಡಲಿವೆ.
ಬ್ಲೂಂಪಕ್ಟ್‌ನ ಈ ಹೊಸ ಗೇಮಿಂಗ್ ಸೌಂಡ್‌ಬಾರ್ ಇತ್ತೀಚಿನ ಬ್ಲೂಟೂತ್ ಆವೃತ್ತಿಯೊಂದಿಗೆ ಬರಲಿದೆ. ಇದು ವ್ಯಾಪಕ ಶ್ರೇಣಿಯನ್ನು ಒಳಗೊಂಡಿದ್ದು, SBA25 ಗೇಮಿಂಗ್ AUX IN, USB IN, Bluetooth, FM ಮತ್ತು TWS ನೊಂದಿಗೆ ಲೋಡ್ ಆಗಲಿದೆ. ಇದಲ್ಲದೆ ಹೆಚ್ಚುವರಿಯಾಗಿ, ಸೌಂಡ್‌ಬಾರ್‌ನ ಪ್ರತಿಯೊಂದು ಸ್ಪೀಕರ್‌ಗಳು ಡೈನಾಮಿಕ್ RGB ಲೈಟ್‌ಗಳಿಂದ ಸುತ್ತುವರೆದಿದ್ದು ಅತ್ಯುತ್ತಮ ಗುಣಮಟ್ಟದ ಅನುಭವ ಪಡೆದುಕೊಳ್ಳಬಹುದಾಗಿದೆ.

ಬ್ಲೂಂಪಕ್ಟ್‌ನ ಈ ಸೌಂಡ್‌ಬಾರ್ 2000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಟರ್ಬೋಪವರ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಜೊತೆಗೆ ಗಂಟೆಗಳ ಕಾಲ ಪ್ಲೇಟೈಮ್ ಅನ್ನು ಒದಗಿಸಲಿದೆ. ಇನ್ನು ಈ ಸೌಂಡ್‌ಬಾರ್ 1,899ರೂ. ಬೆಲೆಯನ್ನು ಹೊಂದಿದೆ. ಇದು ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.
ಇದಲ್ಲದೆ ಬ್ಲೂಪಂಕ್ಟ್ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿ ಪರಿಚಯಿಸಿದೆ. ಈ ಸ್ಮಾರ್ಟ್‌ಟಿವಿ 24 ಇಂಚಿನ HD ರೆಡಿ ಡಿಸ್‌ಪ್ಲೇ ಹೊಂದಿದ್ದು, 300nits ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಎಂತಹ ಪ್ರಕಾಶಮಾನವಾದ ಬೆಳಕಿನಲ್ಲೂ ಸ್ಪಷ್ಟ ವೀಕ್ಷಣೆ ಇದರಿಂದ ಲಭ್ಯವಾಗಲಿದೆ.

ಇದರೊಂದಿಗೆ ಈ ಸ್ಮಾರ್ಟ್‌ಟಿವಿ 20 ವ್ಯಾಟ್ ಸೌಂಡ್ ಔಟ್‌ಪುಟ್ ನೀಡಲಿದ್ದು, ಇದಕ್ಕಾಗಿ ಎರಡು ಬಾಟಮ್-ಫೈರಿಂಗ್ ಸ್ಪೀಕರ್‌ಗಳು ಮತ್ತು ತಲ್ಲೀನಗೊಳಿಸುವ ಆಡಿಯೊ ಅನುಭವಕ್ಕಾಗಿ ಸರೌಂಡ್ ಸೌಂಡ್ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಹಾಗೆಯೇ ಈ ಟಿವಿ ಏರ್ ಸ್ಲಿಮ್ ವಿನ್ಯಾಸವನ್ನು ಪಡೆದಕೊಂಡಿದ್ದು, ಈ ಮೂಲಕ ಅತ್ಯುತ್ತಮ ನೋಟವನ್ನು ಪಡೆದುಕೊಂಡಿದೆ. 3 ಇನ್ 1 ಡಿವೈಸ್ ಆಗಿಯೂ ಈ ಸ್ಮಾರ್ಟ್‌ಟಿಯನ್ನು ಬಳಕೆ ಮಾಡಬಹುದಾಗಿದೆ. ಅಂದರೆ ಇದನ್ನು ಟಿವಿಯಾಗಿಯೂ ಬಳಕೆ ಮಾಡಬಹುದು, ಮಾನಿಟರ್ ಆಗಿಯೂ ಬಳಸಬಹುದು ಹಾಗೂ ಸ್ಮಾರ್ಟ್ ಫೀಚರ್ಸ್‌ಗಳಿಗೂ ಪ್ರವೇಶ ಪಡೆಯಬಹುದಾಗಿದೆ.
ಇನ್ನು ಚಿತ್ರ ಗುಣಮಟ್ಟಕ್ಕಾಗಿ ಡಿಜಿಟಲ್ ನಾಯ್ಸ್ ಫಿಲ್ಟರ್ ಮತ್ತು A+ ಪ್ಯಾನೆಲ್ ಆಯ್ಕೆ ಇದರಲ್ಲಿದ್ದು, ಟಿವಿಯು ಪಿಸಿಗಳು, ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಬಹು ಡಿವೈಸ್‌ಗಳಿಗೆ ಬೆಂಬಲ ನೀಡುತ್ತದೆ. ಹಾಗೆಯೇ ಯುಟ್ಯೂಬ್ ಸೇರಿದಂತೆ ರಿಮೋಟ್‌ನಲ್ಲಿ ಮೀಸಲಾದ ಶಾರ್ಟ್‌ಕಟ್ ಕೀಗಳ ಆಯ್ಕೆ ಇರುವುದರಿಂದ ಬಳಕೆದಾರರಿಗೆ ಉತ್ತಮ ಅನುಭವ ಸಿಗಲಿದೆ. ಈ ಸ್ಮಾರ್ಟ್‌ಟಿವಿ ಸ್ಮಾರ್ಟ್ ಪ್ರೀಮಿಯಂ ಟಿವಿ, ಪ್ರೈಮ್ ವಿಡಿಯೋ, ಝೀ5, ವೂಟ್ ಹಾಗೂ ಸೋನಿ ಲೀವ್‌ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳಿಗೆ ಸುಲಭ ಪ್ರವೇಶವನ್ನು ಪಡೆಯಬಹುದಾಗಿದೆ. ಈ ಮೂಲಕ ನೀವೇನಾದರೂ ಹೆಚ್ಚು ಮನರಂಜನಾ ದೃಷ್ಟಿಯಿಂದ ಸ್ಮಾರ್ಟ್‌ಟಿವಿ ಖರೀದಿ ಮಾಡಲು ಮುಂದಾದರೆ ಈ ಟಿವಿ ಹಲವಾರು ಅನುಕೂಲ ನೀಡಲಿದೆ.


Click it and Unblock the Notifications








