ಲಾಂಚ್ ಆಯ್ತು ಹೊಸ ಪಾರ್ಟಿ ಸ್ಪೀಕರ್! ಇದರ ಬೆಲೆ ಕೇವಲ 8,999ರೂ ಮಾತ್ರ!
ಟೆಕ್ ವಲಯದಲ್ಲಿ ಪಾರ್ಟಿ ಸ್ಪೀಕರ್‌ಗಳಿಗೆ ಭಾರಿ ಬೇಡಿಕೆಯಿದೆ. ಇದರಲ್ಲಿ ಬ್ಲೌಪುಂಕ್ಟ್ ಕಂಪೆನಿಯ ಸ್ಪೀಕರ್‌ಗಳು ಸಾಕಷ್ಟು ಗಮನಸೆಳೆದಿವೆ. ಯುವಜನರ ಆಶಯಕ್ಕೆ ತಕ್ಕಂತೆ ಹಲವು ಆಕರ್ಷಕ ಪಾರ್ಟಿ ಸ್ಪೀಕರ್‌ಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಸದ್ಯ ಇದೀಗ ಬ್ಲೌಪುಂಕ್ಟ್ ಕಂಪೆನಿ ಭಾರತದಲ್ಲಿ ಬ್ಲೌಪುಂಕ್ಟ್ PS150 ಮತ್ತು ಬ್ಲೌಪುಂಕ್ಟ್ PS75 ಪಾರ್ಟಿ ಸ್ಪೀಕರ್‌ಗಳನ್ನು ಪರಿಚಯಿಸಿದೆ.
ಹೌದು, ಬ್ಲೌಪುಂಕ್ಟ್ ಕಂಪೆನಿ ಭಾರತದಲ್ಲಿ ಬ್ಲೌಪುಂಕ್ಟ್ PS150 ಮತ್ತು PS75 ಪಾರ್ಟಿ ಸ್ಪೀಕರ್‌ಗಳನ್ನು ಲಾಂಚ್ ಮಾಡಿದೆ. ಇನ್ನು ಈ ಪಾರ್ಟಿ ಸ್ಪೀಕರ್‌ಗಳು ಮಾಡ್ರನ್ ಸ್ಪೀಕರ್‌ಗಳಾಗಿದ್ದು, ವಿದ್ಯುತ್ ಮತ್ತು ತಂತ್ರಜ್ಞಾನವನ್ನು ತಡೆರಹಿತ ಪ್ಯಾಕೇಜ್‌ನಲ್ಲಿ ಸಂಯೋಜಿಸುತ್ತವೆ ಎನ್ನಲಾಗಿದೆ. ಜೊತೆಗೆ ಅತ್ಯುತ್ತಮ ಗುಣಮಟ್ಟದ ಸೌಂಡ್ ಸಿಸ್ಟಂ ಅನ್ನು ನೀಡಲಿದ್ದು, ಪರಿಸರ ಸ್ನೇಹಿ ವಿನ್ಯಾಸವನ್ನು ಪಡೆದಿವೆ. ಹಾಗಾದ್ರೆ ಈ ಹೊಸ ಪಾರ್ಟಿ ಸ್ಪೀಕರ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬ್ಲೌಪುಂಕ್ಟ್ PS75 ಫೀಚರ್ಸ್ ಹೇಗಿದೆ?
ಬ್ಲೌಪುಂಕ್ಟ್ ಕಂಪೆನಿ ಪರಿಚಯಿಸಿರುವ ಹೊಸ ಪಾರ್ಟಿ ಸ್ಪೀಕರ್‌ಗಳು ಮ್ಯೂಸಿಕ್ ಕೇಳುವ ವಿಧದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಲಿವೆ ಎನ್ನಲಾಗಿದೆ. ಈ ಸ್ಪೀಕರ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಲಿದೆ ಎಂದು ಬ್ಲೂಪಂಕ್ಟ್ ಹೇಳಿಕೊಂಡಿದೆ. ಅದರಂತೆ ಬ್ಲೌಪುಂಕ್ಟ್ PS75 ಪಾರ್ಟಿ ಸ್ಪೀಕರ್ ಅನ್ನು ಸಮರ್ಥನೀಯ ವಸ್ತುಗಳಿಂದ ಪಡೆದ ಗಟ್ಟಿಮರದಿಂದ ತಯಾರಿಸಲಾಗಿದೆ. ಇದರಿಂದ ಈ ಪಾರ್ಟಿ ಸ್ಪೀಕರ್ ಪರಿಸರ ಸ್ನೇಹಿ ಉತ್ಪನ್ನವೆಂದು ಗುರುತಿಸಿಕೊಂಡಿದೆ. ಅಷ್ಟೇ ಅಲ್ಲ ಅತ್ಯಾಕರ್ಷಕ ವಿನ್ಯಾಸವನ್ನು ಸಹ ಪಡೆದಿದೆ.
ಇದನ್ನು ಮರದ ಕ್ಲಾಸಿಕ್ ಸೌಂದರ್ಯವನ್ನು ಅತ್ಯಾಧುನಿಕ ಟೆಕ್ನಾಲಜಿಯ ಮೂಲಕ ಬೆಸೆಯುವ ಮೂಲಕ ತಯಾರಿಸಲಾಗಿದೆ. ಇದು ಗಂಟೆಗಳ ಕಾಲ ಹೈ ಲೆವೆಲ್ ಸೌಂಡ್ ಅನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಒಂದೇ ಟ್ವೀಟರ್‌ನೊಂದಿಗೆ ಎರಡು ಬೃಹತ್ ವೂಫರ್‌ಗಳನ್ನು ಸಹ ಒಳಗೊಂಡಿದೆ. ಇದಲ್ಲದೆ PS75 ಸ್ಪೀಕರ್ RGB ಲೈಟ್‌ಗಳನ್ನು ಸಹ ಹೊಂದಿದ್ದು, ಅತ್ಯಾಕರ್ಷಕ ಲುಕ್ ಅನ್ನು ನೀಡಲಿದೆ. ಇನ್ನು ಸ್ಪೀಕರ್ 2,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 12 ಗಂಟೆಗಳ ಪ್ಲೇ ಟೈಂ ನೀಡಲಿದೆ. ಇದು USB ಪೋರ್ಟ್ ಮತ್ತು ಸಂಪರ್ಕಕ್ಕಾಗಿ AUX ಪೋರ್ಟ್ ಅನ್ನು ಹೊಂದಿದೆ.
ಬ್ಲೌಪುಂಕ್ಟ್ PS150 ಫೀಚರ್ಸ್ ಹೇಗಿದೆ?
ಬ್ಲೌಪುಂಕ್ಟ್ PS150 ಪಾರ್ಟಿ ಸ್ಪೀಕರ್ 100W ವಿದ್ಯುತ್ ಉತ್ಪಾದನೆಯನ್ನು ನೀಡುತ್ತದೆ. ಬೆಸ್ಟ್ ಸೌಂಡ್ ಸಿಸ್ಟಂಗಾಗಿ ಇದರಲ್ಲಿ 8 ಇಂಚಿನ ವೂಫರ್ ಅನ್ನು 1 ಇಂಚಿನ ಟ್ವೀಟರ್‌ನೊಂದಿಗೆ ಜೋಡಿಸಲಾಗಿದೆದೆ. ಇದು ಸೌಂಡ್ ಪ್ರೊಡಕ್ಷನ್ ಅನ್ನು ಗರಿಷ್ಠಗೊಳಿಸಲಿದ್ದು, ಹೊರಾಂಗಣದಲ್ಲಿ ಮತ್ತು ಒಳಾಂಗಣದಲ್ಲಿ ಉಪಯುಕ್ತವಾಗಲಿದೆ. ಸೌಂಡ್ ವೇವ್‌ಅನ್ನು ಸಮವಾಗಿ ಹರಡುವ ರೀತಿಯಲ್ಲಿ ಸ್ಪೀಕರ್‌ನ ಮುಂಭಾಗವನ್ನು ಓರೆಯಾಗಿ ಕೂಡ ವಿನ್ಯಾಸಗೊಳಿಸಲಾಗಿದೆ. ಇದು ಯುವಜನರಿಗೆ ಸೂಕ್ತವಾದ ಆಯ್ಕೆಯಾಗಿ ರೂಪುಗೊಂಡಿದೆ.
ಇನ್ನು ಈ ಪಾರ್ಟಿ ಸ್ಪೀಕರ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 12 ಗಂಟೆಗಳ ಆ್ಯಕ್ಟಿವಿಟಿಯನ್ನು ನೀಡಲಿದೆ. ಈ ಸ್ಪೀಕರ್ ಅನ್ನು IPX4 ರೇಟಿಂಗ್ ಮಾಡಲಾಗಿದ್ದು ಸ್ಪ್ಲಾಶ್‌ಗಳು, ಸೋರಿಕೆಗಳು, ಧೂಳು ಮತ್ತು ಮರಳಿನಿಂದ ರಕ್ಷಣೆ ನೀಡಲಿದೆ. ಆದರಿಂದ ಬ್ಲೌಪುಂಕ್ಟ್ PS150 ಸ್ಪೀಕರ್ ಅನ್ನು ನೀವು ಒಳಾಂಗಣ ಅಥವಾ ಹೊರಾಂಗಣದಲ್ಲಿ ನಿಯೋಜಿಸಬಹುದಾಗಿದೆ. ಅಷ್ಟೇ ಅಲ್ಲ ಅಗತ್ಯವಿರುವ ಸಂಪರ್ಕ ಆಯ್ಕೆಗಳನ್ನು ಸಹ ಇದರಲ್ಲಿ ನೀಡಲಾಗಿದೆ.
ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ಬ್ಲೌಪುಂಕ್ಟ್ PS75 ಪಾರ್ಟಿ ಸ್ಪೀಕರ್ ಭಾರತದಲ್ಲಿ 8,999ರೂ ಬೆಲೆಯನ್ನು ಹೊಂದಿದೆ. ಇನ್ನು ಬ್ಲೌಪುಂಕ್ಟ್ PS150 ಪಾರ್ಟಿ ಸ್ಪೀಕರ್ 11,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದನ್ನು ಅಮೆಜಾನ್ ಇಂಡಿಯಾದ ಮೂಲಕ ಖರೀದಿಸಬಹುದಾಗಿದೆ.


Click it and Unblock the Notifications








