Home
ಸುದ್ದಿಜಾಲ

ಭಾರತದಲ್ಲಿ ಹೊಸ ಬ್ಲೂಟೂತ್‌ ಸೌಂಡ್‌ಬಾರ್‌ ಬಿಡುಗಡೆ: ನಿಮ್ಮ ದಿಲ್‌ ಗೆಲ್ಲೋದು ಗ್ಯಾರಂಟಿ!

ಜನಪ್ರಿಯ ಆಡಿಯೋ ಪ್ರಾಡಕ್ಟ್‌ ತಯಾರಕ ಕಂಪೆನಿಗಳಲ್ಲಿ Blaupunkt ಸಂಸ್ಥೆ ಕೂಡ ಒಂದಾಗಿದೆ. ತನ್ನ ವಿಭಿನ್ನ ಸೌಂಡ್‌ಬಾರ್‌ಗಳ ಮೂಲಕ ಸದ್ದು ಮಾಡಿರುವ Blaupunkt ಇದೀಗ ಹೊಸ ಬ್ಲೂಟೂತ್‌ ಸೌಂಡ್‌ಬಾರ್‌ ಅನ್ನು ಪರಿಚಯಿಸಿದೆ. ಇದನ್ನು Blaupunkt SBA50 ಬ್ಲೂಟೂತ್ ಸೌಂಡ್‌ಬಾರ್ ಎಂದು ಹೆಸರಿಸಲಾಗಿದೆ. ಈ ಸೌಂಡ್‌ಬಾರ್‌ ಕೈಗೆಟಕುವ ಬೆಲೆಯಲ್ಲಿ ಬರಲಿದೆ

ಹೌದು, Blaupunkt SBA50 ಬ್ಲೂಟೂತ್ ಸೌಂಡ್‌ಬಾರ್ ಭಾರತದಲ್ಲಿ ಬಿಡುಗಡೆ ಆಗಿದೆ. ಇದು Bluetooth 5.0, USB, AUX, microSD ಕಾರ್ಡ್ ಸ್ಲಾಟ್, Gutar, Min input, ಮತ್ತು FM ರೇಡಿಯೊದಂತಹ ಮಲ್ಟಿ ಕನೆಕ್ಟಿವಿಟಿ ಆಯ್ಕೆಗಳನ್ನು ನೀಡುತ್ತದೆ. ಹಾಗಾದ್ರೆ Blaupunkt SBA50 ಬ್ಲೂಟೂತ್ ಸೌಂಡ್‌ಬಾರ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಹೊಸ ಬ್ಲೂಟೂತ್‌ ಸೌಂಡ್‌ಬಾರ್‌ ಬಿಡುಗಡೆ: ದಿಲ್‌ ಗೆಲ್ಲೋದು ಗ್ಯಾರಂಟಿ

Blaupunkt SBA50 ವಿಶೇಷತೆ ಏನು?
Blaupunkt SBA50 ಬ್ಲೂಟೂತ್ ಸೌಂಡ್‌ಬಾರ್ ಕ್ವಾಡ್ 2.04 ಇಂಚಿನ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ. ಇದು 45W ಸ್ಟಿರಿಯೊ ಸೌಂಡ್ ಔಟ್‌ಪುಟ್ ಅನ್ನು ನೀಡಲಿದ್ದು, ಸಮತೋಲಿತ ಆಡಿಯೊ ಜೊತೆಗೆ ಡೀಪ್‌ ಬಾಸ್ ಅನ್ನು ನೀಡುವ ಭರವಸೆ ನೀಡಿದೆ. ಈ ಸೌಂಡ್‌ಬಾರ್‌ ಸ್ಲೀಕ್‌ ಫಿನಿಶ್‌ನೊಂದಿಗೆ ಆಯತಾಕಾರದ ಬಾರ್ ವಿನ್ಯಾಸವನ್ನು ಹೊಂದಿದೆ.

Blaupunkt SBA50 ಬ್ಲೂಟೂತ್ ಸೌಂಡ್‌ಬಾರ್ ಇಂದಿನ ಯುವಜನರನ್ನೇ ಗುರಿಯಾಗಿಸಿಕೊಂಡು ಬಿಡುಗಡೆ ಅಗಿದೆ. ಇದರ ವಿನ್ಯಾಸ ಹಾಗೂ ಅತ್ಯಾಕರ್ಷಕ ಫೀಚರ್ಸ್‌ಗಳು ಇದಕ್ಕೆ ಇಂಬುಕೊಡುವಂತಿದೆ. ಈ ಸೌಂಡ್‌ಬಾರ್ ಅನ್ನು ತಡೆರಹಿತ ಆಡಿಯೊಗಾಗಿ ಮತ್ತೊಂದು SBA50 ಮಾದರಿಯೊಂದಿಗೆ ಜೋಡಿಸಬಹುದು. ಅಂದರೆ ಎರಡೂ ಸೌಂಡ್‌ಬಾರ್‌ಗಳನ್ನು ಒಂದೇ ಮ್ಯೂಸಿಕ್‌ಗೆ ಕನೆಕ್ಟ್‌ ಮಾಡಬಹುದಾಗಿದೆ.

ಭಾರತದಲ್ಲಿ ಹೊಸ ಬ್ಲೂಟೂತ್‌ ಸೌಂಡ್‌ಬಾರ್‌ ಬಿಡುಗಡೆ: ದಿಲ್‌ ಗೆಲ್ಲೋದು ಗ್ಯಾರಂಟಿ

ಇನ್ನು ಈ ಸೌಂಡ್‌ಬಾರ್‌ 2,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸಿಂಗಲ್‌ ಫುಲ್‌ ಚಾರ್ಜ್‌ನಲ್ಲಿ 14 ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಈ ಸೌಂಡ್‌ಬಾರ್‌ ಬ್ಲೂಟೂತ್‌ 5.0, USB, AUX, microSD ಕಾರ್ಡ್ ಸ್ಲಾಟ್, Gutar, Min input, ಮತ್ತು FM ರೇಡಿಯೊದಂತಹ ಮಲ್ಟಿ ಕನೆಕ್ಟಿವಿಟಿ ಆಯ್ಕೆಗಳನ್ನು ನೀಡಲಿದೆ. ಇದಲ್ಲದೆ ಕಂಪನಿಯು ಹೆಚ್ಚು ವೈಯಕ್ತೀಕರಿಸಿದ ಆಡಿಯೊ ಅನುಭವವನ್ನು ಅನುಮತಿಸುವ ಆರು ಪೂರ್ವನಿಗದಿ ವಿಧಾನಗಳೊಂದಿಗೆ ಇನ್‌ಬಿಲ್ಟ್‌ ಈಕ್ವಲೈಜರ್ ಅನ್ನು ಪ್ಯಾಕ್ ಮಾಡಿದೆ.

ಬೆಲೆ ಮತ್ತು ಲಭ್ಯತೆ
Blaupunkt SBA50 ಬ್ಲೂಟೂತ್ ಸೌಂಡ್‌ಬಾರ್ ಸ್ಪೀಕರ್ ಭಾರತದಲ್ಲಿ 3,999ರೂ ಬೆಲೆಯಲ್ಲಿ ಬರಲಿದೆ. ಇದು ಕೇವಲ ಕಪ್ಪು ಬಣ್ಣದ ಆಯ್ಕೆಯಲ್ಲಿ ಬರಲಿದ್ದು, ಪ್ರಸ್ತುತ ಅಮೆಜಾನ್‌ನ ಅಧಿಕೃತ ಭಾರತೀಯ ವೆಬ್‌ಸೈಟ್‌ನಲ್ಲಿ ಖರೀದಿಗಾಗಿ ಪಟ್ಟಿಮಾಡಲಾಗಿದೆ.

ಇನ್ನು ಬ್ಲೌಪುಂಕ್ಟ್‌ ಕಂಪೆನಿ ಕಳೆದ ವರ್ಷ ಭಾರತದಲ್ಲಿ ಬ್ಲೌಪುಂಕ್ಟ್‌ PS150 ಪಾರ್ಟಿ ಸ್ಪೀಕರ್‌ ಪರಿಚಯಿಸಿತ್ತು. ಈ ಸ್ಪೀಕರ್‌ 100W ವಿದ್ಯುತ್ ಉತ್ಪಾದನೆಯನ್ನು ನೀಡುತ್ತದೆ. ಬೆಸ್ಟ್‌ ಸೌಂಡ್‌ ಸಿಸ್ಟಂಗಾಗಿ ಇದರಲ್ಲಿ 8 ಇಂಚಿನ ವೂಫರ್ ಅನ್ನು 1 ಇಂಚಿನ ಟ್ವೀಟರ್‌ನೊಂದಿಗೆ ಜೋಡಿಸಲಾಗಿದೆ. ಇದು ಸೌಂಡ್‌ ಪ್ರೊಡಕ್ಷನ್‌ ಅನ್ನು ಗರಿಷ್ಠಗೊಳಿಸಲಿದ್ದು, ಹೊರಾಂಗಣದಲ್ಲಿ ಮತ್ತು ಒಳಾಂಗಣದಲ್ಲಿ ಉಪಯುಕ್ತವಾಗಲಿದೆ. ಸೌಂಡ್‌ ವೇವ್‌ಅನ್ನು ಸಮವಾಗಿ ಹರಡುವ ರೀತಿಯಲ್ಲಿ ಸ್ಪೀಕರ್‌ನ ಮುಂಭಾಗವನ್ನು ಓರೆಯಾಗಿ ಕೂಡ ವಿನ್ಯಾಸಗೊಳಿಸಲಾಗಿದೆ. ಇದು ಯುವಜನರಿಗೆ ಸೂಕ್ತವಾದ ಆಯ್ಕೆಯಾಗಿ ರೂಪುಗೊಂಡಿದೆ.

ಈ ಪಾರ್ಟಿ ಸ್ಪೀಕರ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 12 ಗಂಟೆಗಳ ಆ್ಯಕ್ಟಿವಿಟಿಯನ್ನು ನೀಡಲಿದೆ. ಈ ಸ್ಪೀಕರ್‌ ಅನ್ನು IPX4 ರೇಟಿಂಗ್‌ ಮಾಡಲಾಗಿದ್ದು ಸ್ಪ್ಲಾಶ್‌ಗಳು, ಸೋರಿಕೆಗಳು, ಧೂಳು ಮತ್ತು ಮರಳಿನಿಂದ ರಕ್ಷಣೆ ನೀಡಲಿದೆ. ಆದರಿಂದ ಬ್ಲೌಪುಂಕ್ಟ್‌ PS150 ಸ್ಪೀಕರ್‌ ಅನ್ನು ನೀವು ಒಳಾಂಗಣ ಅಥವಾ ಹೊರಾಂಗಣದಲ್ಲಿ ನಿಯೋಜಿಸಬಹುದಾಗಿದೆ. ಅಷ್ಟೇ ಅಲ್ಲ ಅಗತ್ಯವಿರುವ ಸಂಪರ್ಕ ಆಯ್ಕೆಗಳನ್ನು ಸಹ ಇದರಲ್ಲಿ ನೀಡಲಾಗಿದೆ.

Best Mobiles in India

English summary
Blaupunkt SBA50 Bluetooth soundbar with 45W output launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+