ನಿಮ್ಮ ಮಕ್ಕಳು ಬ್ಲೂವೇಲ್ ಅಪಾಯಕ್ಕೆ ಸಿಲುಕಿದ್ದಾರೆ ಎಂದು ತಿಳಿಯುವುದು ಹೇಗೆ?

ಎಲ್ಲಾ ಪೋಷಕರು ಚಿಂತಾಕ್ರಾಂತರಾಗಿದ್ದು, ತಮ್ಮ ಮಕ್ಕಳು ಇಂತಹ ಜಾಲಕ್ಕೆ ಬೀದ್ದಿರಬಹುದೇ ಎನ್ನುವ ಭಯದಲ್ಲಿದ್ದಾರೆ.!!

|

ದಿನದಿಂದ ದಿನಕ್ಕೆ ಬ್ಲೂ ವೇಲ್‌ಗಾಗಿ ಪ್ರಾಣ ಕಳೆದುಕೊಳ್ಳುವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿದಿನವೂ ಬ್ಲೂವೇಲ್‌ಗಾಗಿ ಪ್ರಾಣ ಕಳೆದುಕೊಂಡ ಮಕ್ಕಳ ಸುದ್ದಿಗಳು ಹೊರಬರುತ್ತಿವೆ.! ಇದರಿಂದಾಗಿ, ಎಲ್ಲಾ ಪೋಷಕರು ಚಿಂತಾಕ್ರಾಂತರಾಗಿದ್ದು, ತಮ್ಮ ಮಕ್ಕಳು ಇಂತಹ ಜಾಲಕ್ಕೆ ಬೀದ್ದಿರಬಹುದೇ ಎನ್ನುವ ಭಯದಲ್ಲಿದ್ದಾರೆ.!!

ಹಾಗಾಗಿ, ಮುಂಬಯಿಯ ಮನಶಾಸ್ತ್ರಜ್ಞ ಡಾ. ಹರೀಶ್‌ ಶೆಟ್ಟಿ ಮತ್ತು ಡಾ. ಅಚಲ್ ಭಗತ್‌ ಅವರು ನಿಮ್ಮ ಮಕ್ಕಳು ಬ್ಲೂವೇಲ್ ಅಪಾಯಕ್ಕೆ ಸಿಲುಕಿದ್ದಾರೆ ಎನ್ನುವುದನ್ನು ಹಲವು ಲಕ್ಷಣಗಳಿಂದ ತಿಳಯಬಹುದು ಎಂದು ಹೇಳಿದ್ದಾರೆ.! ಹಾಗಾದರೆ, ನಿಮ್ಮ ಮಕ್ಕಳು ಬ್ಲೂ ವೇಲ್‌ ಕೂಪದಲ್ಲಿ ಸಿಲುಕಿದ್ದರೆ ಅವರಲ್ಲಿ ಕಾಣಬಹುದಾದ ಲಕ್ಷಣಗಳೇನು ಆ ಲಕ್ಷಣಗಳು ಕಂಡುಬಂದರೆ ನೀವೆನು ಮಾಡಬೇಕು? ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಯಾವಾಗಲೂ ಮೊಬೈಲ್ ಗುಂಗಿನಲ್ಲೇ ಇದ್ದರೆ!

ಯಾವಾಗಲೂ ಮೊಬೈಲ್ ಗುಂಗಿನಲ್ಲೇ ಇದ್ದರೆ!

ನಿಮ್ಮ ಮಕ್ಕಳು ಯಾವಾಗಲೂ ಗ್ಯಾಜೆಟ್ ಗುಂಗಿನಲ್ಲಿಯೇ ಇದ್ದರೆ ಮತ್ತು ಅದರಲ್ಲೇ ಹೆಚ್ಚಿನ ಸಮಯ ಕಳೆಯುತ್ತದರೆ ನೀವು ಅವರ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳಿತು. ಅದರಲ್ಲಿಯೂ ರೂಂ ಬಾಗಿಲು ಹಾಕಿ ಯಾರಿಗೂ ಕಾಣಿಸದಂತೆ ಮೊಬೈಲ್‌ ಬಳಕೆ ಮಾಡುತ್ತಿದ್ದರೆ ಇದು ಕೂಡ ಬ್ಲೂವೇಲ್ ಲಕ್ಷಣವಾಗಿರಬಹುದು.

ಗಾಯದ ಗುರುತು ಕಂಡು ಬಂದರೆ

ಗಾಯದ ಗುರುತು ಕಂಡು ಬಂದರೆ

ನಿಮ್ಮ ಮಕ್ಕಳ ದೇಹದಲ್ಲಿ ಯಾವುದಾದರೂ ಗಾಯದ ಗುರುತು ಕಂಡು ಬಂದರೆ. ಮತ್ತು ಆ ಗುರುತುಗಳು ಪ್ರತಿದಿನ ಹೆಚ್ಚಾಗುತ್ತಿದ್ದರೆ ಇದು ಕೂಡ ಬ್ಲೂವೇಲ್ ಲಕ್ಷಣವಿರಬಹುದು. ಜೊತೆಗೆ ನಿಮ್ಮ ಮಕ್ಕಳು ಹೆಚ್ಚು ಹಾರರ್ ಚಿತ್ರಗಳನ್ನು ನೋಡುವ ಲಕ್ಷಣವೂ ಇದರ ಒಂದು ಭಾಗವೇ ಆಗಿರುತ್ತದೆ.

Blue Whale - ಬ್ಲೂ ವೇಲ್ ನಿಮ್ಮ ಮಕ್ಕಳ ಜೀವ ತೆಗೆಯಲಿದೆ ಎಚ್ಚರ..!!
ಕುಟುಂಬದವರಿಂದ ದೂರವಾಗುವುದು!!

ಕುಟುಂಬದವರಿಂದ ದೂರವಾಗುವುದು!!

ನಿಮ್ಮ ಮಕ್ಕಳು ನಿಮ್ಮಿಂದ ಸ್ವಲ್ಪ ಸ್ವಲ್ಪವೇ ಸಂಭಂದ ಕಳೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಲುತ್ತಿದ್ದರೆ, ಅಥವಾ ನಿಮ್ಮ ಸಣ್ಣ ಮಾತುಗಳಿಗೂ ಅವರು ಹೆಚ್ಚು ಕೂಪಗೊಳ್ಳುತ್ತಿದ್ದರೆ ಅದು ಕೂ ಬ್ಲೂವೇಲ್ ಲಕ್ಷಣವಾಗಿರಬಹುದು. ಈ ಆಟಕ್ಕೆ ಸಿದ್ದರಾಗುವ ಮಕ್ಕಳು ಒಂಟಿನತಕ್ಕೆ ಒಳಗಾಗುತ್ತಾರೆ.

ಬೇರೆ ಏನೆಲ್ಲಾ ಲಕ್ಷಣಗಳು?

ಬೇರೆ ಏನೆಲ್ಲಾ ಲಕ್ಷಣಗಳು?

ನಿಮ್ಮ ಮಕ್ಕಳು ಮೊದಲು ನಿರ್ವಹಿಸುತ್ತಿದ್ದ ಎಲ್ಲಾ ಚಟುವಟಿಕೆಗಳಿಂದ ವಿಮುಖರಾಗುವುದು, ಎತ್ತರದ ಸ್ಥಳಗಳಿಗೆ ಹೋಗಿ ನಿಂತು ಸಮಯ ಕಳೆಯುವುದು, ಬೆಳಗಿನ ಜಾವ ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದರೆ ಮತ್ತು ವಿಕೃತ ಸಣ್ಣ ಕಾರ್ಯಗಳನ್ನು ಮಾಡುತ್ತಿದ್ದರೆ ಅವು ಕೂಡ ಬ್ಲೂವೇಲ್ ಲಕ್ಷಣಗಳಾಗಿರಬಹುದು.!!

ಈ ಲಕ್ಷಣಗಳು ಕಂಡುಬಂದರೆ ನೀವೇನು ಮಾಡಬೇಕು?

ಈ ಲಕ್ಷಣಗಳು ಕಂಡುಬಂದರೆ ನೀವೇನು ಮಾಡಬೇಕು?

ನಿಮ್ಮ ಮಕ್ಕಳಲ್ಲಿ ಈ ಮೇಲಿನ ಲಕ್ಷಣಗಳು ಕಂಡುಬಂದರೆ ಆದಷ್ಟು ಬೇಗ ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಡಿ. ಮತ್ತು ಕೂಡಲೇ ನಿಮ್ಮ ಮಕ್ಕಳನ್ನು ಮನಶಾಸ್ತ್ರಜ್ಞರ ಬಳಿ ಕರೆದೊಯ್ಯಿರಿ.!! ಇದೆಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಮಕ್ಕಳ ಮೇಲೆ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಿ.

<strong>ಬೆಂಗಳೂರು ಹುಡುಗನ " title="ಬೆಂಗಳೂರು ಹುಡುಗನ "ಪೇಪರ್‌ಬಾಯ್" ಆಪ್‌ನಲ್ಲಿ ಎಲ್ಲಾ ಪತ್ರಿಕೆಗಳನ್ನು ಓದಿ!!" loading="lazy" width="100" height="56" />ಬೆಂಗಳೂರು ಹುಡುಗನ "ಪೇಪರ್‌ಬಾಯ್" ಆಪ್‌ನಲ್ಲಿ ಎಲ್ಲಾ ಪತ್ರಿಕೆಗಳನ್ನು ಓದಿ!!

Best Mobiles in India

Read more about:
English summary
the online dare game that has gone viral and has even been blamed for a spate of suicides among minors. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X