ಬ್ಲೂಟೂತ್ 5 ಈಗ ಲಭ್ಯ: ಎಲ್ಲಾ ಗ್ಯಾಜೆಟ್‌ಗಳಿಗೂ ಬಿಗ್‌ ಬೆನಿಫಿಟ್

Written By:

ವೈರ್‌ಲೆಸ್‌ ಲೈಫ್‌ಗಾಗಿ ಪ್ರಯತ್ನಿಸುವವರಿಗೆ ಈಗೊಂದು ಗ್ರೇಟ್ ನ್ಯೂಸ್. ಯಾಕಂದ್ರೆ ಬ್ಲೂಟೂತ್ ಅತಿ ವೇಗದ ಆಕರ್ಷಕ ಅಪ್‌ಗ್ರೇಡ್ ಪಡೆದಿದೆ. ಬ್ಲೂಟೂತ್‌ನ ಈ ಬೆಳವಣಿಗೆ ಇಂದ ಎಲ್ಲಾ ವಿಧದ ಡಿವೈಸ್‌ಗಳಿಗೆ ಅನುಕೂಲವಾಗಲಿದೆ. ಸ್ಮಾರ್ಟ್‌ ಹೋಮ್‌ ಗ್ಯಾಜೆಟ್‌ಗಳಂತೂ ಬಹುಮುಖ ಉಪಯೋಗಗಳನ್ನು ಪಡೆಯಲಿವೆ.

ಬ್ಲೂಟೂತ್ 5 ಈಗ ಲಭ್ಯ: ಎಲ್ಲಾ ಗ್ಯಾಜೆಟ್‌ಗಳಿಗೂ ಬಿಗ್‌ ಬೆನಿಫಿಟ್

ಬ್ಲೂಟೂತ್ ಸ್ಪೆಷಿಯಲ್ ಇಂಟರೆಸ್ಟ್ ಗ್ರೂಪ್(SIG), ಅಧಿಕೃತವಾಗಿ ಬ್ಲೂಟೂತ್ 5 ಅನ್ನು ಪ್ರಕಟಣೆ ಮಾಡಿದೆ. ಇದು ಬ್ಲೂಟೂತ್‌ನ ನಂತರದ ವರ್ಸನ್‌ ಆಗಿದೆ. ಈ ನ್ಯೂಸ್‌ ನಂತರ, ತಯಾರಕರು ಹೊಸ ಬಗೆಯ ಟೆಕ್‌ ಅಪ್‌ಗ್ರೇಡ್‌ಗಳನ್ನು ಗ್ಯಾಜೆಟ್‌ಗಳಿಗೆ ಮಾಡಬೇಕಾಗಿದೆ.

ಬ್ಲೂಟೂತ್ 5,(Bluetooth 5) ವೈರ್‌ಲೆಸ್ ಟೆಕ್ನಾಲಜಿ ಸಂಪರ್ಕದಲ್ಲಿ ಪ್ರಮುಖ ಮೈಲಿಗಲ್ಲಾಗಿದ್ದು, ಈ ಹಿಂದಿನ ವರ್ಸನ್ 4.2 ಇತ್ತು. ಆದರೆ ಈಗ ಪ್ರಕಟವಾಗಿರುವ ಬ್ಲೂಟೂತ್ 5 ಹಿಂದಿನ ವರ್ಸನ್‌ಗಿಂತ 2 ಪಟ್ಟು ವೇಗವಾಗಿದೆ. 4 ಪಟ್ಟು ಹೆಚ್ಚಿನ ರೇಂಜ್‌ ಮತ್ತು 8 ಪಟ್ಟು ಬ್ಯಾಂಡ್‌ವಿಡ್ತ್‌ ಇದೆ. ಇದರ ಕಾರ್ಯ ಪ್ರದರ್ಶನವನ್ನು SIG, ಇತರೆ ವೈರ್‌ಲೆಸ್‌ ಟೆಕ್ನಾಲಜಿಗಳಷ್ಟೇ ವೇಗವಾಗಿ ವರ್ಕ್ ಆಗಲಿದೆ ಎಂದು ಹೇಳಿದೆ.

ಬ್ಲೂಟೂತ್ 5 ಈಗ ಲಭ್ಯ: ಎಲ್ಲಾ ಗ್ಯಾಜೆಟ್‌ಗಳಿಗೂ ಬಿಗ್‌ ಬೆನಿಫಿಟ್

ಬ್ಲೂಟೂತ್ 5, ಲೇಟೆಸ್ಟ್ ವರ್ಸನ್‌ ಬ್ಲೂಟೂತ್ ಆಗಿದ್ದು, ಹೆಚ್ಚು ದೂರದಿಂದ , ಅತೀವೇಗದಲ್ಲಿ, ವಿಶಾಲ ಬ್ರಾಡ್‌ಕಾಸ್ಟ್‌ ಮೆಸೇಜ್‌ ಸಾಮರ್ಥ್ಯ ಹೊಂದಿದೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿRead more about:
English summary
Bluetooth 5 is here, with big benefits for the gadgets we use every day. To know more visit kannada.gizbot.com
Please Wait while comments are loading...
Opinion Poll

Social Counting