Home
ಸುದ್ದಿಜಾಲ

ಡಿಜಿಟಲ್‌ ಟಿಕೆಟ್ ನೀಡುವ ವ್ಯವಸ್ಥೆಗೆ ಮುಂದಾದ ಬಿಎಂಟಿಸಿ!

ಹೊಸ ಮಾದರಿಯ ನೀತಿ ನಿಯಮಗಳನ್ನ ಆಳವಡಿಸಿಕೊಳ್ಳುವಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ ಸದಾ ಮುಂದೆ ಇದೆ. ಈಗಾಗಲೇ ಹಲವು ಮಾದರಿಯ ತಂತ್ರಜ್ಞಾನ ಆಧಾರಿತ ನಿಯಮಗಳನ್ನ ಪಾಲಿಸುತ್ತಿರುವ ಬಿಎಂಟಿಸಿ ಲಾಕ್‌ಡೌನ್‌ ಮುಗಿದ ಬಳಿಕ ಹೊಸ ಮಾದರಿಯ ಟಿಕೆಟಿಂಗ್‌ ವ್ಯವಸ್ಥೆಯನ್ನ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಹೌದು

ಹೌದು ಲಾಕ್‌ಡೌನ್ ನಂತರ, ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಬಸ್‌ಗಳಲ್ಲಿ ಯಾವುದೇ ರೀತಿಯಲ್ಲೂ ನಗದು ಸಹಿತ ವಹಿವಾಟು ನಡೆಯುವುದಿಲ್ಲ ಎನ್ನಲಾಗಿದೆ. ಹಣ ಕೊಟ್ಟು ಟಿಕೆಟ್‌ ಖರೀದಿ ಮಾಡುವ ಬದಲಾಗಿ ಹೊಸ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನದ (ಎಸ್‌ಒಪಿ) ಪ್ರಕಾರ ನಗದುರಹಿತ ಮತ್ತು ಸಂಪರ್ಕವಿಲ್ಲದ ಟಿಕೆಟಿಂಗ್ ಅನ್ನು ಪಡೆಯುವ ಅವಕಾಶವನ್ನ ಜಾರಿಗೆ ತರಲಾಗುವುದು ಎಂದು ಬಿಎಂಟಿಸಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಮಾದರಿಯ

ಇನ್ನು ಈ ಮಾದರಿಯ ಸೇವೆಯಲ್ಲಿ ಯಾವುದೇ ರೀತಿಯ ನಗದು ವ್ಯವಹಾರ ಇರುವುದಿಲ್ಲ. ಈಗಾಗಲೇ ಎಲ್ಲಾ ಕಡೆ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಡಿಜಿಟಲ್‌ ಆನ್‌ಲೈನ್‌ ಫೇಮೆಂಟ್‌ ಮಾಡಬಹುದಾಗಿದೆ. ಅಲ್ಲದೆ ನಗದು ರಹಿತ ಪ್ರಯಾಣಕ್ಕಾಗಿ ಪ್ರಯಾಣಿಕರು ಒಂದೇ ಪ್ರಯಾಣಕ್ಕಾಗಿ ಇ-ವ್ಯಾಲೆಟ್‌ಗಳ ಮೂಲಕ ಹಣವನ್ನ ಪಾವತಿಸಬಹುದು. ಪ್ರಸ್ತುತ, ಬಿಎಂಟಿಸಿ ಕೊರೋನಾ ವೈರಸ್‌ ಪರಿಣಾಮ ಲಾಕ್‌ಡೌನ್‌ ಇರುವುದರಿಂದ ತುರ್ತು ಸೇವೆಗಳನ್ನು ನಿರ್ವಹಿಸುತ್ತಿದೆ, ಮುಖ್ಯವಾಗಿ ಆಸ್ಪತ್ರೆಗಳಿಗೆ, ಮತ್ತು ಬಸ್‌ನಲ್ಲಿ ಪ್ರಯಾಣಿಸಲು ಮಾಸಿಕ ಪಾಸ್ ಅನ್ನು ನೀಡಿದೆ.

ಸಾರ್ವಜನಿಕ

ಆದರೆ ಸಾರ್ವಜನಿಕ ಸಾರಿಗೆಯ ಮೇಲಿನ ನಿರ್ಬಂಧಗಳನ್ನು ಸರಾಗಗೊಳಿಸಿದ ನಂತರ, ಮೊದಲ ಹಂತದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ನಾನ್‌ ಎಸಿ ಬಸ್‌ಗಳನ್ನು ಅರ್ಧದಷ್ಟು ಸಾಮರ್ಥ್ಯದೊಂದಿಗೆ ಮಾತ್ರ ಓಡಿಸುವ ಪ್ಲ್ಯಾನ್‌ ಅನ್ನು ಬಿಎಂಟಿಸಿ ರೂಪಿಸಿದೆ. ಅಲ್ಲದೆ ಸಾಮಾಜಿಕ ಅಂತರ ಹಾಗೂ ರಕ್ಷಣೆಯ ದರಷ್ಟಿಯಿಂದ ಕಂಡಕ್ಟರ್‌ಗಳೊಂದಿಗೆ ನಗದು ವಹಿವಾಟುಗಳನ್ನು ಒಳಗೊಂಡಿರುವ ನಿಯಮಿತ ಟಿಕೆಟ್‌ಗಳು ಮತ್ತು ದೈನಂದಿನ ಪಾಸ್‌ಗಳನ್ನ ನೀಡುವ ಬದಲು ಸಾಪ್ತಾಹಿಕ ಪಾಸ್‌ಗಳನ್ನು ಪರಿಚಯಿಸಲಾಗುವುದು ಎನ್ನಲಾಗಿದೆ. ಈ ಮಾದರಿಯ ಸಾಪ್ತಾಹಿಕ ಮತ್ತು ಮಾಸಿಕ ಪಾಸ್‌ಗಳನ್ನು ಬಸ್ ನಿಲ್ದಾಣಗಳಿಂದ ಪಡೆಯಬಹುದಾಗಿದೆ.

ಬಿಎಂಟಿಸಿ

ಸದ್ಯ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಆಗಿರುವ ಸಿ ಶಿಖಾ ಅವರು ನಗದು ವಹಿವಾಟುಗಳನ್ನು ಕಡಿಮೆ ಮಾಡುವ ಪ್ಲ್ಯಾನ್‌ ಮಾಡಿದ್ದಾರೆ. ಇದರ ಹಿಂದಿನ ಉದ್ದೇಶವೆಂದರೆ ಕರೋನವೈರಸ್ ಹರಡುವುದನ್ನು ತಡೆಗಟ್ಟುವುದು, ಆಗಿದೆ. ಏಕೆಂದರೆ ನಗದು ವಹಿವಾಟು ನಡೆದಾಗ ಒಬ್ಬರಿಂದ ಒಬ್ಬರಿಗೆ ಹಣಕಾಸು ವರ್ಗಾವಣೆ ಆಗಲಿದೆ. ಇದು ಕೂಡ ಕೊರೋನಾ ವೈರಸ್‌ ಹರಡುವುದಕ್ಕೆ ಸಹಕಾರಿಯಾಗಬಹುದು ಎನ್ನುವ ಆತಂಕ ಇದೆ. ಏಕೆಂದರೆ ಕೊರೋನಾ ವೈರಸ್‌ ಹಲವಾರು ಗಂಟೆಗಳ ಕಾಲ ಮೇಲ್ಮೈಯಲ್ಲಿ ಬದುಕಬಲ್ಲದು. ಈ ಕಾರಣದಿಂದ ಲಾಕ್‌ಡೌನ್‌ ನಂತರ ಒಂದೇ ಟ್ರಿಪ್‌ಗಳನ್ನು ಬಯಸುವವರು Paytm ಮತ್ತು Google Pay ನಂತಹ ವ್ಯಾಲೆಟ್‌ಗಳ ಮೂಲಕ ಹಣ ಪಾವತಿಸಬಹುದು. ಇದಕ್ಕಾಗಿ ಎಲ್ಲಾ ಬಸ್‌ಗಳಲ್ಲಿ ಕ್ಯೂಆರ್ ಕೋಡ್ ಪ್ರದರ್ಶಿಸಲಾಗುವುದು ಮತ್ತು ಅವರು ಅದನ್ನು ಸ್ಕ್ಯಾನ್ ಮಾಡಬಹುದು ಮತ್ತು ನಿಖರವಾದ ಶುಲ್ಕವನ್ನು ಪಾವತಿಸಬಹುದು, ಎಂದು ಸಿ ಶಿಖಾ ಹೇಳಿದ್ದಾರೆ.

ಆಟೋಮ್ಯಾಟಿಕ್‌

ಇದಲ್ಲದೆ ಆಟೋಮ್ಯಾಟಿಕ್‌ ಬಸ್ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ಸ್ಥಾಪಿಸಲು ನಾವು ಟೆಂಡರ್ ಅನ್ನು ಕರಯಲು ಯೋಜಿಸುತ್ತಿದ್ದೇವೆ, ಇದರಿಂದ ಪ್ರಯಾಣಿಕರು ಕಾರ್ಡ್ ಟ್ಯಾಪ್ ಮಾಡಿ ಶುಲ್ಕವನ್ನು ಪಾವತಿಸಬಹುದು. ಆದರೆ ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಅಲ್ಲಿಯವರೆಗೆ ಕ್ಯೂಆರ್ ಆಧಾರಿತ ಪಾವತಿಗಳು ಜಾರಿಯಲ್ಲಿರುತ್ತೆ ಎಂದು ಹೇಳಿದ್ದಾರೆ. ಇನ್ನು ಪಾಸ್ ಮತ್ತು ಡಿಜಿಟಲ್ ಪಾವತಿಗಳಂತಹ ಟಿಕೆಟಿಂಗ್ ಆಯ್ಕೆಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ಪ್ರಚಾರ ಮಾಡಬೇಕು, ಎಂದು ಬಿಎಂಟಿಸಿ ಪ್ಲ್ಯಾನ್‌ ಮಾಡಿಕೊಂಡಿದೆ.

Best Mobiles in India

English summary
Post-lockdown, there will be no cash transactions on buses of Bangalore Metropolitan Transport Corporation.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+