ಹಾಳಾದ ಕಾರನ್ನು ನೀವೇ ರಿಪೇರಿ ಮಾಡಿ.!

By Ashwath
|

ಪ್ರಯಾಣದ ವೇಳೆ ಕಾರು ಹಾಳಾದ್ರೆ ಏನು ಮಾಡುತ್ತಿರಿ? ಮೆಕ್ಯಾನಿಕ್‌ನ್ನು ಕರೆದು ರಿಪೇರಿ ಮಾಡಿ ಪ್ರಯಾಣ ಮುಂದುವರೆಸುತ್ತಿರಿ.ಆದರ ಬದಲು ನೀವೇ ಕಾರನ್ನು ರಿಪೇರಿ ಮಾಡುವಂತಿದ್ದರೆ..? ಕಾರಿನ ಸಮಸ್ಯೆ ಇರುವ ಭಾಗ ವಿಡಿಯೋ ಕಣ್ಣ ಮುಂದೆ ಬಂದರೆ?!

ಹೌದು. ಹಾಳಾದ ಕಾರನ್ನು ರಿಪೇರಿ ಮಾಡಲು ನಿಮಗೆ ಗೊತ್ತಿಲ್ಲದಿದ್ದರೂ, ನೀವೇ ಸರಿಯಾಗಿ ರಿಪೇರಿ ಮಾಡುವ ಕಾಲ ಬಂದರೂ ಅಶ್ಚರ್ಯ‌ವಿಲ್ಲ.ಈ ರೀತಿಯ ಕಲ್ಪನೆಗೆ ಕಾರಣವಾದ್ದು ಆಗ್‌ಮೆಂಟೆಡ್‌ ರಿಯಾಲಿಟಿ(Augmented Reality) ತಂತ್ರಜ್ಞಾನ.

ವಿಶ್ವದ ಕಾರು ತಯಾರಿಕ ಕ್ಷೇತ್ರದ ಮುಂಚೂಣಿಯಲ್ಲಿರುವ ಬಿಎಂಡಬ್ಲ್ಯೂ ಆಗ್‌ಮೆಂಟೆಡ್‌ ರಿಯಾಲಿಟಿ ತಂತ್ರಜ್ಞಾನವಿರುವ ಹೊಸ 3ಡಿ ಡಿಸ್ಪ್ಲೇ ಇರುವ ಕನ್ನಡಕವನ್ನು ಅಭಿವೃದ್ಧಿ ಪಡಿಸಿದೆ. ಈ ಕನ್ನಡಕವನ್ನು ವ್ಯಕ್ತಿ ಧರಿಸಿ ಕಾರಿನ ಹಾಳಾದ ಭಾಗದ ಮುಂದುಗಡೆ ನಿಂತರೆ ಸಾಕು, ಅವನ ಕಣ್ಣ ಮುಂದೆ ಹಾಳಾದ ಭಾಗವನ್ನು ಸರಿ ಮಾಡುವ ದೃಶ್ಯವಿರುವ 3ಡಿ ಅನಿಮೇಶನ್‌ ವಿಡಿಯೋ ಧ್ವನಿ ಮತ್ತುಪಠ್ಯದೊಂದಿಗೆ ಕಾಣತೊಡಗುತ್ತದೆ. ಕಾರಿನ ಯಾವ ಭಾಗದಲ್ಲಿ ದೋಷವಿದೆ? ಅದನ್ನು ಜೋಡಿಸುವುದು ಹೇಗೆ ಎನ್ನುವುದನ್ನು ಹಂತ ಹಂತವಾಗಿ ವಿಡಿಯೋವನ್ನು ತೋರಿಸುವ ಮೂಲಕ ಕನ್ನಡಕ ಬಳಕೆದಾರನಿಗೆ ವಿವರಿಸುತ್ತದೆ.

ಇನ್ನು ವಿಡಿಯೋದಲ್ಲಿರುವ ಧ್ವನಿಯನ್ನು ಕೇಳಿಸಲು ಕನ್ನಡಕದಲ್ಲೇ ಒಂದು ಹೆಡ್‌ಫೋನ್‌ ಸಹ ನೀಡಲಾಗಿದೆ. ಬಿಎಂಡಬ್ಲ್ಯೂ 2007ರಿಂದಲೇ ಆಗ್‌ಮೆಂಟೆಡ್‌ ರಿಯಾಲಿಟಿ ತಂತ್ರಜ್ಞಾನವಿರುವ ಕನ್ನಡಕವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದು ಈಗ ಅಂತಿಮ ಹಂತದಲ್ಲಿ ಈ ಸಂಶೋಧನೆ ಸಾಗುತ್ತಿದೆ.

ಮುಂದಿನ ಪುಟದಲ್ಲಿ ಬಿಎಂಡಬ್ಲ್ಯೂ ಎರ್‌ ತಂತ್ರಜ್ಞಾನದ ಕನ್ನಡಕ ಮತ್ತು ಈ ಕನ್ನಡಕ ಬಳಕೆದಾರಿನಿಗೆ ವಿಡಿಯೋ ಮೂಲಕ ಹೇಗೆ ವಿವರಿಸುತ್ತದೆ ಎಂದು ತೋರಿಸುವ ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

1

1

ಎಆರ್‌ ಕನ್ನಡಕದಲ್ಲಿ ಕಾಣುತ್ತಿರುವ 3ಡಿ ಅನಿಮೇಶನ್‌ ದೃಶ್ಯ

2

2

ಬಿಎಂಡಬ್ಲ್ಯೂ ಎಆರ್‌ ಕನ್ನಡಕ

3

3


ಬಿಎಂಡಬ್ಲ್ಯೂ ಎಆರ್‌ ಕನ್ನಡಕದಲ್ಲಿ ಕಾಣುತ್ತಿರುವ 3ಡಿ ಅನಿಮೇಶನ್‌ ದೃಶ್ಯ

4


ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X