ಫೇಸ್ ಬುಕ್ ಅಲ್ಲಿ ಇರೋದು, ಕಾಮಕ್ಕೆ ಸಮ ಅಂತೆ!

Posted By: Varun
ಫೇಸ್ ಬುಕ್ ಅಲ್ಲಿ ಇರೋದು, ಕಾಮಕ್ಕೆ ಸಮ ಅಂತೆ!

ಹೌದು. ನಿಮ್ಮ ಬಗ್ಗೆ ನೀವೇ ಫೇಸ್ ಬುಕ್ ನಲ್ಲಿ ಹೇಳಿಕೊಳ್ಳುವ ಫೀಲಿಂಗ್, ಕಾಮ ಸುಖದಷ್ಟೇ ಭಾವೋದ್ರೇಕ ಉಂಟಾಗುತ್ತದಂತೆ.

ಅದೂ ಅಲ್ಲದೆ, ಫೇಸ್ ಬುಕ್ ನಲ್ಲಿ ನಿಮ್ಮ ಬಗ್ಗೆ ನೀವೇ ಹೇಳಿಕೊಂಡರೆ ಸಿಗುವ ಫೀಲಿಂಗ್, ಭೂರೀ ಭೋಜನವನ್ನು ಸವಿಯುವುದು, ಹಣ ಗಳಿಸುವುದು ಮತ್ತು ಕಾಮ ಸುಖ, ಈ ಮೂರೂ ಮಾಡುವಾಗ ಸಿಗುವಾಗ ಉಂಟಾಗುವ ತೃಪ್ತಿ ಯಷ್ಟೇ ಫೀಲಿಂಗ್ ಅನ್ನು ಕೊಡುತ್ತದೆ ಎಂದು ಹಾವರ್ಡ್ ವಿವಿಯ ನ್ಯೂರೋ ಸೈಂಟಿಸ್ಟ್ ಗಳ ತಂಡ ಈ ಅಚ್ಚರಿಯ ವರದಿಯನ್ನು ಪ್ರಕಟಿಸಿದೆ.

ಈ ವಿಜ್ಞಾನಿಗಳ ತಂಡ, ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿರುವ ಕೆಲವು ಜನರನ್ನು MRI ಸ್ಕ್ಯಾನ್ ಮಾಡಿ ಪರೀಕ್ಷೆಗೆ ಒಳಪಡಿಸಿ, ರತಿ ಸುಖ, ಹಣ ಗೆಲ್ಲುವುದು ಇಲ್ಲವೆ ಸಖತ್ತಾದ ಊಟಮಾಡಿದಾಗ ಮೆದುಳಿನ mesolimbic dopamine system ನಲ್ಲಿ ಉಂಟಾಗುವ ಚಟುವಟಿಕೆಯನ್ನು ಅಭ್ಯಾಸ ಮಾಡಲಾಯಿತಂತೆ. ನಂತರ, ಆ ವ್ಯಕ್ತಿಗಳು ಫೇಸ್ ಬುಕ್ ನಲ್ಲಿ ತಮ್ಮ ಬಗ್ಗೆ ತಾವೇ ಹೇಳಿಕೊಳ್ಳುವಾಗ, ಮೆದುಳಿನ mesolimbic dopamine system ಅನ್ನು ಪರೀಕ್ಷಿಸಿದಾಗ ಅಲ್ಲಿ ಚಟುವಟಿಕೆ ಕಂಡುಬಂದಿತಂತೆ.

ಹಾಗಾಗಿಯೇ ಜನ, ತಮ್ಮ ಬಗ್ಗೆ ತಾವೇ ಬೇರೆಯವರಿಗೆ ಹೇಳಿಕೊಂಡು ಸಂತೋಷ ಪಡುತ್ತಾರೆ ಅಂತ ಈ ವರದಿ ತಿಳಸಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot