ಭಾರತದಲ್ಲಿ ಬೋಟ್‌ ಅವಾಂಟೆ 4000DA ಸೌಂಡ್‌ಬಾರ್‌ ಲಾಂಚ್‌!..ವಿಶೇಷತೆ ಏನು?

|

ಗುಣಮಟ್ಟದ ಆಡಿಯೋ ಆಕ್ಸಿಸರೀಸ್‌ಗಳಿಗೆ ಬೋಟ್‌ ಕಂಪೆನಿ ಸೈ ಎನಿಸಿಕೊಂಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ವಿಧದ ಇಯರ್‌ಫೋನ್‌, ಸೌಂಡ್‌ಬಾರ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ತನ್ನ ಹೊಸ ಬೋಟ್ ಅವಾಂಟೆ ಬಾರ್ 4000DA ಸೌಂಡ್‌ಬಾರ್ ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಇದು ಡಾಲ್ಬಿ ಅಟ್ಮೋಸ್ ಬೆಂಬಲ ಮತ್ತು 2.1.2 ಚಾನೆಲ್ ಸರೌಂಡ್ ಸೌಂಡ್‌ನಂತಹ ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿದೆ.

ಬೋಟ್‌

ಹೌದು, ಬೋಟ್‌ ಕಂಪೆನಿ ತನ್ನ ಅವಾಂಟೆ ಬಾರ್ ಸರಣಿಯಲ್ಲಿ ಹೊಸ ಬೋಟ್‌ ಅವಾಂಟೆ 4000DA ಸೌಂಡ್‌ಬಾರ್‌ ಲಾಂಚ್‌ ಮಾಡಿದೆ. ಇದು ಇದುವರೆಗಿನ ಸೌಂಡ್‌ಬಾರ್‌ಗಳಲ್ಲಿ ಅತ್ಯಂತ ದುಬಾರಿ ಕೊಡುಗೆಯಾಗಿದೆ. ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಎಚ್‌ಡಿಎಂಐ ಎಆರ್‌ಸಿ ಬೆಂಬಲದೊಂದಿಗೆ ಬರುತ್ತದೆ. ಬೋಟ್ ಅವಾಂಟೆ ಬಾರ್ 4000 ಡಿಎ ಸೌಂಡ್‌ಬಾರ್ ಒಟ್ಟು ಏಳು ಡ್ರೈವರ್‌ಗಳೊಂದಿಗೆ ಬರುತ್ತದೆ, ಇದು ತಲ್ಲೀನಗೊಳಿಸುವ ಅನುಭವವನ್ನು ನೀಡುತ್ತದೆ. ಇನ್ನುಳಿದಂತೆ ಈ ಸೌಂಡ್‌ಬಾರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬೋಟ್‌

ಬೋಟ್‌ ಅವಾಂಟೆ 4000DA ಸೌಂಡ್‌ಬಾರ್‌ ಅತ್ಯುತ್ತಮವಾದ ವಿನ್ಯಾಸ ಹಾಗೂ ವಿಶೇಷ ಫೀಚರ್ಸ್‌ಗಳನ್ನು ಹೊಮದಿದೆ. ಇದು ಮಾಸ್ಟರ್ ರಿಮೋಟ್ ಕಂಟ್ರೋಲ್ ಅನ್ನು ಸಹ ಹೊಂದಿದ್ದು, ವಿವಿಧ ಸೆಟ್ಟಿಂಗ್‌ಗಳನ್ನು ಹೊಂದಿಸಲು ಸುಲಭಗೊಳಿಸುತ್ತದೆ. ಇನ್ನು ಬೋಟ್‌ ಅವಾಂಟೆ ಬಾರ್ 4000 ಡಿಎ 2.1.2 ಸೌಂಡ್‌ಬಾರ್ ಅನ್ನು ಸಬ್ ವೂಫರ್ ಕಾನ್ಫಿಗರೇಶನ್ ಮತ್ತು ವೈರ್ಡ್ 60 ಡಬ್ಲ್ಯೂ ಸಬ್ ವೂಫರ್ ಹೊಂದಿದೆ. ಇದು ಡಿಜಿಟಲ್ ಆಡಿಯೊ ಪವರ್ ಆಂಪ್ಲಿಫಯರ್ ಡ್ರೈವರ್‌ಗಳನ್ನು ಬಳಸುತ್ತದೆ.

ಸೌಂಡ್‌ಬಾರ್‌

ಇನ್ನು ಈ ಸೌಂಡ್‌ಬಾರ್‌ ನಾಲ್ಕು 2.25-ಇಂಚಿನ ಆಡಿಯೋ ಡ್ರೈವರ್‌ ಮತ್ತು ಎರಡು 2-ಇಂಚಿನ ಡ್ರೈವರ್‌ಗಳು ಮತ್ತು 6.5-ಇಂಚಿನ ಡ್ರೈವರ್‌ಗಳನ್ನು ಹೊಂದಿದೆ. ಈ ಆಡಿಯೋ ಡ್ರೈವರ್‌ಗಳು ಕ್ರಮವಾಗಿ 30W, 10W, ಮತ್ತು 60W output ಅನ್ನು ನೀಡಲಿವೆ. ಇದರಲ್ಲಿ 60W output ಸಬ್ ವೂಫರ್‌ನಿಂದ ಬರುತ್ತದೆ. ಇದಲ್ಲದೆ ಸೌಂಡ್‌ಬಾರ್ ಫ್ರಿಕ್ವೆನ್ಸಿ ರೆಸ್ಪಾನ್ಸ್‌ ಶ್ರೇಣಿಯನ್ನು 80Hz ನಿಂದ 20,000Hz ಮತ್ತು ಒಟ್ಟು ವಿದ್ಯುತ್ ಉತ್ಪಾದನೆ 200W ಹೊಂದಿದೆ. ಕನೆಕ್ಟಿವಿಟಿಗಾಗಿ ನೀವು ಎಂಟು ರಿಂದ 10 ಮೀಟರ್ ವ್ಯಾಪ್ತಿಯ ಬ್ಲೂಟೂತ್ 5.0, ಸಹಾಯಕ ಸಂಪರ್ಕ, ಯುಎಸ್‌ಬಿ ಪೋರ್ಟ್, ಆಪ್ಟಿಕಲ್ ಪೋರ್ಟ್ ಮತ್ತು ಆಡಿಯೋ ರಿಟರ್ನ್ ಚಾನೆಲ್ ಫಿಚರ್ಸ್‌ ಜೊತೆಗೆ ಎಚ್‌ಡಿಎಂಐ ಅನ್ನು ಪಡೆದುಕೊಮಡಿದೆ.

ಬೋಟ್‌

ಇದಲ್ಲದೆ ಬೋಟ್‌ ಅವಾಂಟೆ ಬಾರ್ 4000 ಡಿಎ ಡಾಲ್ಬಿ ಅಟ್ಮೋಸ್ 3 ಡಿ ತಂತ್ರಜ್ಞಾನ ಮತ್ತು ಮಾಸ್ಟರ್ ರಿಮೋಟ್ ಕಂಟ್ರೋಲ್ನೊಂದಿಗೆ ಬರುತ್ತದೆ. ಆಲಿಸುವ ಅನುಭವವನ್ನು ಹೆಚ್ಚು ಅನುಕೂಲಕರವಾಗಿಸಲು ಬ್ಲೂಟೂತ್ ಸಾಧನಗಳನ್ನು ಜೋಡಿಸಲು, ಮ್ಯೂಟ್ / ಅನ್‌ಮ್ಯೂಟ್, ಪ್ಲೇ / ವಿರಾಮ, ಬಾಸ್ / ಟ್ರೆಬಲ್ / ವಾಲ್ಯೂಮ್ ಅನ್ನು ಹೊಂದಿಸಲು ಮತ್ತು ಟ್ರ್ಯಾಕ್‌ಗಳನ್ನು ಬದಲಾಯಿಸಲು ಇದು ನಿಮ್ಮನ್ನು ಅನುಮತಿಸುತ್ತದೆ. ಇದು ಎರಡು ಎಎಎ ಬ್ಯಾಟರಿಗಳಲ್ಲಿ ಚಲಿಸುತ್ತದೆ. ಸದ್ಯ ಬೋಟ್ ಅವಾಂಟೆ ಬಾರ್ 4000 ಡಿಎ ಸೌಂಡ್‌ಬಾರ್ ಪರಿಚಯಾತ್ಮಕ ಬೆಲೆ 14,999 ರೂ ಆಗಿದೆ. ಇದರ ಮೂಲ ಬೆಲೆ 24,990 ರೂ ಆಗಿದೆ. ಇದು ಫೆಬ್ರವರಿ 20 ರಂದು ಬೆಳಿಗ್ಗೆ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ಬೋಟ್‌ನ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಲು ಲಭ್ಯವಿರುತ್ತದೆ.

Most Read Articles
Best Mobiles in India

English summary
Boat Aavante Bar 4000DA Soundbar Launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X