ಬೋಟ್‌ ಏರ್‌ಡೋಪ್ಸ್ 511 v2 ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್ ಬಿಡುಗಡೆ!

|

ಇದು ಸ್ಮಾರ್ಟ್‌ಫೋನ್‌ ಜಮಾನ, ಸ್ಮಾರ್ಟ್‌ಫೋನ್‌ಗಳಿಲ್ಲದೆ ಹೊರಗಡೆ ಬರುವುದಕ್ಕೂ ಹಿಂದೂ ಮುಂದೆ ನೋಡುವ ಯುವಜನತೆಯ ಜಮಾನ. ಸದ್ಯ ನಿಮಗೆಲ್ಲಾ ತಿಳಿದಿರುವಂತೆ ಎಲ್ಲರ ಕೈ ನಲ್ಲೂ ಸ್ಮಾರ್ಟ್‌ಫೋನ್‌ಗಳು ರಿಂಗಣಿಸುತ್ತಿವೆ. ಇನ್ನು ಸ್ಮಾರ್ಟ್‌ಫೋನ್‌ ವಲಯವೂ ಬೆಳೆದಂತೆ ಇಯರ್‌ಫೋನ್‌ ಮಾರುಕಟ್ಟೆ ಕೂಡ ಸಾಕಷ್ಟು ವಿಶಾಲವಾಗಿದೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವಿಭಿನ್ನ ಮಾದರಿಯ ಇಯರ್‌ಫೋನ್‌, ಇಯರ್‌ಬಡ್ಸ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿವೆ. ಇದರಲ್ಲಿ ಬೋಟ್ ಕಂಪೆನಿ ಕೂಡ ಒಂದಾಗಿದ್ದು, ಇದೀಗ ತನ್ನ ಮತ್ತೊಂದು ಹೊಸ ಜೋಡಿ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಇಯರ್‌ಫೋನ್‌

ಹೌದು, ಜನಪ್ರಿಯ ಇಯರ್‌ಫೋನ್‌ ತಯಾರಕ ಬೋಟ್‌ ಕಂಪೆನಿ ತನ್ನ ಹೊಸ ಟ್ರೂಲಿ ವಾಯರ್‌ಲೆಸ್‌ ಏರ್‌ಡೋಪ್ಸ್ 511 v2 ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಹೊಸ ವಾಯರ್‌ಲೆಸ್‌ ಇಯರ್‌ಬಡ್‌ಗಳು ಆಕ್ಟಿವ್ ಬ್ಲ್ಯಾಕ್ ಎಂದು ಕರೆಯಲ್ಪಡುವ ಒಂದೇ ಬಣ್ಣದ ರೂಪಾಂತರದಲ್ಲಿ ಲಭ್ಯವಾಗಲಿದೆ. ಅಲ್ಲದೆ ಇದು ತಾಮ್ರದ ಲೇಪನ ಬಾಡಿ ವಿನ್ಯಾಸವನ್ನ ಹೊಂದಿದೆ. ಇನ್ನು ಈ ಇಯರ್‌ಫೋನ್‌ ವಿಶೇಷತೆ ಹಾಗೂ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಟ್ ಏರ್‌ಡೋಪ್ಸ್

ಬೋಟ್ ಏರ್‌ಡೋಪ್ಸ್ 511 v2 ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್ ಸ್ಪೋರ್ಟ್ 6mm ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಅಲ್ಲದೆ ಈ ಇಯರ್‌ಬಡ್ಸ್‌ 20Hz-20KHz ಆವರ್ತನ ಶ್ರೇಣಿಯನ್ನು ಹೊಂದಿವೆ. ಇನ್ನು ಈ ಇಯರ್‌ಬಡ್ಸ್‌ ಬ್ಲೂಟೂತ್ 5.0 ಗೆ ಬೆಂಬಲವನ್ನು ನೀಡಲಿದೆ. ಅಲ್ಲದೆ 10 ಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, ಈ ಇಯರ್‌ಬಡ್‌ಗಳು ತಲಾ 5.5 ಗ್ರಾಂ ತೂಕವಿರುವುದರಿಂದ ಸಾಕಷ್ಟು ಹಗುರವಾಗಿರುತ್ತವೆ. ಇದಲ್ಲದೆ ಬೋಟ್ ಏರ್‌ಡೋಪ್ಸ್ 511 v2 ನಾಲ್ಕು ಮೈಕ್ರೊಫೋನ್‌ಗಳನ್ನು ಒಳಗೊಂಡಿದೆ. ಅಲ್ಲದೆ ದೂಳು ಮತ್ತು ವಾಟರ್‌ಪ್ರೂಪ್‌ ವ್ಯವಸ್ಥೆಯನ್ನ ಹೊಂದಿದ್ದು, IPX4 ರೇಟ್ ಅನ್ನು ಹೊಂದಿದೆ.

ಇಯರ್‌ಬಡ್ಸ್‌

ಇನ್ನು ಈ ಇಯರ್‌ಬಡ್ಸ್‌ನ ಪ್ರತಿ ಇಯರ್‌ಬಡ್ 60mAh ಬ್ಯಾಟರಿಯನ್ನು ಹೊಂದಿದ್ದು, 500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ಅಪ್‌ ಅನ್ನು ಹೊಂದಿದೆ. ಇದಲ್ಲದೆ ಈ ಇಯರ್‌ಬಡ್‌ಗಳನ್ನು ನಾಲ್ಕು ಬಾರಿ ಚಾರ್ಜ್ ಮಾಡಬಹುದೆಂದು ಬೋಟ್ ಹೇಳಿಕೊಂಡಿದ್ದು, 24 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ಸಂಯೋಜಿಸಲಾಗಿದೆ. ಜೊತೆಗೆ ಈ ಇಯರ್‌ಬಡ್‌ ಪ್ಲೇಬ್ಯಾಕ್ ಟೈಂ 6 ಗಂಟೆಗಳು ಎನ್ನಲಾಗಿದೆ. ಅಲ್ಲದೆ ಪ್ರತಿ ಇಯರ್‌ಬಡ್‌ನಲ್ಲಿ ಆಡಿಯೊ ಪ್ಲೇಬ್ಯಾಕ್ ಮತ್ತು ಬಹುಕ್ರಿಯಾತ್ಮಕ ಬಟನ್ ಇದೆ ಎಂದು ಬೋಟ್ ಕಂಪೆನಿ ಹೇಳಿದೆ.

ಬೋಟ್ ಏರ್‌ಡೋಪ್ಸ್

ಸದ್ಯ ಬೋಟ್ ಏರ್‌ಡೋಪ್ಸ್ 511 v2 ಬೋಟ್‌ನ ತತ್‌ಕ್ಷಣ ವೇಕ್ ಎನ್ ಪೇರ್ (IWP) ಕಾರ್ಯವನ್ನು ಹೊಂದಿದ್ದು, ಏರ್‌ಡೋಪ್ಸ್ 511 v2 ಅನ್ನು ಪ್ರಕರಣವನ್ನು ತೆರೆಯುವ ಮೂಲಕ ಫೋನ್‌ಗೆ ಜೋಡಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಚಾರ್ಜಿಂಗ್ ಪ್ರಕರಣವು 10W ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದ್ದು, ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 2 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ಈ ಏರ್‌ಡೋಪ್ಸ್ 511 v2 ಕಿವಿಯ ವಿನ್ಯಾಶಕ್ಕೆ ತಕ್ಕಂತೆ ಹೊಂದಿಕೊಳ್ಳಲಿದೆ ಎಂದು ಹೇಳಲಾಗಿದೆ. ಇನ್ನು ಬೋಟ್ ಏರ್‌ಡೋಪ್ಸ್ 511 v2 ಬೆಲೆ ಭಾರತದಲ್ಲಿ 2,999 ರೂ ಆಗಿದ್ದು, ಇದು ಒಂದೇ ಆಕ್ಟಿವ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Boat has launched a new pair of true wireless earphones called the Airdopes 511V2.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X