ಬೋಟ್ ಏರ್‌ಡೋಪ್ಸ್ 120 ಲಾಂಚ್: ಒಂದೇ ಚಾರ್ಜ್‌ನಲ್ಲಿ 40 ಗಂಟೆಯ ಪ್ಲೇ ಬ್ಯಾಕ್
ಇಯರ್‌ಬಡ್ಸ್ ಮೂಲಕ ಆಗಾಗ್ಗೆ ಸೌಂಡ್ ಮಾಡುತ್ತಿರುವ ಬೋಟ್ ಇದೀಗ ಮತ್ತೊಂದು ಆಕರ್ಷಕ ಹೊಸ ಇಯರ್‌ಬಡ್ಸ್ ಅನ್ನು ಲಾಂಚ್ ಮಾಡಿದೆ. ಈ ಡಿವೈಸ್ ಅನ್ನು ಒಮ್ಮೆ ಚಾರ್ಜ್ ಮಾಡಿದ್ರೆ 40h ಬಳಕೆ ಮಾಡಬಹುದಾಗಿದೆ.
ಹೌದು, ಬೋಟ್ ಸಂಸ್ಥೆ ಇದೀಗ ಬೋಟ್ ಏರ್‌ಡೋಪ್ಸ್ 120 ಅನ್ನು ಲಾಂಚ್ ಮಾಡಿದೆ. ಈ ಮೂಲಕ ಏರ್‌ಡೋಪ್ಸ್ ಸರಣಿಯ ಹೊಸ ಕೈಗೆಟುಕುವ ಸದಸ್ಯನಾಗಿ ಇದು ಗುರುತಿಸಿಕೊಂಡಿದೆ. ಇದಕ್ಕೂ ಮೊದಲು ಸ್ಟೋನ್ ಸ್ಪಿಂಕ್ಸ್ ಪ್ರೊ ಬ್ಲೂಟೂತ್ ಸ್ಪೀಕರ್ ಅನ್ನು ಲಾಂಚ್ ಮಾಡಲಾಗಿತ್ತು. ಹಾಗಿದ್ರೆ, ಏರ್‌ಡೋಪ್ಸ್ ಬೆಲೆ ಹಾಗೂ ಫೀಚರ್ಸ್ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬೋಟ್ ಏರ್‌ಡೋಪ್ಸ್: ಈ ಏರ್‌ಡೋಪ್ಸ್ ನಲ್ಲಿ ತಲ್ಲೀನಗೊಳಿಸುವ ಅನುಭವವನ್ನು ಬಳಕೆದಾರರಿಗೆ ನೀಡಲು 10mm ಡ್ರೈವರ್‌ಗಳು ಮತ್ತು ಬೋಟ್ ಸಿಗ್ನೇಚರ್ ಸೌಂಡ್ ತಂತ್ರಜ್ಞಾನ ನೀಡಲಾಗಿದೆ. ಹಾಗೆಯೇ ಇನ್ ಇಯರ್ ವಿನ್ಯಾಸ ಆಯ್ಕೆ ಪಡೆದಿದ್ದು, ಕ್ವಾಡ್ ಮೈಕ್ ENx ತಂತ್ರಜ್ಞಾನದಿಂದ ಬಳಕೆದಾರರಿಗೆ ಅತ್ಯುತ್ತಮವಾದ ಅನುಭವ ನೀಡುತ್ತದೆ. ಮತ್ತು ಗೇಮಿಂಗ್ ಪ್ರಿಯರಿಗೆ ವಿಶೇಷ ಅನುಭವ ನೀಡಲು ಬೀಸ್ಟ್ ಮೋಡ್‌ನೊಂದಿಗೆ 65ms ಕಡಿಮೆ ಲೇಟೆನ್ಸಿ ಆಯ್ಕೆ ಪಡೆದಿದೆ.
ಇದರ ಜೊತೆಗೆ ನೀವು ಆಡಿಯೊ ಮತ್ತು ವಿಡಿಯೋ ಸಿಂಕ್‌ನಲ್ಲಿಯೂ ಇದೇ ಅನುಭವ ಪಡೆಯಬಹುದು. ಎಲ್ಲಕ್ಕಿಂತ ಮಿಗಿಲಾಗಿ ಈ ಡಿವೈಸ್‌ನಲ್ಲಿ ಇನ್‌ಸ್ಟಾ ವೇಕ್ ಎನ್‌ಫೇರ್ (Insta Wake N'Pair) ಫೀಚರ್ಸ್ ಆಯ್ಕೆ ನೀಡಲಾಗಿದ್ದು, ಇದರಿಂದ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಯಾವುದೇ ಸ್ಮಾರ್ಟ್ ಡಿವೈಸ್‌ಗೆ ಕ್ಷಣ ಮಾತ್ರದಲ್ಲಿ ಕನೆಕ್ಟ್ ಆಗುವ ಸಾಮರ್ಥ್ಯ ಪಡೆದಿಕೊಂಡಿದೆ.

ಹಾಗೆಯೇ ಬ್ಲೂಟೂತ್ ಆವೃತ್ತಿ v5.3 ಅನ್ನು ಹೊಂದಿದ್ದು, ಯಾವುದೇ ಡಿವೈಸ್‌ಗೆ ಕ್ಷಣ ಮಾತ್ರದಲ್ಲಿ ಕನೆಕ್ಟ್ ಆಗಲಿದೆ. ಜೊತೆಗೆ ಟಚ್ ಕಂಟ್ರೋಲ್ ಆಯ್ಕೆ ಪಡೆದಿದ್ದು, ಈ ಮೂಲಕ ನೀವು ಮ್ಯೂಸಿಕ್ ಹಾಗೂ ಕರೆ ವಿಭಾಗದಲ್ಲಿ ವಿಶೇಷ ಪ್ರಯೋಜನ ಪಡೆಯಬಹುದಾಗಿದೆ. ಇದಿಷ್ಟೇ ಅಲ್ಲದೆ ಹೆಚ್ಚುವರಿ ಅನುಕೂಲಕ್ಕಾಗಿ 65ms ಕಡಿಮೆ ಲೇಟೆನ್ಸಿ ಮೋಡ್, ವಾಯ್ಸ್ ಅಸಿಸ್ಟೆಂಟ್ ಬೆಂಬಲ ಪಡೆದುಕೊಂಡಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಇಯರ್‌ಬಡ್ಸ್ IPX4 ರೇಟಿಂಗ್ ಪಡೆದಿದ್ದು, ಎಲ್ಲಾ ಸಮಯದಲ್ಲೂ ಇದನ್ನು ಬಳಕೆ ಮಾಡಬಹುದಾಗಿದೆ.
ಈ ಡಿವೈಸ್‌ನ ಬ್ಯಾಟರಿ ವಿಚಾರಕ್ಕೆ ಬಂದರೆ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 40 ಗಂಟೆ ಬಳಕೆ ಮಾಡಬಹುದಾಗಿದೆ. ಅಲ್ಲದೆ ಇದರಲ್ಲಿನ ASAP ಚಾರ್ಜ್ ತಂತ್ರಜ್ಞಾನ ಮತ್ತು ಟೈಪ್ ಸಿ ಚಾರ್ಜಿಂಗ್ ಸೌಲಭ್ಯ ಇದಕ್ಕೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡಲಿವೆ. ಅದರಲ್ಲೂ ನೀವು ಕೇವಲ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 120 ನಿಮಿಷಗಳ ಪ್ಲೇಟೈಮ್ ಅನ್ನು ಆನಂದಿಸಬಹುದು.

ಬೋಟ್ ಏರ್‌ಡೋಪ್ಸ್ 120 ಬೆಲೆ ಹಾಗೂ ಲಭ್ಯತೆ: ಈ ಬೋಟ್ ಏರ್‌ಡೋಪ್ಸ್ 120 ಡಾನ್ ಬ್ಲೂ, ಐವರಿ ವೈಟ್ ಮತ್ತು ಆಕ್ಟಿವ್ ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಲಭ್ಯ ಇದ್ದು, ಅಮೆಜನ್ ಮೂಲಕ ಕೇವಲ 899 ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಆದರೆ ಇದನ್ನು ಖರೀದಿ ಮಾಡಬೇಕು ಎಂದರೆ ಕೆಲವು ದಿನ ಕಾಯಬೇಕಿದೆ. ಅಂದರೆ ಮಾರ್ಚ್ 23 ರಂದು ಮಧ್ಯಾಹ್ನ ಸೇಲ್ ಆರಂಭ ಆಗಲಿದೆ.
ಬೋಟ್ ಸ್ಟೋನ್ ಸ್ಪಿನ್ಕ್ಸ್ ಪ್ರೊ ಸ್ಪೀಕರ್: ಕೆಲವು ದಿನಗಳ ಹಿಂದೆ ಈ ಸ್ಪೀಕರ್ ಅನ್ನು ಅನಾವರಣ ಮಾಡಲಾಗಿದ್ದು, ಇದು 20W RMS ಔಟ್‌ಪುಟ್ ಹೊಂದಿದ್ದು, ಸಿಗ್ನೇಚರ್ ಸೌಂಡ್ ತಂತ್ರಜ್ಞಾನದ ಜೊತೆಗೆ ವಿಶೇಷ ಆಡಿಯೋ ಮತ್ತು ಬೇಸ್ ಆಯ್ಕೆಯನ್ನು ಪಡೆದಿದೆ. ಇದರ ಜೊತೆಗೆ ಇನ್‌ಬಿಲ್ಟ್ ಮೈಕ್ರೊಫೋನ್ ಆಯ್ಕೆ ಪಡೆದಿದ್ದು, ಹ್ಯಾಂಡ್ಸ್-ಫ್ರೀ ಕರೆ ಮಾಡಲು ಸಹಾಯ ಮಾಡುತ್ತದೆ. ಈ ಸ್ಪೀಕರ್ ಸಹ IPX4 ಸ್ಪ್ಲಾಶ್ ಪ್ರತಿರೋಧವನ್ನು ಪಡೆದಿದೆ.


Click it and Unblock the Notifications








