Home
ಸುದ್ದಿಜಾಲ

ಭಾರತದಲ್ಲಿ ಬೋಟ್‌ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಅನಾವರಣ! ಬೆಲೆ ಎಷ್ಟು?

ಇಯರ್‌ಫೋನ್‌ ಮಾರುಕಟ್ಟೆಯಲ್ಲಿ ಬೋಟ್‌ ಕಂಪೆನಿಯ ಡಿವೈಸ್‌ಗಳಿಗೆ ಭಾರಿ ಬೇಡಿಕೆಯಿದೆ. ತನ್ನ ವಿಭಿನ್ನ ಶೈಲಿಯ ಇಯರ್‌ಫೋನ್‌ಗಳಿಂದ ಯುವಜನರ ಮನಸ್ಸನ್ನು ಗೆದ್ದಿದೆ. ಇದೀಗ ತನ್ನ ಹೊಸ ಬೋಟ್‌ ಏರ್‌ಡೂಪ್ಸ್‌ 121 V2 ಪ್ಲಸ್ ಇಯರ್‌ಬಡ್ಸ್‌ ಲಾಂಚ್‌ ಮಾಡಿದೆ. ಇದು 10mm ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಅತ್ಯಾಕರ್ಷಕ ಡಿಸೈನ್‌ ಹೊಂದಿದೆ.

ಹೌದು, ಬೋಟ್‌ ಸಂಸ್ಥೆ ಬೋಟ್‌ ಏರ್‌ಡೂಪ್ಸ್‌ 121 V2 ಪ್ಲಸ್ ಅನ್ನು ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ ವಾಯರ್‌ಲೆಸ್‌ ಕನೆಕ್ಟಿವಿಟಿಗಾಗಿ ಬ್ಲೂಟೂತ್‌ v5.3 ಅನ್ನು ಬೆಂಬಲಿಸಲಿದೆ. ಜೊತೆಗೆ ತಲ್ಲೀನಗೊಳಿಸುವ ಆಲಿಸುವ ಅನುಭವಕ್ಕಾಗಿ ಬೋಟ್‌ನ ಸಿಗ್ನೇಚರ್‌ ಸೌಂಡ್‌ ತಂತ್ರಜ್ಞಾನವನ್ನು ಹೊಂದಿದೆ. ಹಾಗಾದ್ರೆ ಈ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಬೋಟ್‌ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಅನಾವರಣ! ಬೆಲೆ ಎಷ್ಟು?

ಬೋಟ್‌ ಏರ್‌ಡೂಪ್ಸ್‌ 121 V2 ಪ್ಲಸ್ ಇಯರ್‌ಬಡ್ಸ್‌ ಫೀಚರ್ಸ್‌ ಹೇಗಿದೆ?
ಬೋಟ್‌ ಏರ್‌ಡೂಪ್ಸ್‌ 121 V2 ಪ್ಲಸ್ ಇಯರ್‌ಬಡ್ಸ್‌ ಪವರ್‌ಫುಲ್‌ ಆಡಿಯೊ ಗುಣಮಟ್ಟಕ್ಕಾಗಿ 10mm ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ವಿಶ್ವಾಸಾರ್ಹ ವಾಯರ್‌ಲೆಸ್ ಕನೆಕ್ಟಿವಿಟಿಗಾಗಿ ಬ್ಲೂಟೂತ್ v5.3 ಅನ್ನು ಬೆಂಬಲಿಸಲಿದೆ. ಜೊತೆಗೆ boAt ನ ಸಿಗ್ನೇಚರ್ ಸೌಂಡ್ ತಂತ್ರಜ್ಞಾನವನ್ನು ಹೊಂದಿದೆ. ಇದರಲ್ಲಿ ಹೆಚ್ಚುವರಿಯಾಗಿ, ಕ್ವಾಡ್ ಮೈಕ್ ಇಎನ್ಎಕ್ಸ್ ಟೆಕ್ನಾಲಜಿಯನ್ನು ನೀಡಲಾಗಿದ್ದು, ಕರೆ ಗುಣಮಟ್ಟವನ್ನು ಹೆಚ್ಚಿಸಲಿದೆ.

ಇನ್ನು ಈ ಇಯರ್‌ಬಡ್ಸ್‌ಗಳು 50 ಎಂಎಸ್ ಲೋ ಲೇಟೆನ್ಸಿ ಹೊಂದಿರುವ ಬೀಸ್ಟ್ ಮೋಡ್ ಅನ್ನು ಒಳಗೊಂಡಿದೆ. ಇದರಿಂದ ಗೇಮಿಂಗ್ ಮತ್ತು ವೀಡಿಯೊ ಪ್ಲೇಬ್ಯಾಕ್‌ಗೆ ಪರಿಪೂರ್ಣವಾಗಿದೆ. ಇದು ಸುಲಭ ಮತ್ತು ವೇಗದ ಸಾಧನ ಜೋಡಣೆಗಾಗಿ IWP (Insta Wake N'Pair) ಅನ್ನು ಸಹ ಒಳಗೊಂಡಿದೆ. ಈ ಇಯರ್‌ಬಡ್ಸ್‌ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಕೂಡ ಬೆಂಬಲಿಸಲಿದ್ದು, ಹೆಚ್ಚಿನ ಅನುಕೂಲಕ್ಕಾಗಿ ಟಚ್‌ ಕಂಟ್ರೋಲ್‌ಗಳೊಂದಿಗೆ ಬರಲಿದೆ.

ಭಾರತದಲ್ಲಿ ಬೋಟ್‌ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಅನಾವರಣ! ಬೆಲೆ ಎಷ್ಟು?

ಇದಲ್ಲದೆ ಈ ಇಯರ್‌ಬಡ್ಸ್‌ 50 ಗಂಟೆಗಳವರೆಗೆ ಒಟ್ಟು ಪ್ಲೇಬ್ಯಾಕ್ ಟೈಂ ನೀಡಲಿದೆ. ಇದು ASAP ಚಾರ್ಜ್ ಟೆಕ್ನಾಲಜಿ ಮತ್ತು ಟೈಪ್-ಸಿ ಕನೆಕ್ಟರ್ ಅನ್ನು ಹೊಂದಿದೆ. ಅಲ್ಲದೆ ಕೇವಲ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 120 ನಿಮಿಷಗಳ ಪ್ಲೇಬ್ಯಾಕ್‌ ಟೈಂ ನೀಡಲಿದೆ. ಇದು ಪ್ರಯಾಣ ಮಾಡುವ ಬಳಕೆದಾರಿಗೆ ಹೆಚ್ಚು ಅನುಕೂಲಕರವಾಗಿರಲಿದೆ. ಇನ್ನು ಇಯರ್‌ಬಡ್ಸ್‌ ಸ್ಪ್ಲಾಶ್ ಮತ್ತು ಬೆವರಿನಿಂದ ರಕ್ಷಣೆಗಾಗಿ IPX4-ರೇಟಿಂಗ್‌ ಹೊಂದಿದೆ. ಇದು ವ್ಯಾಯಾಮದ ಸಮಯದಲ್ಲಿ ಅಥವಾ ಲಘು ಮಳೆಯಲ್ಲಿ ಬಳಸಲು ಸೂಕ್ತವಾಗಿದೆ. ಇನ್ನು ಇಯರ್‌ಬಡ್ಸ್‌ 1 ವರ್ಷದ ವಾರಂಟಿಯನ್ನು ಹೊಂದಿದ್ದು, ಗ್ರಾಹಕರಿಗೆ ಹೆಚ್ಚುವರಿ ಭರವಸೆಯನ್ನು ನೀಡಲಿದೆ.

ಭಾರತದಲ್ಲಿ ಬೋಟ್‌ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಅನಾವರಣ! ಬೆಲೆ ಎಷ್ಟು?

ಬೋಟ್‌ ಏರ್‌ಡೂಪ್ಸ್‌ 121 V2 ಪ್ಲಸ್ ಬೆಲೆ ಮತ್ತು ಲಭ್ಯತೆ
ಬೋಟ್‌ ಏರ್‌ಡೂಪ್ಸ್‌ 121 V2 ಪ್ಲಸ್ ಇಯರ್‌ಬಡ್ಸ್‌ ಭಾರತದಲ್ಲಿ 1,299ರೂ ಬೆಲೆಯನ್ನು ಹೊಂದಿದ್ದು, ಅಮೆಜಾನ್‌.ಇನ್‌ ನಲ್ಲಿ ಖರೀದಿಸಬಹುದಾಗಿದೆ. ಈ ಇಯರ್‌ಬಡ್ಸ್‌ ಮೆರೈನ್ ಬ್ಲೂ, ಆಕ್ಟಿವ್ ಬ್ಲ್ಯಾಕ್ ಮತ್ತು ಸ್ಲೇಟ್ ಗ್ರೇ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಇನ್ನು ಬೋಟ್‌ ಕಂಪೆನಿ ಇದೇ ವರ್ಷ ಬೋಟ್‌ ಲೂನಾರ್ ಟೈಜೆನ್ ಸ್ಮಾರ್ಟ್‌ವಾಚ್‌ ಪರಿಚಯಿಸಿತ್ತು. ಈ ಸ್ಮಾರ್ಟ್‌ವಾಚ್‌ 1.45 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 600 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಬೆಂಬಲವನ್ನು ಹೊಂದಿದ್ದು, ಮೊಬೈಲ್‌ ಕರೆಗಳನ್ನು ಕಂಟ್ರೋಲ್‌ ಮಾಡಲಿದೆ. ಇದಕ್ಕಾಗಿ ತ್ವರಿತ ಡಯಲ್ ಪ್ಯಾಡ್, ವಾಚ್‌ನಲ್ಲಿ 10 ಸಂಪರ್ಕಗಳನ್ನು ಸೇವ್‌ ಮಾಡುವುದಕ್ಕೆ ಅವಕಾಶವನ್ನು ಹೊಂದಿದೆ.

ಈ ಸ್ಮಾರ್ಟ್ ವಾಚ್ ಕೂಡ ವಿವಿಧ ಮಾದರಿಯ ಹೆಲ್ತ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಹೃದಯ ಬಡಿತ, SpO2, ಮುಟ್ಟಿನ ಚಕ್ರ ಮತ್ತು ನಿದ್ರೆಯನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್‌ವಾಚ್‌ ಸಿಟ್ಟಿಂಗ್‌ ರಿಮೈಂಡರ್‌, ಕ್ಯಾಮರಾ ಕಂಟ್ರೋಲ್‌, ಲೈವ್ ಕ್ರಿಕೆಟ್ ಸ್ಕೋರ್‌ಗಳು, ಮ್ಯೂಸಿಕ್‌ ಕಂಟ್ರೋಲ್‌, ವೆದರ್‌, ಅಲಾರಂ, ಕೌಂಟ್‌ಡೌನ್, ಸ್ಟಾಪ್‌ವಾಚ್, DND, ಫೈಂಡ್‌ ಮೈ ಫೋನ್ ನಂತಹ ಹೆಚ್ಚುವರಿ ಫೀಚರ್ಸ್‌ಗಳನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ IP67 ನೀರು ಮತ್ತು ಧೂಳಿನ ನಿರೋಧಕ ಬೆಂಬಲವನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ 7 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.

Best Mobiles in India

English summary
BoAt Airdopes 121 V2 Plus TWS earbuds launched: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+