Home
ಸುದ್ದಿಜಾಲ

ಬೋಟ್‌ ಕಂಪೆನಿಯಿಂದ ಕೈ ಗೆಟಕುವ ಬೆಲೆಯ ಇಯರ್‌ಫೋನ್‌ ಬಿಡುಗಡೆ!

ಬೋಟ್‌ ಕಂಪೆನಿ ತನ್ನ ಗುಣಮಟ್ಟದ ಇಯರ್‌ಫೋನ್‌ಗಳ ಮೂಲಕ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಇಯರ್‌ಫೋನ್‌ಗಳನ್ನ ಬೋಟ್‌ ಕಂಪೆನಿ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಬೋಟ್ ಏರ್‌ಡೋಪ್ಸ್ 131 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಫೋನ್‌ ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದ್ದು, ಇದರ ಬೆಲೆ 1,299.ರೂ. ಆಗಿದೆ. ಅಲ್ಲದೆ ಈ ಇಯರ್‌ಫೋನ್‌ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ.

ಬೋಟ್‌ ಏರ್‌ಡೂಪ್ಸ್‌ 131

ಹೌದು, ಬೋಟ್‌ ಕಂಪೆನಿ ತನ್ನ ಹೊಸ ಬೋಟ್‌ ಏರ್‌ಡೂಪ್ಸ್‌ 131 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು ಬೋಟ್‌ ಕಂಪೆಇ ಇಯರ್‌ಫೋನ್‌ಗಳು ಮಾತ್ರವಲ್ಲದೆ ವಾಯರ್‌ಡ್‌ ಮತ್ತು ವಾಯರ್‌ ಲೆಸ್ ಹೆಡ್‌ಫೋನ್‌ಗಳು, ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳು, ವಾಯರ್‌ಲೆಸ್‌ ಸ್ಪೀಕರ್‌ಗಳು, ಸೌಂಡ್‌ಬಾರ್‌ಗಳನ್ನು ಆನ್‌ಲೈನ್ ಮೂಲಕ ದೇಶದ ವಿವಿಧ ವೈಯಕ್ತಿಕ ಆಡಿಯೊ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಸದ್ಯ ಇದೀಗ ಬಿಡುಗಡೆ ಮಾಡಿರುವ ಬೋಟ್ ಏರ್‌ಡೋಪ್ಸ್ 131 ಇದೇ ಆಗಸ್ಟ್ 22 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ. ಇನ್ನುಳಿದಂತೆ ಈ ಇಯರ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಡೋಪ್ಸ್‌

ಬೋಟ್‌ ಏರ್‌ಡೋಪ್ಸ್‌ 131 ಟ್ರೂಲಿ ವಾಯರ್‌ಲೆಸ್‌ ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಆಗಿದೆ. ಅಲ್ಲದೆ ಏರ್‌ಡೋಪ್ಸ್ 131 ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಅನ್ನು ಹೊಂದಿದೆ. ಇನ್ನು ಈ ಇಯರ್‌ಫೊನ್‌ ಹೊಸ ಚಾರ್ಜಿಂಗ್ ಪೋರ್ಟ್ ಫೀಚರ್ಸ್‌ ಅನ್ನು ಹೊಂದಿದೆ. ಇದಲ್ಲದೆ ಈ ಇಯರ್‌ಫೋನ್‌ಗಳಲ್ಲಿ ಮೂರು ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ, ಮತ್ತು ಹೆಚ್ಚುವರಿ ಪ್ರತಿ ಚಾರ್ಜ್ ಸೈಕಲ್‌ಗೆ ಒಟ್ಟು 15 ಗಂಟೆಗಳವರೆಗೆ ನಾಲ್ಕು ಚಾರ್ಜಿಂಗ್‌ ಆಯ್ಕೆಯನ್ನು ಹೊಂದಿದೆ. ಇದಕ್ಕಾಗಿ ಈ ಇಯರ್‌ಫೋನ್ಸ್‌ ಇನ್‌ಸ್ಟಾ ವೇಕ್-ಎನ್-ಪೇರ್ ಅನ್ನು ಒಳಗೊಂಡಿರುತ್ತದೆ.

ಚಾರ್ಜಿಂಗ್

ಇದು ಚಾರ್ಜಿಂಗ್ ಕೇಸ್‌ನ ಮುಚ್ಚಳವನ್ನು ತೆರೆದಾಗ ತಕ್ಷಣ ಜೋಡಿಯಾಗಿರುವ ಸ್ಮಾರ್ಟ್‌ಫೋನ್‌ಗೆ ತಕ್ಷಣ ಕನೆಕ್ಟ್‌ ಮಾಡಲು ಅನುವು ಮಾಡಿಕೊಡುತ್ತದೆ. ಇನ್ನು ಈ ಇಯರ್‌ಫೋನ್‌ಗಳು ಕನೆಕ್ಟಿವಿಟಿಗಾಗಿ ಬ್ಲೂಟೂತ್ 5.0 ಅನ್ನು ಬೆಂಬಲಿಸಲಿದೆ. ವಾಯ್ಸ್‌ ಅಸಿಸ್ಟೆಂಟ್‌ ಕಾರ್ಯವನ್ನು ಬೆಂಬಲಿಸುತ್ತದೆ. ಇನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೀಫಾಲ್ಟ್ ವಾಯಿಸ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ. ಬೋಟ್ ಏರ್‌ಡೋಪ್ಸ್ 131 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ 13mm ಡೈನಾಮಿಕ್ ಆಡಿಯೋ ಡ್ರೈವರ್‌ಗಳು ಮತ್ತು ಹೊರ-ಇಯರ್ ಫಿಟ್ ಅನ್ನು ಹೊಂದಿದೆ.

ಇಯರ್‌ಫೋನ್‌

ಇನ್ನು ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಈ ಇಯರ್‌ಫೋನ್‌ ರಿಯಲ್‌ಮಿ ಇಯರ್‌ಬಡ್ಸ್‌ S ಮತ್ತು ರಿಯಲ್‌ಮಿ ಬಡ್ಸ್‌ Q ಇಯರ್‌ಫೋನ್‌ಗಳಿಗೆ ಪ್ರಬಲ ಸ್ಫರ್ದೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ ಸದ್ಯ ಬೋಟ್ ಏರ್‌ಡೋಪ್ಸ್ 131 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಭಾರತದಲ್ಲಿ ರೂ.1,299 ಬೆಲೆಯನ್ನು ಹೊಂದಿದ್ದು, ಇದು ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದೆ. ಇದು ಕಪ್ಪು, ನೀಲಿ ಮತ್ತು ಗುಲಾಬಿ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Boat Airdopes 131 true wireless earphones have been launched in India, priced at Rs. 1,299.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+