Home
ಸುದ್ದಿಜಾಲ

ಮ್ಯೂಸಿಕ್‌ ಪ್ರಿಯರಿಗಾಗಿ ಹೊಸ ಇಯರ್‌ಫೋನ್‌ ಪರಿಚಯಿಸಿದ ಬೋಟ್‌! ಬೆಲೆ ಎಷ್ಟು?

ಬೋಟ್‌ ಕಂಪೆನಿ ತನ್ನ ಗುಣಮಟ್ಟ ಹಾಗೂ ಅತ್ಯಾಕರ್ಷಕ ವಿನ್ಯಾಸದ ಇಯರ್‌ಫೋನ್‌ಗಳಿಗೆ ಹೆಸರುವಾಸಿಯಾಗಿದದೆ. ಬೋಟ್‌ ಕಂಪೆನಿಯ ಇಯರ್‌ಫೋನ್‌ಗಳು ಯುವಜನರ ಹಾಟ್‌ಫೇವರಿಟ್‌ಗಳಲ್ಲಿ ಒಂದೆನಿಸಿಕೊಂಡಿದೆ. ಅದಕ್ಕೆ ಅನುಗುಣವಾಗಿ ಇದೀಗ ಹೊಸ ಬೋಟ್‌ ಏರ್‌ಡೊಪ್ಸ್ 161 ಪ್ರೊ ಇಯರ್‌ಫೋನ್‌ ಬಿಡುಗಡೆ ಮಾಡಿದೆ.

ಹೌದು, ಬೋಟ್‌ ಏರ್‌ಡೊಪ್ಸ್‌ 161 ಪ್ರೊ ಇಯರ್‌ಫೋನ್‌ ಭಾರತದಲ್ಲಿ ಲಾಂಚ್‌ ಆಗಿದೆ. ಇನ್ನು ಈ ಇಯರ್‌ಫೋನ್‌ ಕಾಂಡ ಮತ್ತು ಕೋನೀಯ ಸಿಲಿಕಾನ್ ಇಯರ್ ಟಿಪ್ಸ್‌ನೊಂದಿಗೆ ಕಿವಿಯ ವಿನ್ಯಾಸವನ್ನು ಹೊಂದಿದೆ. ಇನ್ನುಳಿದಂತೆ ಈ ಇಯರ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮ್ಯೂಸಿಕ್‌ ಪ್ರಿಯರಿಗಾಗಿ ಹೊಸ ಇಯರ್‌ಫೋನ್‌ ಪರಿಚಯಿಸಿದ ಬೋಟ್‌! ಬೆಲೆ ಎಷ್ಟು?

ಬೋಟ್‌ ಏರ್‌ಡೊಪ್ಸ್‌ 161 ಪ್ರೊ ವಿಶೇಷತೆ ಏನು?
ಬೋಟ್‌ ಏರ್‌ಡೊಪ್ಸ್‌ 161 ಪ್ರೊ ಇಯರ್‌ಫೋನ್‌ ಕಾಂಡ ಮತ್ತು ಕೋನೀಯ ಸಿಲಿಕಾನ್ ಇಯರ್ ಟಿಪ್ಸ್‌ನೊಂದಿಗೆ ಇಯರ್‌ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಇಯರ್‌ಬಡ್ಸ್‌ IPX5 ಸ್ಪ್ಲಾಶ್ ಮತ್ತು ಬೆವರಿನಿಂದ ರಕ್ಷಣೆಯನ್ನು ನೀಡಲಿದೆ. ಜೊತೆಗೆ ಈ ಇಯರ್‌ಫೋನ್‌ನ ಕಾಂಡದ ಮೇಲೆ ಟ್ಯಾಪ್ ಮಾಡುವ ಮೂಲಕ ಬಳಕೆದಾರರು ವಿವಿಧ ಕಾರ್ಯಗಳನ್ನು ಮಾಡಬಹುದಾಗಿದೆ.

ಬೋಟ್‌ ಏರ್‌ಡೂಪ್ಸ್‌ 161 ಪ್ರೊ ಇಯರ್‌ಫೋನ್‌ 10mm ಆಡಿಯೋ ಡ್ರೈವರ್‌ ಅನ್ನು ಹೊಂದಿದೆ. ಇದು ಕರೆಗಳಲ್ಲಿ ಸ್ಪಷ್ಟ ಗುಣಮಟ್ಟಕ್ಕಾಗಿ ಡ್ಯುಯಲ್ ಮೈಕ್‌ಗಳು ಮತ್ತು ENx ಟೆಕ್ನಾಲಜಿಯೊಂದಿಗೆ ಬರಲಿದೆ. ಇದಲ್ಲದೆ ಈ ಇಯರ್‌ಫೋನ್‌ ಬೋಟ್ ಸಿಗ್ನೇಚರ್ ಸೌಂಡ್ ಆನ್‌ಬೋರ್ಡ್ ಹೊಂದಿದ್ದು ಅತ್ಯುತ್ತಮ ಅನುಭವ ನೀಡಲಿದೆ. ಇನ್ನು ಈ ಇಯರ್‌ಫೊನ್‌ಗಳು 60ms ಕಡಿಮೆ ಲೇಟೆನ್ಸಿ ಮೋಡ್‌ನೊಂದಿಗೆ ಬರಲಿವೆ.

ಇನ್ನು ಈ ಇಯರ್‌ಫೋನ್‌ ಬ್ಲೂಟೂತ್ 5.3 ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇದರಿಂದ ಏಕಕಾಲದಲ್ಲಿ ನೀವು ಎರಡು ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಬಹುದಾಗಿದೆ. ಜೊತೆಗೆ 380mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 50 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಇದಲ್ಲದೆ ಈ ಇಯರ್‌ಫೋನ್‌ನ ಪ್ರತಿ ಇಯರ್‌ಬಡ್ 35mAh ಸೆಲ್‌ನಿಂದ ಬೆಂಬಲಿತವಾಗಿದೆ ಎಂದು ಹೇಳಲಾಗಿದ್ದು, 17 ಗಂಟೆಗಳ ಬ್ಯಾಟರಿ ಬಳಕೆಯನ್ನು ನೀಡಲಿದೆ ಎಂದು ಬೋಟ್‌ ಕಂಪೆನಿ ಹೇಳಿದೆ. ಇನ್ನು ಈ ಇಯರ್‌ಫೋನ್‌ಗಳು USB-C ಪೋರ್ಟ್ ಮೂಲಕ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಬೋಟ್‌ ಏರ್‌ಡೂಪ್ಸ್‌ 161 ಪ್ರೊ ಭಾರತದಲ್ಲಿ ಇಯರ್‌ಫೋನ್‌ 999ರೂ. ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಈ ಇಯರ್‌ಫೋನ್‌ ಸ್ಲೀಕ್ ಬ್ಲ್ಯಾಕ್, ಸೆಲೆಸ್ಟಿಯಲ್ ಬ್ಲೂ ಮತ್ತು ಗ್ರೀನ್ ಸಯಾನ್ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಈ ಇಯರ್‌ಫೋನ್‌ ಭಾರತದಲ್ಲಿ ಜುಲೈ 24 ರಿಂದ ಖರೀದಿಗೆ ಬರಲಿದೆ. ಇದನ್ನು ಬ್ರಾಂಡ್‌ನ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ ಮೂಲಕ ಖರಿದಿಸಬಹುದಾಗಿದೆ.

ಇನ್ನು ಬೋಟ್‌ ಕಂಪೆನಿ ಇತ್ತೀಚಿಗೆ ಬೋಟ್‌ ಇಮ್ಮಾರ್ಟಲ್ 150 TWS ಗೇಮಿಂಗ್ ಇಯರ್‌ಬಡ್ಸ್ ಪರಿಚಯಿಸಿದೆ. ಈ ಇಯರ್‌ಬಡ್ಸ್‌ 10mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದರಲ್ಲಿರುವ ಸೂಪರ್ ಬಾಸ್ ರೆಸ್ಪಾನ್ಸ್‌ ನಿಮ್ಮ ಧ್ವನಿಗೆ ಹೆಚ್ಚುವರಿ ಪಂಚ್ ಅನ್ನು ಸೇರಿಸಲಿದೆ. ಜೊತೆಗೆ ಈ ಇಯರ್‌ಬಡ್ಸ್‌ ಸ್ಪಷ್ಟ ಮತ್ತು ಗರಿಗರಿಯಾದ ಕಮ್ಯೂನಿಕೇಷನ್‌ಗಾಗಿ ENC ಮೈಕ್‌ ಅನ್ನು ಹೊಂದಿದೆ. ಇದರಿಂದ ಬ್ಯಾಕ್‌ಗ್ರೌಂಡ್‌ ಸೌಂಡ್‌ ನಿಮ್ಮ ಕಿವಿಗೆ ಬೀಳದಂತೆ ಮಾಡಲಿದೆ. ಇದು ಬಳಕೆದಾರರ ಕಿವಿಗೆ ತಕ್ಕಂತೆ ಹೊಂದಿಕೊಳ್ಳುವ ವಿನ್ಯಾಸವನ್ನು ಹೊಂದಿದ್ದು, ಇನ್-ಲೈನ್ ರಿಮೋಟ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಇದು ಡೀಪ್‌ ಬಾಸ್‌ನಿಂದ ಹೆಚ್ಚಿನ ಟ್ರಿಬಲ್‌ವರೆಗೆ ವ್ಯಾಪಕ್‌ ರೇಂಜ್‌ ಫ್ರಿಕ್ವೆನ್ಸಿಯನ್ನು ರಿ ಪ್ರೊಡಕ್ಷನ್‌ ಅನ್ನು ನೀಡಲಿದೆ.

Best Mobiles in India

English summary
BoAt Airdopes 161 Pro Launched In India: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+