Home
ಸುದ್ದಿಜಾಲ

ಬೋಟ್‌ ಸಂಸ್ಥೆಯಿಂದ ಎರಡು ಹೊಸ ಇಯರ್‌ಬಡ್ಸ್‌ ಲಾಂಚ್‌: RGB ಲೈಟಿಂಗ್ ವಿನ್ಯಾಸ!

ಬೋಟ್‌ ಕಂಪೆನಿಯ ಇಯರ್‌ಬಡ್ಸ್‌ಗಳು ಭಾರತದಲ್ಲಿ ಭಾರಿ ಬೇಡಿಕೆಯನ್ನು ಪಡೆದುಕೊಂಡಿವೆ. ಇದಕ್ಕೆ ತಕ್ಕಂತೆ ಬೋಟ್‌ ಸಂಸ್ಥೆಯು ಸಹ ಹಲವು ಆಕರ್ಷಕ ಇಯರ್‌ಬಡ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸದಾಗಿ ಭಾರತದಲ್ಲಿ boAt Immortal 201 ಮತ್ತು Airdopes 91 ಎನ್ನುವ ಎರಡು ಹೊಸ ಇಯರ್‌ಬಡ್ಸ್‌ಗಳನ್ನು ಪರಿಚಯಿಸಿದೆ.

ಹೌದು, ಬೋಟ್‌ ಕಂಪೆನಿ ಹೊಸದಾಗಿ boAt Immortal 201 ಮತ್ತು Airdopes 91 ಇಯರ್‌ಬಡ್ಸ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬೋಟ್‌ ಇಮ್ಮಾರ್ಟಲ್ 201 ಬಡ್ಸ್‌ RGB ಲೈಟಿಂಗ್, 10mm ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು boAt ಸಿಗ್ನೇಚರ್ ಸೌಂಡ್ ಟೆಕ್ನಾಲಜಿಯೊಂದಿಗೆ ಬರಲಿದೆ. ಇದರೊಂದಿಗೆ Airdopes 91 ಬಡ್ಸ್‌ ಕೈಗೆಟಕುವ ಬೆಲೆಯೊಂದಿಗೆ ಎಂಟ್ರಿ ನೀಡಿದೆ. ಹಾಗಾದ್ರೆ ಬೋಟ್‌ ಸಂಸ್ಥೆ ಹೊಸದಾಗಿ ಪರಿಚಯಿಸಿರುವ ಇಯರ್‌ಬಡ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಟ್‌ ಸಂಸ್ಥೆಯಿಂದ ಎರಡು ಹೊಸ ಇಯರ್‌ಬಡ್ಸ್‌ ಲಾಂಚ್‌: RGB ಲೈಟಿಂಗ್ ವಿನ್ಯಾಸ!

ಬೋಟ್ ಇಮ್ಮಾರ್ಟಲ್ 201 ಫೀಚರ್ಸ್‌ ಹೇಗಿದೆ?
boAt Immortal 201 ಇಯರ್ ಬಡ್ಸ್‌ ಗೇಮಿಂಗ್ ಇಯರ್‌ಬಡ್ ಆಗಿದ್ದು, ಬಡ್ಸ್‌ನಲ್ಲಿ RGB ಲೈಟಿಂಗ್ ಮತ್ತು ಚಾರ್ಜಿಂಗ್ ಕೇಸ್ ನೀಡಲಾಗಿದೆ. ಇದರಲ್ಲಿ Insta Wake N ಫೀಚರ್ಸ್‌ ನೀಡಲಾಗಿದ್ದು, ಸ್ಮಾರ್ಟ್‌ಫೋನ್‌ಗಳು ಅಥವಾ ಲ್ಯಾಪ್‌ಟಾಪ್‌ಗಳೊಂದಿಗೆ ತಡೆರಹಿತ ಸಂಪರ್ಕವನ್ನು ಕಲ್ಪಿಸಲಿದೆ. ಈ ಇಯರ್‌ಬಡ್ಸ್‌ 10mm ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಬೋಟ್ ಸಿಗ್ನೇಚರ್ ಸೌಂಡ್ ಆಡಿಯೋವನ್ನು ಬೆಂಬಲಿಸಲಿದೆ. ಇದಲ್ಲದೆ ENx ತಂತ್ರಜ್ಞಾನದೊಂದಿಗೆ ಕ್ವಾಡ್ ಮೈಕ್ ಅನ್ನು ಸಹ ಹೊಂದಿದೆ.

ಬೋಟ್ ಇಮ್ಮಾರ್ಟಲ್ 201 ಇಯರ್‌ಬಡ್ಸ್‌ನ ಪ್ರತಿ ಇಯರ್‌ಬಡ್‌ 40mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರ ಚಾರ್ಜಿಂಗ್‌ ಕೇಸ್‌ 380mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಇಯರ್‌ಬಡ್ಸ್‌ ASAP ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, 10 ನಿಮಿಷಗಳ ಚಾರ್ಜ್‌ನಲ್ಲಿ 180 ನಿಮಿಷಗಳ ಪ್ಲೇಬ್ಯಾಕ್ ಟೈಂ ನೀಡಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.3, USB ಟೈಪ್-ಸಿ ಅನ್ನು ಹೊಂದಿದೆ.

ಬೋಟ್‌ ಸಂಸ್ಥೆಯಿಂದ ಎರಡು ಹೊಸ ಇಯರ್‌ಬಡ್ಸ್‌ ಲಾಂಚ್‌: RGB ಲೈಟಿಂಗ್ ವಿನ್ಯಾಸ!

boAt Airdopes 91 ಫೀಚರ್ಸ್‌ ಹೇಗಿದೆ?
boAt Airdopes 91 ಇಯರ್‌ಬಡ್ಸ್‌ ಕಾಂಡದ ವಿನ್ಯಾಸವನ್ನು ಹೊಂದಿದೆ. ಇದು ಕಾಂಪ್ಯಾಕ್ಟ್ ಚಾರ್ಜಿಂಗ್ ಕೇಸ್ ಅನ್ನು ಹೊಂದಿದ್ದು, ಬೋಟ್ ಸಿಗ್ನೇಚರ್ ಸೌಂಡ್ ಸಹ ಒಳಗೊಂಡಿದೆ. ಇನ್ನು ಈ ಇಯರ್‌ಬಡ್ಸ್‌ 10 ಮಿಮೀ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದಲ್ಲದೆ ENx ತಂತ್ರಜ್ಞಾನದೊಂದಿಗೆ ಡ್ಯುಯಲ್ ಮೈಕ್, 50ms ಕಡಿಮೆ ಸುಪ್ತತೆಯೊಂದಿಗೆ ಬೀಸ್ಟ್ ಮೋಡ್ ಸಹ ಪಡೆದಿದೆ. ಈ ಬಡ್ಸ್‌ IPX4 ಬೆವರು ಮತ್ತು ಸ್ಪ್ಲಾಶ್ ಪ್ರತಿರೋಧವನ್ನು ಸಹ ಒಳಗೊಂಡಿದೆ. ಇನ್ನು ಇಯರ್‌ಬಡ್ಸ್‌ನ ಪ್ರತಿ ಇಯರ್‌ಬಡ್‌ 35mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದರೆ, ಇದರ ಚಾರ್ಜಿಂಗ್ ಕೇಸ್ 300mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ.

ಬೋಟ್‌ ಸಂಸ್ಥೆಯಿಂದ ಎರಡು ಹೊಸ ಇಯರ್‌ಬಡ್ಸ್‌ ಲಾಂಚ್‌: RGB ಲೈಟಿಂಗ್ ವಿನ್ಯಾಸ!

ಭಾರತದಲ್ಲಿ ಬೋಟ್‌ ಇಯರ್‌ಬಡ್ಸ್‌ ಬೆಲೆ ಮತ್ತು ಲಭ್ಯತೆ
ಬೋಟ್ ಇಮ್ಮಾರ್ಟಲ್ 201 ಇಯರ್‌ಬಡ್ಸ್‌ ಭಾರತದಲ್ಲಿ 1,299ರೂ ಬೆಲೆಗೆ ಬರಲಿದೆ. ಇದು ಬ್ಲ್ಯಾಕ್ ಸ್ಯಾಬರ್ ಮತ್ತು ವೈಟ್ ಸೇಬರ್ ಬಣ್ಣಗಳಲ್ಲಿ ಬರಲಿದ್ದು, ಇದನ್ನು ಅಧಿಕೃತ boAt ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಭಾರತದಲ್ಲಿನ ಆಯ್ದ ಚಿಲ್ಲರೆ ಅಂಗಡಿಗಳಿಂದ ಖರೀದಿಸಬಹುದು.
ಇನ್ನು ಬೋಟ್‌ ಏರ್‌ಡೂಪ್ಸ್‌ 91 ಅನ್ನು 1,199ರೂ ಬೆಲೆಗೆ ಖರೀದಿಸಬಹುದಾಗಿದ್ದು, ಆಕ್ಟಿವ್‌ ಬ್ಲ್ಯಾಕ್‌, ಸ್ಟಾರ್ರಿ ಬ್ಲೂ ಮತ್ತು ಮಿಸ್ಟ್ ಗ್ರೇ ಬಣ್ಣಗಳಲ್ಲಿ ಬರಲಿದೆ. ಇದನ್ನು ಫೆಬ್ರವರಿ 1 ರಿಂದ ಬೋಟ್ ವೆಬ್‌ಸೈಟ್, ಅಮೆಜಾನ್ ಇಂಡಿಯಾ ಮತ್ತು ರಿಟೇಲ್ ಸ್ಟೋರ್‌ಗಳಿಂದ ಖರೀದಿಸಬಹುದಾಗಿದೆ.

Best Mobiles in India

English summary
boAt Company has launched two new affordable TWS earbuds in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+