ಬೋಟ್ ಕಂಪೆನಿಯಿಂದ ನಾಲ್ಕು ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ! ಟೆಕ್ ವಲಯದಲ್ಲಿ ಸ್ವದೇಶಿ ಮೇನಿಯಾ!
ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಬೋಟ್ ಕಂಪೆನಿ ಪೈಪೋಟಿ ಇಳಿದಂತೆ ಕಾಣುತ್ತಿದೆ. ಕಳೆದ ಕೆಲವು ದಿನಗಳಿಂದ ಒಂದರ ಹಿಂದೆ ಒಂದರಂತೆ ಹಲವು ಆಕರ್ಷಕ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದೆ. ಎಲ್ಲಾ ಸ್ಮಾರ್ಟ್‌ವಾಚ್‌ಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಇದೀಗ ಬೋಟ್ ಕಂಪೆನಿ ಭಾರತದಲ್ಲಿ ನಾಲ್ಕು ಹೊಸ ಎನಿಗ್ಮಾ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದೆ.
ಹೌದು, ಸ್ವದೇಶಿ ಬ್ರ್ಯಾಂಡ್ ಬೋಟ್ ಕಂಪೆನಿ ಭಾರತದಲ್ಲಿ ನಾಲ್ಕು ಹೊಸ ಎನಿಗ್ಮಾ ಸ್ಮಾರ್ಟ್‌ವಾಚ್‌ಗಳನ್ನು ಲಾಂಚ್ ಮಾಡಿದೆ. ಇವುಗಳನ್ನು ಬೋಟ್ ಎನಿಗ್ಮಾ X500, ಬೋಟ್ ಎನಿಗ್ಮಾ X600, ಬೋಟ್ ಎನಿಗ್ಮಾ Z30 ಮತ್ತು ಬೋಟ್ ಎನಿಗ್ಮಾ R32 ಎಂದು ಹೆಸರಿಸಲಾಗಿದೆ. ಇದರಲ್ಲಿ ಬೋಟ್ ಎನಿಗ್ಮಾ R32 ಅನ್ನು ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇನ್ನುಳಿದಂತೆ ಬೋಟ್ ಎನಿಗ್ಮಾ ಸರಣಿಯ ನಾಲ್ಕು ಹೊಸ ವಾಚ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಟ್ ಎನಿಗ್ಮಾ ಸರಣಿ ಸ್ಮಾರ್ಟ್‌ವಾಚ್ ಫೀಚರ್ಸ್ ವಿವರ
ಬೋಟ್ ಎನಿಗ್ಮಾ X500, ಎನಿಗ್ಮಾ X600, ಎನಿಗ್ಮಾ Z30, ಎನಿಗ್ಮಾ R32 ಸ್ಮಾರ್ಟ್‌ವಾಚ್‌ಗಳು ನವೀನ ಮಾದರಿಯ ವಾಚ್ ಬಯಸುವವರಿಗೆ ಬೆಸ್ಟ್ ಆಯ್ಕೆಯಾಗಿವೆ. ಅದರಲ್ಲೂ ಪ್ರೀಮಿಯಂ ಆಯ್ಕೆಯ ಸ್ಮಾರ್ಟ್‌ವಾಚ್ ಪ್ರಿಯರಿಗೆ ಅತ್ಯುತ್ತಮ ಆಯ್ಕೆಯಾಗಿವೆ. ಇದರಲ್ಲಿ ಎನಿಗ್ಮಾ R32 ಅತ್ಯುತ್ತಮವಾದ ಮೆಟಲ್ ಮೆಶ್ ಸ್ಟ್ರಾಪ್ ಮತ್ತು ಮೂರು ಬಣ್ಣಗಳನ್ನು ಹೊಂದಿರುವ ಸ್ತ್ರೀಲಿಂಗ ಸ್ಮಾರ್ಟ್ ವಾಚ್ ಆಗಿದೆ. ಇದು ಆಂಟಿಕ್ ಗೋಲ್ಡ್, ಚರಾಸ್ತಿ ಬೆಳ್ಳಿ ಮತ್ತು ಚಿನ್ನ ಮತ್ತು ಡೈಮಂಡ್ ವಿನ್ಯಾಸಗಳಲ್ಲಿ ಲಭ್ಯವಾಗಲಿದೆ.
ಇನ್ನು ಬೋಟ್ ಎನಿಗ್ಮಾ X500, ಬೋಟ್ ಎನಿಗ್ಮಾ X600 ಮತ್ತು ಬೋಟ್ ಎನಿಗ್ಮಾ Z30 ಸ್ಮಾರ್ಟ್‌ವಾಚ್‌ಗಳು ರಫ್ ಆದ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ ಬೋಟ್ ಎನಿಗ್ಮಾ X500 ಲೋಹದ ಸರಪಳಿ ಮತ್ತು ಚೌಕಟ್ಟಿನೊಂದಿಗೆ ಮೆಟಲ್ ಬಾಡಿ ವಿನ್ಯಾಸವನ್ನು ಹೊಂದಿದ್ದು, ಸಿಲಿಕಾನ್ ಪಟ್ಟಿಗಳೊಂದಿಗೆ ಬರುತ್ತದೆ. ಇನ್ನು ಬೋಟ್ ಎನಿಗ್ಮಾ Z30 ಸಿಲಿಕಾನ್ ಸ್ಟ್ರಾಪ್‌ಗಳು, ಲೋಹದ ಚೌಕಟ್ಟು ಮತ್ತು ದಿಕ್ಕಿನ ಸೂಚಕಗಳೊಂದಿಗೆ ಬರಲಿದೆ.
ಈ ಸ್ಮಾರ್ಟ್‌ವಾಚ್‌ಗಳು AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಸರ್ಕಲ್ ಡಯಲ್‌ನೊಂದಿಗೆ ಬರಲಿವೆ. ಸ್ಮಾರ್ಟ್‌ವಾಚ್‌ಗಳು ಬಳಕೆದಾರರಿಗೆ 100 ಕ್ಲೌಡ್-ಆಧಾರಿತ ವಾಚ್‌ಫೇಸ್‌ಗಳನ್ನು ಕಸ್ಟಮೈಸ್ ಮಾಡಲು ಅವಕಾಶ ನೀಡಿವೆ. ಇದರಲ್ಲಿ ಹೃದಯ ಬಡಿತ ಮಾನಿಟರ್, ಬ್ಲಡ್ ಆಕ್ಸಿಜನ್ ಟ್ರ್ಯಾಕರ್ ಮತ್ತು ಮಲ್ಟಿ ಸ್ಪೋರ್ಟ್ಸ್ ಮೋಡ್‌ಗಳಂತಹ ಸಮಗ್ರ ಆರೋಗ್ಯ ಮತ್ತು ಕ್ಷೇಮ ಸೂಟ್ ಅನ್ನು ಹೊಂದಿವೆ.
ಇದಲ್ಲದೆ ಹೊಸ ಬೋಟ್ ಎನಿಗ್ಮಾ ಸ್ಮಾರ್ಟ್‌ವಾಚ್‌ಗಳು ಇನ್‌ಬಿಲ್ಟ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಹೊಂದಿವೆ. ಇದರಿಂದ ಬಳಕೆದಾರರು ಫೋನ್ ಕರೆಗಳನ್ನು ಸ್ಮಾರ್ಟ್‌ವಾಚ್ ಮೂಲಕವೇ ಸ್ವೀಕರಿಸುವುದಕ್ಕೆ ಸಾಧ್ಯವಾಗಲಿದೆ. ಇನ್ನು ಸ್ಮಾರ್ಟ್‌ವಾಚ್ ಸ್ಮಾರ್ಟ್ ನೋಟಿಫಿಕೇಶನ್, ಫೈಂಡ್ ಮೈ ಫೋನ್, ಮ್ಯೂಸಿಕ್ ಪ್ಲೇಬ್ಯಾಕ್ ಕಂಟ್ರೋಲ್, ರಿಮೋಟ್ ಕ್ಯಾಮೆರಾ ಶಟರ್ ಮತ್ತು ವಾಯ್ಸ್ ಅಸಿಸ್ಟೆಂಟ್ ಅನ್ನು ಒಳಗೊಂಡಿದೆ. ಸ್ಮಾರ್ಟ್‌ವಾಚ್‌ಗಳು IP67 ರೇಟಿಂಗ್ ಹೊಂದಿದ್ದು, ನೀರು ಮತ್ತು ದೂಳಿನಿಂದ ರಕ್ಷಣೆ ನೀಡಲಿವೆ.
ಬೋಟ್ ಎನಿಗ್ಮಾ ಸ್ಮಾರ್ಟ್‌ವಾಚ್ ಸರಣಿಯ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಹೊಸ ಬೋಟ್ ಎನಿಗ್ಮಾ ಸರಣಿಯು 3,499ರೂ ಬೆಲೆಯೊಂದಿಗೆ ಪ್ರಾರಂಭವಾಗಲಿದ್ದು, 4,299ರೂ ವರೆಗಿನ ಬೆಲೆಯನ್ನು ಹೊಂದಿದೆ. ಈ ವಾಚ್‌ಗಳು ಭಾರತದಲ್ಲಿ ಇದೇ ಸೆಪ್ಟೆಂಬರ್ 15 ರಿಂದ ಮಾರಾಟವಾಗಲಿದೆ. ಇವುಗಳನ್ನು ಅಮೆಜಾನ್ ಇಂಡಿಯಾ, ಫ್ಲಿಪ್‌ಕಾರ್ಟ್ ಮತ್ತು ಭಾರತದಲ್ಲಿನ ರಿಟೇಲ್ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ. ಇನ್ನು ಸ್ಮಾರ್ಟ್‌ವಾಚ್‌ಗಳ ಮೇಲೆ ಬೋಟ್ ಕಂಪೆನಿ ಒಂದು ವರ್ಷದ ವಾರಂಟಿಯನ್ನು ನೀಡುತ್ತಿದೆ.


Click it and Unblock the Notifications








