Home
ಸುದ್ದಿಜಾಲ

ಬೋಟ್‌ ಸಂಸ್ಥೆಯಿಂದ ನವೀನ ಮಾದರಿಯ ಇಯರ್‌ಬಡ್ಸ್‌ ಲಾಂಚ್‌! ನಿಮ್ಮ ದಿಲ್‌ ಗೆಲ್ಲೋದು ಗ್ಯಾರಂಟಿ!

ಬೋಟ್‌ ಕಂಪೆನಿ ಆಡಿಯೋ ಆಕ್ಸಿಸರೀಸ್‌ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ತನ್ನ ವಿಭಿನ್ನ ಶೈಲಿಯ ಇಯರ್‌ಬಡ್ಸ್‌ಗಳಿಂದಾಗಿ ಬೋಟ್‌ ಕಂಪೆನಿ ಯುವಜನರ ಹೃದಯ ಗೆದ್ದಿದೆ. ಇದೀಗ ಹೊಸ ಬೋಟ್‌ ಇಮ್ಮಾರ್ಟಲ್‌ ಕಟಾನಾ ಬ್ಲೇಡ್‌ TWS ಗೇಮಿಂಗ್ ಇಯರ್‌ಬಡ್ಸ್‌ ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ.

ಹೌದು, ಬೋಟ್‌ ಇಮ್ಮಾರ್ಟಲ್ ಕಟಾನಾ ಬ್ಲೇಡ್ ಇಯರ್‌ಬಡ್ಸ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಹೊಸ ಇಯರ್‌ಬಡ್ಸ್‌ ಲೋಹದಿಂದ ಮಾಡಿದ ಕೇಸ್ ಅನ್ನು ಹೊಂದಿವೆ. ಇದು ಇನ್‌ಬಿಲ್ಟ್‌ ಸ್ಪೀಕರ್‌ಗಳೊಂದಿಗೆ ಗ್ಲೈಡ್ ಮಾಡುವಾಗ ಸೌಂಡ್‌ ಅನ್ನು ಪ್ರೊಡ್ಯೂಶ್‌ ಮಾಡಲಿದೆ. ಜೊತೆಗೆ ಈ ಇಯರ್‌ಬಡ್ಸ್‌ 13mm ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಟ್‌ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌! ನಿಮ್ಮ ದಿಲ್‌ ಗೆಲ್ಲೋದು ಗ್ಯಾರಂಟಿ

ಬೋಟ್‌ ಇಮ್ಮಾರ್ಟಲ್ ಕಟಾನಾ ಬ್ಲೇಡ್ ಇಯರ್‌ಬಡ್ಸ್‌ ಫೀಚರ್ಸ್‌ ಹೇಗಿದೆ?
ಬೋಟ್‌ ಇಮ್ಮಾರ್ಟಲ್ ಕಟಾನಾ ಬ್ಲೇಡ್ ಇಯರ್‌ಬಡ್ಸ್‌ 13 ಎಂಎಂ ಆಡಿಯೋ ಡ್ರೈವರ್‌ ಹೊಂದಿದೆ. ಇದು ಬೋಟ್ ಸಿಗ್ನೇಚರ್ ಸೌಂಡ್ ತಂತ್ರಜ್ಞಾನವನ್ನು ಬೆಂಬಲಿಸಲಿದೆ. ಇನ್ನು ಈ ಇಯರ್‌ಬಡ್ಸ್‌ RGB ಬೆಳಕಿನ ಬೆಂಬಲ, 50ms ನ ಲೋ ಲೇಟೆನ್ಸಿಯನ್ನು ಹೊಂದಿದ್ದು, ನೀರಿನ ಪ್ರತಿರೋಧಕ್ಕಾಗಿ IPX4 ರೇಟಿಂಗ್ ಅನ್ನು ಹೊಂದಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಮೆಟಲ್‌ ಬಾಡಿಯನ್ನು ಹೊಂದಿದ್ದು, ಇನ್‌ಬಿಲ್ಟ್‌ ಸ್ಪೀಕರ್‌ಗಳು, ತ್ವರಿತ ವೇಕ್ N ಜೋಡಿ ಬೆಂಬಲ ಮತ್ತು ಬ್ಲೂಟೂತ್ v5.3 ಗೆ ಬೆಂಬಲವನ್ನು ಸಹ ಹೊಂದಿದೆ.

ಬೋಟ್‌ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌! ನಿಮ್ಮ ದಿಲ್‌ ಗೆಲ್ಲೋದು ಗ್ಯಾರಂಟಿ

ಇನ್ನು ಈ ಇಯರ್‌ಬಡ್ಸ್‌ 50 ಗಂಟೆಗಳ ಒಟ್ಟು ಪ್ಲೇಬ್ಯಾಕ್ ಟೈಂ ಅನ್ನು ಹೊಂದಿದೆ. ಇದು USB ಟೈಪ್-ಸಿ ಕನೆಕ್ಟರ್ ಮೂಲಕ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 180 ನಿಮಿಷಗಳ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ. ಇನ್ನು ಇಯರ್‌ಬಡ್ಸ್‌ ಚಾರ್ಜಿಂಗ್‌ ಕೇಸ್‌ 500mAh ಬ್ಯಾಟರಿಯನ್ನು ಹೊಂದಿದೆ, ಆದರೆ ಪ್ರತಿ ಇಯರ್‌ಬಡ್ 35mAh ಬ್ಯಾಟರಿಯನ್ನು ಒಳಗೊಂಡಿದೆ.

ಬೋಟ್‌ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌! ನಿಮ್ಮ ದಿಲ್‌ ಗೆಲ್ಲೋದು ಗ್ಯಾರಂಟಿ

ಭಾರತದಲ್ಲಿ ಬೋಟ್ ಇಮ್ಮಾರ್ಟಲ್ ಕಟಾನಾ ಬ್ಲೇಡ್ ಬೆಲೆ ಮತ್ತು ಲಭ್ಯತೆ
ಬೋಟ್ ಇಮ್ಮಾರ್ಟಲ್ ಕಟಾನಾ ಬ್ಲೇಡ್ ಇಯರ್‌ಬಡ್ಸ್‌ ಭಾರತದಲ್ಲಿ 2,299ರೂ ಬೆಲೆಯನ್ನು ಹೊಂದಿದೆ. ಇದು ಗನ್ಮೆಟಲ್ ಬ್ಲಾಕ್ ಮತ್ತು ಗ್ರೇ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದನ್ನು ನೀವು ಭಾರತದಲ್ಲಿ ನವೆಂಬರ್ 30 ರಿಂದ ಬೋಟ್ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮೂಲಕ ಖರೀದಿಸಬಹುದಾಗಿದೆ. ಇನ್ನು ಈ ಹೊಸ ಇಯರ್‌ಬಡ್‌ಗಳಲ್ಲಿ ಗ್ರಾಹಕರು 1 ವರ್ಷದ ವಾರಂಟಿಯನ್ನು ಸಹ ಪಡೆಯುತ್ತಾರೆ ಎಂದು ಕಂಪೆನಿ ಹೇಳಿದೆ.

ಇನ್ನು ಬೋಟ್‌ ಕಂಪೆನಿ ಇದೇ ವರ್ಷ ಜುಲೈ ತಿಂಗಳಿನಲ್ಲಿ ಹೊಸದಾಗಿ ಬೋಟ್‌ ಏರ್‌ಡೋಪ್ಸ್‌ ಆಲ್ಫಾ (boAt Airdopes Alpha) ಇಯರ್‌ಬಡ್ಸ್‌ ಪರಿಚಯಿಸಿತ್ತು. ಈ ಇಯರ್‌ಬಡ್ಸ್‌ ವಿಭಿನ್ನ ಶೈಲಿಯ ಫೀಚರ್ಸ್‌ಗಳಿಂದಾಗಿ ಇಂದಿಗೂ ಸೌಂಡ್‌ ಮಾಡುತ್ತಿದೆ. ಅದರಂತೆ ಈ ಇಯರ್‌ಬಡ್ಸ್‌ ಬರೋಬ್ಬರಿ 35 ಗಂಟೆಗಳ ಬ್ಯಾಕಪ್‌ ನೀಡಲಿದೆ. ಇದು ಓಪನ್‌ ಫಿಟ್ ಇಯರ್‌ಬಡ್ಸ್ ಶೈಲಿ ಹೊಂದಿದ್ದು, 13mm ಡ್ರೈವರ್‌ಗಳು ಮತ್ತು ಬೋಟ್ ಸಿಗ್ನೇಚರ್ ಸೌಂಡ್ ತಂತ್ರಜ್ಞಾನ ಮೂಲಕ ಬಳಕೆದಾರರಿಗೆ ವಿಭಿನ್ನ ಅನುಭವ ನೀಡಲಿದೆ.

ಇದಲ್ಲದೆ ಈ ಇಯರ್‌ಬಡ್ಸ್‌ ಡ್ಯುಯಲ್ ಮೈಕ್ ENx ತಂತ್ರಜ್ಞಾನದಿಂದ ಕಾರ್ಯನಿರ್ವಹಿಸಲಿದ್ದು, ವರ್ಧಿತ ಕರೆ ಗುಣಮಟ್ಟವನ್ನು ನೀಡಲಿದೆ. ಜೊತೆಗೆ 50ms ಕಡಿಮೆ ಲೇಟೆನ್ಸಿ ಮೋಡ್, ಆಟೋಮ್ಯಾಟಿಕ್‌ ಡಿವೈಸ್‌ ಕನೆಕ್ಟ್ ಸೌಲಭ್ಯ ಮಾತ್ರ ಬಳಕೆದಾರರನ್ನು ತಲ್ಲೀನಗೊಳಿಸುತ್ತದೆ. ಇದರೊಂದಿಗೆ ಬ್ಲೂಟೂತ್ ಆವೃತ್ತಿ v5.3 ಹೊಂದಿದ್ದು, ಈ ಮೂಲಕ ಉತ್ತಮ ಸಂಪರ್ಕ ಸಾಧ್ಯವಾಗಲಿದೆ.

Best Mobiles in India

English summary
boAt Immortal Katana Blade TWS Gaming Earbuds With 50 Hours Battery Life Launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+